Home
ಸುದ್ದಿಜಾಲ

YouTube ನಲ್ಲಿ ನಿಮ್ಮಿಷ್ಟದ ಹಾಡನ್ನು ಗುನುಗುವ ಮೂಲಕವೇ ಸರ್ಚ್‌ ಮಾಡಬಹುದು! ಅದೇಗೆ ಅಂತೀರಾ?

ಯೂಟ್ಯೂಬ್ (YouTube) ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆ ಆಗುತ್ತಿರುವ ಪ್ಲಾಟ್‌ಫಾರ್ಮ್ ಆಗಿದೆ. ಈ ಮೂಲಕ ಬಳಕೆದಾರರು ಅಗತ್ಯ ಮಾಹಿತಿ ಹಾಗೂ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ವಿಶೇಷವಾದ ಹೊಸ ಫೀಚರ್ಸ್‌ನಲ್ಲಿ ಕೆಲಸ ಮಾಡಲು ಮುಂದಾಗಿರುವ ಯೂಟ್ಯೂಬ್ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ.

ಹೌದು, ಈ ಮೊದಲು ಕೆಲವು ಪ್ರೀಮಿಯಂ ಫೀಚರ್ಸ್‌ ಆಯ್ಕೆ ಇರುವ ಆಪ್‌ಗಳಲ್ಲಿ ಇದ್ದ ಸೇವೆ ಇದೀಗ ಯೂಟ್ಯೂಬ್‌ಗೂ ಸಿಗಲಿದೆ. ಅಂದರೆ ನೀವು ಮೊಬೈಲ್‌ ಅನ್ನು ಹತ್ತಿರ ಹಿಡಿದುಕೊಂಡು ನಿಮ್ಮಿಷ್ಟದ ಹಾಡನ್ನು ಗುನುಗಿದ್ರೆ ಸಾಕು ಆ ಹಾಡು ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಿದ್ರೆ, ಈ ರೀತಿ ಹಾಡನ್ನು ಹೇಗೆ ಸರ್ಚ್‌ ಮಾಡುವುದು?, ಈ ಸೌಲಭ್ಯ ಯಾರಿಗೆಲ್ಲಾ ಲಭ್ಯ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

YouTube ನಲ್ಲಿ ನಿಮ್ಮಿಷ್ಟದ ಹಾಡನ್ನು ಗುನುಗುವ ಮೂಲಕವೇ ಸರ್ಚ್‌ ಮಾಡಬಹುದು!

ಹಾಡನ್ನು ಗುನುಗಿದ್ರೆ ಸಾಕು ಪ್ಲೇ ಆಗುತ್ತೆ: ಯೂಟ್ಯೂಬ್‌ನ ಈ ಟೆಸ್ಟಿಂಗ್ ಫೀಚರ್ಸ್‌ ಬಳಕೆದಾರರು ಹಾಡನ್ನು ಗುನುಗುವ ಮೂಲಕ ಆ ಹಾಡು ಪ್ಲೇ ಆಗುವಂತೆ ಅಥವಾ ಸರ್ಚ್‌ ಯೂಟ್ಯೂಬ್‌ ನಲ್ಲಿ ಕಾಣಿಸಿಕೊಳ್ಳುವಂತೆ ಅನುಕೂಲ ಮಾಡಿಕೊಡಲಿದೆ. ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಹಲವಾರು ಜನರಿಗೆ ಈ ಫೀಚರ್ಸ್‌ ಬಗ್ಗೆ ತಿಳಿದೇ ಇದ್ದಾರೆ. ಆದರೆ, ಯೂಟ್ಯೂಬ್‌ನಲ್ಲಿ ಈ ಸೌಲಭ್ಯ ಲಭ್ಯ ಆಗುತ್ತಿರುವುದು ಮಾತ್ರ ವಿಶೇಷವಾದ ಸಂಗತಿ ಆಗಿದೆ.

ಈ ಸಂಬಂಧ ಯೂಟ್ಯೂಬ್‌ ಮಾಹಿತಿ ನೀಡಿದ್ದು, ಪ್ರಸ್ತುತ ಪ್ಲೇ ಆಗಬೇಕೆನ್ನುವ ಹಾಡನ್ನು ಗುನುಗುವ ಅಥವಾ ರೆಕಾರ್ಡ್ ಮಾಡುವ ಮೂಲಕ ಬಳಕೆದಾರರು ಯೂಟ್ಯೂಬ್‌ನಲ್ಲಿ ಹಾಡನ್ನು ಸರ್ಚ್‌ ಮಾಡುವ ಸಾಮರ್ಥ್ಯವನ್ನು ನಾವು ಪ್ರಯೋಗಿಸುತ್ತಿದ್ದೇವೆ ಎಂದು ತಿಳಿಸಿದೆ. ಹಾಗೆಯೇ ಈ ಪ್ರಯೋಗ ಅಲ್ಪಾವಧಿಗೆ ಲಭ್ಯವಿದೆ ಜೊತೆಗೆ ಕೆಲವೇ ಜನರು ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವೇ? ಅಥವಾ ಪ್ರೀಮಿಯಂ ಬಳಕದಾರರಿಗೆ ಲಭ್ಯ ಇರಲಿದೆಯೇ ಎಂಬುದನ್ನು ತಿಳಿಸಿಲ್ಲ.

ಹಾಗಿದ್ರೆ ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕುವುದು ಹೇಗೆ?
-ನೀವು ಯೂಟ್ಯೂಬ್ ಪ್ರೀಮಿಯಂ ಚಂದಾದಾರರಾಗಿದ್ದರೆ ಮತ್ತು ಹೊಸ ಹೊಸ ಫೀಚರ್ಸ್‌ ಪ್ರಯೋಗಿಸುತ್ತಿದ್ದರೆ, ಯೂಟ್ಯೂಬ್‌ ವಾಯ್ಸ್‌ ಸರ್ಚ್‌ ನಿಂದ ಹೊಸ ಸಾಂಗ್‌ ಸರ್ಚ್‌ ಫೀಚರ್ಸ್‌ ಗೆ ಟಾಗಲ್ ಮಾಡಬಹುದು.
- ಇದಾದ ಬಳಿಕ ನಿಮ್ಮಿಷ್ಟದ ಹಾಡನ್ನು ಗುರುತಿಸಲು 3+ ಸೆಕೆಂಡುಗಳ ಕಾಲ ಹಾಡನ್ನು ಹಮ್ ಮಾಡಿ ಅಂದರೆ ಗುನುಗಿ ಅಥವಾ ರೆಕಾರ್ಡ್ ಮಾಡಿ.
- ಹಾಡನ್ನು ಗುರುತಿಸಿದ ನಂತರ, ಯೂಟ್ಯೂಬ್ ಆಪ್‌ನಲ್ಲಿ ಹುಡುಕಲಾದ ಹಾಡನ್ನು ಒಳಗೊಂಡಿರುವ ಸಂಬಂಧಿತ ಅಧಿಕೃತ ಮ್ಯೂಸಿಕ್‌ ಕಂಟೆಂಟ್‌ ಗಳು, ವಿಡಿಯೋಗಳು, ಶಾರ್ಟ್‌ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ.

ಈ ವೇಳೆ ಮತ್ತೊಂದು ವಿಷಯದ ಬಗ್ಗೆ ಮಾಹಿತಿ ನೀಡಿರುವ ಗೂಗಲ್‌, ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಯೂಟ್ಯೂಬ್ ವೀಕ್ಷಿಸುವ ಜನರಿಗೆ ಜಾಗತಿಕವಾಗಿ ಈ ಪ್ರಯೋಗವನ್ನು ಹೊರತರಲಾಗುತ್ತಿದೆ. ಹಾಗೆಯೇ ಮಲ್ಟಿ ಅಪ್‌ಲೋಡ್‌ಗಳಿಗಾಗಿ ಚಂದಾದಾರಿಕೆಗಳ ಫೀಡ್‌ನಲ್ಲಿ ಚಾನಲ್ ಶೆಲ್ಫ್ ಅನ್ನು ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಲಾಗಿದ್ದು, ನಾವು ಸಬ್‌ಸ್ಕ್ರಿಪ್ಷನ್‌ಗಳ ಫೀಡ್‌ನಲ್ಲಿನ ಶೆಲ್ಫ್‌ನಲ್ಲಿ ಕಡಿಮೆ ಸಮಯದೊಳಗೆ ಒಂದೇ ಕ್ರಿಯೇಟರ್ಸ್‌ನಿಂದ ಮಲ್ಟಿ ಅಪ್‌ಲೋಡ್‌ಗಳನ್ನು ಬಂಡಲಿಂಗ್ ಮಾಡಲು ಪ್ರಾರಂಭಿಸುತ್ತಿದ್ದೇವೆ ಎಂದಿದೆ.

ಇದಕ್ಕೆ ಕಾರಣವನ್ನೂ ನೀಡಿರುವ ಗೂಗಲ್‌, ಯೂಟ್ಯೂಬ್‌ನಲ್ಲಿ ಯಾವುದೇ ಕಂಟೆಂಟ್‌ ಅನ್ನು ಸುಲಭವಾಗಿ ಕಂಡುಕೊಳ್ಳಲು ಇದು ಅನುವು ಮಾಡಿಕೊಡಲಿದೆ. ಜೊತೆಗೆ ಕ್ರಿಯೇಟರ್ಸ್‌ಗೆ ಇದು ಬಹಳ ಅನುಕೂಲ ಆಗಲಿದೆ ಎಂದು ಹೇಳಿದೆ. ಅಂದರೆ ಕ್ರಿಯೇಟರ್ಸ್‌ಗಳು ಒಂದೇ ಬಾರಿಗೆ ಹಲವಾರು ಕಂಟೆಂಟ್ ಅನ್ನು ಅಪ್‌ಲೋಡ್‌ ಮಾಡುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಚಂದ್ರಯಾನ ಸಂಬಂಧ ಯೂಟ್ಯೂಬ್‌ನಲ್ಲಿ ದಾಖಲೆ: ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್‌ ಇನ್ನೇನು ಲಭ್ಯ ಆಗಲಿದೆ ಎಂಬ ಸಂತಸ ಒಂದು ಕಡೆಯಾದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯೂಟ್ಯೂಬ್‌ ನ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಸಾಧನೆ ಮಾಡಿದೆ. ಆಗಸ್ಟ್ 23, 2023 ರಂದು ಪ್ರಸಾರವಾದ ಚಂದ್ರಯಾನ-3 ಮಿಷನ್ ಸಾಫ್ಟ್-ಲ್ಯಾಂಡಿಂಗ್ ಲೈವ್ ಟೆಲಿಕಾಸ್ಟ್ ಅನ್ನು 80 ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ವೀಕ್ಷಣೆ ಮಾಡಿದ್ದಾರೆ.

YouTube ನಲ್ಲಿ ನಿಮ್ಮಿಷ್ಟದ ಹಾಡನ್ನು ಗುನುಗುವ ಮೂಲಕವೇ ಸರ್ಚ್‌ ಮಾಡಬಹುದು!

ಇನ್ನು FIFA ವಿಶ್ವಕಪ್ 2022 ರಿಂದ ಬ್ರೆಜಿಲ್ ಮತ್ತು ಕ್ರೊಯೇಷಿಯಾ ಫುಟ್ಬಾಲ್ ಪಂದ್ಯವನ್ನು 61 ಲಕ್ಷ ವೀಕ್ಷಣೆ ಮಾಡಿದ್ದರು. ಹಾಗೆಯೇ ಬ್ರೆಜಿಲ್ vs ದಕ್ಷಿಣ ಕೊರಿಯಾ ಫುಟ್ಬಾಲ್ ಪಂದ್ಯವನ್ನು 52 ಲಕ್ಷ ಜನ ನೋಡಿದ್ದರು. ಆದರೆ, ಈ ಎಲ್ಲಾ ದಾಖಲೆಗಳನ್ನು ಇಸ್ರೋ ಮುರಿದಿದೆ. ಈ ನಡುವೆ ಮತ್ಯಾರು ಈ ಸಾಧನೆಯನ್ನು ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Best Mobiles in India

English summary
YouTube's testing features allow users to hum a song to get it played or appear in a search on YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+