Home
ಸುದ್ದಿಜಾಲ

ಇನ್‌ಸ್ಟಾಗ್ರಾಮ್‌ ಮಾಲೀಕನೇ ಹೀಗೆ ಮಾಡಿದ್ರು ಅಂದರೆ ಒಮ್ಮೆ ಯೋಚಿಸಿ, ಪೊಲೀಸರಿಂದ ಭಾರತೀಯರಿಗೆ ಎಚ್ಚರಿಕೆ!

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಇಂದು ಹೆಚ್ಚಾಗಿ ಮನರಂಜನೆಗೆ ಬಳಕೆ ಆಗುತ್ತಿದೆ. ಈ ಪ್ಲಾಟ್‌ಫಾರ್ಮ್‌ ಬಳಕೆ ಮಾಡಿಕೊಂಡು ಹಲವರು ಬೆಳಗಾಗುವುದರೊಳಗಾಗಿ ಸೆಲೆಬ್ರಿಟಿಗಳಾಗುತ್ತಿದ್ದಾರೆ. ಇನ್ನೂ ಕೆಲವರು ಈ ಪ್ಲಾಟ್‌ಫಾರ್ಮ್‌ ಅನ್ನೇ ದುರ್ಬಳಕೆ ಮಾಡಿಕೊಂಡು ಮಾಡಬಾರದ ಕೆಲಸ ಮಾಡುತ್ತಿದ್ದಾರೆ.

ಹೌದು, ಇನ್‌ಸ್ಟಾಗ್ರಾಮ್ ಬಳಕೆದಾರರ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದ್ದು, ಈ ನಡುವೆ ಮಾರ್ಕ ಜುಕರ್‌ಬರ್ಗ್ ಅವರು ತಮ್ಮ ಕುಟುಂಬದ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಆದರೆ ಈ ವೇಳೆ ತಮ್ಮ ಮಕ್ಕಳ ಮುಖಗಳನ್ನು ಮರೆ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ಭಾರತೀಯ ಪೊಲೀಸರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ, ಜುಕರ್‌ಬರ್ಗ್ ಮಕ್ಕಳ ಮುಖಗಳನ್ನು ಮರೆ ಮಾಡುವುದಕ್ಕೂ, ಇತ್ತ ಪೊಲೀಸರು ಪೋಷಕರಿಗೆ ಎಚ್ಚರಿಕೆ ನೀಡುವುದಕ್ಕೂ ಸಂಬಂಧ ಏನು ಅನ್ನೋದನ್ನು ನೋಡೋಣ ಬನ್ನಿ.

ಇನ್‌ಸ್ಟಾಗ್ರಾಮ್‌ ಮಾಲೀಕನೇ ಹೀಗೆ ಮಾಡಿದ್ರು ಅಂದರೆ ಒಮ್ಮೆ ಯೋಚಿಸಿ...

ಮಕ್ಕಳ ಮುಖ ಮರೆಮಾಡಿದ ಮಾರ್ಕ್ ಜುಕರ್‌ಬರ್ಗ್: ಫೇಸ್‌ಬುಕ್‌ ಸಿಇಓ ಆಗಿರುವ ಮಾರ್ಕ್ ಜುಕರ್‌ಬರ್ಗ್ ಅವರು ಇತ್ತೀಚಿಗೆ ವಿವಿಧ ವಿಷಯಗಳ ಮೇಲೆ ಭಾರೀ ಚರ್ಚೆಯಲ್ಲಿದ್ದಾರೆ. ಅದರಂತೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದು, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕುಟುಂಬದ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವಾಗ ಮಕ್ಕಳ ಮುಖಗಳನ್ನು ಮರೆಮಾಡುತ್ತಾರೆ.

ಅಂದರೆ ಸಂತೋಷದ ಮುಖದ ಎಮೋಜಿಯನ್ನು ಬಳಸಿಕೊಂಡು ಅವರ ಹೆಣ್ಣುಮಕ್ಕಳಾದ ಮ್ಯಾಕ್ಸಿಮಾ ಮತ್ತು ಆಗಸ್ಟ್‌ನ ಮುಖಗಳನ್ನು ಮರೆಮಾಡಿದ್ದಾರೆ. ಜುಕರ್‌ಬರ್ಗ್ ಮಾತ್ರವಲ್ಲದೆ, ಗಿಗಿ ಹಡಿದ್, ಅಡೆಲೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಗೂ ವಿರಾಟ್ ಕೊಹ್ಲಿ, ಸೋನಮ್ ಕಪೂರ್ ಮತ್ತು ಆಲಿಯಾ ಭಟ್ ಅವರಂತಹ ಭಾರತೀಯ ಸೆಲೆಬ್ರಿಟಿಗಳು ಸಹ ಆನ್‌ಲೈನ್‌ನಲ್ಲಿ ಫೋಟೋ ಪೋಸ್ಟ್ ಮಾಡುವಾಗ ತಮ್ಮ ಮಕ್ಕಳ ಮುಖಗಳನ್ನು ಇದೇ ರೀತಿ ಮರೆಮಾಡುತ್ತಾರೆ.

ಈ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಮುಖವನ್ನು ತೋರಿಸದಿರುವ ನಿರ್ಧಾರವು ಕೇವಲ ಗೌಪ್ಯತೆಯ ಕಾಳಜಿಯಂತೆ ತೋರುತ್ತದೆಯಾದರೂ, ಅಸ್ಸಾಂ ಪೊಲೀಸರ ಇತ್ತೀಚಿನ ಅಭಿಯಾನವು ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡುವುದರ ಬಗ್ಗೆ ಬೆಳಕು ಚೆಲ್ಲುವಂತೆ ಮಾಡಿದೆ. ಅಂದರೆ ಅಸ್ಸಾಂ ಪೊಲೀಸರು ಈ ಸಂಬಂಧ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಿದ್ದು. ಇದರಲ್ಲಿ ಮಕ್ಕಳ ಫೋಟೋ ಶೇರ್‌ ಮಾಡುವ ಪೋಷಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಅಂದರೆ ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳ ಕುರಿತು ಹೆಚ್ಚಿನ ಪೋಸ್ಟ್‌ಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಮಕ್ಕಳ ಡಿಜಿಟಲ್ ಗುರುತುಗಳು ಇದರಲ್ಲಿ ಉಳಿಯಲಿದದ್ದು, ಮುಂದಿನ ಅಪಾಯಗಳಿಂದ ರಕ್ಷಿಸಿ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮಗುವಿನ ಬಗ್ಗೆ ನೀವು ಏನನ್ನು ಹಂಚಿಕೊಳ್ಳುತ್ತೀರಿ ಎಂಬುದರ ಕುರಿತು ಗಮನವಿರಲಿ. '#DontBeASharent; ಎಂದು ಟ್ವೀಟ್‌ ಮಾಡಿದ್ದಾರೆ.

ಪೊಲೀಸರು ಮಾತ್ರವಲ್ಲದೆ ಈ ಹಿಂದೆ, ಜುಕರ್‌ಬರ್ಗ್, ಬಿಲ್ ಗೇಟ್ಸ್ ಮತ್ತು ಸ್ಟೀವ್ ಜಾಬ್ಸ್ ಸೇರಿದಂತೆ ಟೆಕ್ ಸಿಇಒಗಳು ಕೂಡ ತಮ್ಮ ಮಕ್ಕಳ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ 'ನಾನು ಅನುಮತಿಸದ ಕೆಲವು ವಿಷಯಗಳಿವೆ; ನಾನು ಅವುಗಳನ್ನು ಸಾಮಾಜಿಕ ನೆಟ್‌ವರ್ಕ್‌ನಲ್ಲಿ ಬಯಸುವುದಿಲ್ಲ' ಎಂದು ಆಪಲ್ ಸಿಇಒ ಒಮ್ಮೆ ಹೇಳಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

ಇನ್ನು ಸಾಮಾನ್ಯವಾಗಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಎಂದರೇನು ಎಂಬುದೇ ತಿಳಿದಿಲ್ಲ. ಯಾರೊಬ್ಬರ ಅರಿವಿಲ್ಲದೆ ಮತ್ತು ಒಪ್ಪಿಗೆಯಿಲ್ಲದೆ ಅವರ ಫೋಟೋಗಳನ್ನು ಪೋಸ್ಟ್ ಮಾಡುವುದು ಅವರ ಇಚ್ಛೆಗೆ ವಿರುದ್ಧವಾದ ಕೆಲಸವೂ ಹೌದು. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ತಮ್ಮ ಮಗಳು ವಾಮಿಕಾ ವಯಸ್ಕಳಾಗುವವರೆಗೆ ಮತ್ತು ಆನ್‌ಲೈನ್‌ನಲ್ಲಿ ಆಕೆ ಕಂಟೆಂಟ್‌ಗಳನ್ನು ಹಂಚಿಕೊಳ್ಳಲು ಮುಂದಾಗುವವರೆಗೂ ಅವಳ ಫೋಟೋಗಳನ್ನು ತೆಗೆದುಕೊಳ್ಳಬೇಡಿ ಎಂದು ಮಾಧ್ಯಮಗಳಿಗೆ ಮನವಿ ಸಹ ಮಾಡಿದ್ದಾರೆ.

ಇದಕ್ಕೆ ನಿಖರ ಕಾರಣ ಏನು?: ಈ ರೀತಿ ಮಾಡಲು ಸಾಕಷ್ಟು ಕಾರಣಗಳಿಗೆ. ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅನೈತಿಕ ಕೆಲಸಗಳು ಹಾಗೂ ಟೆಕ್ನಾಲಜಿ ದುರ್ಬಳಕೆಗಳು ಮಕ್ಕಳ ಮುಂದಿನ ಭವಿಷ್ಯಕ್ಕೆ ಖಂಡಿತಾ ಪೆಟ್ಟು ನೀಡಲಿವೆ. ಅದರಲ್ಲೂ ಒಮ್ಮೆ ಮಗುವಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರೆ ಅದು ಪೋಷಕರ ನಿಯಂತ್ರಣದಲ್ಲಿ ಇರುವುದಿಲ್ಲ. ಯಾಕೆಂದರೆ ಅದನ್ನು ಯಾರು ಬೇಕಾದರೂ ಶೇರ್‌ ಮಾಡಬಹುದು, ಡೌನ್‌ಲೋಡ್ ಮಾಡಬಹುದು, ಪೋಷಕರು ಉದ್ದೇಶಿಸದ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಬಹುದು.

ಅದೆಲ್ಲಕ್ಕೂ ಮಿಗಿಲಾಗಿ ಆನ್‌ಲೈನ್ ವೇದಿಕೆ ಹಲವಾರು ಕೆಟ್ಟ ಜನರಿಂದಲೇ ಬಳಕೆ ಆಗುತ್ತಿದ್ದು, ಸೈಬರ್ ಅಪರಾಧಿಗಳು ನಕಲಿ ಗುರುತನ್ನು ರಚಿಸಲು ಮಕ್ಕಳ ಫೋಟೋಗಳನ್ನು ಬಳಕೆ ಮಾಡಿಕೊಳ್ಳಬಹುದು. ಅಥವಾ ಈ ಫೋಟೋಗಳ ಮೂಲಕ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಳ್ಳುವುದು ಅಥವಾ ಮಗುವಿನ ಹೆಸರಿನಲ್ಲಿ ಸಾಲವನ್ನು ತೆಗೆದುಕೊಳ್ಳುವುದು ಮುಂತಾದ ವಂಚನೆಯನ್ನು ಮಾಡಲು ಇದನ್ನು ಬಳಕೆ ಮಾಡುತ್ತಾರಂತೆ.

ಅದರಂತೆ ಮಕ್ಕಳ ಫೋಟೋಗಳನ್ನು ಪರಭಕ್ಷಕರು ನೋಡಬಹುದು, ಅವರು ಮಕ್ಕಳನ್ನು ಅಪಹರಣ, ಲೈಂಗಿಕ ನಿಂದನೆ ಅಥವಾ ಇತರ ಅಪರಾಧಗಳಿಗೆ ಗುರಿಯಾಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ನ್ಯೂಯಾರ್ಕ್ ಪೋಸ್ಟ್‌ನ ವರದಿಯಲ್ಲಿ ಉಲ್ಲೇಖ ಮಾಡಿದಂತೆ. ಅನೇಕ ಪೋಷಕರು ತಮ್ಮ ಮಕ್ಕಳ ಫೋಟೋಗಳು ಅಥವಾ ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೋಡಿದ್ದಾರಂತೆ. ಅದರಲ್ಲೂ ಈಜುಕೊಳಗಳಲ್ಲಿ ಮಕ್ಕಳು ಆಡುವ ವಿಡಿಯೋಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯಂತೆ.

ಇನ್‌ಸ್ಟಾಗ್ರಾಮ್‌ ಮಾಲೀಕನೇ ಹೀಗೆ ಮಾಡಿದ್ರು ಅಂದರೆ ಒಮ್ಮೆ ಯೋಚಿಸಿ...

AI ಮತ್ತು ಡೇಟಾ ಮೈನಿಂಗ್: ಇನ್ನುಳಿದಂತೆ AI ಎಂದಿಗೂ ಮುಖಗಳನ್ನು ಮರೆಯುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ. ಎಐ ನಿರಂತರವಾಗಿ ಎಲ್ಲಾ ಮುಖಗಳನ್ನು ಸ್ಕ್ಯಾನ್ ಮಾಡುತ್ತದೆ. ಆದ್ದರಿಂದ ನೀವು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಮಕ್ಕಳ ಫೋಟೋಗಳನ್ನು ಪೋಸ್ಟ್ ಮಾಡಿದರೆ, ಅವರ ಮುಖಗಳು ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಬಹುದು. ನಿಮ್ಮ ಮಕ್ಕಳ ಬಗ್ಗೆ ಡೇಟಾವನ್ನು ಸಂಗ್ರಹಿಸಲು ಕಂಪನಿಗಳು ಫೋಟೋಗಳನ್ನು ಮತ್ತಷ್ಟು ಬಳಕೆ ಮಾಡಿಕೊಳ್ಳಬಹದು. ಅದರಲ್ಲೂ ವೈಯಕ್ತಿಕಗೊಳಿಸಿದ ಜಾಹೀರಾತಿನೊಂದಿಗೆ ಮಕ್ಕಳನ್ನು ಗುರಿಯಾಗಿಸಲು ಅಥವಾ ಇತರ ಕಂಪನಿಗಳಿಗೆ ಅವರ ಡೇಟಾವನ್ನು ಮಾರಾಟ ಮಾಡಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.

Best Mobiles in India

English summary
Mark Zuckerberg has shared a photo of his family on Instagram. But this time they have hide the faces of their children.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+