Home
ಸುದ್ದಿಜಾಲ

YouTube: ಯೂಟ್ಯೂಬ್‌ ಶಾರ್ಟ್ಸ್‌ಗೆ ಹೊಸ ಫೀಚರ್ಸ್‌; ಟಿಕ್‌ಟಾಕ್‌ ಅನ್ನೂ ಮೀರಿಸಲಿದೆ...

ಯೂಟ್ಯೂಬ್‌ (YouTube) ಅನ್ನು‌ ಈಗಂತೂ ಎಲ್ಲಾ ರೀತಿಯಲ್ಲೂ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಬಳಕೆದಾರರು ಚಾನಲ್‌ ಕ್ರಿಯೇಟ್‌ ಮಾಡುವ ಮೂಲಕ ಜಾಗತಿಕವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಈ ನಡುವೆ ಯೂಟ್ಯೂಬ್‌ನಲ್ಲಿ ವಿಶೇಷವಾದ ಫೀಚರ್ಸ್‌ ಆಯ್ಕೆಯೊಂದನ್ನು ನೀಡಲಾಗುತ್ತಿದೆ.

ಹೌದು, ಯೂಟ್ಯೂಬ್‌ ಈಗಾಗಲೇ ಸಾಕಷ್ಟು ವಿಶೇಷ ಫೀಚರ್ಸ್‌ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸೇವೆ ನೀಡುತ್ತಾ ಬಂದಿದೆ. ಅದರಂತೆ ಈಗ ಮತ್ತೊಂದು ಹೊಸ ಸೇವೆ ನೀಡಲು ಸಜ್ಜಾಗಿದ್ದು, ಹೊಸ ಹೊಸ ಗ್ರಾಹಕರನ್ನು ಸೆಳೆಯಲಿದೆ. ಅಂದರೆ ಇನ್ಮುಂದೆ ಯೂಟ್ಯೂಬ್‌ ಶಾರ್ಟ್ಸ್‌ನಲ್ಲಿ (YouTube shorts) ಬಳಕೆದಾರರು ಈ ಸೌಲಭ್ಯ ಪಡೆಯಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಸೇವೆ ಅನ್ನೋದನ್ನು ಗಮನಿಸೋಣ ಬನ್ನಿ.

ಯೂಟ್ಯೂಬ್‌ ಶಾರ್ಟ್ಸ್‌ಗೆ ಹೊಸ ಫೀಚರ್ಸ್‌; ಟಿಕ್‌ಟಾಕ್‌ ಅನ್ನೂ ಮೀರಿಸಲಿದೆ...

ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್‌: ಇನ್ಮುಂದೆ ಯೂಟ್ಯೂಬ್‌ ಶಾರ್ಟ್ಸ್‌ ನಲ್ಲಿ ಬಳಕೆದಾರರು ವಿಡಿಯೋಗಳನ್ನು ರೀಮಿಕ್ಸ್ (Remix) ಮಾಡಬಹುದಾಗಿದೆ. ಈ ಮೂಲಕ ಸಾಮಾಜಿಕ ಮಾಧ್ಯಮ ದೈತ್ಯರ ನಡುವೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ಯೂಟ್ಯೂಬ್ ಸಹ ಭಾಗಿಯಾಗಿದೆ. ಅಂದರೆ ತನ್ನ ಶಾರ್ಟ್ಸ್ ಪ್ಲಾಟ್‌ಫಾರ್ಮ್‌ಗಾಗಿ ರೀಮಿಕ್ಸ್ ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತಿದೆ.

ಈ ವಿಶೇಷ ಫೀಚರ್ಸ್ ಬಳಕೆ ಮಾಡಿಕೊಂಡು ಯೂಟ್ಯೂಬ್‌ ಟಿಕ್‌ಟಾಕ್‌ (Tiktok) ಜೊತೆ ಸ್ಪರ್ಧೆ ಮಾಡಲಿದೆ. ಈ ವಿಶೇಷ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮದೇ ಆದ ಮ್ಯೂಸಿಕ್‌ ವಿಡಿಯೋಗಳನ್ನು ಕ್ರಿಯೇಟ್ ಮಾಡಲು ಅನುಮತಿಸುತ್ತದೆ. ಕಳೆದ ವರ್ಷ, ಯೂಟ್ಯೂಬ್ ಕೊಲಾಬ್ ಮತ್ತು ಶಾರ್ಟ್ಸ್‌ಗಾಗಿ ಫನ್ ಎಫೆಕ್ಟ್‌ಗಳಂತಹ ಟೂಲ್ಸ್‌ ಅನ್ನೂ ಸಹ ಪರಿಚಯಿಸಿತ್ತು ಮತ್ತು ಈಗ ಅದರೊಂದಿಗೆ ರೀಮಿಕ್ಸ್ ಪರಿಚಯಿಸುವ ಮೂಲಕ ಮತ್ತಷ್ಟು ಸೌಲಭ್ಯ ಕಲ್ಪಿಸಿಕೊಡುತ್ತಿದೆ.

ಯೂಟ್ಯೂಬ್‌ ಶಾರ್ಟ್ಸ್‌ಗೆ ಹೊಸ ಫೀಚರ್ಸ್‌; ಟಿಕ್‌ಟಾಕ್‌ ಅನ್ನೂ ಮೀರಿಸಲಿದೆ...

ಹಾಗಿದ್ರೆ ವಿಡಿಯೋಗಳನ್ನು ರೀಮಿಕ್ಸ್ ಮಾಡುವುದು ಹೇಗೆ?
ಶಾರ್ಟ್ಸ್ ನಲ್ಲಿ ವಿಡಿಯೋಗಳನ್ನು ರೀಮಿಕ್ಸ್ ಮಾಡಲು, ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ಬಳಕೆದಾರರು ನೇರವಾಗಿ ರೀಮಿಕ್ಸ್ ಅನ್ನು ಟ್ಯಾಪ್ ಮಾಡಬಹುದು. ಇದರಲ್ಲಿ ನಾಲ್ಕು ಆಯ್ಕೆಗಳಿವೆ. ಅವುಗಳೆಂದರೆ ಸೌಂಡ್, ಗ್ರೀನ್ ಸ್ಕ್ರೀನ್, ಕಟ್ ಮತ್ತು ಕೊಲಾಬ್ (Sound, Green Screen, Cut and Collab). ಹಾಗಿದ್ರೆ, ಈ ನಾಲ್ಕು ಆಯ್ಕೆಗಳನ್ನು ಬಳಕೆ ಮಾಡಿಕೊಂಡು ಏನೆಲ್ಲಾ ಮಾಡಬಹುದು ಅನ್ನೋದನ್ನು ತಿಳಿಯಿರಿ.

ಸೌಂಡ್: ವೀಡಿಯೊದಿಂದ ಕೇವಲ ಸೌಂಡ್ ಅನ್ನು ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ಶಾರ್ಟ್‌ ವಿಡಿಯೋಗೆ ಬಳಸಿ.
ಕೊಲ್ಯಾಬ್: ವಿಡಿಯೋದ ಪಕ್ಕದಲ್ಲಿ ಮತ್ತೊಂದು ಚಿಕ್ಕ ವಿಡಿಯೋವನ್ನು ರಚಿಸಲು ಇದು ಸಹಾಯ ಮಾಡಲಿದೆ, ಆದ್ದರಿಂದ ನೀವು ಮತ್ತು ನಿಮ್ಮ ಸ್ನೇಹಿತರು ಕಲಾವಿದರೊಂದಿಗೆ ನೃತ್ಯ ಸಂಯೋಜನೆಯನ್ನು ಇದರಲ್ಲಿ ಮಾಡಬಹುದು.
ಗ್ರೀನ್ ಸ್ಕ್ರೀನ್: ನಿಮ್ಮ ಶಾರ್ಟ್ಸ್‌ಗೆ ಹಿನ್ನೆಲೆಯಾಗಿ ವಿಡಿಯೋವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಕಟ್: 5 ಸೆಕೆಂಡ್ ಕ್ಲಿಪ್ ಅನ್ನು ಕತ್ತರಿಸಲು ಮತ್ತು ಅದನ್ನು ನಿಮ್ಮ ಶಾರ್ಟ್‌ಗೆ ಸೇರಿಸಲು ಈ ಆಯ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಯೂಟ್ಯೂಬ್‌ ಶಾರ್ಟ್ಸ್‌ಗೆ ಹೊಸ ಫೀಚರ್ಸ್‌; ಟಿಕ್‌ಟಾಕ್‌ ಅನ್ನೂ ಮೀರಿಸಲಿದೆ...

ಎಕ್ಸ್‌ಪ್ಲೋರಿಂಗ್ ಮತ್ತು ರೀಮಿಕ್ಸ್:
ಈ ಫೀಚರ್ಸ್‌ ಬಳಕೆ ಮಾಡಿಕೊಂಡು ಯೂಟ್ಯೂಬ್‌ನಲ್ಲಿ ಬಳಕೆದಾರರು ಮೂಲ ಸಂಗೀತದ ವಿಡಿಯೋವನ್ನು ಪದೇ ಪದೇ ವೀಕ್ಷಿಸಬಹುದಾಗಿದೆ. ಇದರೊಂದಿಗೆ ಇತರೆ ಅಭಿಮಾನಿಗಳು ಅದೇ ಹಾಡಿನಿಂದ ಕ್ರಿಯೇಟ್‌ ಮಾಡಲಾದ ಇತರ ಶಾರ್ಟ್ಸ್‌ ಅನ್ನೂ ಸಹ ವೀಕ್ಷಣೆ ಮಾಡಬಹುದು. ಜೊತೆಗೆ ತಮ್ಮದೇ ಆದ ವಿಶಿಷ್ಟ ಕಂಟೆಂಟ್‌ ಅನ್ನು ರಚಿಸಲು ಈ ವಿಡಿಯೋಗಳನ್ನು ರೀಮಿಕ್ಸ್ ಮಾಡಬಹುದಾಗಿದೆ.

ಯೂಟ್ಯೂಬ್‌ ಶಾರ್ಟ್ಸ್‌ ಸಕ್ಸಸ್‌:
ಯೂಟ್ಯೂಬ್‌ ಶಾರ್ಟ್ಸ್‌ ಈಗಾಗಲೇ ಅಪಾರ ಯಶಸ್ಸನ್ನು ಕಂಡಿದೆ. ಅಂದರೆ 50 ಶತಕೋಟಿ ದೈನಂದಿನ ವೀಕ್ಷಣೆಗಳೊಂದಿಗೆ. ಇದೀಗ ಪರಿಚಯಿಸಲಾಗುತ್ತಿರುವ ಫೀಚರ್ಸ್‌ ಬಳಕೆದಾರರಿಗೆ ತಮ್ಮದೇ ಆದ ಮ್ಯೂಸಿಕ್‌ ವಿಡಿಯೋಗಳನ್ನು ಕ್ರಿಯೇಟ್‌ ಮಾಡಲು ಅನುಮತಿಸುತ್ತದೆ. ಹಾಗಿದ್ರೆ, ಮತ್ಯಾಕೆ ತಡ ನೀವು ವಿಡಿಯೋ ಕ್ರಿಯೇಟರ್‌ ಆಗಿದ್ದರೆ ಈಗಲೇ ಈ ಪ್ರಯೋಜನ ಪಡೆದುಕೊಳ್ಳಿ. ಈ ಮೂಲಕ ಇನ್ನಷ್ಟು ಫಾಲೋವರ್ಸ್‌ ಪಡೆಯಿರಿ.

Best Mobiles in India

English summary
YouTube shorts users will now get a new feature called Remix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+