Home
ಸುದ್ದಿಜಾಲ

ಜೆಬ್‌ ಸೌಂಡ್ ಬಾಂಬ್‌ X1 3-ಇನ್-1 ಲಾಂಚ್‌; ಟಾರ್ಚ್‌, ಬ್ಲೂಟೂತ್ ಸ್ಪೀಕರ್‌ ಆಯ್ಕೆ

ಆಡಿಯೋ ಗ್ಯಾಜೆಟ್‌ ತಯಾರಿಕೆಯಲ್ಲಿ ಭಾರತದ ಜೆಬ್ರೋನಿಕ್ಸ್‌ ವಿಶೇಷವಾದ ಸ್ಥಾನ ಪಡೆದುಕೊಂಡಿದೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳಲ್ಲೂ ಬದಲಾವಣೆ ಆಗುತ್ತಿದ್ದು, ಇದೀಗ ಮೊದಲ ಬಾರಿಗೆ ವಿಭಿನ್ನ ರೀತಿಯ ಇಯರ್‌ಬಡ್ಸ್‌ ಅನ್ನು ಮರುಕಟ್ಟೆಗೆ ಪರಿಚಯಿಸಿದೆ. ಈ ಇಯರ್‌ಬಡ್ಸ್‌ನ ಪ್ರಮುಖ ಕೇಂದ್ರಬಿಂದು ಎಂದರೆ ಚಾರ್ಜಿಂಗ್‌ ಕೇಸ್‌.

ಜೆಬ್ರೋನಿಕ್ಸ್‌

ಕೆಲವು ದಿನಗಳ ಹಿಂದಷ್ಟೇ ಭಾರತದಲ್ಲಿ ಜೆಬ್ರೋನಿಕ್ಸ್‌ನಿಂದ ಜಂಬೋ ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳನ್ನು ಲಾಂಚ್‌ ಮಾಡಲಾಗಿತ್ತು. ಇದು 160 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದ ಜೆಬ್ರೋನಿಕ್ಸ್‌ ತಿಳಿಸಿದೆ. ಇದಿಷ್ಟೇ ಅಲ್ಲದೆ, ಜೆಬ್ರೋನಿಕ್ಸ್‌ ಜೆಬ್‌ ಜ್ಯೂಕ್‌ ಬಾರ್ 4050 75W ಸೌಂಡ್‌ಬಾರ್ ಅನ್ನು ಸಹ ಲಾಂಚ್‌ ಮಾಡಲಾಗಿತ್ತು. ಇದರ ಬಳಿಕ ಈಗ ಹೊಸ ರೀತಿಯ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಲಾಗಿದೆ.

ಜೆಬ್ರೋನಿಕ್ಸ್‌ ಜೆಬ್‌ ಸೌಂಡ್ ಬಾಂಬ್‌

ಹೌದು, ಜೆಬ್ರೋನಿಕ್ಸ್‌ ಜೆಬ್‌ ಸೌಂಡ್ ಬಾಂಬ್‌ X1 3-ಇನ್-1 (Zebronics Zeb-Sound Bomb X1 3-in-1 ) ಬಗ್ಗೆ ಘೋಷಣೆ ಮಾಡಿದೆ. ಅದರಂತೆ ಇದರ ಚಾರ್ಜಿಂಗ್ ಕೇಸ್ ಬ್ಲೂಟೂತ್ ಸ್ಪೀಕರ್ ಮತ್ತು ಟಾರ್ಚ್ ಆಯ್ಕೆಯನ್ನು ಪಡೆದುಕೊಂಡಿದ್ದು, ಈ ಮೂಲಕ ನೀವು ಈ ಚಾರ್ಜಿಂಗ್‌ ಕೇಸ್‌ ಅನ್ನು ಕೇವಲ ಚಾರ್ಜ್‌ ಗಾಗಿ ಬಳಕೆ ಮಾಡಲು ಇದರಲ್ಲೂ ಸಹ ಸಂಗೀತ ಆಲಿಸಬಹುದು. ಹಾಗೆಯೇ ಕತ್ತಲೆಯ ಸಮಯದಲ್ಲಿ ಬೆಳಕಿಗಾಗಿಯೂ ಬಳಸಬಹುದು. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಏನು, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಜೆಬ್ರೋನಿಕ್ಸ್‌ ಜೆಬ್‌ ಸೌಂಡ್ ಬಾಂಬ್‌ X1 3-ಇನ್-1 ವೈರ್‌ಲೆಸ್ ಹೆಡ್‌ಸೆಟ್ ಆಗಿದ್ದು, ಇದು ಬ್ಲೂಟೂತ್ ಆವೃತ್ತಿ 5.0 ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಯಾರು ಔಟ್‌ ಇಯರ್ ಫಿಟ್ ಶೈಲಿಯ ಬಡ್ಸ್‌ಗಳನ್ನು ಇಷ್ಟಪಡುತ್ತಾರೋ ಅವರಿಗೆ ಇದು ಹೊಂದಿಕೊಳ್ಳಲಿದೆ. ಇನ್ನು ಟಚ್‌ಕಂಟ್ರೋಲ್‌ ಆಯ್ಕೆಯ ಜೊತೆಗೆ 13mm ಡೈನಾಮಿಕ್ ಡ್ರೈವರ್‌ ಅತ್ಯುತ್ತಮ ಧ್ವನಿ ನೀಡಲಿದೆ. ಹಾಗೆಯೇ ಇದರಲ್ಲಿ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆಯೂ ಸಹ ಇರುವುದು ಮತ್ತೊಂದು ವಿಶೇಷ.

ಚಾರ್ಜಿಂಗ್‌ ಕೇಸ್‌ ನಲ್ಲಿ ಟಾರ್ಚ್‌, ಬ್ಲೂಟೂತ್‌ ಸ್ಪೀಕರ್‌

ಚಾರ್ಜಿಂಗ್‌ ಕೇಸ್‌ ನಲ್ಲಿ ಟಾರ್ಚ್‌, ಬ್ಲೂಟೂತ್‌ ಸ್ಪೀಕರ್‌

ಇತ್ತೀಚೆಗೆ ಬಿಡುಗಡೆಯಾದ ಎಲ್ಲಾ ಇಯರ್‌ಬಡ್ಸ್‌ಗಳು ವಿಭಿನ್ನ ಶೈಲಿಯ ಚಾರ್ಜಿಂಗ್‌ ಕೇಸ್‌ಗಳನ್ನು ಹೊಂದಿದ್ದು, ಆಕರ್ಷಕ ಎನಿಸಿಕೊಂಡಿದ್ದವು. ಆದರೆ ಈ ಚಾರ್ಜಿಂಗ್‌ ಕೇಸ್‌ ಮಾತ್ರ ಹೆಚ್ಚಿನ ಭಿನ್ನತೆಯಿಂದ ಕೂಡಿದೆ. ಈ ಕೇಸ್‌ 36 ಎಂಎಂ ಡೈನಾಮಿಕ್ ಡ್ರೈವರ್‌ನೊಂದಿಗೆ ಬ್ಲೂಟೂತ್ ಸ್ಪೀಕರ್ ಆಯ್ಕೆಯನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ, ಎಲ್ಇಡಿ ಟಾರ್ಚ್ ಆಯ್ಕೆಯೂ ಸಹ ಇದರಲ್ಲಿದೆ. ಈ ಕೇಸ್‌ ಅನ್ನು ಚಾರ್ಜ್‌ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆಯನ್ನು ಒದಗಿಸಲಾಗಿದೆ.

30 ಗಂಟೆಗಳ ಬ್ಯಾಟರಿ ಬ್ಯಾಕಪ್‌

30 ಗಂಟೆಗಳ ಬ್ಯಾಟರಿ ಬ್ಯಾಕಪ್‌

ಇಯರ್‌ಬಡ್‌ಗಳ ಬ್ಯಾಟರಿಗೆ ಸಂಬಂಧಿಸಿದಂತೆ 30 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಿಗಲಿದೆ ಎಂದು ಕಂಪೆನಿ ಹೇಳಿದೆ. ಹಾಗೆಯೇ ಬ್ಲೂಟೂತ್ ಸ್ಪೀಕರ್‌ ಬಳಕೆ ಮಾಡಿದರೆ 19 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ ಸಿಗಲಿದೆ. ಜೊತೆಗೆ ಪ್ರತಿ ಬಡ್ಸ್‌ಗಳು ಪ್ರತಿ ಚಾರ್ಜ್‌ನಲ್ಲಿ ಐದು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಈ ಇಯರ್‌ಬಡ್ಸ್‌ ಸ್ಪ್ಲಾಶ್ ರೆಸಿಸ್ಟೆಂಟ್‌ ಆಗಿವೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಹೊಸ ಶೈಲಿಯ ಜೆಬ್ರೋನಿಕ್ಸ್‌ ಜೆಬ್‌ ಸೌಂಡ್ ಬಾಂಬ್‌ X1 3-ಇನ್-1 ಗೆ ಭಾರತದಲ್ಲಿ 1,399 ರೂ. ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಬಿಳಿ, ನೀಲಿ ಮತ್ತು ಕಪ್ಪು ಬಣ್ಣದ ಮೂರು ವೇರಿಯಂಟ್‌ನಲ್ಲಿ ಈ ಇಯರ್‌ಬಡ್ಸ್‌ ಲಭ್ಯವಿದೆ. ಈ ಡಿವೈಸ್‌ ಅನ್ನು ನೀವು ಅಮೆಜಾನ್‌ ಹಾಗೂ ಇತರೆ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿ ಮಾಡಬಹುದು.

Best Mobiles in India

English summary
Zebronics Zeb-Sound Bomb X1 3-in-1 launched with Bluetooth Speaker and Torch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+