ಸ್ಮಾರ್ಟ್ ಟಿವಿಯಲ್ಲಿ ಯೂಟ್ಯೂಬ್ ವಿಡಿಯೋ ವೀಕ್ಷಿಸುವವರಿಗೆ ಶಾಕಿಂಗ್ ಮಾಹಿತಿ!
ಸ್ಮಾರ್ಟ್‌ಟಿವಿಗಳು ಇಂದು ಜನರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತವೆ. ಯಾಕೆಂದರೆ ಇವುಗಳಲ್ಲಿ ಡಿಟಿಹೆಚ್ ಬೆಂಬಲದೊಂದಿಗೆ ಸುದ್ದಿ, ಸಿನಿಮಾ ವೀಕ್ಷಣೆ ಮಾಡುವುದಷ್ಟೇ ಅಲ್ಲದೆ ಯೂಟ್ಯಬ್, ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್‌ನಂತಹ ಆಪ್‌ಗಳನ್ನು ಬಳಕೆ ಮಾಡಿಕೊಂಡು ಓಟಿಟಿ ಸೇವೆ ಪಡೆದುಕೊಳ್ಳಬಹುಗಿದೆ.ಈ ನಡುವೆ ಈ ಟಿವಿಗಳನ್ನು ಯೂಟ್ಯೂಬ್ ನೋಡುವವರಿಗೆ ಶಾಕ್ ಕಾದಿದೆ.
ಹೌದು, ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಟಿವಿಗಳಲ್ಲಿ ಯೂಟ್ಯೂಬ್ ಅನ್ನು ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದ್ದು, ಇದು ಗೂಗಲ್‌ಗೆ ಒಂದು ಕಡೆ ಸಂತಸವಾಗಿದ್ದು, ಇದನ್ನೇ ಬಂಡವಾಳದವಾಗಿ ಬದಲಾಯಿಸಲು ಮುಂದಾಗಿದೆ. ಈ ಮೂಲಕ ಸ್ಮಾರ್ಟ್‌ಟಿವಿಯಲ್ಲಿ ಇನ್ಮುಂದೆ ಯೂಟ್ಯೂಬ್ ವೀಕ್ಷಣೆ ಖಂಡಿತಾ ಕೆಲವರಿಗೆ ಕಷ್ಟವಾಗಲಿದೆ. ಹಾಗಿದ್ರೆ, ಗೂಗಲ್‌ನ ಹೊಸ ನಿರ್ಧಾರ ಏನು?, ಇದರಿಂದ ಬಳಕೆದಾರರಿಗೆ ಹೇಗೆಲ್ಲಾ ಅನಾನುಕೂಲ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಮಾರ್ಟ್‌ಟಿವಿಯಲ್ಲಿ ಯೂಟ್ಯೂಬ್: ಸ್ಮಾರ್ಟ್‌ಟಿವಿ ದೊಡ್ಡ ಡಿಸ್‌ಪ್ಲೇ ಹೊಂದಿರುವ ಪರಿಣಾಮ ಉತ್ತಮ ಅನುಭವಕ್ಕೆ ತಮ್ಮಿಷ್ಟದ ಸಿನಿಮಾ ಹಾಗೂ ಸುದ್ದಿ ವೀಕ್ಷಣೆಗೆ ಬಳಕೆ ಮಾಡಲಾಗುತ್ತದೆ. ಆದರೆ ಇನ್ಮುಂದೆ ನೀವು ಸ್ಮಾರ್ಟ್‌ಟಿವಿ ವೀಕ್ಷಣೆ ಮಾಡುವಾಗ 30 ಸೆಕೆಂಡ್ ಜಾಹೀರಾತುಗಳನ್ನು ವೀಕ್ಷಿಸಬೇಕಾಗುತ್ತದೆ. ಬೇಸರ ಏನೆಂದರೆ ಇಲ್ಲಿಯವರೆಗೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಕಂಟೆಂಟ್ ಆಧಾರದ ಮೇಲೆ ಎರಡು 15 ಸೆಕೆಂಡುಗಳ ಜಾಹೀರಾತುಗಳನ್ನು ಅನುಕ್ರಮವಾಗಿ ತೋರಿಸಲಾಗುತ್ತಿತ್ತು.ಆದರೆ, ಇನ್ಮುಂದೆ ನಾನ್‌ಸ್ಟಾಪ್ ಜಾಹೀರಾತು ವೀಕ್ಷಣೆ ಮಾಡಬೇಕಿದೆ.
ಈಗಾಗಲೇ ಎರಡು ಹಂತದಲ್ಲಿ ಭಾರತದಲ್ಲಿ 15 ಸೆಕೆಂಡ್ ಜಾಹೀರಾತುಗಳನ್ನು ನೋಡುತ್ತಿದ್ದೇವೆ. ಆದರೆ, ಇನ್ಮುಂದೆ ಒಂದೇ ಬಾರಿಗೆ 30 ಸೆಕೆಂಡ್ ಉದ್ದದ ಜಾಹೀರಾತುಗಳನ್ನು ವೀಕ್ಷಣೆ ಮಾಡುವುದು ಎಂದರೆ ತಮಾಷೆಯ ಮಾತಲ್ಲ. ಇದು ವೀಕ್ಷಕರಿಗೆ ಖಂಡಿತಾ ಕಿರಿಕಿರಿ ಅನುಭವ ನೀಡುತ್ತದೆ. ಅದಾಗ್ಯೂ ನೀವು ಈ ಕಿರಿಕಿರಿ ಜಾಹೀರಾತುಗಳನ್ನು ತಪ್ಪಿಸಬಹುದು ಎಂಬುದು ನಿಮಗೆ ಗೊತ್ತಾ?.

ಚಂದಾದಾರಿಕೆ ಆಯ್ಕೆ: ಯೂಟ್ಯೂಬ್‌ನಲ್ಲಿ ದೀರ್ಘ ಜಾಹೀರಾತುಗಳನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ. ನಿಮಗೆ ದೊಡ್ಡ ಮಟ್ಟದ ಚಂದಾದಾರಿಕೆ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ ಎಂದಾದಲ್ಲಿ ಸಣ್ಣ ಮೊತ್ತದ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಆರಂಭಿಕ ಚಂದಾದಾರಿಕೆ 129ರೂ.ಗಳಿಂದ ಇರುತ್ತದೆ. ಈ ಮೂಲಕ ನೀವು ಯಾವುದೇ ಜಾಹೀರಾತಿನ ಕಿರಿಕಿರಿ ಇಲ್ಲದೆ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದು.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್ ಟಿವಿಗಳು ಸೇರಿದಂತೆ ಎಲ್ಲಾ ಡಿವೈಸ್‌ಗಳಿಗೂ ಈ ಚಂದಾದಾರಿಕೆ ಪ್ಲ್ಯಾನ್ ಅನ್ವಯ ಆಗುತ್ತದೆ. ಅದಾಗ್ಯೂ ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಜನರು ಯೂಟ್ಯೂಬ್ ಬಳಕೆ ಮಾಡುತ್ತಾರೆ. ಎಲ್ಲರೂ ಸಹ ಈ ಚಂದಾದಾರಿಕೆ ಪ್ಲ್ಯಾನ್ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ವಿಷಯವೂ ಸಹ ಗಮನಾರ್ಹ.
ಎಂದಿನಿಂದ ಹಾಗೂ ಯಾರಿಗೆಲ್ಲಾ ಈ ನಿಯಮ ಅನ್ವಯ?: ಗೂಗಲ್‌ನ ಈ ಹೊಸ ಜಾಹೀರಾತು ಪ್ಲ್ಯಾನ್ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವರದಿಯಾಗಿದ್ದು, ಸದ್ಯಕ್ಕೆ ಈ ಹೊಸ ಜಾಹೀರಾತು ನೀತಿಯನ್ನು ಯುಎಸ್ ನಲ್ಲಿನ ಬಳಕೆದಾರರಿಗೆ ಅನ್ವಯ ಆಗಲಿದೆ. ಆದರೆ ಇತರ ದೇಶಗಳಲ್ಲಿ ಇದನ್ನು ಯಾವಾಗ ಪರಿಚಯಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಅದರಲ್ಲೂ ಈ ಹೊಸ ಜಾಹೀರಾತು ನೀತಿಯನ್ನು ಭಾರತದಲ್ಲೂ ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಯೂಟ್ಯೂಬ್ ಇಂದು ಕೇವಲ ವಿಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿರದೆ ಅದೆಷ್ಟೋ ಜನರಿಗೆ ಉದ್ಯೋಗ ನೀಡಿದೆ. ಈ ಮೂಲಕ ಯೂಟ್ಯೂಬ್ ಕ್ರಿಯೇಟರ್ಸ್‌ಗಳು ಜೀವನ ನಡೆಸಲು ಹಾಗೂ ವಿಶೇಷವಾದ ಕಂಟೆಂಟ್‌ಗಳನ್ನು ಜಗತ್ತಿಗೆ ಪರಿಚಯಿಸಲು ಇದು ಸಹಕಾರಿಯಾಗಿದೆ. ಅದರಲ್ಲೂ ಮುಂದಿನ ದಿನಗಳಲ್ಲಿ ಯೂಟ್ಯೂಬ್ ವೀಕ್ಷಣೆ ಮಾಡಿದರೂ ಸಹ ನೀಡುವ ಬಗ್ಗೆ ಯೂಟ್ಯೂಬ್ ಚಿಂತನೆ ನಡೆಸುತ್ತಿದೆ.


Click it and Unblock the Notifications








