Home
ಸುದ್ದಿಜಾಲ

ZEE 5 ಕ್ಲಬ್ ಯೋಜನೆಯ ವಾರ್ಷಿಕ ಶುಲ್ಕ ಈಗ ಕೇವಲ 365ರೂ. ಮಾತ್ರ!

ಭಾರತದಲ್ಲಿ ಜನಪ್ರಿಯ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಜೀ 5 ಸಹ ಒಂದಾಗಿದೆ. ದೇಶದಲ್ಲಿ ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಂತಹ OTT ಪ್ಲಾಟ್‌ಫಾರ್ಮ್‌ಗಳಿಂದ ಸ್ಪರ್ಧೆಯ ಹೊರತಾಗಿಯೂ, ಜೀ 5 ವಿಶಿಷ್ಟವಾದ ಗುರುತಿಸಿಕೊಂಡಿದೆ. ಇದೀಗ ಜೀ 5 ಪ್ಲಾಟ್‌ಫಾರ್ಮ್ ಕಡಿಮೆ ಬೆಲೆಗೆ ವಾರ್ಷಿಕ ಅವಧಿಯ ಚಂದಾದಾರಿಕೆ ಯೋಜನೆಯೊಂದನ್ನು ಘೋಷಿಸಿದೆ.

ಜೀ 5 ವಿಡಿಯೊ ಸ್ಟ್ರೀಮಿಂಗ್

ಹೌದು, ಜನಪ್ರಿಯ ಜೀ 5 ವಿಡಿಯೊ ಸ್ಟ್ರೀಮಿಂಗ್ ತಾಣವು ಈಗ 365ರೂ.ಗೆ ZEE5 Club-ಜೀ 5 ಕ್ಲಬ್‌ ವಾರ್ಷಿಕ ಯೋಜನೆಯನ್ನು ತಿಳಿಸಿದೆ. ಕಡಿಮೆ ಬೆಲೆಗೆ ವಾರ್ಷಿಕ ಚಂದಾದಾರಿಕೆಯನ್ನು ನೀಡುವ ಮೂಲಕ ಜೀ 5 ನೇರವಾಗಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ ವಾರ್ಷಿಕ ಚಂದಾದಾರಿಕೆ ಯೋಜನೆಗೆ ಪೈಪೋಟಿ ನೀಡುವ ಹೆಜ್ಜೆ ಇಟ್ಟಿದೆ. ಅಂದಹಾಗೇ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಯೋಜನೆಯ ವಾರ್ಷಿಕ ಚಂದಾ ಶುಲ್ಕವು 399ರೂ.ಆಗಿದೆ.

ಜೀ 5 ಪ್ರೀಮಿಯಂ

ಜೀ 5 ಕ್ಲಬ್ ಚಂದಾದಾರಿಕೆಯೊಂದಿಗೆ, ಬಳಕೆದಾರರು ಜೀ 5 ಪ್ರೀಮಿಯಂ ಚಂದಾದಾರಿಕೆಯಲ್ಲಿ (12 ಭಾಷೆಗಳು) ಇರುವ ಎಲ್ಲಾ ಭಾಷೆಗಳಲ್ಲಿ ವಿಷಯಕ್ಕೆ ಪ್ರವೇಶವನ್ನು ಪಡೆಯುತ್ತಾರೆ. ಈ ಚಂದಾದಾರಿಕೆಯನ್ನು ತೆಗೆದುಕೊಳ್ಳುವ ಪ್ರಯೋಜನವೆಂದರೆ ಬಳಕೆದಾರರು ಟಿವಿಯಲ್ಲಿ ಪ್ರಸಾರವಾಗುವ ಮೊದಲು ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳಾದ ‘Kumkum Bhagya' ಮತ್ತು ಹೆಚ್ಚಿನದನ್ನು ನೋಡುತ್ತಾರೆ.

ZEE5 ಕ್ಲಬ್‌

ಅದರ ಜೊತೆಗೆ, ಜೀ 5 ಕ್ಲಬ್ ಚಂದಾದಾರಿಕೆಯಲ್ಲಿ 1,000 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಸೇರಿಸಲಾಗಿದೆ, ಜೀ 5 ಪ್ರೀಮಿಯಂ ಚಂದಾದಾರಿಕೆಯೊಂದಿಗೆ ನೀಡಲಾಗುವ 4,500+ ಚಲನಚಿತ್ರಗಳಿಗೆ ಹೋಲಿಸಿದರೆ. ಈ ಚಂದಾದಾರಿಕೆ ಸೇವೆಯ ಬಳಕೆದಾರರು 90+ ಲೈವ್ ಟಿವಿ ಚಾನೆಲ್‌ಗಳನ್ನು ಸಹ ನೋಡುತ್ತಾರೆ. ZEE5 ಪ್ರೀಮಿಯಂ ಚಂದಾದಾರಿಕೆಯೊಂದಿಗೆ 5 ಸ್ಕ್ರೀನ್‌ಗಳಿಗೆ ಹೋಲಿಸಿದರೆ ZEE5 ಕ್ಲಬ್‌ನ ವಿಷಯವನ್ನು ಒಂದೇ ಸಮಯದಲ್ಲಿ ಗರಿಷ್ಠ 2 ಸ್ಕ್ರೀನ್‌ನಲ್ಲಿ ಪ್ಲೇ ಮಾಡಬಹುದು. ಒಂದು ವೇಳೆ ಬಳಕೆದಾರರು ZEE5 ಕ್ಲಬ್‌ನಿಂದ ZEE5 ಪ್ರೀಮಿಯಂ ಚಂದಾದಾರಿಕೆಗೆ ಅಪ್‌ಗ್ರೇಡ್ ಮಾಡಲು ಬಯಸಿದರೆ, ಎರಡು ಚಂದಾದಾರಿಕೆಗಳ ನಡುವಿನ ಮೊತ್ತದಲ್ಲಿನ ವ್ಯತ್ಯಾಸವನ್ನು ಪಾವತಿಸುವ ಮೂಲಕ ಅವರು ಹಾಗೆ ಮಾಡಬಹುದು.

ಯೋಜನೆಗಳು

ಈ ಚಂದಾದಾರಿಕೆ ಯೋಜನೆಯ ಸೇರ್ಪಡೆಯೊಂದಿಗೆ, ಈಗ ZEE5 ಗ್ರಾಹಕರು ಆಯ್ಕೆ ಮಾಡಲು ಐದು ವಿಭಿನ್ನ ಯೋಜನೆಗಳನ್ನು ಹೊಂದಿದ್ದಾರೆ. 5 ಯೋಜನೆಗಳಲ್ಲಿ, 4 ಯೋಜನೆಗಳು ZEE5 ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಬರುತ್ತವೆ - 99 ರೂ (ತಿಂಗಳಿಗೆ ಯೋಜನೆ), 299 ರೂ (3 ತಿಂಗಳ ಯೋಜನೆ), 599 ರೂ (6 ತಿಂಗಳ ಯೋಜನೆ), ಮತ್ತು 999 ರೂ (ವಾರ್ಷಿಕ ಯೋಜನೆಗಳು). ಕೊನೆಯದಾಗಿ, ZEE5 ಕ್ಲಬ್ ಚಂದಾದಾರಿಕೆಯು ವಾರ್ಷಿಕವಾಗಿ 365 ರೂ.ಗೆ ಲಭ್ಯ.

Best Mobiles in India

English summary
The video streaming service Zee5 has launched another annual subscription plan called Zee5 Club.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+