ಕೇವಲ 2 ಗಂಟೆಗಳಲ್ಲಿ ಅಂಬಾನಿಯ ಅರ್ಧದಷ್ಟು ಆಸ್ತಿ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!!

|

ಕಳೆದ ವಾರವಷ್ಟೆ ವಿಶ್ವದ ಮೂರನೇ ಶ್ರೀಮಂತ ಎಂಬ ಖ್ಯಾತಿಯನ್ನು ಪಡೆದಿದ್ದ ಫೇಸ್‌ಬುಕ್ ಮಾಲಿಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಇಂದು ಇಡೀ ವಿಶ್ವವೇ ಶಾಕ್ ನೀಡಿದೆ.! ಈ ವರ್ಷದ ಎರಡನೇ ತ್ರೈಮಾಸಿಕದ ವರದಿ ಬಿಡುಗಡೆ ಮಾಡಿದ ಕೇವಲ ಎರಡು ಗಂಟೆಗಳಲ್ಲಿ ಒಂದು ಲಕ್ಷದ ಹದಿನಾರು ಸಾವಿರ ಕೋಟಿಯಷ್ಟು ಹಣವನ್ನು ಷೇರುಪೇಟೆಯಲ್ಲಿ ಕಳೆದುಕೊಂಡಿದ್ದಾರೆ.

ಹೌದು, ಇಂತಹದೊಂದು ಶಾಕಿಂಗ್ ನ್ಯೂಸ್ ಈಗಷ್ಟೇ ಹೊರಬಿದ್ದಿದ್ದು, ನ್ಯೂಯಾರ್ಕ್​ ಷೇರು ಮಾರುಕಟ್ಟೆಯಲ್ಲಿ ವಿಶ್ವದ ನಂ.1 ಜಾಲತಾಣ ಫೇಸ್​ಬುಕ್​ ಷೇರುಗಳ ಬೆಲೆಯಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಫೇಸ್‌ಬುಕ್ ಕೇವಲ ಎರಡು ಗಂಟೆಗಳಲ್ಲಿ 16.8 ಬಿಲಿಯನ್ ಡಾಲರ್‌ಗಳಷ್ಟು (ಸುಮಾರು 11,67,64,50,00,000 ರೂ.) ನಷ್ಟವನ್ನು ಅನುಭವಿಸಿದೆ ಎಂದು ತಿಳಿದುಬಂದಿದೆ.

ಕೇವಲ 2 ಗಂಟೆಗಳಲ್ಲಿ ಅಂಬಾನಿಯ ಅರ್ಧದಷ್ಟು ಆಸ್ತಿ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!!

ಫೇಸ್‌ಬುಕ್ ಕಂಪೆನಿಯ ಎರಡನೇ ತ್ರೈಮಾಸಿಕದ ವರದಿ ಬಿಡುಗಡೆ ಮಾಡಿದ ನಂತರ ಕಂಪನಿ ಷೇರುಗಳು ಶೇ.20 ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ. ಎರಡನೇ ತ್ರೈಮಾಸಿಕ ವರದಿಯಲ್ಲಿ ಫೇಸ್‌ಬುಕ್ ಕಂಪನಿಯ ಲಾಭಾಂಶದಲ್ಲಿ ಇಳಿಕೆಯಾಗಿದ್ದುದರಿಂದ ಷೇರುರಾರರು ಪೇಸ್‌ಬುಕ್ ಬಿಟ್ಟು ಹೊರನಡೆಯಲು ಇಚ್ಚಿಸಿದ್ದಾರೆ ಎಂದು ಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಬಳಕೆದಾರರ ವೈಯಕ್ತಿಕ ಮಾಹಿತಿ ಪ್ರಕರಣದ ನಂತರವೂ ಲಾಭದಲ್ಲಿಯೇ ಮುಂದುವರೆದಿದ್ದ ಫೇಸ್‌ಬುಕ್, ಜಾಹೀರಾತು ನೀತಿಯಲ್ಲಿ ಬದಲಾವಣೆ ಮಾಡಿದ್ದರಿಂದ ನಷ್ಟದ ಪರಿಣಾಮ ಬೀರಿದೆ. ಅನಾಲಿಟಿಕ ಪ್ರಕರಣದ ನಂತರ ಫೇಸ್​ಬುಕ್​ ಕಂಟೆಂಟ್​ ಪಾಲಿಸಿ, ನ್ಯೂಸ್‌ಫೀಡ್ ಸೇರಿ ಹಲವು ಬದಲಾವಣೆಗಳನ್ನು ತಂದಿದ್ದರಿಂದ ಫೇಸ್‌ಬುಕ್ ಈ ಪರಿಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ.

ಕೇವಲ 2 ಗಂಟೆಗಳಲ್ಲಿ ಅಂಬಾನಿಯ ಅರ್ಧದಷ್ಟು ಆಸ್ತಿ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!!

ಇನ್ನು ಫೇಸ್​ಬುಕ್​ ಷೇರುಗಳ ಬೆಲೆ ಕುಸಿತದ ನಂತರ ವಿಶ್ವದ ಶ್ರೀಮಂತರ ಲಿಸ್ಟ್​ನಲ್ಲಿಯೂ ಕೂಡ ಮಾರ್ಕ್ ಜೂಕರ್​ಬರ್ಗ್ ಕೆಳಗಿಳಿದಿದ್ದಾರೆ.​ ಪ್ರಖ್ಯಾತ ಬ್ಲೂಮ್​ ಬರ್ಗ್​ ಬಿಲೇನಿಯರ್​ ಇಂಡೆಕ್ಸ್​ನಲ್ಲಿ ಕಳೆದ ಎರಡು ವಾರದಿಂದ ಮೂರನೇ ಸ್ಥಾನದಿಂದಲ್ಲಿದ್ದ ಮಾರ್ಕ್, ಈಗ 70 ಬಿಲಿಯನ್​ ಡಾಲರ್​​ನಿಂದ ಕೆಳಗಿಳಿದು ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಓದಿರಿ: ಒಂದು ಇನ್​ಸ್ಟಾಗ್ರಾಮ್ ಪೋಸ್ಟ್‌ಗೆ 'ವಿರಾಟ್ ಕೊಹ್ಲಿ' ಪಡೆಯುವ ಹಣ ಕೇಳಿ ತಲೆತಿರುಗಿ ಬೀಳ್ತೀರಾ!!

Best Mobiles in India

English summary
Mark Zuckerberg is counting the cost of user disenchantment with Facebook Inc.to knoe more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X