Home
ಸುದ್ದಿಜಾಲ

Youtube ಬಳಕೆದಾರರಿಗೆ ಬೇಸರದ ಸುದ್ದಿ: ಈ ಸೇವೆ ಜೂನ್ 26 ರಿಂದ ಕ್ಲೋಸ್‌!

ಯೂಟ್ಯೂಬ್ (YouTube) ಜನಪ್ರಿಯ ಆನ್‌ಲೈನ್ ವಿಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಆಗಿದ್ದು, ಬಳಕೆದಾರರಿಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಹಾಗೂ ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ಪ್ರತಿಯೊಬ್ಬರೂ ಸಹ ದಿನದಲ್ಲಿ ಒಮ್ಮೆಯಾದರೂ ಈ ಆಪ್‌ ಓಪನ್‌ ಮಾಡುತ್ತಾರೆ. ಈ ನಡುವೆ ಯೂಟ್ಯೂಬ್‌ ಬಳಕೆದಾರರಿಗೆ ಶಾಕಿಂಗ್‌ ಸುದ್ದಿ ನೀಡಲಾಗಿದೆ.

ಹೌದು, ಯೂಟ್ಯೂಬ್‌ನಲ್ಲಿ ಈಗಾಗಲೇ ವಿಡಿಯೋ ಹೊರತುಪಡಿಸಿ ಶಾರ್ಟ್‌ ವಿಡಿಯೋ, ಮ್ಯೂಸಿಕ್‌, ಫೋಟೋಗಳನ್ನೂ ಸಹ ಶೇರ್‌ ಮಾಡಬಹುದು. ಈ ನಡುವೆ ಯೂಟ್ಯೂಬ್‌ನ ಈ ಸೌಲಭ್ಯವನ್ನು ಸ್ಥಗಿತಗೊಳಿಸುವುದಾಗಿ ಮಾಹಿತಿ ನೀಡಿದೆ. ಈ ಸೌಲಭ್ಯವು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಫೀಚರ್ಸ್‌ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ಇತ್ತು. ಹಾಗಿದ್ರೆ, ಏನಿದು ಯೂಟ್ಯೂಬ್‌ನ ಹೊಸ ನಿರ್ಧಾರ?, ಯಾವ ಉದ್ದೇಶಕ್ಕೆ ಈ ನಿರ್ಧಾರ ಮಾಡಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

Youtube ಬಳಕೆದಾರರಿಗೆ ಬೇಸರದ ಸುದ್ದಿ: ಈ ಸೇವೆ ಜೂನ್ 26 ರಿಂದ ಕ್ಲೋಸ್‌!

ಸ್ಟೋರಿ ಸೇವೆ ಬಂದ್‌: ನೀವು ಯೂಟ್ಯೂಬ್ ಬಳಕೆ ಮಾಡುತ್ತಿದ್ದರೆ ಖಂಡಿತಾ ಇದು ಬೇಸರದ ವಿಷಯವಾಗಲಿದೆ. ಯಾಕೆಂದೆರ ಜೂನ್ 26, 2023 ರಿಂದ ತನ್ನ ಯೂಟ್ಯೂಬ್‌ ಸ್ಟೋರೀಸ್ ಫೀಚರ್ಸ್‌ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದರ ಬದಲಾಗಿ ಯೂಟ್ಯೂಬ್ ಕಿರುಚಿತ್ರಗಳು, ಲೈವ್ ವಿಡಿಯೋಗಳು ಮತ್ತು ಕಮ್ಯೂನಿಟಿ ಪೋಸ್ಟ್‌ಗಳಿಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.

ಇನ್ನು 2017 ರಲ್ಲಿ ಯೂಟ್ಯೂಬ್ ಸ್ಟೋರಿ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಹಾಗೆಯೇ ಇದನ್ನು ರೀಲ್ ಎಂದು ಕರೆಯಲಾಗುತ್ತಿತ್ತು. ಫೋರಮ್ ಪೋಸ್ಟ್‌ಗಳು, ಇನ್-ಆಪ್ ಮೆಸೆಜ್‌ಗಳು, ಯೂಟ್ಯೂಬ್ ಸ್ಟುಡಿಯೋ ರಿಮೈಂಡರ್‌ಗಳಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸ್ಟೋರಿ ಫೀಚರ್ಸ್‌ ಅನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ತನ್ನ ಬಳಕೆದಾರರಿಗೆ ಈ ಬಗ್ಗೆ ಮಾಹಿತಿ ನೀಡಿದೆ.

ಯೂಟ್ಯೂಬ್‌ 10,000 ಬಳಕೆದಾರರೊಂದಿಗೆ 2017 ಸ್ಟೋರಿ ಫೀಚರ್ಸ್‌ ಪರಿಚಯಿಸಿ ಇದು ಕ್ರಿಯೇಟರ್ಸ್‌ ತಮ್ಮ ಪ್ರೇಕ್ಷಕರೊಂದಿಗೆ ಹೆಚ್ಚು ನೇರವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿತ್ತು. ಹಾಗೆಯೇ ಕ್ರಿಯೇಟರ್ಸ್‌ಗಳು ತಮ್ಮ ಕಂಟೆಂಟ್‌ ಅನ್ನು ಹೆಚ್ಚು ಹೆಚ್ಚು ಬಳಕೆದಾರರಿಗೆ ಸಾಧ್ಯವಾದಷ್ಟು ವೇಗವಾಗಿ ತಲುಪಿಸಲು ಸಹಕಾರಿ ಎಂದು ಹೇಳಿತ್ತು. ಆದರೆ, ಇನ್ಮುಂದೆ ಈ ಸೇವೆ ಇಲ್ಲ ಎನ್ನುವುದು ಹಲವರಿಗೆ ಬೇಸರದ ವಿಷಯವಾಗಿದೆ.

Youtube ಬಳಕೆದಾರರಿಗೆ ಬೇಸರದ ಸುದ್ದಿ: ಈ ಸೇವೆ ಜೂನ್ 26 ರಿಂದ ಕ್ಲೋಸ್‌!

ಇದು ಹೇಗೆ ಕೆಲಸ ಮಾಡುತ್ತಿತ್ತು?: ಮೊದಲೇ ತಿಳಿಸಿದಂತೆ ಇನ್‌ಸ್ಟಾಗ್ರಾಮ್ ಸ್ಟೋರಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿಯಲ್ಲಿ ಯೂಟ್ಯೂಬ್ ಸ್ಟೋರಿ ಕಾರ್ಯನಿರ್ವಹಿಸುತ್ತಿತ್ತು. ಅಂದರೆ ನೀವು ಯೂಟ್ಯೂಬ್‌ ವಿಭಾಗದಲ್ಲಿ ಸ್ಟೋರಿಯಲ್ಲಿ ಪೋಸ್ಟ್‌ ಹಾಕಿದರೆ ಅದು 24 ಗಂಟೆಗಳ ನಂತರ ಆಟೋಮ್ಯಾಟಿಕ್‌ ಆಗಿ ಕಣ್ಮರೆಯಾಗುತ್ತಿತ್ತು. ಈ ಮೂಲಕ ಹೆಚ್ಚಿನ ಫಾಲೋವರ್ಸ್‌ಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿತ್ತು.

ಯೂಟ್ಯೂಬ್ ಯಾಕೆ ಈ ನಿರ್ಧಾರ ಮಾಡಿದೆ?:ಯೂಟ್ಯೂಬ್ ಈ ನಿರ್ಧಾರ ಮಾಡಲು ಕಾರಣ ಸ್ಟೋರೀಸ್ ಫೀಚರ್ಸ್‌ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ.ಕೆಲವರಿಗೆ ತಿಳಿದಿದ್ದರೂ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲವಂತೆ. ಇದಕ್ಕೆ ಪ್ರವೇಶ ಸೀಮಿತವಾಗಿದ್ದು, ಕೆಲವೇ ರಚನೆಕಾರರು ಮಾತ್ರ ಇದನ್ನು ನಿಯಮಿತವಾಗಿ ಬಳಕೆ ಮಾಡುತ್ತಿದ್ದರು.ಅದಾಗ್ಯೂ ಯೂಟ್ಯೂಬ್‌ ಈ ಫೀಚರ್ಸ್‌ ಅನ್ನು ಪ್ರಚಾರ ಮಾಡುವ ಕೆಲಸವನ್ನೇ ಮಾಡಲಿಲ್ಲ. ಈ ಎಲ್ಲಾ ಕಾರಣಗಳಿಂದ ಸ್ಟೋರಿ ಫೀಚರ್ಸ್‌ ಹೆಚ್ಚಾಗಿ ಬಳಕೆ ಆಗದ ಹಿನ್ನೆಲೆ ತೆಗೆದುಹಾಕಲಾಗುತ್ತಿದೆ.

ಇದರ ಬದಲಾಗಿ ಈಗಾಗಲೇ ಅಸ್ತಿತ್ವದಲ್ಲಿ ಇರುವ ಇತರೆ ಸೇವೆಗಳನ್ನು ಬಳಕೆ ಮಾಡಬೇಕು ಎಂದು ಯೂಟ್ಯೂಬ್‌ ಸೂಚಿಸಿದೆ. ಇದರಲ್ಲಿ ಪ್ರಮುಖವಾದುದು ಎಂದರೆ ಕಮ್ಯೂನಿಟಿ ಪೋಸ್ಟ್‌ಗಳು ಮತ್ತು ಶಾರ್ಟ್‌ ಫೀಚರ್ಸ್‌. ಇದು ಯೂಟ್ಯೂಬ್‌ ವಿಡಿಯೋ ಕ್ರಿಯೇಟರ್ಸ್‌ಗಳನ್ನು ಇನ್ನಷ್ಟು ಪ್ರೋತ್ಸಾಹಿಸಲಿದ್ದು, ಈ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳಬಹುದಾಗಿದೆ.

Youtube ಬಳಕೆದಾರರಿಗೆ ಬೇಸರದ ಸುದ್ದಿ: ಈ ಸೇವೆ ಜೂನ್ 26 ರಿಂದ ಕ್ಲೋಸ್‌!

ಇನ್ನು ಈ ಕಮ್ಯೂನಿಟಿ ಪೋಸ್ಟ್‌ಗಳು ರಚನೆಕಾರರು ತಮ್ಮ ಚಂದಾದಾರರೊಂದಿಗೆ ಹಂಚಿಕೊಳ್ಳಬಹುದಾದ ಪಠ್ಯ ಆಧಾರಿತ ಅಪ್‌ಡೇಟ್‌ ಆಗಿದೆ. ಅದರಂತೆ ಯೂಟ್ಯೂಬ್ ಇತ್ತೀಚೆಗೆ ಈ ಫೀಚರ್ಸ್‌ ಅನ್ನು ವಿಸ್ತರಣೆ ಮಾಡಿದ್ದು, ನಿರ್ದಿಷ್ಟ ಅವಧಿಯ ನಂತರ ಪೋಸ್ಟ್‌ಗಳನ್ನು ಮುಕ್ತಾಯಗೊಳಿಸುವ ಆಯ್ಕೆಯನ್ನು ಸಹ ನೀಡಲಾಗಿದೆ. ಇದರಲ್ಲಿ ಸಮೀಕ್ಷೆಗಳು, ರಸಪ್ರಶ್ನೆಗಳು, ಚಿತ್ರಗಳು ಮತ್ತು ವಿಡಿಯೋಗಳನ್ನು ಪೋಸ್ಟ್‌ಗಳಾಗಿ ಹಂಚಿಕೊಳ್ಳಬಹುದು.

Best Mobiles in India

English summary
Google has announced that it will discontinue the Stories feature on YouTube. And also suggested to focus on video, short video, music, community posts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+