TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವಿಶ್ವ ಕ್ರಿಕೆಟ್‌ನಲ್ಲಿ ಪ್ರಜ್ವಲಿಸುತ್ತಿರುವ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣಗಳಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಟ್ಯಂತರ ರೂ. ಹಣಗಳಿಸುತ್ತಿರುವ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದಲೂ ಕೋಟಿ ಕೋಟಿ ಹಣಗಳಿಸುತ್ತಿದ್ದಾರೆ.
ಹೌದು, ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್ ಮೂಲಕ ಹಣ ಗಳಿಸುತ್ತಿರುವ ವಿಶ್ವದ ಟಾಪ್ 20 ತಾರೆಯರಲ್ಲಿ ಸ್ಥಾನ ಪಡೆಸಿರುವ ಕೊಹ್ಲಿ ಅವರು ಅವರು ವಿಶ್ವದಲ್ಲಿ 17ನೇ ಸ್ಥಾನ ಪಡೆದಿದ್ದರೆ, ಕ್ರೀಡಾಪಟುಗಳ ಪೈಕಿ 9ನೇ ಸ್ಥಾನ ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಮತ್ತು ಏಷ್ಯಾದ ಏಕೈಕ ಸೆಲೆಬ್ರಿಟಿಯಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 2.32 ಕೋಟಿ ಹಿಂಬಾಲಕರನ್ನು ಹೊಂದಿರುವ ಕೊಹ್ಲಿ, ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ 82.47 ಲಕ್ಷ ರೂ. (1.20 ಲಕ್ಷ ಡಾಲರ್) ಪಡೆಯುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ. ಹಾಗಾದರೆ, ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಹೆಚ್ಚು ಹಣ ಗಳಿಸುತ್ತಿರುವ ಟಾಪ್ 10 ತಾರೆಗಳು ಯಾರಿದ್ದಾರೆ ಎಂಬುದನ್ನು ಮುಂದೆ ನೋಡಿ.
ಪ್ರಾಯೋಜಿತ ಪೋಸ್ಟ್ಗಳಿಗಷ್ಟೇ ಅನ್ವಯ!
ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ಂದ ಎಲ್ಲ ಪೋಸ್ಟ್ಗಳಿಗೂ ಹಣ ಸಂಪಾದಿಸುವುದಿಲ್ಲ. ಇದು ಪ್ರಾಯೋಜಿತ ಪೋಸ್ಟ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವ ಉತ್ಪನ್ನ ಅಥವಾ ಬ್ರಾಂಡ್ ಬಗ್ಗೆ ಪೋಸ್ಟ್ ಮಾಡುತ್ತಾರೋ ಆ ಕಂಪನಿಯಿಂದ ಸೆಲೆಬ್ರಿಟಿಗೆ ಹಣ ಸಂದಾಯವಾಗುತ್ತದೆ. ಇದೊಂದು ಆಧುನಿಕ ಮಾರ್ಕೆಟಿಂಗ್ ಆಗಿದೆ.
ಟಾಪ್ 10: ಕೆಂಡಾಲ್ ಜೆನ್ನರ್
ಅಮೆರಿಕಾದ ರಿಯಾಲಿಟಿ ಟಿವಿ ತಾರೆ ಕೆಂಡಾಲ್ ಜೆನ್ನರ್ ಅವರು ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಇವರು ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 3.4 ಕೋಟಿ ( 5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 9: ಲಿಯೋನೆಲ್ ಮೆಸ್ಸಿ
ಅರ್ಜೆಂಟಿನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಇವರು ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 3.4 ಕೋಟಿ ( 5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 8: ನೇಮರ್
ಬ್ರೆಜಿಲ್‌ನ ಫುಟ್‌ಬಾಲ್ ತಾರೆ ನೇಮರ್ ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ. ಇವರು ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 4.1 ಕೋಟಿ ( 6 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 7: ಜಸ್ಟಿನ್ ಬೈಬರ್
ವಿಶ್ವದಾಧ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕೆನಡಿಯನ್ ಸಿಂಗರ್ 'ಜಸ್ಟಿನ್ ಬೈಬರ್' ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.3 ಕೋಟಿ ( 6.3 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 6: ಡ್ವೇಯ್ನ್ ಜಾನ್ಸನ್ | 'ದಿ ರಾಕ್'
'ದಿ ರಾಕ್" ಹೆಸರಿನ ಮೂಲಕ WWE ತಾರೆಯಾಗಿ ಮಿಂಚಿ, ಫಾಸ್ಟ್ ಅಂಡ್ ಫ್ಯೂರಿಯಸ್‌ನಲ್ಲಿ ವಿಶ್ವವದ ಮನೆಮಾತದ ಡ್ವೇಯ್ನ್ ಜಾನ್ಸನ್ 'ದಿ ರಾಕ್" ಅವರು ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.4 ಕೋಟಿ ( 6.5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 5: ಬೆಯಾನ್ಸ್ ನೋಲ್ಸ್
ಅಮೆರಿಕಾದ ಸಿಂಗರ್ ಮತ್ತು ಸಾಂಗ್ ರೈಟರ್ ಆಗಿರುವ ಬೆಯಾನ್ಸ್ ನೋಲ್ಸ್ ಅವರು ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.8 ಕೋಟಿ ( 7 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 4: ಕಿಮ್ ಕರ್ದಾಶಿಯನ್
ಅಮೆರಿಕಾದ ಟಿವಿ ಲೋಕದ ತಾರೆ ಎಂದೇ ಹೆಸರಾಗಿರುವ ಕಿಮ್ ಕರ್ದಾಶಿಯನ್ ಅವರು ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 4.9 ಕೋಟಿ ( 7.2 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 3: ಕ್ರಿಶ್ಚಿಯಾನೊ ರೊನಾಲ್ಡೊ
ಕ್ರೀಡಾಪಟುಗಳ ಪೈಕಿ ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ 3ನೇ ಸ್ಥಾನದಲ್ಲಿರುವ ರೊನಾಲ್ಡೊ ಒಂದು ಪೋಸ್ಟ್‌ಗೆ ಅಂದಾಜು 5 ಕೋಟಿ ( 7.5 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ.
ಟಾಪ್ 2: ಸೆಲೆನಾ ಗೊಮೆಜ್
ಅಮೆರಿಕಾದ ಸಂಗೀತಗಾರ್ತಿ ಸೆಲೆನಾ ಗೊಮೆಜ್ ಅವರು ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಪೋಸ್ಟ್‌ಗೆ 5.5 ಕೋಟಿ (8 ಲಕ್ಷ ಡಾಲರ್) ಹಣವನ್ನು ಪಡೆಯುತ್ತಾರೆ
ಟಾಪ್ 1 : ಕೈಲಿ ಜೆನ್ನರ್
ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್‌ಗಳಿಂದ ಗಳಿಕೆಯಲ್ಲಿ ಅಮೆರಿಕದ ರೂಪದರ್ಶಿ ಕೈಲಿ ಜೆನ್ನರ್ ಅಗ್ರಸ್ಥಾನದಲ್ಲಿದ್ದಾರೆ. 11 ಕೋಟಿ ಹಿಂಬಾಲಕರನ್ನು ಹೊಂದಿರುವ ಅವರು, ಪ್ರತಿ ಪೋಸ್ಟ್‌ಗೆ 6.87 ಕೋಟಿ ರೂ. (10 ಲಕ್ಷ ಡಾಲರ್) ಪಡೆಯುತ್ತಾರೆ.