Home
ಸುದ್ದಿಜಾಲ

ಯೂಟ್ಯೂಬ್‌ಗೆ ಎದುರಾಯ್ತಾ ದೊಡ್ಡ ಬಿಕ್ಕಟ್ಟು?: ಶೀಘ್ರದಲ್ಲೇ ಕ್ಲೋಸ್ ಆಗುತ್ತಾ ಇದು?

ಯೂಟ್ಯೂಬ್‌ (YouTube )ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಯೂಟ್ಯೂಬ್ ಆಪ್‌ ಇಲ್ಲದೆ ಸ್ಮಾರ್ಟ್‌ಫೋನ್‌ ಇಲ್ಲ. ಜೊತೆಗೆ ದಿನದಲ್ಲಿ ಒಂದು ಬಾರಿಯಾದರೂ ಈ ಆಪ್‌ ಓಪನ್ ಮಾಡದೆ ಬಹುಪಾಲು ಮಂದಿ ಇರರು. ಮಾಹಿತಿ ಹಾಗೂ ಮನರಂಜನೆಯ ಅಗಾದ ವಿಡಿಯೋಗಳನ್ನು ಹೊಂದಿರುವ ಯೂಟ್ಯೂಬ್‌ ಈಗ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

ಹೌದು, ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಯೂಟ್ಯೂಬ್‌ನಲ್ಲೂ ಸಹ ಸುಧಾರಿತ ಫೀಚರ್ಸ್‌ ಕಲ್ಪಿಸಿಕೊಡುವ ಮೂಲಕ ಬಳಕೆದಾರರನ್ನು ಹಿಡಿದಿಟ್ಟುಕೊಂಡಿದೆ. ಆದರೆ , ಇತ್ತೀಚಿನ ಕೆಲವು ಮಾಹಿತಿ ಪ್ರಕಾರ ಈ ಪ್ಲಾಟ್‌ಫಾರ್ಮ್‌ಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ಇದರಿಂದಾಗಿ ನಾವು ನೀವೆಲ್ಲಾ ನಿತ್ಯವೂ ಮಾಹಿತಿ ಹಾಗೂ ಮನರಂಜನೆ ಪಡೆಯುವ ಈ ಸೌಲಭ್ಯವನ್ನು ಕೊನೆಯಾಗಿಸಬಹುದು ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಯಾವುದು ಆ ಸೇವೆ?, ಇದರಿಂದ ಯೂಟ್ಯೂಬ್‌ಗೆ ಆಗುತ್ತಿರುವ ನಷ್ಟ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಯೂಟ್ಯೂಬ್‌ಗೆ ಎದುರಾಯ್ತಾ ದೊಡ್ಡ ಬಿಕ್ಕಟ್ಟು?:ಶೀಘ್ರದಲ್ಲೇ ಕ್ಲೋಸ್ ಆಗುತ್ತಾ ಇದು?

YouTube ಗೆ ದೊಡ್ಡ ಬಿಕ್ಕಟ್ಟು: ಯೂಟ್ಯೂಬ್ ಶಾರ್ಟ್ಸ್ (YouTube shorts) ಸೌಲಭ್ಯ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಡಿಯೋ ಕಡೆ ಗಮನಹರಿಸುವುದಕ್ಕಿಂತ ಹೆಚ್ಚು ಈ ಶಾರ್ಟ್ಸ್‌ ವಿಡಿಯೋ ಕಡೆ ಮುಖ ಮಾಡಲಾಗುತ್ತದೆ. ಆದರೆ, ಇದೇ ಜನಪ್ರಿಯತೆ ಈಗ ಯೂಟ್ಯೂಬ್‌ಗೆ ಸಂಕಷ್ಟ ತಂದಿದೆ. ಈ ಮೂಲಕ ಹೆಚ್ಚಿನ ಆದಾಯ ಗಳಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.

ಭಾರತದಲ್ಲಿ ಟಿಕ್ ಟಾಕ್ ಅನ್ನು ನಿಷೇದ ಮಾಡಿದ ಬಳಿಕ 2020 ರಲ್ಲಿ ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ಅನ್ನು ಪರಿಚಯಿಸಲಾಯಿತು. ಆದರೆ, ಈ ಸೌಲಭ್ಯವನ್ನು 2021 ರಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು. ಈ ಮೂಲಕ ಶಾರ್ಟ್ಸ್ ವಿಡಿಯೋಗಳು ಪ್ರಪಂಚದಾದ್ಯಂತ ಹೆಚ್ಚಿನ ಜನಪ್ರಿಯತೆ ಪಡೆದವು. ಇದಾದ ನಂತರದಲ್ಲಿ ಜಾಗತಿಕವಾಗಿ ಟಿಕ್‌ಟಾಕ್‌ ಹಾಗೂ ಇನ್ಸ್ಟಾಗ್ರಾಮ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಾಗ್ಯೂ ಯೂಟ್ಯೂಬ್‌ ಮಾತ್ರ ಸಂಕಷ್ಟದಲ್ಲೇ ಇದೆ.

ಕೆಲವು ಮಾಹಿತಿ ಪ್ರಕಾರ ಶಾರ್ಟ್ಸ್ ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ. ಯಾಕೆಂದರೆ ಯೂಟ್ಯೂಬ್‌ನ ಪ್ರಮುಖ ವ್ಯವಹಾರ ದೀರ್ಘ-ರೂಪದ ವಿಡಿಯೋಗಳು. ಆದರೆ, ಶಾರ್ಟ್ಸ್ ನಿಂದಾಗಿ ದೀರ್ಘಾವಧಿಯ ವಿಡಿಯೋಗಳನ್ನು ವೀಕ್ಷಣೆ ಮಾಡುವ ಜನರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಆಗಿದೆಯಂತೆ. ಈ ವರದಿಯನ್ನು ಫೈನಾನ್ಶಿಯಲ್ ಟೈಮ್ಸ್ ಎಂಬ ಮಾಧ್ಯಮ ಬಿಡುಗಡೆ ಮಾಡಿದ್ದು, ಈ ಮೂಲಕ ಯೂಟ್ಯೂಬ್‌ ಈ ಸೇವೆಯನ್ನು ಸ್ಥಗಿತ ಮಾಡಬಹುದು ಎಂದು ಉಲ್ಲೇಖಿಸಿದೆ.

ಇದರೊಂದಿಗೆ ಯೂಟ್ಯೂಬ್ ಉದ್ಯೋಗಿಗಳು ಶಾರ್ಟ್ಸ್ ವಿಡಿಯೋಗಳು ದೀರ್ಘ ವಿಡಿಯೋಗಳಿಂದ ಬರುವ ಆದಾಯಕ್ಕೆ ಕೊಕ್ಕೆ ಹಾಕುತ್ತವೆ ಎಂದು ಭಯಪಟ್ಟಿದ್ದಾರಂತೆ. ದೀರ್ಘವಿಡಿಯೋಗಳು ಸಾಮಾನ್ಯವಾಗಿ ಹೆಚ್ಚಿನ ಆದಾಯವನ್ನು ತರುತ್ತದೆ. ಶಾರ್ಟ್ಸ್ ವಿಡಿಯೋ ಹೆಚ್ಚಿನ ವೀಕ್ಷಕರನ್ನು ಹೊಂದಿದ್ದರೂ ಸಹ ಕಂಪನಿಯು ಅವುಗಳಿಂದ ಹೆಚ್ಚಿನ ಆದಾಯವನ್ನು ಗಳಿಕೆ ಮಾಡಲು ಸಾಧ್ಯ ಆಗುತ್ತಿಲ್ಲವೆಂದು ತಿಳಿದುಬಂದಿದೆ.

ಇನ್ನು ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಯೂಟ್ಯೂಬ್‌ನ ಆದಾಯದ ಮುಖ್ಯ ಮೂಲವೆಂದರೆ ಜಾಹೀರಾತು. ಜಾಹೀರಾತುಗಳನ್ನು ದೀರ್ಘವಾದ ವಿಡಿಯೋಗಳಲ್ಲಿ ಮಾತ್ರ ಇರಿಸಬಹುದು. ಆದರೆ ಒಂದು ನಿಮಿಷದೊಳಗಿನ ಶಾರ್ಟ್ಸ್ ವಿಡಿಯೋಗಳಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಯೇ ಈಗ ಯೂಟ್ಯೂಬ್‌ ಅನ್ನು ಸಂದಿಗ್ಧ ಪರಿಸ್ಥಿತಿಗೆ ದೂಡಿದೆ ಎಂದರೆ ತಪ್ಪಾಗಲಾರದು.

ಅಷ್ಟೇ ಅಲ್ಲದೆ ಈ ಶಾರ್ಟ್ಸ್‌ ವಿಡಿಯೋ ಮೂಲಕವೇ ಜಾಹೀರಾತು ಆದಾಯವನ್ನು (Advertising revenue) ಹೇಗೆ ಗಳಿಸುವುದು ಎಂಬುದರ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕೆ ಈ ವಿಡಿಯೋಗಳನ್ನು ಹತ್ತು ನಿಮಿಷಗಳ ವರೆಗೂ ಅಪ್‌ಲೋಡ್‌ ಮಾಡುವ ಅವಕಾಶ ನೀಡಲು ಸಂಸ್ಥೆ ಮುಂದಾಗಿದೆ. ಇದು ಸಂಭವಿಸಿದಲ್ಲಿ ಈ ವಿಡಿಯೋಗಳ ಮೂಲಕವೇ ಯೂಟ್ಯೂಬ್‌ ತಾನು ಇಚ್ಚಿಸಿದ ಆದಾಯವನ್ನು ಗಳಿಕೆ ಮಾಡಬಹುದಾಗಿದೆ.

ಈ ಸಂಬಂಧ ಯೂಟ್ಯೂಬ್‌ ಸಹ ವರದಿ ಮಾಡಿದ್ದು, ಅದರಂತೆ 2020 ರಿಂದ ದೀರ್ಘ ವಿಡಿಯೋಗಳ ವೀಕ್ಷಕರ ಸಂಖ್ಯೆಯು ಕ್ಷೀಣಿಸುತ್ತಿದೆ. ಆದರೆ ಶಾರ್ಟ್ಸ್‌ ವಿಡಿಯೋಗಳ ಕಡೆ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಯೂಟ್ಯೂಬ್‌ ಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ. ಜೊತೆಗೆ ಈ ವಿಡಿಯೋಗಳ ಜನಪ್ರಿಯತೆಯಿಂದ ಆರಂಭಿಕ ಯಶಸ್ಸನ್ನು ಸಹ ಅನುಭವಿಸಿದೆ.

ಯೂಟ್ಯೂಬ್‌ಗೆ ಎದುರಾಯ್ತಾ ದೊಡ್ಡ ಬಿಕ್ಕಟ್ಟು?:ಶೀಘ್ರದಲ್ಲೇ ಕ್ಲೋಸ್ ಆಗುತ್ತಾ ಇದು?

ಇದರೊಂದಿಗೆ ಈಗ ಯೂಟ್ಯೂಬ್‌ ಆದಾಯವನ್ನು ಹೆಚ್ಚಿಸಲು ಎಐ ನ ಸಹಾಯವನ್ನು ಸಹ ಪಡೆಯುತ್ತಿದೆ ಎನ್ನಲಾಗಿದೆ. ಈ ತಂತ್ರವನ್ನು ಅಭಿವೃದ್ಧಿಪಡಿಸಲು ಎಲ್ಲಾ ರೀತಿಯಲ್ಲೂ ಯೂಟ್ಯೂಬ್‌ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೆ ಲಾಭವನ್ನು ಗಳಿಸಲು ಗೂಗಲ್‌ ತನ್ನ ವ್ಯವಹಾರದಲ್ಲಿ ಬೇರೆಡೆ ರಾಜಿ ಮಾಡಿಕೊಳ್ಳಬೇಕಾಗಬಹುದು ಎಂದು ವರದಿಗಳಿಂದ ತಿಳಿದುಬಂದಿದೆ.

Best Mobiles in India

English summary
Who doesn't know YouTube shorts feature? Nowadays, more attention is paid to these shorts videos than normal videos. However, this has now created a problem for YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+