'ಜೆಬ್ರಾನಿಕ್ಸ್‌' ವಾಯರ್‌ಲೆಸ್‌ ಸ್ಪೀಕರ್‌ ಲಿಸ್ಟ್‌ ಸೇರಿದ 'ಮಾಸ್ಟರ್‌ಪೀಸ್‌'!

|

ಜನಪ್ರಿಯ ಆಡಿಯೊ ಕಂಪೆನಿಗಳಲ್ಲಿ ಒಂದಾಗಿರುವ 'ಜೆಬ್ರಾನಿಕ್ಸ್', ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ವಿವಿಧ ಶ್ರೇಣಿಯ ಆಡಿಯೊ ಉತ್ಪನ್ನಗಳನ್ನು ಪರಿಚಯಿಸಿ ಗಟ್ಟಿ ಸ್ಥಾನ ಪಡೆದುಕೊಂಡಿದೆ. ಮತ್ತೆ ಅದೇ ಹಾದಿಯಲ್ಲಿ ಮುಂದುವರೆದಿರುವ ಸಂಸ್ಥೆಯು ಇದೀಗ 'ಮಾಸ್ಟರ್‌ಪೀಸ್‌' ಹೆಸರಿನ ಹೊಸ ವಾಯರ್‌ಲೆಸ್‌ ಸ್ಪೀಕರ್‌ ಅನ್ನು ಬಿಡುಗಡೆ ಮಾಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಅಬ್ಬರಿಸುವ ಫೀಚರ್ಸ್‌ಗಳನ್ನು ಹೊಂದಿದೆ.

'ಜೆಬ್ರಾನಿಕ್ಸ್‌' ವಾಯರ್‌ಲೆಸ್‌ ಸ್ಪೀಕರ್‌ ಲಿಸ್ಟ್‌ ಸೇರಿದ 'ಮಾಸ್ಟರ್‌ಪೀಸ್‌'!

ಜೆಬ್ರಾನಿಕ್ಸ್‌ ಕಂಪೆನಿಯು ತನ್ನ ವಾಯರ್‌ಲೆಸ್‌ ಸ್ಪೀಕರ್‌ ಶ್ರೇಣಿಗೆ ಈಗ ಹೊಸದಾಗಿ 'ಮಾಸ್ಟರ್‌ಪೀಸ್‌' ಹೆಸರಿನ ಸ್ಪೀಕರ್‌ ಅನ್ನು ಸೇರ್ಪಡೆ ಮಾಡಿದೆ. ಈ ಸ್ಪೀಕರ್‌ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಡಿವೈಸ್‌ಗೆ ಸುಮಾರು 12 ಗಂಟೆಗಳ ಬ್ಯಾಕ್‌ಅಪ್‌ ಒದಗಿಸಲಿದೆ. ಮಾಸ್ಟರ್‌ಪೀಸ್‌ ಸ್ಪೀಕರ್ ಟ್ರೂ ವಾಯರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದ್ದು, ಕೇಳುಗರಿಗೆ ಸ್ಟಿರಿಯೊ ಸೌಂಡ್‌ ಅನುಭವವನ್ನು ನೀಡಲಿದೆ.

'ಜೆಬ್ರಾನಿಕ್ಸ್‌' ವಾಯರ್‌ಲೆಸ್‌ ಸ್ಪೀಕರ್‌ ಲಿಸ್ಟ್‌ ಸೇರಿದ 'ಮಾಸ್ಟರ್‌ಪೀಸ್‌'!

ಈ ವಾಯರ್‌ಲೆಸ್‌ ಸ್ಪೀಕರ್‌ ಎರಡು ಆಡಿಯೊ ಡ್ರೈವರ್ಸ್‌ಗಳನ್ನು ಹೊಂದಿದ್ದು, ಅವುಗಳು 57mm 8W ಸಾಮರ್ಥ್ಯದಲ್ಲಿವೆ. ಹಾಗೆಯೇ ಔಟ್‌ಪುಟ್‌ ಸೌಂಡ್‌ ಕ್ವಾಲಿಟಿಯು ಉತ್ತಮವಾಗಿದ್ದು, 16W RMS ಒಟ್ಟು ಔಟ್‌ಪುಟ್‌ ಸೌಂಡ್‌ ಪ್ರಮಾಣವಾಗಿದೆ. ಹಾಗಾದರೇ ಜೆಬ್ರಾನಿಕ್ಸ್‌ ಮಾಸ್ಟರ್‌ಪೀಸ್‌ ವಾಯರ್‌ಲೆಸ್‌ ಸ್ಪೀಕರ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

<strong>ಓದಿರಿ : ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್! </strong>ಓದಿರಿ : ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!

ಸ್ಪೀಕರ್‌ ರಚನೆ

ಸ್ಪೀಕರ್‌ ರಚನೆ

ಜೆಬ್ರಾನಿಕ್ಸ್‌ ಸಂಸ್ಥೆಯ ಹೊಸ ವಾಯರ್‌ಲೆಸ್‌ ಬ್ಲೂಟೂತ್ ಸ್ಪೀಕರ್ ಮಾಸ್ಟರ್‌ಪೀಸ್‌ ಸಿಲಿಂಡರ್ ಆಕಾರದ ರಚನೆಯನ್ನು ಪಡೆದುಕೊಂಡಿದ್ದು, ಬಲು ಆಕರ್ಷಕವಾಗಿ ಕಾಣುತ್ತದೆ. ಸ್ಪೀಕರ್‌ ಭಾಗದಲ್ಲಿ ಫ್ಯಾಬ್ರಿಕ್ ಫಿನಿಶ್‌ ರಚನೆಯನ್ನು ಹೊಂದಿದ್ದು, ಗ್ಲಾಸಿ ಟಾಪ್‌ ಪ್ಯಾನೆಲ್‌ನಲ್ಲಿ ಪವರ್‌ ಆನ್‌ಆಫ್‌ ಬಟನ್, ವ್ಯಾಲ್ಯೂಮ್‌ ಕಂಟ್ರೋಲ್ ಬಟನ್‌, ಪ್ಲೇ ಬಟನ್‌ಗಳ ನೀಡಲಾಗಿದೆ.

ಕನೆಕ್ಟಿವಿಟಿ ಸೌಲಭ್ಯಗಳು

ಕನೆಕ್ಟಿವಿಟಿ ಸೌಲಭ್ಯಗಳು

ಮಾಸ್ಟರ್‌ಪೀಸ್‌ ವಾಯರ್‌ಲೆಸ್‌ ಸ್ಪೀಕರ್‌ ಪ್ರಾಥಮಿಕ ಆಡಿಯೊ ಸಂಪರ್ಕಕ್ಕೆ ಬ್ಲೂಟೂತ್ 4.2 ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಯುಎಸ್‌ಬಿ, ಮೈಕ್ರೋ ಎಸ್‌ಡಿ ಮತ್ತು AUX ಕೇಬಲ್‌ ಮೂಲಕವು ಕನೆಕ್ಟ್‌ ಮಾಡುವ ಮಲ್ಟಿ ಸೌಲಭ್ಯಗಳನ್ನು ಹೊಂದಿದೆ ಹಾಗೂ ಇನ್‌ಬಿಲ್ಟ್‌ ಎಫ್‌ಎಮ್‌ ರೇಡಿಯೊ ಆಯ್ಕೆಯನ್ನು ನೀಡಲಾಗಿದ್ದು, ಲಭ್ಯವಿರುವ ರೇಡಿಯೊ ಚಾನೆಲ್ಸ್‌ ಕೇಳಬಹುದಾಗಿದೆ.

<strong>ಓದಿರಿ : ಡಿಶ್‌ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್‌ ಮ್ಯಾಜಿಕ್ ಸ್ಟಿಕ್'!</strong>ಓದಿರಿ : ಡಿಶ್‌ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್‌ ಮ್ಯಾಜಿಕ್ ಸ್ಟಿಕ್'!

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬೆಸ್ಟ್‌ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಈ ಆಡಿಯೊ ಡಿವೈಸ್‌ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 12ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಅತ್ಯುತ್ತಮ ಸೌಂಡ್‌ಗಾಗಿ 57mm 8W ಸಾಮರ್ಥ್ಯದ ಆಡಿಯೊ ಡ್ರೈವರ್ಸ್‌ಗಳನ್ನು ನೀಡಲಾಗಿದ್ದು, ಹಾಗೆಯೇ ಸ್ಪೀಕರ್‌ ಫ್ರಿಕ್ವೇನ್ಸಿ ರೇಂಜ್ 20-20,000Hz ಆಗಿದೆ. ಸೌಂಡ್‌ ಔಟ್‌ಪುಟ್‌ 16W RMS ಪ್ರಮಾಣದಲ್ಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಜೆಬ್ರಾನಿಕ್ಸ್‌ ಕಂಪೆನಿಯ ಹೊಸ ಮಾಸ್ಟರ್‌ಪೀಸ್‌ ವಾಯರ್‌ಲೆಸ್‌ ಸ್ಪೀಕರ್‌, ಜೆಬ್ರಾನಿಕ್ಸ್‌ ರಾಕೆಟ್ಸ್‌ ಸ್ಪೀಕರ್‌ನ ಅಪ್‌ಡೇಟ್‌ ಆವೃತ್ತಿಯಂತೆ ಇದೆ. ಈ ಡಿವೈಸ್‌ 2,699ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ. ಹಾಗೆಯೇ ಪ್ರಮುಖ ಇ ಕಾಮರ್ಸ್ ಜಾಲತಾಣಗಳಲ್ಲಿ ಮತ್ತು ಆಫ್‌ಲೈನ್ ರಿಟೈಲ್ ಶಾಪ್‌ಗಳಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯ ಇದೆ.

<strong>ಓದಿರಿ : 'ಶಿಯೋಮಿ ಮಿ ಎ3' v/s 'ರಿಯಲ್ ಮಿ 5 ಪ್ರೊ' : ವ್ಯತ್ಯಾಸಗಳೇನು?..ಬೆಲೆ ಎಷ್ಟು?</strong>ಓದಿರಿ : 'ಶಿಯೋಮಿ ಮಿ ಎ3' v/s 'ರಿಯಲ್ ಮಿ 5 ಪ್ರೊ' : ವ್ಯತ್ಯಾಸಗಳೇನು?..ಬೆಲೆ ಎಷ್ಟು?

Best Mobiles in India

English summary
The Masterpiece speaker comes with multi-connectivity options like BT, USB, Micro SD. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X