ಅಬ್ಬರದ ಅಲೆಗಳನ್ನೆಬ್ಬಿಸಲಿರುವ ಗ್ಯಾಲಕ್ಸಿ ನೋಟ್ 5 ವಿಶೇಷತೆ ಏನು?

By Shwetha
|

ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ನೋಟ್ ಡಿವೈಸ್ ಅನ್ನು ಲಾಂಚ್ ಮಾಡಿದೆ. ಈ ವರ್ಷ ಕೂಡ, ಕಂಪೆನಿ ಗ್ಯಾಲಕ್ಸಿ ನೋಟ್ 5 ಅನ್ನು ಅಬ್ಬರದಲ್ಲಿ ಲಾಂಚ್ ಮಾಡುವ ನಿಟ್ಟಿನಲ್ಲಿದೆ. ಈ ಬಾರಿ ಸ್ಯಾಮ್‌ಸಂಗ್ ಎರಡು ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಲಾಂಚ್ ಮಾಡಲಿದೆ. ಒಂದು ಗ್ಯಾಲಕ್ಸಿ ನೋಟ್ 5 ಮಾಡೆಲ್ ಆದರೆ ಇನ್ನೊಂದು ಡ್ಯುಯಲ್ ಎಡ್ಜ್ ಸ್ಕ್ರೀನ್ ಉಳ್ಳ ಫೋನ್ ಆಗಿದೆ. ತಮ್ಮ ಪ್ರಿಡ್ರೆಸಸರ್ ಮೂಲಕ ಇದು ಮಹತ್ತರ ಗುರುತನ್ನು ಕಂಡುಕೊಂಡಿದೆ.

ಓದಿರಿ: ರೂ 30,000 ದ ಒಳಗಿನ ಅತ್ಯದ್ಭುತ ಫೋನ್‌ಗಳು

ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ನೋಟ್ 5 ಕುರಿತಾದ ಇನ್ನಷ್ಟು ಅದ್ಭುತ ಅಂಶಗಳನ್ನು ಕುರಿತು ಅರಿತುಕೊಳ್ಳೋಣ. ಈ ವೈಶಿಷ್ಟ್ಯಗಳು ನಿಜಕ್ಕೂ ಅತ್ಯಪೂರ್ಣವಾಗಿದ್ದು ಮನಸೆಳೆಯುವ ವಿಶೇಷತೆಗಳನ್ನು ಪಡೆದುಕೊಂಡಿದೆ.

2ಕೆ ಅಥವಾ 4ಕೆ ರೆಸಲ್ಯೂಶನ್ ಡಿಸ್‌ಪ್ಲೇ

2ಕೆ ಅಥವಾ 4ಕೆ ರೆಸಲ್ಯೂಶನ್ ಡಿಸ್‌ಪ್ಲೇ

2ಕೆ ಅಥವಾ 4ಕೆ ರೆಸಲ್ಯೂಶನ್‌ನೊಂದಿಗೆ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡು ಡಿವೈಸ್ ಬರುತ್ತಿದೆ. ಇದು 5.7 ಇಂಚಿನ ಡಿಸ್‌ಪ್ಲೇಯೊಂದಿಗೆ ಯುಎಚ್‌ಡಿ ಅಥವಾ ಅಲ್ಟ್ರಾ ಹೈ ಡೆಫಿನೀಶನ್ ರೆಸಲ್ಯೂಶನ್ ಪರದೆಯನ್ನು ಪಡೆದುಕೊಂಡಿದೆ.

ಪ್ರೀಮಿಯಮ್ ವಿನ್ಯಾಸ

ಪ್ರೀಮಿಯಮ್ ವಿನ್ಯಾಸ

ಇನ್ನು ವಿನ್ಯಾಸದತ್ತ ಗಮನ ನೀಡಿದಾಗ, ಸ್ಯಾಮ್‌ಸಂಗ್‌ನ ನೆಕ್ಸ್ಟ್ ಜನರೇಶನ್ ಗ್ಯಾಲಕ್ಸಿ ನೋಟ್ 5 ಹೊಸ ವಿನ್ಯಾಸದೊಂದಿಗೆ ಕಣ್ಮನ ಸೆಳೆಯಲಿದ್ದು, ಮೆಟಲ್ ಮತ್ತು ಗ್ಲಾಸ್ ವಿನ್ಯಾಸವನ್ನು ಹೊಂದಲಿದೆ.

 'ಪ್ರೊಜೆಕ್ಟ್ ಜೆಡ್'

'ಪ್ರೊಜೆಕ್ಟ್ ಜೆಡ್'

ಡ್ಯುಯಲ್ ಎಡ್ಜ್ ಡಿಸ್‌ಪ್ಲೇ ಉಳ್ಳ ಗ್ಯಾಲಕ್ಸಿ ನೋಟ್ 5 ಕೋಡ್ ನೇಮ್ ಪ್ರೊಜೆಕ್ಟ್ ಜೆಡ್ ಎಂದಾಗಿದೆ. 5.4 ಅಥವಾ 5.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಳ್ಳಲಿದ್ದು ಕರ್ವ್ ಡಿಸ್‌ಪ್ಲೇ ಡಿವೈಸ್ ವಿಶೇಷತೆಯಾಗಿದೆ. ಹೆಕ್ಸಾ ಕೋರ್ ಪ್ರೊಸೆಸರ್ ಇದರಲ್ಲಿದ್ದು, 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಳ್ಳಲಿದೆ.

ಆಂಡ್ರಾಯ್ಡ್ ಎಮ್ ಓಎಸ್

ಆಂಡ್ರಾಯ್ಡ್ ಎಮ್ ಓಎಸ್

ಗೂಗಲ್‌ನ ಹೊಸ ಓಎಸ್ ಎಂದು ಕರೆಯಲಾದ ಆಂಡ್ರಾಯ್ಡ್ ಎಮ್ ಅನ್ನು ಈ ಡಿವೈಸ್‌ನಲ್ಲಿ ನಮಗೆ ಕಾಣಬಹುದಾಗಿದೆ. ಮೇ 28 ರ ಗೂಗಲ್ ಐಓನಲ್ಲಿ ಆಂಡ್ರಾಯ್ಡ್ ಎಮ್ ಅನ್ನು ಲಾಂಚ್ ಮಾಡಲಿದ್ದು ತನ್ನ ಮೊಬೈಲ್ ಓಎಸ್‌ನಲ್ಲಿ ಇನ್ನಷ್ಟು ಸುಧಾರಣೆಗಳನ್ನು ಗೂಗಲ್ ಮಾಡಲಿದೆ.

ಎಕ್ಸೋನಸ್ 7422

ಎಕ್ಸೋನಸ್ 7422

ಎಕ್ಸೋನಸ್ 7422 ಅನ್ನು ಫೋನ್ ಹೊಂದಲಿದ್ದು, ಸಿಪಿಯು, ಜಿಪಿಯು ಮತ್ತು RAM, ಸ್ಟೋರೇಜ್ ಇವುಗಳೆಲ್ಲವನ್ನೂ ಸಿಂಗಲ್ ಚಿಪ್‌ನಲ್ಲಿ ಡಿವೈಸ್ ಪಡೆದುಕೊಳ್ಳಲಿದೆ.

ಗ್ಯಾಲಕ್ಸಿ ನೋಟ್ 5 ನಲ್ಲಿ 16 ಎಮ್‌ಪಿ ಕ್ಯಾಮೆರಾ

ಗ್ಯಾಲಕ್ಸಿ ನೋಟ್ 5 ನಲ್ಲಿ 16 ಎಮ್‌ಪಿ ಕ್ಯಾಮೆರಾ

ಇನ್ನು ವದಂತಿಗಳ ಪ್ರಕಾರ, ಫೋನ್ 16 ಎಮ್‌ಪಿ ಕ್ಯಾಮೆರಾವನ್ನು ಫೋನ್‌ನಲ್ಲಿ ಅಳವಡಿಸಿದ್ದು ನಿಜಕ್ಕೂ ಇದು ಅತ್ಯದ್ಭುತ ಕ್ಯಾಮೆರಾವನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು.

ಸ್ಮಾರ್ಟ್‌ವಾಚ್ ಲಾಂಚ್

ಸ್ಮಾರ್ಟ್‌ವಾಚ್ ಲಾಂಚ್

ತನ್ನ ಡೆವಲಪರ್ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗೇರ್ A ಸ್ಮಾರ್ಟ್‌ವಾಚ್ ಅನ್ನು ಘೋಷಣೆ ಮಾಡಿತ್ತು. ಗ್ಯಾಲಕ್ಸಿ ನೋಟ್ 5 ನೊಂದಿಗೆ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡುವ ಇರಾದೆಯಲ್ಲಿ ಕಂಪೆನಿ ಇದೆ.

ಬಿಡುಗಡೆ ದಿನಾಂಕ ಮತ್ತು ಬೆಲೆ

ಬಿಡುಗಡೆ ದಿನಾಂಕ ಮತ್ತು ಬೆಲೆ

2015 ರ ನಂತರ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ನೋಟ್ ಹ್ಯಾಂಡ್‌ಸೆಟ್ ಅನ್ನು ಘೋಷಿಸಲಿದೆ.

Most Read Articles
Best Mobiles in India

English summary
For the past few years, Samsung has unveiled the new Galaxy Note device at a fall event in Berlin, Germany. This year too, the Korean giant is expected to hold a major press event where it is said to unveil the Galaxy Note 5.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more