Home
ಸುದ್ದಿಜಾಲ

ಬರ್ತಿದೆ ಹೊಸ ಆಪ್‌!..ಯೂಟ್ಯೂಬ್‌ ವಿಡಿಯೋ ಎಡಿಟ್ ಮಾಡುವುದು ಇನ್ನು ತುಂಬಾ ಸುಲಭ!

ಪ್ರಸ್ತುತ ಕಿರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅನೇಕ ಬಳಕೆದಾರರು ಕಿರು ವಿಡಿಯೋ ಕ್ರಿಯೆಟ್ ಮಾಡಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಜನಪ್ರಿಯ ಇನ್‌ಸ್ಟಾಗ್ರಾಮ್‌ ತಾಣವು ಇತ್ತೀಚಿಗೆ ತನ್ನ ಬಿಲ್ಟ್‌ಇನ್‌ ರೀಲ್ ಎಡಿಟಿಂಗ್ ಸೌಲಭ್ಯ ನೀಡಿದೆ. ಅದೇ ಹಾದಿಯಲ್ಲಿ ಇದೀಗ ಯೂಟ್ಯೂಬ್‌ ಸಹ ಹೆಜ್ಜೆ ಹಾಕಿದ್ದು, ತನ್ನ ಬಳಕೆದಾರರಿಗೆ ಖುಷಿ ಸಿದ್ದಿ ನೀಡಿದೆ.

ಹೌದು, ಅತೀ ದೊಡ್ಡ ವಿಡಿಯೋ ಪ್ಲಾಟ್‌ಫಾರ್ಮ್ ಎನಿಸಿರುವ ಯೂಟ್ಯೂಬ್‌ ಇದೀಗ ಸ್ವಂತ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಪರಿಚಯಿಸುವ ನಿಟ್ಟಿನಲ್ಲಿ ಸಾಗಿದೆ. ಅದುವೇ 'ಯೂಟ್ಯೂಬ್‌ ಕ್ರಿಯೆಟ್‌' (YouTube Create) ಆಗಿದ್ದು, ಈ ಎಡಿಟಿಂಗ್‌ ಅಪ್ಲಿಕೇಶನ್ ಅನ್ನು ಸದ್ಯ ಅನ್ನು ಪರೀಕ್ಷಿಸುತ್ತಿದೆ.

ಬರ್ತಿದೆ ಹೊಸ ಆಪ್‌!..ಯೂಟ್ಯೂಬ್‌ ವಿಡಿಯೋ ಎಡಿಟ್ ಮಾಡುವುದು ಇನ್ನು ತುಂಬಾ ಸುಲಭ!

ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ ತನ್ನ ಕ್ರಿಯೆಟರ್ಸ್‌ಗಳಿಗೆ ಎಡಿಟಿಂಗ್ ಸುಲಭ ಆಗಲಿ ಎಂದು 'ಯೂಟ್ಯೂಬ್‌ ಕ್ರಿಯೆಟ್‌' ಎಡಿಟಿಂಗ್ ಅಪ್ಲಿಕೇಶನ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಯೂಟ್ಯೂಬ್‌ನ ಈ ನೂತನ ವಿಡಿಯೋ ಎಡಿಟಿಂಗ್ ಆಪ್‌ ಸಂಪೂರ್ಣವಾಗಿ ಪ್ರತ್ಯೇಕ ಅಪ್ಲಿಕೇಶನ್ ಆಗಿದೆ.

ಯೂಟ್ಯೂಬ್‌ ಕ್ರಿಯೆಟ್‌ ಅಪ್ಲಿಕೇಶನ್ ಆಹ್ವಾನದ ಆಧಾರದ ಮೇಲೆ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಮಾತ್ರ ಲಭ್ಯವಿದೆ. ಇನ್ನು ಯೂಟ್ಯೂಬ್‌ ಸ್ಟುಡಿಯೋ ಆಪ್‌ ಬಳಸುವ ಕ್ರಿಯೆಟರ್ಸ್‌ ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆಯೇ ಎಂದು ತಿಳಿಯಲು ಅವರು ತಮ್ಮ ಡ್ಯಾಶ್‌ಬೋರ್ಡ್ ಅನ್ನು ಚೆಕ್ ಮಾಡಬಹುದಾಗಿದೆ.

ಯೂಟ್ಯೂಬ್‌ ಕ್ರಿಯೆಟ್‌ ಆಪ್‌: ವೀಡಿಯೊ ಎಡಿಟಿಂಗ್ ಫೀಚರ್ಸ್‌ ಮಾಹಿತಿ
ನೂತನ ಯೂಟ್ಯೂಬ್‌ ಕ್ರಿಯೆಟ್‌ ಆಪ್‌ ಮೂರು ಆಕಾರ ಅನುಪಾತಗಳಲ್ಲಿ ವಿಡಿಯೋ ರಚಿಸಲು ಬಳಕೆದಾರರಿಗೆ ಅನುವು ಮಾಡಿ ಕೊಡುತ್ತದೆ. ಅವುಗಳು ಕ್ರಮವಾಗಿ 16:9, 9:16, ಮತ್ತು 1:1 ಆಗಿವೆ. ಪ್ರಸ್ತುತ ಬೆಂಬಲಿಸುವ ರೆಸಲ್ಯೂಶನ್ 1080p ಆಗಿದ್ದು, ಆಪ್‌ ಸರಿಯಾದ ಟೈಮ್‌ಲೈನ್ ಇಂಟರ್ಫೇಸ್ ಅನ್ನು ಬಳಕೆ ಮಾಡುತ್ತದೆ. ಈ ಆಪ್‌ ಇತರ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ಗಳಿಗೆ ಹೋಲಿಕೆ ಹೊಂದಿದೆ.

ಬಳಕೆದಾರರು ಅವರ ಫೋನ್‌ನ ಸ್ಟೋರೇಜ್‌ನಿಂದ ಆಪ್‌ನ ಟೈಮ್‌ಲೈನ್‌ಗೆ ಮಲ್ಟಿಪಲ್ ವೀಡಿಯೊ ಕ್ಲಿಪ್‌ಗಳು ಮತ್ತು ಫೋಟೋಗಳನ್ನು ಸೇರಿಸಬಹುದಾಗಿದೆ. ಹಾಗೆಯೇ ಅಪ್ಲಿಕೇಶನ್ ಡಿಸೋಲವೂ, ಫೇಡ್, ಪಿಕ್ಸಲೇಟೆಡ್, ವೈಪ್ ಸೇರಿದಂತೆ ಎರಡು ಕ್ಲಿಪ್‌ಗಳ ನಡುವೆ ಸೇರಿಸಬಹುದಾದ ಎಫೆಕ್ಟ್‌ಗಳ ಆಯ್ಕೆಗಳನ್ನು ಸಹ ಇದು ಪಡೆದುಕೊಂಡಿದೆ.

ಯೂಟ್ಯೂಬ್‌ ಕ್ರಿಯೆಟ್‌ ಆಪ್‌ ವೀಡಿಯೊ ಎಡಿಟಿಂಗ್‌ನಲ್ಲಿ ಓವರ್‌ಲೇಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಬಳಕೆದಾರರು ವೀಡಿಯೊಗಳು, ಫೋಟೋಗಳು ಹಾಗೂ GIF ಗಳನ್ನು ಕೂಡ ಸೇರಿಸಬಹುದಾಗಿದೆ. ಅಲ್ಲದೇ ಈ ಆಪ್‌ ವೀಡಿಯೊಗೆ ಅಂಶಗಳಾಗಿ ಸೇರಿಸಬಹುದಾದ ಸ್ಟಿಕ್ಕರ್‌ಗಳ ಕಿರು ಕಲೆಕ್ಷನ್‌ ಅನ್ನು ಸಹ ಪಡೆದಿದೆ.

ಯೂಟ್ಯೂಬ್‌ ಕ್ರಿಯೆಟ್‌ ಆಪ್‌ನ ಪ್ಲಸ್‌ ಪಾಯಿಂಟ್‌ ಎಂದರೆ, ಯೂಟ್ಯೂಬ್‌ ನ ಓಪನ್ ಮ್ಯೂಸಿಕ್ ಲೈಬ್ರರಿಗೆ ನೇರ ಪ್ರವೇಶ. ಕೃತಿಸ್ವಾಮ್ಯ-ಮುಕ್ತ ಯೂಟ್ಯೂಬ್‌ ಲೈಬ್ರರಿಯಿಂದ ಕ್ರಿಯೆಟರ್ಸ್‌ ನೇರವಾಗಿ ತಮ್ಮ ವಿಡಿಯೋಗಳಿಗೆ ಹಿನ್ನೆಲೆ ಮ್ಯೂಸಿಕ್‌ ಅನ್ನು ಸೇರಿಸಬಹುದಾಗಿದೆ. ಹಾಗೆಯೇ ಬಳಕೆದಾರರು ತಮ್ಮ ಫೋನ್‌ ಸ್ಟೋರೇಜ್‌ನ ಆಡಿಯೋ ಟ್ರ್ಯಾಕ್‌ ಅನ್ನು ಸೇರಿಸುವ ಆಯ್ಕೆ ಸಹ ಬಳಕೆದಾರರಿಗೆ ಲಭ್ಯ ಇರುತ್ತದೆ.

ಈ ಆಪ್‌ನ ಇತರೆ ಫೀಚರ್ಸ್‌ ನೊಡುವುದಾರೆ, ವಿಡಿಯೋ ಮತ್ತು ಓವರ್‌ಲೇಗಳಿಗಾಗಿ ಟ್ರಿಮ್ ಮತ್ತು ಕ್ರಾಪ್ ಆಯ್ಕೆ ಸಹ ಒಳಗೊಂಡಿವೆ. ಎರಡರ ನಡುವೆ ಸಮತೋಲನವನ್ನು ಇರಿಸಿಕೊಳ್ಳಲು ಬಳಕೆದಾರರು ವೀಡಿಯೊ ವಾಲ್ಯೂಮ್ ಮತ್ತು ಹಿನ್ನೆಲೆ ಮ್ಯೂಸಿಕ್‌ನ ಎಫೆಕ್ಸ್ಟ್ಗಳನ್ನು ಸಹ ಸೆಟ್‌ ಮಾಡಬಹುದಾಗಿದೆ. ಯೂಟ್ಯೂಬ್‌ ಕ್ರಿಯೆಟ್‌ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೀಡಿಯೊದ ಬಣ್ಣ ಲುಕ್‌ ಅನ್ನು ವೃದ್ಧಿಸಲು ಬಳಸಬಹುದಾದ ಫಿಲ್ಟರ್‌ಗಳ ಆಯ್ಕೆ ಸಹ ಒಳಗೊಂಡಿದೆ.

ಈ ಪ್ರಮುಖ ಎಡಿಟಿಂಗ್‌ ಫೀಚರ್ಸ್‌ಗಳನ್ನು ಹೊರತುಪಡಿಸಿ, ಯೂಟ್ಯೂಬ್‌ ಕ್ರಿಯೆಟ್‌ ಅಪ್ಲಿಕೇಶನ್ ಕ್ರೋಮಾ ಕೀ ಅಥವಾ ವಾಯ್ಸ್‌ಓವರ್‌ಗಳಂತಹ ಯಾವುದೇ ಅಲಂಕಾರಿಕ ಅಥವಾ ಸುಧಾರಿತ ಫೀಚರ್ಸ್‌ಗಳನ್ನು ಹೊಂದಿಲ್ಲ ಎನ್ನುವುದು ಮೈನಸ್‌ ಪಾಯಿಂಟ್‌ ಆಗಿ ಕಾಣಿಸುತ್ತದೆ.

Best Mobiles in India

English summary
YouTube testing its own video-editing app. that is YouTube Create aplication. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+