ZEE5 ಪ್ರೀಮಿಯಂ ವಾರ್ಷಿಕ ಚಂದಾದಾರಿಕೆ ಶುಲ್ಕದಲ್ಲಿ ಭಾರೀ ರಿಯಾಯಿತಿ!

|

ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ZEE5 ಪ್ರೀಮಿಯಂ ಇದೀಗ ಮೂರನೇ ವರ್ಷಗಳ ವಾರ್ಷಿಕೋತ್ಸವದ ಆಚರಣೆಯಲ್ಲಿದೆ. ಈ ನಿಟ್ಟಿನಲ್ಲಿ ZEE5 ಪ್ರೀಮಿಯಂ ವಾರ್ಷಿಕ ಚಂದಾದಾರಿಕೆ ಯೋಜನೆಯಲ್ಲಿ ಶೇ. 50 ಪ್ರತಿಶತದಷ್ಟು ರಿಯಾಯಿತಿ ಘೋಷಿಸಿದೆ. ಹೀಗಾಗಿ ZEE5 ಪ್ರೀಮಿಯಂ ಸೇವೆ ಸದ್ಯ ಕೇವಲ 499ರೂ.ಗಳಿಗೆ ಲಭ್ಯವಿದೆ. ಇನ್ನು ಈ ಕೊಡುಗೆಯು ಈ ತಿಂಗಳ (ಫೆಬ್ರವರಿ 28) ಅಂತ್ಯದವರೆಗೆ ಮಾನ್ಯವಾಗಿರುತ್ತದೆ.

ಪ್ರೀಮಿಯಂ

ಹೌದು, ZEE5 ಪ್ರೀಮಿಯಂ ವಾರ್ಷಿಕ ಚಂದಾದಾರಿಕೆಯ ಯೋಜನೆಯಲ್ಲಿ ಡಿಸ್ಕೌಂಟ್‌ ನೀಡಿದ್ದು, ಗ್ರಾಹಕರನ್ನು ಸೆಳೆದಿದೆ. ಅದೇ ರೀತಿ ZEE5 ಪ್ರೀಮಿಯಂ ಒಂದು ತಿಂಗಳ ಹಾಗೂ ಮೂರು ತಿಂಗಳ ಚಂದಾದಾದರಿಕೆಯ ಯೋಜನೆಗಳನ್ನು ಹೊಂದಿದೆ. ಅವುಗಳ ಬೆಲೆಯು ಕ್ರಮವಾಗಿ 99ರೂ ಮತ್ತು 299ರೂ. ಆಗಿದೆ. ಪ್ರಸ್ತುತ ZEE5 ಪ್ರೀಮಿಯಂ ಓಟಿಟಿ ಜೊತೆಗೆ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಇತರೆ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ನೆಟ್‌ಫ್ಲಿಕ್ಸ್‌ ಆಪ್‌

ನೆಟ್‌ಫ್ಲಿಕ್ಸ್‌ ಆಪ್‌

ನೆಟ್‌ಫ್ಲಿಕ್ಸ್‌ ತಾಣ ನಿಮಗೆಲ್ಲಾ ತಿಳಿದಿರುವ ಪ್ರಮುಖ ಓಟಿಟಿ ಅಪ್ಲಿಕೇಶನ್ ಆಗಿದೆ. ಈ ತಾಣದಲ್ಲಿ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳು, ಸೇಕ್ರೆಡ್ ಗೇಮ್ಸ್, ಸ್ಟ್ರೇಂಜರ್ ಥಿಂಗ್ಸ್, ಡೇರ್‌ಡೆವಿಲ್, ಪನಿಷರ್, ಆರೆಂಜ್ ಈಸ್ ದಿ ನ್ಯೂ ಬ್ಲ್ಯಾಕ್, ನಾರ್ಕೋಸ್, ಹೌಸ್ ಆಫ್ ಕಾರ್ಡ್ಸ್, ಕಾರ್ಯಕ್ರಮಗಳು ಹೆಚ್ಚು ಅಟ್ರ್ಯಾಕ್ಟ್ ಆಗಿವೆ. ಈ ಆಪ್‌ ನಾಲ್ಕು ವಿಭಿನ್ನ ಚಂದಾದಾರಿಕೆ ಯೋಜನೆಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ 4 ಡಿವೈಸ್‌ಗಳ ಸ್ಕ್ರೀನ್‌ಗಳಲ್ಲಿ ಈ ಆಪ್ ಬಳಸುವ ಚಂದಾದಾರಿಕೆಯ ಪ್ಲ್ಯಾನ್ ಸಹ ಇದೆ.

ಹಾಟ್‌ಸ್ಟಾರ್ ಆಪ್‌

ಹಾಟ್‌ಸ್ಟಾರ್ ಆಪ್‌

ಕ್ರೀಡಾ ಅಭಿಮಾನಿಗಳಿಂಗತೂ ಹಾಟ್‌ಸ್ಟಾರ್ ಹಾಟ್‌ ಫೇವರೇಟ್ ಆಗಿದೆ. ಯಾಕಂದ್ರೆ ಈ ಆಪ್ ಕ್ರಿಕೆಟ್, ಐಪಿಎಲ್ ಮ್ಯಾಚ್‌ ಸೇರಿದಂತೆ ಇತರೆ ಕ್ರೀಡೆಗಳ ನೇರ ಪ್ರಸಾರಗಳನ್ನು ಪ್ರದರ್ಶನ ಮಾಡುತ್ತದೆ. ಜೊತೆಗೆ ಸಿನಿಮಾ ಹಾಗೂ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಆಯ್ಕೆಗಳನ್ನು ಈ ತಾಣವು ಹೊಂದಿದೆ. ಇನ್ನು ಹಾಟ್‌ಸ್ಟಾರ್ ಭಿನ್ನ ಚಂದಾದಾರಿಕೆಯ ಆಯ್ಕೆಗಳನ್ನು ಒಳಗೊಂಡಿದೆ.

ALTಬಾಲಾಜಿ ಆಪ್‌

ALTಬಾಲಾಜಿ ಆಪ್‌

ALTಬಾಲಾಜಿ OTT ಆಪ್‌ ಜನಪ್ರಿಯ ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಚಲನಚಿತ್ರಗಳು, ಭಿನ್ನ ಪ್ರದರ್ಶನಗಳು ಮತ್ತು ಮಕ್ಕಳ ವಿಶೇಷತೆಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಈ ಸಂಸ್ಥೆಯು ಹೆಚ್ಚಿನ ಕಂಟೆಂಟ್ ಸಂಗ್ರಹಗಳನ್ನು ಹೊಂದಿದೆ. ಇನ್ನು ಈ ಆಪ್ ಎರಡು ಪ್ರಮುಖ ಚಂದಾದಾರಿಕೆಯ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಮಾಸಿಕ ಮತ್ತು ವಾರ್ಷಿಕ ಆಗಿವೆ.

ಅಮೆಜಾನ್ ಪ್ರೈಮ್‌ ವಿಡಿಯೊ

ಅಮೆಜಾನ್ ಪ್ರೈಮ್‌ ವಿಡಿಯೊ

ನೆಟ್‌ಫ್ಲಿಕ್ಸ್‌ಗೆ ನೇರ ಪೈಪೋಟಿ ನೀಡುತ್ತಿರುವ ಪ್ರಮುಖ ಓಟಿಟಿ ಆಪ್ ಅಂದ್ರೇ ಅದು ಅಮೆಜಾನ್ ಪ್ರೈಮ್‌ ವಿಡಿಯೊ ಆಗಿದೆ. ಈ ತಾಣದಲ್ಲಿ ಬಳಕೆದಾರರು ಚಲನಚಿತ್ರಗಳ ಜೊತೆಗೆ ಭಿನ್ನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ದಿ ಮ್ಯಾನ್ ಇನ್ ದಿ ಹೈ ಕ್ಯಾಸಲ್, ಮೇಡ್ ಇನ್ ಹೆವನ್ ಹಾಗೂ ಹಾಸ್ಯ ಕಾರ್ಯಕ್ರಮಗಳು ಈ ಆಪ್‌ನಲ್ಲಿ ಸೇರಿವೆ. ಅಮೆಜಾನ್ ಪ್ರೈಮ್ ವಿಡಿಯೊ ಎರಡು ಚಂದಾದಾರಿಕೆ ಆಯ್ಕೆಗಳನ್ನು ಹೊಂದಿದ್ದು, ಮಾಸಿಕ ಮತ್ತು ವಾರ್ಷಿಕ.

Most Read Articles
Best Mobiles in India

English summary
Zee5 Premium subscription includes access to all Zee5 originals and exclusives, as well as blockbuster movies, all ALT Balaji Shows, and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X