ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್ ಸೆಪ್ಟೆಂಬರ್ 5ಕ್ಕೆ ಲಾಂಚ್.!

Written By:

ದಿನೇ ದಿನೇ ಚೀನಾ ಮೂಲದ ಶಿಯೋಮಿ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಬಜೆಟ್ ಫೋನ್ ಮಾದರಿಯಲ್ಲಿ ಜೊತೆಗೆ ಟಾಪ್ ಎಂಡ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್ ಸೆಪ್ಟೆಂಬರ್ 5ಕ್ಕೆ ಲಾಂಚ್.!

ಓದಿರಿ: ಆಂಡ್ರಾಯ್ಡ್ ಓರಿಯೋದಲ್ಲಿ ಬದಲಾದ ಎಮೋಜಿಗಳು ಹೇಗಿರಲಿದೆ..?

ಈಗಾಗಲೇ ತಿಳಿದಿರುವಂತೆ ಮಿ 5X ಸೆಪ್ಟೆಂಬರ್ 05 ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಟ್ವೀಟರ್ ಮೂಲಕ ಈ ವಿಷಯವನ್ನು ಶಿಯೋಮಿಯೇ ತಿಳಿಸಿದೆ. ಅದುವೇ ಡ್ಯುಯಲ್ ಕ್ಯಾಮೆರಾ ಫೋನ್ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ಡ್ಯುಯಲ್ ಕ್ಯಾಮೆರಾ ಫೋನ್:

ಮೊದಲ ಡ್ಯುಯಲ್ ಕ್ಯಾಮೆರಾ ಫೋನ್:

ಶಿಯೋಮಿ ಇದೇ ಮೊದಲ ಭಾರಿಗೆ ಭಾರತದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್‌ಪೋನ್ ಅನ್ನು ಬಿಡುಗಡೆ ಮಾಡಲಿದೆ. ಇಷ್ಟು ದಿನ ಬಜೆಟ್ ಫೋನ್‌ಗಳನ್ನು ಬಿಡುಗಡೆ ಮಾಡಿ ಜನಪ್ರಿಯತೆಯನ್ನು ಗಳಿಸಿತ್ತು, ಈಗ ಟಾಪ್ ಎಂಡ್ ಕಡಗೆ ಮುಖ ಮಾಡಿದೆ.

ನೂತನ ಆಂಡ್ರಾಯ್ಡ್:

ನೂತನ ಆಂಡ್ರಾಯ್ಡ್:

ಇದಲ್ಲದೇ ನೂತನ ಆಂಡ್ರಾಯ್ಡ್ ನಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದ್ದು, ಅಲ್ಲದೇ ಮುಂದಿನ ಆವೃತ್ತಿಯ ಆಪ್‌ಡೇಟ್ ಅನ್ನು ಪಡೆದುಕೊಳ್ಳಲಿದೆ. ಇದರೊಂದಿಗೆ MIUI 9 ಸಹ ಇದರಲಿದ್ದು, ಗ್ರಾಹಕರಿಗೆ ಡಬ್ಬಲ್ ಲಾಭವಾಗಲಿದೆ.

12+12 ಕ್ಯಾಮೆರಾ ಇದರಲ್ಲಿ:

12+12 ಕ್ಯಾಮೆರಾ ಇದರಲ್ಲಿ:

ಈ ಫೋನಿನ ಹಿಂಭಾಗದಲ್ಲಿ 12+12 ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಲ್ಲಿ ಒಂದು ವೈಡ್ ಆಂಗಲ್ ಮತ್ತು ಜೂಮ್ ಆಂಗಲ್ ಲೈನ್ಸ್ ಗಳನ್ನು ಅಳವಡಿಸಲಾಗಿದೆ. 10X ಆಪ್ಟಿಕಲ್ ಜೂಮ್( ಐಪೋನ್ 7 ಪ್ಲಸ್ ಮಾದರಿ) ಇರಲಿದೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಇನ್ನೇನು ವಿಶೇಷತೆಗಳಿರಲಿದೆ:

ಇನ್ನೇನು ವಿಶೇಷತೆಗಳಿರಲಿದೆ:

5.5 ಇಂಚಿನ ಡಿಸ್‌ಪ್ಲೇ, 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದಲ್ಲದೇ 3,080mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi is gearing to launch a mystery dual camera phone in India on September 5. . to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot