ವಿಶ್ವದ ಈ ಅತೀ ಚಿಕ್ಕ ಸ್ಮಾರ್ಟ್‌ಫೋನ್ ತೂಕ ಎಷ್ಟು ಗೊತ್ತಾ?

|

ಮೊಬೈಲ್ ಖರೀದಿಸುವ ಗ್ರಾಹಕರು ಸಹಜವಾಗಿ ವಿಶಾಲ ಡಿಸ್‌ಪ್ಲೇ ಫೋನ್ ಬಯಸುತ್ತಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಮಾರುಕಟ್ಟೆಗೆ ಬಿಡುಗಡೆ ಆಗುವ ಬಹುತೇಕ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯು ಸಾಮಾನ್ಯವಾಗಿ 6 ಇಂಚಿನ ಆಸುಪಾಸಿನಲ್ಲಿರುತ್ತದೆ. ಆದರೆ ಯುಕೆ ಮೂಲದ ಜಿನಿ-Zini ಮೊಬೈಲ್ ಸಂಸ್ಥೆಯು ಇದೀಗ ಪರಿಚಯಿಸಿರುವ ಸ್ಮಾರ್ಟ್‌ಫೋನ್ ಮೊಬೈಲ್‌ ಪ್ರಿಯರಿಗೆ ಅಚ್ಚರಿ ಅನಿಸಿದೆ.

ಜಿನಿ ಮೊಬೈಲ್

ಹೌದು, ಜಿನಿ ಮೊಬೈಲ್ ಸಂಸ್ಥೆಯು Zanco tiny t2 ಹೆಸರಿನ ಪುಟ್ಟ ಸ್ಮಾರ್ಟ್‌ಫೋನ್ ಅನ್ನು ಸಂಸ್ಥೆಯ ಕಿಕ್‌ಸ್ಟಾರ್ಟರ್ ಕ್ಯಾಂಪೇನ್‌ ಕಾರ್ಯಕ್ರಮದಲ್ಲಿ ಲಾಂಚ್ ಮಾಡಿದೆ. ಈ ಫೋನ್ ವಿಶ್ವದಲ್ಲಿಯೇ ಅತೀ ಚಿಕ್ಕ ಸ್ಮಾರ್ಟ್‌ಫೋನ್‌ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ 3G ನೆಟವರ್ಕ ಸಪೋರ್ಟ್‌ ಪಡೆದಿದ್ದು, ಉಳಿದಂತೆ ಸಾಮಾನ್ಯ ಸ್ಮಾರ್ಟ್‌ಫೋನಿನಂತೆ ಈ ಫೋನ್ ಫೀಚರ್ಸ್‌ಗಳು ಕೆಲಸ ಮಾಡಲಿದೆ.

ಪುಟಾಣಿ ಸ್ಮಾರ್ಟ್‌ಫೋನ್

ಈ ಪುಟಾಣಿ ಸ್ಮಾರ್ಟ್‌ಫೋನ್ ಕರೆ, ಎಸ್‌ಎಮ್‌ಎಸ್‌, ಕ್ಯಾಮೆರಾ, ವಿಡಿಯೊ ರೆಕಾರ್ಡಿಂಗ್, ಎಂಪಿ 3ಹಾಗೂ ಎಂಪಿ 4 ಪ್ಲೇ ಬ್ಯಾಕ್‌ ಸೌಲಭ್ಯಗಳನ್ನು ಪಡೆದಿದೆ. ಇದರೊಂದಿಗೆ ಕ್ಯಾಲೆಂಡರ್, ಎಫ್‌ಎಮ್‌ ರೇಡಿಯೊ, ಅಲಾರಾಂ, ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಬಳಕೆದಾರರು ಅಲಾರಾಂ ಟೈಮಿಂಗ್ ಸೆಟ್‌ ಮಾಡಬಹುದಾಗಿದೆ. ಹಾಗೆಯೇ ಬ್ಲೂಟೂತ್ ಮತ್ತು ಎಸ್‌ಓಎಸ್‌ ಮೆಸೆಜ್ ಸೌಲಭ್ಯಗಳ ಬೆಂಬಲ ಸಹ ಪಡೆದಿದೆ.

ಕೇವಲ 31ಗ್ರಾಂ ತೂಕ

ಇನ್ನು ಈ ಚಿಕ್ಕ ಸ್ಮಾರ್ಟ್‌ಫೋನ್ ಕೇವಲ 31ಗ್ರಾಂ ತೂಕವನ್ನು ಹೊಂದಿದ್ದು, ಮಲ್ಟಿಮೀಡಿಯಾ ಫೀಚರ್ಸ್‌ಗಳನ್ನು ಸಪೋರ್ಟ್ ಮಾಡಲಿದೆ. ಸಾಂಗ್ಸ್‌, ಫೋಟೊ, ವಿಡಿಯೊ ವೀಕ್ಷಣೆಗಾಗಿ ಎಸ್‌ಡಿ ಕಾರ್ಡ್‌ ಇನ್‌ಸರ್ಟ್‌ ಮಾಡುವ ಸೌಲಭ್ಯವನ್ನು ನೀಡಿದ್ದು, ಒಟ್ಟು 32GB ವರೆಗೂ ಮೆಮೊರಿ ಕಾರ್ಡ್‌ ಬಳಕೆ ಮಾಡಬಹುದಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಮೂಲಕವು ಶೇರ್‌ ಮಾಡಿಕೊಳ್ಳಬಹುದಾದ ಅವಕಾಶ ಇದೆ.

ಏಳು ದಿನಗಳ ಸ್ಟ್ಯಾಂಡ್‌ಬೈ

ಈ ಫೋನ್ ಬ್ಯಾಟರಿಯು ಒಟ್ಟು ಏಳು ದಿನಗಳ ಸ್ಟ್ಯಾಂಡ್‌ಬೈ ಸಾಮರ್ಥ್ಯವನ್ನು ಪಡೆದಿದೆ. ಟಾಸ್ಕ್ ಮ್ಯಾನೇಜರ್, ನೋಟ್‌ಪ್ಯಾಡ್, ಸೇರಿದಂತೆ ಕೆಲವು ಅಗತ್ಯ ಬಿಲ್ಟ್‌ಇನ್‌ ಆಪ್‌ಗಳನ್ನು ಸಹ ಹೊಂದಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿರುವ ಈ ಸ್ಮಾರ್ಟ್‌ಫೋನ್ ಕಿಕ್‌ಸ್ಟಾರ್ಟ್‌ ಕ್ಯಾಂಪೇನ್‌ನಲ್ಲಿ ಲಭ್ಯವಿದೆ. ಆರಂಭಿಕ ಬೆಲೆಯು $599(ಭಾರತದಲ್ಲಿ ಅಂದಾಜು 42,500ರೂ.) ಆಗಿದೆ. ಏಪ್ರಿಲ್ 2020ರ ವೇಳೆಯಲ್ಲಿ ಯುಎಸ್‌ಎ, ಭಾರತ, ಯುಕೆ, ಚೀನಾ, ಜಪಾನ, ಜರ್ಮನಿ ಮತ್ತು ನೆದರ್ಲ್ಯಾಂಡ್‌ ದೇಶಗಳಲ್ಲಿ ಈ ಫೋನ್ ಶಿಪಿಂಗ್ ಶುರುವಾಗಲಿದೆ ಎಂದು ಹೇಳಿದೆ.

Best Mobiles in India

English summary
Zini Mobiles claims that the Zanco tiny t2 will be able to perform all the functions of a smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X