Just In
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Lifestyle
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ಯೂಟ್ಯೂಬ್ ಮ್ಯೂಸಿಕ್' ತಿಂಗಳ ಚಂದಾ ಶುಲ್ಕ ಕೇವಲ 109ರೂ!
ಪ್ರಸ್ತುತ ಭಾರತದಲ್ಲಿ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ಸ್‌ಗಳ ಬಳಕೆಯ ಟ್ರೆಂಡ್ ಜೋರಾಗುತ್ತಿದ್ದು, ಈ ಲಿಸ್ಟಿಗೆ ಈಗ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಸಹ ಸೇರಿಕೊಂಡಿದೆ. ಸ್ಪಾಟಿಫೈ, ಆಪಲ್ ಮ್ಯೂಸಿಕ್, ಸಾವನ್, ಗಾನಾ ಸೇರಿದಂತೆ ಇತರೆ ಜನಪ್ರಿಯ ಮ್ಯೂಸಿಕ್ ಆಪ್ಸ್‌ಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಚಂದಾದಾರಿಕೆಯ ಆಯ್ಕೆ ನೀಡಿವೆ. ಅದೇ ಹಾದಿಯಲ್ಲಿ ಈಗ ಯೂಟ್ಯೂಬ್ ಸಹ ಅಗ್ಗದ ಪ್ರೈಸ್‌ಗೆ ಚಂದಾದಾರಿಕೆ ಘೋಷಿಸಿದೆ.

ಹೌದು, ಗೂಗಲ್ ಒಡೆತನದ 'ಯೂಟ್ಯೂಬ್' ತನ್ನ 'ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ' ಮತ್ತು 'ಯೂಟ್ಯೂಬ್ ಪ್ರೀಮಿಯಂ' ಸೇವೆಗಳಿಗೆ ಹೊಸದಾಗಿ ಪ್ರೀಪೇಡ್ ಶುಲ್ಕವನ್ನು ಜಾರಿ ಮಾಡಿದೆ. ಈ ಮೊದಲು ಚಂದಾದಾರಿಕೆ ಯೋಜನೆಗಳನ್ನು ಒದಗಿಸುತ್ತಿದ್ದ ಸಂಸ್ಥೆಯು ಇದೀಗ ಭಾರತದಲ್ಲಿ ಈ ಎರಡು ಸೇವೆಗಳಿಗೆ ಪ್ರೇಪೇಡ್ ಮಾದರಿಯ ಚಂದಾದಾರಿಕೆಯ ಯೋಜನೆಗಳನ್ನು ಪರಿಚಯಿಸಿದೆ. ಹಾಗಾದರೇ 'ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ' ಮತ್ತು 'ಯೂಟ್ಯೂಬ್ ಪ್ರೀಮಿಯಂ' ಸೇವೆಗಳ ಶುಲ್ಕ ಯೋಜನೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ತಿಂಗಳ ಶುಲ್ಕ 139ರೂ.ಮಾತ್ರ
ಯೂಟ್ಯೂಬ್ ಪ್ರೀಮಿಯಂ ಸೇವೆಯ ತಿಂಗಳ ಪ್ರೀಪೇಡ್ ಶುಲ್ಕವು 139ರೂ.ಗಳಾಗಿದೆ. ಅದೇ ಮೂರು ತಿಂಗಳ ಪ್ರೀಪೇಡ್ ಯೋಜನೆಯ ಚಂದಾದಾರಿಕೆ ಶುಲ್ಕವು 399ರೂ.ಗಳಾಗಿದೆ. ಹಾಗೆಯೇ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಸೇವೆಯ ಪ್ರೀಪೇಡ್ ಪ್ಲ್ಯಾನ್ ದರವು 109ರೂ.ಗಳು ಆಗಿದ್ದು, ಇನ್ನು ಮೂರು ತಿಂಗಳ ಪ್ರೀಪೇಡ್ ಯೋಜನೆಯ ಚಂದಾದಾರಿಕೆ ಶುಲ್ಕವು 309ರೂ.ಗಳಿಗೆ ಲಭ್ಯವಾಗಲಿದೆ.

ಜಾಹಿರಾತು ಮುಕ್ತ ಸೇವೆ
ಯೂಟ್ಯೂಬ್‌ನ ಈ 'ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ' ಮತ್ತು 'ಯೂಟ್ಯೂಬ್ ಪ್ರೀಮಿಯಂ' ಸೇವೆಗಳ ಚಂದಾದಾರಿಕೆಯಲ್ಲಿ ಗ್ರಾಹಕರು ಜಾಹಿರಾತು ಮುಕ್ತ ವಿಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಪಡೆಯಬಹುದಾಗಿದೆ. ಒಂದು ಮತ್ತು ಮೂರು ತಿಂಗಳ ಚಂದಾದಾರಿಕೆ ಯೋಜನೆಗಳು ಜಾಹಿರಾತು ಮುಕ್ತ ಪ್ರಯೋಜನವನ್ನು ಒದಗಿಸಲಿವೆ. ವ್ಯಾಲಿಡಿಟಿ ಅವಧಿ ನಂತರ ಮತ್ತೆ ಶುಲ್ಕ ಭರಿಸಿ ಚಂದಾದಾರಿಕೆಯನ್ನು ಮುಂದುವರಿಸಬಹುದಾಗಿದೆ.

ಲಭ್ಯತೆ
'ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ' ಸೇವೆಯ ಚಂದಾದಾರರು 'ಯೂಟ್ಯೂಬ್ ಪ್ರೀಮಿಯಂ' ಸೇವೆಗೆ ಅಪ್‌ಗ್ರೇಡ್ ಮಾಡಿಕೊಳ್ಳಲು ಅವಕಾಶವಿದೆ. ಆಂಡ್ರಾಯ್ಡ್ ಓಎಸ್ ಡಿವೈಸ್‌ಗಳಲ್ಲಿ ಮತ್ತು ವೆಬ್ ನಲ್ಲಿ ಲಭ್ಯವಾಗಲಿದೆ. ಇನ್ನು ಐಓಎಸ್ ಓಎಸ್ ಆವೃತ್ತಿಯಲ್ಲಿ ಪ್ರೀಮಿಯಂ ಯೂಟ್ಯೂಬ್ ಸೇವೆಯು ದೊರೆಯಲಿದೆ. ಸೇವೆ ಪಡೆಯಲು ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹಾಗೂ ಮಾಸ್ಟರಕಾರ್ಡ್‌ಗಳ ಮೂಲಕ ಪೇಮೆಂಟ್ ಮಾಡಬಹುದಾಗಿದೆ.

ಸ್ಟೂಡೆಂಟ್ ಆಫರ್
ಟೆಕ್ ದಿಗ್ಗಜ್ ಗೂಗಲ್ ಸಂಸ್ಥೆಯು ಕಳೆದ ಮೇ ತಿಂಗಳಿನಲ್ಲಿ ಕೇವಲ 59ರೂ.ಗಳಿಗೆ ಯೂಟ್ಯೂಬ್ ಮ್ಯೂಸಿಕ್ ಸ್ಟೂಡೆಂಟ್ ಪ್ಲ್ಯಾನ್ ಆಫರ್ ಪರಿಚಯಿಸಿತ್ತು. ಹಾಗೆಯೇ 79ರೂ.ಗಳಿಗೆ ಯೂಟ್ಯೂಬ್ ಪ್ರೀಮಿಯಂ ಸೇವೆಯನ್ನು ಪರಿಚಯಿಸಿತ್ತು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090