ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್ ಆಫ್‌ಲೈನ್' ಫೀಚರ್ ಆರಂಭ
ಟ್ರಾಫಿಕ್ ಅನ್ನೋದು ಕೇವಲ ಸಿಟಿಗಳಲ್ಲಿ ವಾಹನಗಳು ಎದುರಿಸುವ ಸಮಸ್ಯೆ ಅಲ್ಲ. ಟ್ರಾಫಿಕ್ ಅನ್ನೋದು ಇಂಟರ್ನೆಟ್ ಬಳಕೆದಾರರಿಗೂ ಇರುವ ಸಮಸ್ಯೆ. ಕೆಲವೊಮ್ಮೆ ವೆಬ್ ಪೇಜ್ ಬೇಗ ಅಪ್‌ಲೋಡ್ ಆಗ್ಲಿಲ್ಲ ಅಂದ್ರೆ ಈ ಮೊಬೈಲ್ ತುಂಬಾ ಸ್ಲೋ ಆಗಿದೆ ಅಂತಿವಿ. ಅದು ತಪ್ಪು.
ಅಂದಹಾಗೆ ಈಗ ಯೂಟ್ಯೂಬ್ ಬಳಕೆದಾರರಿಗೆ ಬಂಪರ್ ಆಫರ್. ಯೂಟ್ಯೂಬ್ 'ಸ್ಮಾರ್ಟ್ ಆಫ್‌ಲೈನ್'(smart offline) ಎಂಬ ಹೊಸ ಫೀಚರ್ ಅನ್ನು ಭಾರತದಲ್ಲಿ ಜಾರಿಗೊಳಿಸಿದ್ದು, ವೀಡಿಯೋ ನೋಡಲು ಮೊಬೈಲ್ ಡೇಟಾ ಬಳಸುವವರು ಅಗ್ಗದ ಬೆಲೆಯ ರಾತ್ರಿ ಡೇಟಾ ದರದಲ್ಲಿ ವೀಡಿಯೊ ಡೌನ್‌ಲೋಡ್ ಮಾಡಬಹುದಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಮುಂದೇ ಸ್ಲೈಡರ್‌ಗಳಲ್ಲಿ ಓದಿರಿ.
ಬಾಲಿವುಡ್ ಸ್ಟಾರ್‌ಗಳು 'ಗೇಮ್ ಆಫ್ ಥ್ರೋನ್ಸ್'ನಲ್ಲಿ ನಟಿಸಿದರೆ!!

1
ವೀಡಿಯೊ ಸ್ಟ್ರೀಮಿಂಗ್ ಸೇವೆಯ ಯೂಟ್ಯೂಬ್, ನೆನ್ನೆ (ಗುರುವಾರ 9) ತನ್ನ ಹೊಸ ಫೀಚರ್ 'ಸ್ಮಾರ್ಟ್ ಆಫ್‌ಲೈನ್' ಜಾರಿಗೊಳಿಸಿದೆ. ಈ ಸೇವೆಯಿಂದ ಮೊಬೈಲ್ ಡೇಟಾ ಬಳಕೆದಾರರು ಅಗ್ಗದ ರಾತ್ರಿ ಡೇಟಾ ಪ್ಯಾಕ್ ದರದಿಂದ ವೀಡಿಯೊವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಆಫರ್ ಅನ್ನು ಭಾರತದ ಮೊಬೈಲ್ ಆಪರೇಟರ್‌ಗಳು ನೀಡಲಿದ್ದಾರೆ.

2
(ಶುಕ್ರವಾರ 10) 'ಸ್ಮಾರ್ಟ್ ಆಫ್‌ಲೈನ್' ಫೀಚರ್ ಆರಂಭವಾಗುತ್ತಿದ್ದು, ಮೊಬೈಲ್ ಆಪರೇಟರ್‌ಗಳು ನೀಡುವ ಅಗ್ಗದ ಬೆಲೆಯ ಡೇಟಾ ರೇಟ್‌ನಿಂದ ಮೊಬೈಲ್ ಬಳಕೆದಾರರು ತಡ ರಾತ್ರಿಯ ವರೆಗೂ ಕಾಯುವ ಅಗತ್ಯವಿಲ್ಲದೆ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕಂಪನಿ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. .

3
ಬಳಕೆದಾರರು ವೀಡಿಯೊ ಆಫ್‌ಲೈನ್ ಪಡೆಯಲು, 'ಬೂದು ಬಣ್ಣದ ಆರೋ (Grey Arrow) ಮೇಲೆ ಟ್ಯಾಪ್ ಮಾಡಿದಾಗ 'Save overnight' ಆಯ್ಕೆ ಕಾಣುತ್ತದೆ. ಈ ಫೀಚರ್ ಮೊಬೈಲ್ ಆಪರೇಟರ್‌ನ ರಿಯಾಯಿತಿ ರಾತ್ರಿ ಡೇಟಾ ಪ್ಲಾನ್ ಅನ್ನು ಬಳಸಿಕೊಂಡು ವೀಡಿಯೊ ಆಫ್‌ಲೈನ್ ಸೇವ್ ಮಾಡುತ್ತದೆ.

4
'ಸ್ಮಾರ್ಟ್ ಆಫ್‌ಲೈನ್' ಫೀಚರ್‌ನಲ್ಲಿ 'Save overnight' ಆಯ್ಕೆ ಮಾಡಿದಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ಸ್ಮಾರ್ಟ್ ಆಗಿ ರಾತ್ರಿ ವೇಳೆ ಟ್ರಾಫಿಕ್ ಇಲ್ಲದ ಸಮಯದಲ್ಲಿ ವೀಡಿಯೊ ಡೌನ್‌ಲೋಡ್ ಆಗಲು ಶೆಡ್ಯೂಲ್ ಮಾಡುತ್ತದೆ.

5
'ಸ್ಮಾರ್ಟ್ ಆಫ್‌ಲೈನ್' ಫೀಚರ್ ಪ್ರಸ್ತುತದಲ್ಲಿ ಏರ್‌ಟೆಲ್ ಮತ್ತು ಟೆಲಿನಾರ್ ಸಬ್‌ಸ್ಕ್ರೈಬರ್‌ಗಳಿಗಾಗಿ ಜಾರಿಗೊಳಿಸಿದ್ದು, ಶೀಘ್ರದಲ್ಲಿ ಭಾರತೀಯ ಇತರೆ ಎಲ್ಲಾ ಟೆಲಿಕಾಂ ಬಳಕೆದಾರರಿಗೂ ನೀಡಲಿದೆ.

6
'ಸ್ಮಾರ್ಟ್ ಆಫ್‌ಲೈನ್' ಫೀಚರ್ ವೈಫೈ ನೆಟ್‌ವರ್ಕ್‌ನಲ್ಲಿ ವರ್ಕ್ ಆಗುವುದಿಲ್ಲ. ಅಲ್ಲದೇ ಬಳಕೆದಾರರು ಯೂಟ್ಯೂಬ್‌ನ ಲೇಟೆಸ್ಟ್ ವರ್ಸನ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಿದೆ.

ಗಿಜ್‌ಬಾಟ್



Click it and Unblock the Notifications








