80 ವರ್ಷದ ಹಿಂದೆಯೇ ಸ್ಮಾರ್ಟ್‌ಫೋನ್ ಇತ್ತೇ? ಈ ವರ್ಣಚಿತ್ರದಲ್ಲಿ ಅಡಗಿರುವ ರಹಸ್ಯವಾದರೂ ಏನು?

Written By:

21ನೇ ಶತಮಾನದ ಅತೀ ದೊಡ್ಡ ಮತ್ತು ಪ್ರಮುಖ ಆವಿಷ್ಕಾರಗಳಲ್ಲಿ ಒಂದಾದ ಸ್ಮಾರ್ಟ್‌ಫೋನ್ ಇಂದು ನಮ್ಮ ದಿನನಿತ್ಯದ ಅವಶ್ಯಕತೆಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್‌ ಇಲ್ಲದೇ ಕ್ಷಣವೂ ಇರಲಾಗದ ಅನೇಕ ಮಂದಿ ಇಂದು ನಮ್ಮೊಂದಿಗಿದ್ದಾರೆ.

80 ವರ್ಷದ ಹಿಂದೆಯೇ ಸ್ಮಾರ್ಟ್‌ಫೋನ್ ಇತ್ತೇ..?

ಓದಿರಿ: ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್ ಸೆಪ್ಟೆಂಬರ್ 5ಕ್ಕೆ ಲಾಂಚ್.!

ಆದರೆ ಅಮೆರಿಕಾದಲ್ಲಿ ದೊರೆತಿರುವ 80 ವರ್ಷದ ಹಿಂದಿನ ಕಲಾಕೃತಿಯಲ್ಲಿಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿಯನ್ನು ಕಾಣಬಹುದಾಗಿದೆ. ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಅನ್ನು ನಾವು ಯಾವ ಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಅದೇ ಮಾದರಿಯಲ್ಲಿ ಕಲಾಕೃತಿಯಲ್ಲಿರುವ ವ್ಯಕ್ತಿಯೊಬ್ಬ ವಸ್ತುವೊಂದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಆ ವರ್ಣ ಚಿತ್ರ ಯಾವುದು ಎಂಬ ವಿಷಯವನ್ನು ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
‘ಮಿಸ್ಟರ್‌ ಪಿಂಚನ್‌ ಅಂಡ್‌ ದಿ ಸೆಟ್ಲಿಂಗ್‌ ಆಫ್‌ ಸ್ಪ್ರಿಂಗ್‌ಫೀಲ್ಡ್‌ ' ವರ್ಣಚಿತ್ರ:

‘ಮಿಸ್ಟರ್‌ ಪಿಂಚನ್‌ ಅಂಡ್‌ ದಿ ಸೆಟ್ಲಿಂಗ್‌ ಆಫ್‌ ಸ್ಪ್ರಿಂಗ್‌ಫೀಲ್ಡ್‌ ' ವರ್ಣಚಿತ್ರ:

ಸದ್ಯ ಹೆಚ್ಚಿನ ಚರ್ಚೆಗೆ ಕಾರಣವಾಗಿರುವುದು ‘ಮಿಸ್ಟರ್‌ ಪಿಂಚನ್‌ ಅಂಡ್‌ ದಿ ಸೆಟ್ಲಿಂಗ್‌ ಆಫ್‌ ಸ್ಪ್ರಿಂಗ್‌ಫೀಲ್ಡ್‌ ' ಎಂಬ ವರ್ಣ ಚಿತ್ರ. ಇದನ್ನು ರಚಿಸಿರುವವರು ಅಮೆರಿಕದ ಅಂಬರ್ಟೊ ರೊಮ್ಯಾನೊ ಎಂಬ ಹೆಸರಾಂತ ಚಿತ್ರಕಾರ. ಈ ಚಿತ್ರದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಪೋನ್ ಹಿಡಿದುಕೊಂಡು ಕುಳಿತ್ತಿದ್ದಾನೆ. ಹಾಗಾಗಿ ಇದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಕಲ್ಪನೆಯೇ.? ಇಲ್ಲವೇ ಬಳಕೆಯಲ್ಲಿತ್ತೇ..?

ಕಲ್ಪನೆಯೇ.? ಇಲ್ಲವೇ ಬಳಕೆಯಲ್ಲಿತ್ತೇ..?

80 ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ನ ಕಲ್ಪನೆ ಇತ್ತೇ? ಅಥಾವ ಭವಿಷ್ಯದಲ್ಲಿ ಮಾನವ ಇಂತಹ ಉಪಕರಣ ಬಳಸಬಹುದೆಂದಯ ಎಂಬುದನ್ನು ಕಲಾವಿದ ಚಿಂತಿಸಿದ್ದನೇ, ಇಲ್ಲವೇ ಅಂದೇ ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಯಾವುದಾದರೂ ವಸ್ತು ಬಳಕೆಯಲ್ಲಿತ್ತೇ? ಎಂಬ ಅನೇಕ ಪ್ರಶ್ನೆಗಳು ಮೂಡಿದೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಸೆಲ್ಫಿ ತೆಗೆದುಕೊಳ್ಳುವ ಮಾದರಿಯಲ್ಲಿದೆ:

ಸೆಲ್ಫಿ ತೆಗೆದುಕೊಳ್ಳುವ ಮಾದರಿಯಲ್ಲಿದೆ:

ಈ ಚಿತ್ರದಲ್ಲಿ ವ್ಯಕ್ತಿಯೂ ಕೈನಲ್ಲಿ ಹಿಡಿದುಕೊಂಡಿರುವ ವಸ್ತು ಮೊಬೈಲ್ ನಂತೆ ಕಾಣುವುದಲ್ಲದೇ ಇಂದಿನ ದಿನದಲ್ಲಿ ಹೆಚ್ಚಾಗಿರುವ ಸೆಲ್ಫಿ ಕ್ರೇಜ್ ನಂತೆ ತನ್ನ ಮುಖ ವನ್ನು ತಾನೇ ನೋಡಿಕೊಳ್ಳುವ ಮಾದರಿಯಲ್ಲಿ ಕಾಣಿಸುತ್ತಿದೆ. ಹಾಗಾಗಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
An 80-year-old painting has taken the internet by storm by appearing to show a Native American man using an Phone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot