ಜೂಮ್‌ ವಿಡಿಯೋ ಕರೆಯಲ್ಲಿ ಬಳಕೆದಾರರಿಗೆ ಮನರಂಜನೆ ನೀಡಲಿದೆ ಈ ಫೀಚರ್‌!

|

ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್ ಸದ್ಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಸುಲಭ ಕನೆಕ್ಟಿವಿಟಿ ಸೌಲಭ್ಯದ ಆಯ್ಕೆ ಜೊತೆಗೆ ಹೆಚ್ಚಿನ ಸದಸ್ಯರನ್ನು ಸೇರಿಸಬಹುದಾದ ಆಯ್ಕೆಯನ್ನು ಜೂಮ್‌ ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ ಒಳಗೊಂಡಿದೆ. ಹಾಗೆಯೇ ಬ್ಯಾಕ್‌ಗ್ರೌಂಡ್‌ ಬದಲಾಯಿಸುವ ಆಯ್ಕೆಯನ್ನು ಹೊಂದಿರುವುದು ಆಕರ್ಷಣಿಯ ಅನಿಸಿದೆ. ಈಗ ಜೂಮ್‌ ಆಪ್‌ನಲ್ಲಿ ಮತ್ತೊಂದು ಹೊಸ ಫೀಚರ್ ಸೇರ್ಪಡೆ ಆಗಿದೆ.

ಅಪ್ಲಿಕೇಶನ್

ಹೌದು, ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್ ನೂತನವಾಗಿ 'ಸ್ಟುಡಿಯೋ ಎಫೆಕ್ಟ್ಸ್' ಫೀಚರ್‌ ಅನ್ನು ಹೊಂದಿದೆ. ಈ ಆಯ್ಕೆಯಲ್ಲಿ ಲೈವ್ ವಿಡಿಯೋ ಸ್ಟ್ರೀಮ್‌ಗಳ ಸಮಯದಲ್ಲಿ ಬಳಕೆದಾರರಿಗೆ ವಿವಿಧ ಹುಬ್ಬುಗಳು, ಮುಖದ ಕೂದಲು ಮತ್ತು ತುಟಿ ಬಣ್ಣವನ್ನು ಸೇರಿಸಲು ಅನುವು ಮಾಡಿಕೊಡುತ್ತದೆ.

ಬೀಟಾ

ಜೂಮ್‌ ಆಪ್‌ನ ಈ ಫೀಚರ್ ಇನ್ನೂ ಬೀಟಾ ಆವೃತ್ತಿಯಲ್ಲಿದೆ. ಈ ಆಯ್ಕೆ ನಿಜವಾಗಿಯೂ ಹೊಸದಲ್ಲ ವಿಂಡೋಸ್ ಮತ್ತು ಮ್ಯಾಕೋಸ್‌ಗಾಗಿ ಸೆಪ್ಟೆಂಬರ್ 2020 ರಲ್ಲಿ ಜೂಮ್ ಇದನ್ನು ಘೋಷಿಸಿತು - ಆದರೆ ಅನೇಕ ಜೂಮ್ ಬಳಕೆದಾರರು ಇದನ್ನು ಕಂಡುಹಿಡಿಯುತ್ತಿರುವುದು ಇದೇ ಮೊದಲು ಎಂದು ದಿ ವರ್ಜ್ ಹೇಳಿದೆ.

ಪ್ರಾರಂಭಿಸಬಹುದು

ಬಳಕೆದಾರರು ಜೂಮ್ ಸೆಷನ್ ಅನ್ನು ಪ್ರಾರಂಭಿಸಬಹುದು ಮತ್ತು ವೀಡಿಯೊ ಸೆಟ್ಟಿಂಗ್‌ಗಳಿಗೆ ಹೋಗಬಹುದು. ಅಲ್ಲಿಂದ, "Background & Filters" ಆಯ್ಕೆ ಸೆಲೆಕ್ಟ್‌ ಮಾಡಿ ಮತ್ತು ಕೆಳಗಿನ ಬಲಭಾಗದ ಕಾರ್ನರ್‌ನಲ್ಲಿರುವ 'ಸ್ಟುಡಿಯೋ ಎಫೆಕ್ಟ್ಸ್ (ಬೀಟಾ)' ನೋಡಿ. ಅದರ ನಂತರ, ಬಳಕೆದಾರರು ತಮಗೆ ಬೇಕಾದ ಯಾವುದೇ ನೋಟವನ್ನು ಪರಿಣಾಮ ಬೀರಬಹುದು ಎಂದು ತಿಳಿದು ಬಂದಿದೆ. ಇನ್ನು ಜೂಮ್ ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜೂಮ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಜೂಮ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.

ಹಂತ 2: ನಂತರ ಸೆಟ್ಟಿಂಗ್‌ ಮೆನು ಕ್ಲಿಕ್ ಮಾಡಿ.

ಹಂತ 3: ನಿಮ್ಮ ಎಡಭಾಗದಲ್ಲಿರುವ ಮೆನುವಿನಲ್ಲಿರುವ ವರ್ಚುವಲ್ ಹಿನ್ನೆಲೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಆನಂತರ ಜೂಮ್ ಒದಗಿಸಿದ ಡೀಫಾಲ್ಟ್ ಹಿನ್ನೆಲೆ ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಆಟೋಮ್ಯಾಟಿಕ್ ಆಗಿ ಬದಲಾವಣೆಗೊಳ್ಳುತ್ತದೆ.

ಆಯ್ಕೆಯ

ಹಂತ 5: ಬ್ಯಾಕ್ಗ್ರೌಂಡ್‌ನಲ್ಲಿ ನಿಮ್ಮ ಆಯ್ಕೆಯ ಚಿತ್ರವನ್ನು ಸಹ ನೀವು ಅಪ್‌ಲೋಡ್ ಮಾಡಬಹುದು. ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಗೆ ಹೋಗಿ ಮತ್ತು ‘ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಮಾಡಿ' ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 6: ಈಗ, ನಿಮ್ಮ ಆಯ್ಕೆಯ ಚಿತ್ರವನ್ನು ನೀವು ಅಪ್‌ಲೋಡ್ ಮಾಡುವಂತಹ ಬಾಕ್ಸ್‌ ಕಾಣಿಸುತ್ತದೆ. ಒಮ್ಮೆ ನೀವು ಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರ, ಜೂಮ್ ಒದಗಿಸಿದ ಇತರ ವಾಲ್‌ಪೇಪರ್ ಜೊತೆಗೆ ಅದು ಕಾಣಿಸುತ್ತದೆ.

Best Mobiles in India

English summary
Zoom has come up with a feature "Studio Effects" that allows users to add a variety of eyebrows, facial hair and lip colour during live video streams.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X