ಜೂಮ್ ಆಪ್ ಬಳಕೆ ಸುರಕ್ಷಿತವಲ್ಲ; ಬಳಸುವಾಗ ಇರಲಿ ಎಚ್ಚರ!

|

ಕೊರೊನಾ ವೈರಸ್‌ ಹಾವಳಿಯಿಂದಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಹುತೇಕರು ಕಂಪನಿಗಳ ಉದ್ಯೋಗಿಗಳು ಆನ್‌ಲೈನ್‌ ಮೀಟಿಂಗ್‌ ಮಾಡಲು, ಆನ್‌ಲೈನ್ ತರಗತಿಗಳಿಗೆ ಜೂಮ್ ಆಪ್ ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚೀನಾ ಮೂಲದ ಜೂಮ್ ಆಪ್ ಭಾರಿ ಡಿಮ್ಯಾಂಡ್ ಪಡೆದುಕೊಂಡಿದೆ. ಆದರೆ ಜೂಮ್ ಆಪ್ ಬಳಕೆಗೆ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

Cert-In

ಲಾಕ್‌ಡೌನ್‌ ಅವಧಿಯಲ್ಲಿ ಜೂಮ್ ಆಪ್ ಹೆಚ್ಚಾಗಿ ಬಳಕೆ ಆಗುತ್ತಿದೆ. ಆದರೆ ಖಾಸಗಿ ಮಾಹಿತಿಯ ಗೌಪ್ಯತೆಯ ದೃಷ್ಟಿಯಿಂದ ಜೂಮ್ ಆಪ್ ಸುರಕ್ಷಿತವಲ್ಲ. ಈ ಆಪ್ ಬಳಸುವುದಾದರೆ ಎಚ್ಚರವಹಿಸಿ ಬಳಕೆ ಮಾಡಬೇಕು ಎಂದು Computer Emergency Response Team of India ತಿಳಿಸಿದೆ. Cert-In ಇದೊಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಗ ಸಂಸ್ಥೆಯಾಗಿದೆ.

ಡಾರ್ಕ್ ವೆಬ್‌

ಡಾರ್ಕ್ ವೆಬ್‌ನಲ್ಲಿ ಸುಮಾರು 500 ಸಾವಿರಕ್ಕೂ ಹೆಚ್ಚು ಬಳಕೆದಾರರ ಜೂಮ್ ಖಾತೆಗಳನ್ನು ಮಾರಾಟ ಮಾಡಲಾಗಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಹೀಗಾಗಿ ವಿಡಿಯೋ ಕರೆ ಮಾಡುವ ಜೂಮ್ ಅಪ್ಲಿಕೇಶನ್ ಬಳಕೆ ಸುರಕ್ಷಿತವಾಗಿಲ್ಲ ಎಂದು ಗೃಹ ಸಚಿವಾಲಯವು ಸಹ ಹೇಳಿದೆ.

ಲಾಕ್‌ಡೌನ್ ಅವಧಿ

ಜೂಮ್‌ ಅಪ್ಲಿಕೇಶನ್ ಲಾಕ್‌ಡೌನ್ ಅವಧಿಯಲ್ಲಿ ಬಹುಬೇಗನೇ ಜನಪ್ರಿಯತೆ ಪಡೆದಿದೆ. ಈ ಆಪ್‌ನಲ್ಲಿ ಒಂದೇ ವಿಡಿಯೋ ಕರೆಯಲ್ಲಿ ಗರಿಷ್ಠ 100 ಜನರನ್ನು ಕನೆಕ್ಟ್ ಮಾಡುವ ಸೌಲಭ್ಯ ಪಡೆದಿದೆ. ಹಾಗೆಯೇ ದೀರ್ಘಾವಧಿಯ ಗ್ರೂಪ್ ಸಂವಹನ ನಡೆಸಲು ಅವಕಾಶ ಒದಗಿಸುತ್ತದೆ. ಇದರೊಂದಿಗೆ ಕೆಲವು ಮೈನಸ್‌ ಪಾಯಿಂಟ್‌ಗಳನ್ನು ಒಳಗೊಂಡಿದೆ. ಮುಂದೆ ಓದಿರಿ.

ಮೈನಸ್‌ ಪಾಯಿಂಟ್ 1: ಮಾಹಿತಿ ಸೋರಿಕೆ

ಮೈನಸ್‌ ಪಾಯಿಂಟ್ 1: ಮಾಹಿತಿ ಸೋರಿಕೆ

ವಿಡಿಯೊ ಕರೆಗಳಿಗೆ ಜನಪ್ರಿಯವಾಗಿರುವ ಜೂಮ್ ಆಪ್‌ ಸುರಕ್ಷಿತವಲ್ಲ ಎನ್ನುವ ಮಾತುಗಳಿವೆ. ಈ ಆಪ್‌ನ 'ಕಂಪನಿ ಡೈರೆಕ್ಟರಿ' ಸೆಟ್ಟಿಂಗ್‌ನಲ್ಲಿ ದೋಷ ಇದೆ ಎನ್ನಲಾಗಿದೆ. ಹೀಗಾಗಿ ಬಳಕೆದಾರರ ವೈಯಕ್ತಿಕ ಖಾಸಗಿ ಮಾಹಿತಿಗಳು, ಇಮೇಲ್‌ಗಳು ಮತ್ತು ಫೋಟೋಗಳನ್ನು ಸೋರಿಕೆ ಆಗುವ ಸಾಧ್ಯತೆಗಳಿವೆ. ಈ ದೃಷ್ಠಿಯಿಂದ ಜೂಮ್ ಆಪ್ ಬಳಕೆ ಸೂಕ್ತವಲ್ಲ.

ಮೈನಸ್‌ ಪಾಯಿಂಟ್ 2: ಸುರಕ್ಷತಾ ಫೀಚರ್‌ ಕೊರತೆ

ಮೈನಸ್‌ ಪಾಯಿಂಟ್ 2: ಸುರಕ್ಷತಾ ಫೀಚರ್‌ ಕೊರತೆ

ಜೂಮ್ ಆಪ್ನಲ್ಲಿ ನಡೆಸುವ ಸಭೆಗಳು ಎಂಡ್‌ ಡು ಎಂಡ್ ಎನ್‌ಕ್ರಿಪ್ಟ್ ಸೌಲಭ್ಯ ಪಡೆದಿಲ್ಲ ಎನ್ನಲಾಗಿದೆ. ವಿಡಿಯೊ ಕರೆಗಳು ಸುರಕ್ಷಿತ ಅನಿಸಿದರೂ ಥರ್ಡ್‌ಪಾರ್ಟ್‌ ವ್ಯಕ್ತಿಗಳಿಂದ ಸುಲಭವಾಗಿ ಮಾಹಿತಿ ಸೋರಿಕೆಯ ಆಗುವ ಸಾಧ್ಯತೆಗಳು ಅಧಿಕವಾಗಿವೆ.

ಮೈನಸ್‌ ಪಾಯಿಂಟ್ 3: ವಿಡಿಯೊ ಕರೆಯಲ್ಲಿ ಕಿರಿಕಿರಿ

ಮೈನಸ್‌ ಪಾಯಿಂಟ್ 3: ವಿಡಿಯೊ ಕರೆಯಲ್ಲಿ ಕಿರಿಕಿರಿ

ಜೂಮ್ ಆಪ್‌ನಲ್ಲಿ ವಿಡಿಯೊ ಕರೆಗಳು ನಡೆಯುವಾಗ/ ಸಭೆ ನಡೆಯುವಾಗ ಆನ್‌ಲೈನ್‌ನಲ್ಲಿನ ಅಶ್ಲೀಲತೆಗೆ ಸಂಬಂಧದಿಸಿದ ಕಂಟೆಂಟ್‌, ಸೂಕ್ತವಲ್ಲದ ವಿಷಯದ ಮಾಹಿತಿ ನಡುವೆ ಕಾಣಿಸುವ ಸಾಧ್ಯತೆಗಳು ಇವೆ. ಇದು ವಿಡಿಯೊ ಸಭೆಗೆ ಕಿರಿಕಿರಿ ಅನಿಸುತ್ತದೆ.

Most Read Articles
Best Mobiles in India

English summary
Zoom has responded to MHA’s circular saying that it was extremely serious about users’ security.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X