Home
ಸುದ್ದಿಜಾಲ

ಅನ್‌ಬಾಕ್ಸ್‌ ಮಾಡಲು ಒಂದು ಐಫೋನ್‌ ಅನ್ನು 32 ಲಕ್ಷಕ್ಕೆ ಖರೀದಿಸಿದ ಯೂಟ್ಯೂಬರ್‌: ಮುಂದಾಗಿದ್ದೇನು?

ಯೂಟ್ಯೂಬರ್‌ಗಳು ಉತ್ತಮ ಕಂಟೆಂಟ್ ನೀಡುವ ಉದ್ದೇಶದಿಂದ ಎಲ್ಲಾ ರೀತಿಯ ಶ್ರಮಗಳಿಗೂ ಸಿದ್ಧರಾಗುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಯಾಕೆಂದರೆ ಇಲ್ಲೋರ್ವ ಯೂಟ್ಯೂಬರ್ ಆಪಲ್‌ನ ಈ ಫೋನ್‌ ಅನ್ನು ಬರೋಬ್ಬರಿ 32 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಅರೇ...ಆಪಲ್‌ ಫೋನ್‌ಗೆ 32 ಲಕ್ಷ ಯಾಕೆ ಕೊಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡಿರಬಹುದು.

ಹೌದು, ಯೂಟ್ಯೂಬರ್‌ ಆಪಲ್‌ ಈ ಐಫೋನ್‌ ಅನ್ನು 32 ಲಕ್ಷಕ್ಕೆ ಖರೀದಿ ಮಾಡಿದ್ದು, ಈ ವರೆಗೂ ಓಪನ್‌ ಮಾಡದ ಬಾಕ್ಸ್‌ ಒಳಗಡೆ ಏನೆಲ್ಲಾ ಇದೆ ಎಂಬುದನ್ನು ತಮ್ಮ ವೀಕ್ಷಕರಿಗೆ ತಿಳಿಸಿದ್ದಾರೆ. ಅಷ್ಟಕ್ಕೂ ಇಷ್ಟೊಂದು ದುಬಾರಿ ಬೆಲೆ ಇರುವ ಆಪಲ್‌ನ ಫೋನ್‌ ಯಾವುದು?, ಬಾಕ್ಸ್‌ ಓಪನ್ ಮಾಡಿದಾಗ ಯೂಟ್ಯೂಬರ್‌ ಗೆ ಕಂಡುಬಂದ ವಸ್ತುಗಳು ಯಾವುವು? ಎಂಬಿತ್ಯಾದಿ ಇಂಟ್ರೆಸ್ಟಿಂಗ್‌ ಮಾಹಿತಿ ತಿಳಿದುಕೊಳ್ಳಿ.

ಅನ್‌ಬಾಕ್ಸ್‌ ಮಾಡಲು ಒಂದು ಐಫೋನ್‌ ಅನ್ನು 32 ಲಕ್ಷಕ್ಕೆ ಖರೀದಿಸಿದ ಯೂಟ್ಯೂಬರ್‌...

ಪುರಾತನ ವಸ್ತುಗಳಿಗೆ ಹೇಗೆ ಹೆಚ್ಚಿನ ಬೆಲೆ ಇರುತ್ತದೆಯೋ ಅದೇ ರೀತಿ ಈ ಆಪಲ್‌ ಫೋನ್‌ ಸಹ ಹೆಚ್ಚಿನ ಬೆಲೆ ಪಡೆದುಕೊಂಡಿದೆ. ಇದಕ್ಕೆ ಕಾರಣ ಈ ಮಾಡೆಲ್‌ನ ಫೋನ್‌ಗಳು ಇಂದು ಎಲ್ಲಿಯೂ ಲಭ್ಯವಾಗುತ್ತಿಲ್ಲ. ಅದರಲ್ಲೂ 32 ಲಕ್ಷಕ್ಕೆ ಖರೀದಿ ಮಾಡಲಾದ ಫೋನ್‌ ಬಾಕ್ಸ್‌ ಅನ್ನು ಇನ್ನೂ ಸಹ ಯಾರೂ ಓಪನ್ ಮಾಡದೆ ಇರುವುದೇ ಇಷ್ಟೊಂದು ಬೆಲೆ ಪಡೆದುಕೊಳ್ಳಲು ಕಾರಣವಾದ ವಿಷಯವಾಗಿದೆ.

ಯಾವುದು ಈ ಫೋನ್‌?: ಇದನ್ನು ಮೂಲ ಐಫೋನ್‌ ಎಂದು ಕರೆಯಲಾಗುತ್ತದೆ. ಅಂದರೆ ಆರಂಭದಲ್ಲಿ ಮೊದಲು ಪರಿಚಯಿಸಲಾದ ಐಫೋನ್‌ 1 ಇದಾಗಿದೆ. ಇದನ್ನು ಜೂನ್ 2007 ರಲ್ಲಿ ಲಾಂಚ್‌ ಮಾಡಲಾಗಿತ್ತು. ಆ ವೇಳೆ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಈ ಫೋನ್‌ ಅನ್ನು ಹಿಡಿದುಕೊಂಡು ಐಪಾಡ್, ಫೋನ್ ಮತ್ತು ಇಂಟರ್ನೆಟ್ ಸಂವಹನಕಾರ ಎಂದು ವಿವರಣೆ ನೀಡಿದ್ದರು. ಆದರೆ, ಇಂದು ಆ ಮೂಲ ಐಫೋನ್‌ಗಳು ಕಂಡುಬರುವುದು ಅಪರೂಪವಾದ ವಿಷಯವಾಗಿದೆ.

ಈ ಫೋನ್‌ ಅನ್ನು ಖರೀದಿ ಮಾಡಿದ ಯೂಟ್ಯೂಬರ್‌ ಯಾರು?: ಜನಪ್ರಿಯ ಟೆಕ್ ವಿಮರ್ಶಕ ಮತ್ತು ಅಮೆರಿಕನ್‌ ಯೂಟ್ಯೂಬರ್ ಮಾರ್ಕ್ವೆಸ್ ಬ್ರೌನ್ಲೀ (MKBHD) ಯಾವುದೇ ಸ್ಮಾರ್ಟ್‌ಡಿವೈಸ್‌ಗಳನ್ನು ಅನ್‌ಬಾಕ್ಸ್‌ ಮಾಡಿ ವಿವರಿಸುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಈ ಫೋನ್‌ ಅನ್ನು ಸಹ ಅನ್‌ಬಾಕ್ಸ ಮಾಡಿ ವಿವರಿಸುವ ಉದ್ದೇಶದಿಂದ ಹರಾಜಿನಲ್ಲಿದ್ದ ಫೋನ್‌ ಅನ್ನು $40,000 ಕ್ಕೆ ಅಂದರೆ 32 ಲಕ್ಷಕ್ಕೆ ಖರೀದಿ ಮಾಡಿದ್ದಾರೆ.

ಅನ್‌ಬಾಕ್ಸ್‌ ಮಾಡಲು ಒಂದು ಐಫೋನ್‌ ಅನ್ನು 32 ಲಕ್ಷಕ್ಕೆ ಖರೀದಿಸಿದ ಯೂಟ್ಯೂಬರ್‌...

ಅನ್‌ಬಾಕ್ಸ್‌ ವೇಳೆ ಕಂಡುಬಂದಿದ್ದೇನು?: ಸ್ಮಾರ್ಟ್‌ಫೋನ್‌ಗಳ ಪ್ಯಾಕೇಜಿಂಗ್‌‌ ಅನ್ನುವುದು ಇಂದು ಖರೀದಿ ಸಮಯದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಅದರಂತೆ ಯೂಟ್ಯೂಬರ್‌ ದೊಡ್ಡ ಮರದ ಪೆಟ್ಟಿಗೆಯನ್ನು ಆ ವಿಡಿಯೋದಲ್ಲಿ ತೋರಿಸುತ್ತಾರೆ. ನಂತರ ಅದನ್ನು ಓಪನ್‌ ಮಾಡಿ ನೋಡಿದಾಗ ಅದರಲ್ಲಿ ಐಫೋನ್ ಬಾಕ್ಸ್‌ ಕಾಣಿಸಿಕೊಳ್ಳುತ್ತದೆ. ಈ ವೇಳೆ ಕುತೂಹಲ ಹೆಚ್ಚಿಸಿದ ಯೂಟ್ಯೂಬರ್‌ ಆ ಫೋನ್‌ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತಾರೆ.

ಇದಾದ ಬಳಿಕ ಐಫೋನ್‌ ಬಾಕ್ಸ್‌ನಿಂದ ಕೊನೆಗೂ 3.5 ಇಂಚಿನ ಡಿಸ್‌ಪ್ಲೇ ಹೊಂದಿರುವ ಪುಟ್ಟ ಐಫೋನ್‌ ಅನ್ನು ಓಪನ್‌ ಮಾಡುತ್ತಾರೆ. ಮೊದಲೇ ತಿಳಿಸಿದಂತೆ ಆಪಲ್‌ನ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದ್ದು, ಈ ಬಾಕ್ಸ್‌ನಲ್ಲಿ ಕಪ್ಪು ಮೈಕ್ರೋಫೈಬರ್ ಬಟ್ಟೆ ಮತ್ತು ವೈರ್ಡ್ ಇಯರ್‌ಫೋನ್‌ಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಸ್ಟಿಕ್ಕರ್‌ಗಳು ಮತ್ತು ಕೈಪಿಡಿಯೂ ಸಹ ಇವೆ ಇದರ. ಇದಾದ ನಂತರ ಯೂಟ್ಯೂಬರ್‌ ದೈತ್ಯ SIM ಸ್ಲಾಟ್‌ ಅನ್ನು ತೋರಿಸುತ್ತಾರೆ.

ಇದರೊಂದಿಗೆ ಈ ಬಾಕ್ಸ್‌ನಲ್ಲಿ ಚಾರ್ಜರ್ ಮತ್ತು ಚಾರ್ಜಿಂಗ್ ಕೇಬಲ್ ತೋರಿಸುತ್ತಾರೆ. ಹಾಗೆಯೇ ಈ ಪ್ಯಾಕೇಜಿಂಗ್ ಚಾರ್ಜಿಂಗ್ ಡಾಕ್ ಅನ್ನು ಸಹ ಒಳಗೊಂಡಿರುವುದನ್ನು ಇದರಲ್ಲಿ ಕಾಣಬಹುದು. ಇಷ್ಟೆಲ್ಲಾ ಹಣ ನೀಡಿ ಖರೀದಿ ಮಾಡಿದ ಫೋನ್‌ ಅನ್ನು ಬಳಕೆ ಮಾಡುವುದು ಯೂಟ್ಯೂಬರ್‌ಗೆ ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಭದ್ರತಾ ದೃಷ್ಟಿಯಿಂದ ಆಪಲ್‌ ಅಂದಿನಿಂದ ಇಂದಿನವರೆಗೂ ಅದೆಷ್ಟೋ ಬದಲಾವಣೆ ಮಾಡಿಕೊಂಡು ಬಂದಿದೆ.

ಯೂಟ್ಯೂಬರ್‌ ಆ ಫೋನ್‌ ಸೆಟ್‌ ಮಾಡಲು ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಯಾಕೆಂದರೆ ಈ ಐಫೋನ್‌ ಅನ್ನು ಹೊಂದಿಸಲು ಐಟ್ಯೂನ್‌ ಅಗತ್ಯವಿತ್ತು. ಆದರೆ ಇದನ್ನು 2019 ರಲ್ಲಿ ಆಪಲ್ ನಿಲ್ಲಿಸಿದೆ. ಅಲ್ಲಿಂದೀಚೆಗೆ ಐಟ್ಯೂಬ್‌ ಬಳಕೆಯಲ್ಲಿ ಇಲ್ಲ. ಅದಾಗ್ಯೂ ಸಾಫ್ಟ್‌ವೇರ್‌ನ ಹಳೆಯ ಆವೃತ್ತಿಯನ್ನು ಡೌನ್‌ಲೋಡ್ ಮಾಡಬಹುದಾಗಿದ್ದರೂ ಸಹ ಫೋನ್ ಅನ್‌ಲಾಕ್ ಮಾಡುವುದು ಯೂಟ್ಯೂಬರ್‌ಗೆ ಸುಲಭದ ಮಾತಲ್ಲ.

ಅನ್‌ಬಾಕ್ಸ್‌ ಮಾಡಲು ಒಂದು ಐಫೋನ್‌ ಅನ್ನು 32 ಲಕ್ಷಕ್ಕೆ ಖರೀದಿಸಿದ ಯೂಟ್ಯೂಬರ್‌...

ಇದರೊಂದಿಗೆ ಆ ಐಫೋನ್‌ನಲ್ಲಿ ವಾಲ್‌ಪೇಪರ್‌ ಅನ್ನು ಬದಲಾಯಿಸಲು ನೋಡುತ್ತಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಜೊತೆಗೆ ಆ ಫೋನ್ ಹೆಡ್‌ಫೋನ್‌ಗಳ ಜ್ಯಾಕ್ ಅನ್ನು ಹೊಂದಿರುವುದನ್ನೂ ಸಹ ತೋರಿಸುತ್ತಾರೆ. ವಿಷಯ ಏನೆಂದರೆ ಐಫೋನ್‌ 7 ನಿಂದ ಈಚೆಗೆ ಈ ಆಯ್ಕೆಯನ್ನು ತೆಗೆದುಹಾಕಲಾಗಿದೆ. ಈ ಮೂಲ ಐಫೋನ್ ಅನ್ನು 2007ರಲ್ಲಿ $499ಗೆ ಬಿಡುಗಡೆ ಮಾಡಲಾಗಿತ್ತು. ಅಂದರೆ, 41,000ರೂ.ಗಳ ಬೆಲೆಗೆ. ಆದರೆ ಇದರ ಹಣದ ಮೌಲ್ಯವನ್ನು ಇಂದಿಗೆ ಹೋಲಿಕೆ ಮಾಡಿದರೆ ಇದರ ಬೆಲೆ 60,000ರೂ.ಗಳು.

Best Mobiles in India

English summary
YouTuber Marques Brownlee bought an iPhone for 32 lakhs to unbox it on his YouTube channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+