ವಿಶ್ವದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ದೇಹ ಶಸ್ತ್ರಚಿಕಿತ್ಸೆ
ಒಬ್ಬರ ತಲೆಯನ್ನು ಇನ್ನೊಬ್ಬರ ದೇಹಕ್ಕೆ ಕೂರಿಸುವ ಅಭೂತಪೂರ್ವ ಸಾಧನೆಯ ಕುರಿತು ನೀವು ಕೇಳಿದ್ದೀರಾ? ಆದರೆ ಇಟಲಿಯ ನರಶಸ್ತ್ರಚಿಕಿತ್ಸಕ ಸರ್ಜಿಯಾ ಕ್ಯಾನ್‌ವಾರೊ ವಿಶ್ವದಲ್ಲೇ ಈ ರೀತಿಯ ಸುದ್ದಿಯನ್ನು ಸ್ವತಃ ಪ್ರಕಟಪಡಿಸಿದ್ದು ಆದಷ್ಟು ಬೇಗನೇ ಇನ್ನೊಬ್ಬ ವ್ಯಕ್ತಿಯ ದೇಹಕ್ಕೆ ಮತ್ತೊಬ್ಬನ ತಲೆಯನ್ನು ಹೊಲಿಯುವ ಶಸ್ತ್ರಕ್ರಿಯೆಯನ್ನು ಮಾಡಲಿದ್ದಾರಂತೆ.
ಓದಿರಿ: ಉತ್ತರವೇ ದೊರಕದೇ ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು
ಬರಿಯ ತಲೆ ಮಾತ್ರವಲ್ಲದೆ ಸಂಪೂರ್ಣ ದೇಹವನ್ನು ಕಸಿ ಮಾಡುವ ಅಭೂತಪೂರ್ವ ಪ್ರಯತ್ನಕ್ಕೆ ಸರ್ಜಿಯಾ ಮುಂದಾಗಲಿದ್ದಾರೆ. ಚೀನಾದ ಮೂಳೆ ಶಾಸ್ತ್ರಜ್ಞ ಕ್ಸಯೋಪಿಂಗ್ ರನ್ ಈ ಕ್ರಿಯೆಯನ್ನು ನಡೆಸಲು ತಂಡವನ್ನು ರಚಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಈ ವಿಚಾರವನ್ನು ಈ ಹಿಂದೆಯೇ ಬಹಳಷ್ಟು ವಿಜ್ಞಾನಿಗಳು ಅನ್ವೇಷಿಸಿದ್ದು ಪ್ರಾಣಾಂತಿಕ ಕಾಯಿಲೆಗಳಿಂದ ಮನುಷ್ಯರನ್ನು ಈ ಮೂಲಕ ಸಂರಕ್ಷಿಸುವ ಇರಾದೆ ಇದರ ಹಿಂದಿದೆ.
ಆದರೆ ಈ ಕಸಿಯನ್ನು ನಡೆಸಲು ಕೆಲವೊಂದು ಅಡೆತಡೆಗಳಿದ್ದು ಅದನ್ನು ದಾಟಿ ವಿಜ್ಞಾನಿಗಳು ಈ ಶಸ್ತ್ರಕ್ರಿಯೆಯನ್ನು ನಡೆಸಬೇಕಾಗಿದೆ. ಅಡ್ಡಿ ಆತಂಕಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

#1
ಯಾವುದೇ ಕಸಿಯಲ್ಲಿ, ದಾನಿಯ ದೇಹಭಾಗವನ್ನು (ದಾನಿಯ ಶರೀರದಿಂದ ತೆಗೆದುಕೊಂಡಿದೆ ಎಂಬುದಾಗಿ ಹೇಳಲಾದ) ಸ್ವೀಕರಿಸುವವರ ದೇಹಭಾಗಕ್ಕೆ ಇರಿಸುವವರೆಗೆ ಜೀವಂತವಾಗಿಡಬಹುದಾಗಿದೆ.

#2
ದೇಹದಿಂದ ಅಂಗವನ್ನು ತೆಗೆದೊಡನೆಯೇ, ಇದು ಸಾಯಲು ಆರಂಭವಾಗುತ್ತದೆ.

#3
ಹೃದಯ ಅಥವಾ ಕಿಡ್ನಿ ಕಸಿ, ಸಾಧ್ಯವಾದಷ್ಟು ದೀರ್ಘಸಮಯದವರೆಗೆ ಜೀವಿಸಬಲ್ಲ ಸಮಯದವರೆಗೆ ತಂಪಾಗಿರಿಸಲು ವೈದ್ಯರು ಪ್ರಯತ್ನಪಡುತ್ತಾರೆ. ಅಂಗವನ್ನು ತಂಪಾಗಿರಿಸುವುದು ಜೀವಿಸಲು ಅಗತ್ಯವಾಗಿರುವ ಅದರ ಕೋಶಗಳ ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

#4
ವೈದ್ಯರುಗಳು ಅಂಗಕ್ಕೆ ತಂಪಾದ ಉಪ್ಪು ನೀರಿನಿಂದ ಸ್ನಾನ ಮಾಡಿಸುವ ಮೂಲಕ ಇದನ್ನು ಸಾಧ್ಯವಾಗಿಸುತ್ತಾರೆ. ಈ ಕ್ರಿಯೆಯು ಕಿಡ್ನಿಯನ್ನು 48 ಗಂಟೆಗಳ ಕಾಲ, ಯಕೃತ್ತನ್ನು 24 ಗಂಟೆ, ಮತ್ತು ಹೃದಯವನ್ನು 10 ಗಂಟೆ ಸಂರಕ್ಷಿಸುತ್ತದೆ.

#5
ಆದರೆ ತಲೆಯ ಭಾಗವು ಹೆಚ್ಚು ಕಷ್ಟಕರ ಎಂದೆನಿಸಿದ್ದು, ತಲೆಯನ್ನು ಪ್ರತ್ಯೇಕ ಭಾಗವೆಂದು ಪರಿಗಣಿಸಲಾಗಿದೆ. ಇದು ಹೆಚ್ಚು ಭಾರ ಮತ್ತು ದೇಹದ ಹೆಚ್ಚು ಕ್ಲಿಷ್ಟಕರ ಭಾಗ ಎಂದೆನಿಸಿದೆ.

#6
ಹಲವಾರು ಸಂಶೋಧನೆಗಳಿಂದ ತಿಳಿಪಟ್ಟಿರುವುದು ಏನೆಂದರೆ ತಲೆಕಡಿಯುವಿಕೆ ಸಂದರ್ಭದಲ್ಲಿ ತಲೆಯಲ್ಲಿರುವ ರಕ್ತದೊತ್ತಡವು ನಾಟಕೀಯವಾಗಿ ಕೆಳಗಿಳಿಯುತ್ತದೆ. ತಾಜಾ ರಕ್ತ ಮತ್ತು ಆಮ್ಲಜನಕದ ನಷ್ಟವು ಮೆದುಳನ್ನು ಕೋಮಾಕ್ಕೆ ತಳ್ಳುತ್ತದೆ, ನಂತರ ಸಾವು ಉಂಟಾಗುತ್ತದೆ.

#7
ದೇಹವು ಹೊಸ ಅಂಗವನ್ನು ಸ್ವೀಕರಿಸುವ ಸಂದರ್ಭದಲ್ಲಿ ಆ ಅಂಗದ ರೋಗ ನಿರೋಧಕ ಶಕ್ತಿ ಕುಗ್ಗಿರುತ್ತದೆ. ಇದರಿಂದಾಗಿ ತಲೆಯ ಕಸಿಯಲ್ಲಿ ವ್ಯತ್ಯಯವುಂಟಾಗುತ್ತದೆ.

#8
ನರಶಾಸ್ತ್ರಜ್ಞ ರಾಬರ್ಟ್ ವೈಟ್ ಮಂಗನ ತಲೆಯನ್ನು ಇನ್ನೊಂದು ಮಂಗನ ದೇಹಕ್ಕೆ ಕಸಿಮಾಡುವ ಪ್ರಕ್ರಿಯೆಯನ್ನು 1970 ರಲ್ಲಿ ಕೈಗೊಂಡಿದ್ದರು. ಮಂಗನ ದೇಹವನ್ನು ಈ ಸಮಯದಲ್ಲಿ ಅವರು 59 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಇರಿಸಿದ್ದರು. ತಲೆಯು ರೋಗನಿರೋಧಕ ಶಕ್ತಿಯನ್ನು ಎಂಟು ದಿನಗಳಲ್ಲಿ ನಿರಾಕರಿಸಿದ್ದರಿಂದ, ಮಂಗನು ಸತ್ತಿತು.

#9
ಅಂದರೆ ಮಾನವನ ತಲೆಯ ಕಸಿಯಲ್ಲಿ ಗಂಟೆಯೊಳಗೆ ಇದನ್ನು ಮಾಡಬೇಕು. ಎರಡೂ ದೇಹಗಳಲ್ಲಿ ತಲೆಯನ್ನು ಒಂದೇ ಸಮಯದಲ್ಲಿ ತೆಗೆಯಬೇಕು. ಗಂಟೆಯೊಳಗೆ ಎಲ್ಲಾ ಕೆಲಸವನ್ನು ಕರಾರುವಕ್ಕಾಗಿ ಮಾಡಬೇಕಾಗುತ್ತದೆ.

#10
ಪ್ರಾಣಿಗಳ ಮೇಲೆ ಈ ಪ್ರಯೋಗವನ್ನು ನಡೆಸಿದ ನಂತರವೇ ಮಾನವರ ಮೇಲೆ ತಲೆಯ ಕಸಿಯನ್ನು ನಡೆಸಬೇಕಾಗುತ್ತದೆ. ಆದರೆ ಪ್ರಾಣಿಗಳ ಮೇಲೆ ನಡೆಸುವ ಈ ಪ್ರಯೋಗವು ಘೋರವಾಗಿರುತ್ತದೆ. ಅದಾಗ್ಯೂ ಮಾನವರ ತಲೆಯನ್ನು ಇನ್ನೊಂದು ದೇಹಕ್ಕೆ ಕೂರಿಸುವ ಪ್ರಯೋಗ ಯಶಸ್ವಿಯಾದಲ್ಲಿ ಹೆಚ್ಚಿನ ಪ್ರಾಣಾಂತಿಕ ರೋಗಗಳನ್ನು ಹತ್ತಿಕ್ಕಬಹುದಾಗಿದೆ.


Click it and Unblock the Notifications








