ಮೈಕ್ರೋಮ್ಯಾಕ್ಸ್‌ನ ಯುಫೋರಿಯಾ ಬಜೆಟ್ ಸ್ನೇಹಿ ಫೋನ್ ಹೇಗೆ?

By Shwetha
|

ಮೈಕ್ರೋಮ್ಯಾಕ್ಸ್‌ನ ಅಂಗ ಸಂಸ್ಥೆ ವೈಯು ತನ್ನ ಎರಡನೇ ಸಿನೋಜಿನ್ ಓಎಸ್ ಪವರ್ ಉಳ್ಳ ಸ್ಮಾರ್ಟ್‌ಫೋನ್ ಆದ ಯುಫೋರಿಯಾವನ್ನು ರೂ 6,999 ಕ್ಕೆ ಲಾಂಚ್ ಮಾಡಿದೆ. ಮೆಟಲ್ ಫ್ರೇಮ್ ಅನ್ನು ಹೊಂದಿರುವ ಈ ಡಿವೈಸ್ ಸ್ಟೀಲ್ ಮತ್ತು ಚಿನ್ನದ ಬಣ್ಣದಲ್ಲಿ ದೊರೆಯುತ್ತಿದ್ದು ಅಮೆಜಾನ್.ಇನ್‌ನಲ್ಲಿ ಲಭ್ಯವಾಗಲಿದೆ.ಮೂಲ ವೈಯು ಯುರೇಕಾ ಐದು ತಿಂಗಳದ್ದಾಗಿದ್ದರೂ, ವೈಯು ಯುಫೋರಿಯಾ ಹ್ಯಾಂಡ್‌ಸೆಟ್ ಈ ಡಿವೈಸ್‌ಗೆ ಪ್ರತಿಸ್ಪರ್ಧಿ ಎಂದೆನಿಸಲಿದೆ.

ಓದಿರಿ: ಅಬ್ಬರದ ಅಲೆಗಳನ್ನೆಬ್ಬಿಸಲಿರುವ ಗ್ಯಾಲಕ್ಸಿ ನೋಟ್ 5 ವಿಶೇಷತೆ ಏನು?

ಮೈಕ್ರೋಮ್ಯಾಕ್ಸ್‌

ಮೈಕ್ರೋಮ್ಯಾಕ್ಸ್‌

ಮೈಕ್ರೋಮ್ಯಾಕ್ಸ್‌ನ ಅಂಗ ಸಂಸ್ಥೆ ವೈಯು ತನ್ನ ಎರಡನೇ ಸಿನೋಜಿನ್ ಓಎಸ್ ಪವರ್ ಉಳ್ಳ ಸ್ಮಾರ್ಟ್‌ಫೋನ್ ಆದ ಯುಫೋರಿಯಾವನ್ನು ರೂ 6,999 ಕ್ಕೆ ಲಾಂಚ್ ಮಾಡಿದೆ. ಮೆಟಲ್ ಫ್ರೇಮ್ ಅನ್ನು ಹೊಂದಿರುವ ಈ ಡಿವೈಸ್ ಸ್ಟೀಲ್ ಮತ್ತು ಚಿನ್ನದ ಬಣ್ಣದಲ್ಲಿ ದೊರೆಯುತ್ತಿದ್ದು ಅಮೆಜಾನ್.ಇನ್‌ನಲ್ಲಿ ಲಭ್ಯವಾಗಲಿದೆ.

ಮೈಕ್ರೋಮ್ಯಾಕ್ಸ್ ಡಿವೈಸ್

ಮೈಕ್ರೋಮ್ಯಾಕ್ಸ್ ಡಿವೈಸ್

ಮೂಲ ವೈಯು ಯುರೇಕಾ ಐದು ತಿಂಗಳದ್ದಾಗಿದ್ದರೂ, ವೈಯು ಯುಫೋರಿಯಾ ಹ್ಯಾಂಡ್‌ಸೆಟ್ ಈ ಡಿವೈಸ್‌ಗೆ ಪ್ರತಿಸ್ಪರ್ಧಿ ಎಂದೆನಿಸಲಿದೆ.

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಇದು 5 ಇಂಚಿನ ಎಚ್‌ಡಿ ಪೂರ್ಣ ಲ್ಯಾಮಿನೇಶನ್ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿವೈಸ್‌ನಲ್ಲಿದೆ. 64 ಬಿಟ್ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಚಿಪ್, ಅಡ್ರೆನೊ 306 GPU ಮತ್ತು 2 ಜಿಬಿ RAM ಅನ್ನು ಪಡೆದುಕೊಂಡಿದೆ.

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಫೋನ್ 16 ಜಿಬಿ ಆಂತರಿಕ ಮೆಮೊರಿಯನ್ನು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು. ಇದು ಸಿನೋಜಿನ್ ಮೋಡ್ 12 ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 5.0 ಲಾಲಿಪಪ್ ಡಿವೈಸ್‌ನಲ್ಲಿದೆ.

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ತನ್ನ ಕಸ್ಟಮೈಸೇಬಿಲಿಟಿ, ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಫೀಚರ್‌ಗಳಿಗೆ ಈ ಓಎಸ್ ಪ್ರಸಿದ್ಧವಾಗಿದೆ. ಇನ್ನು ಫೋನ್ ರಿಯರ್ ಕ್ಯಾಮೆರಾ 8 ಎಮ್‌ಪಿಯಾಗಿದ್ದು, ಎಲ್‌ಇಡಿ ಫ್ಲ್ಯಾಶ್ ಅನ್ನು ಇದು ಪಡೆದುಕೊಂಡಿದೆ.

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಮೈಕ್ರೋಮ್ಯಾಕ್ಸ್‌ ಯುಫೋರಿಯಾ

ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾ ಇದ್ದು 86 ಡಿಗ್ರಿ ವೈಡ್ ಏಂಗಲ್ ಲೆನ್ಸ್ ಅನ್ನು ಡಿವೈಸ್ ಹೊಂದಿದೆ. ಇನ್ನು ಡಿವೈಸ್ 3ಜಿ, 4ಜಿ, ಬ್ಲ್ಯೂಟೂತ್‌ಗೆ ಸಂಪರ್ಕವನ್ನು ಪಡೆದುಕೊಂಡಿದ್ದು 160 ಗಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು ಫೋನ್ ಒದಗಿಸುತ್ತದೆ.

Best Mobiles in India

English summary
In this article we can see the Yu Yuphoria sets a new bar for design, and manages to impress us more than most other smartphones in the budget segment without cutting back on features or power.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X