ಉತ್ತರವೇ ದೊರಕದೇ ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು

By Shwetha
|

ವಿಶ್ವದಲ್ಲಿರುವ ಕುತೂಹಲಕಾರಿ ರಹಸ್ಯಗಳನ್ನು ಬಹಿರಂಗಗೊಳಿಸಿದಷ್ಟೂ ಅದು ಮತ್ತಷ್ಟು ಕುತೂಹಲಗಳನ್ನು ನಮ್ಮ ಮುಂದೆ ತೆರೆದಿಡಲಿದೆ. ಜಗತ್ತಿನಲ್ಲಿರುವ ಈ ವಿಸ್ಮಯಗಳ ಪಟ್ಟಿಯನ್ನು ನಾವು ಅನ್ವೇಷಿಸಿದಷ್ಟೂ ಇದು ನಮ್ಮನ್ನು ಮತ್ತಷ್ಟು ರಹಸ್ಯಮಯವಾದ ಲೋಕಕ್ಕೆ ಕೊಂಡೊಯ್ಯುತ್ತದೆ. ಇಂದಿನ ಲೇಖನದಲ್ಲಿ ಕೂಡ ಇಂತಹುದೇ ರಹಸ್ಯಮಯ ವಿಷಯಗಳ ಪಟ್ಟಿಯನ್ನು ನಾವು ನಿಮ್ಮೆದುರಿಗೆ ಇರಿಸುತ್ತಿದ್ದು ನೀವು ಈ ದಿಗ್ಮೂಢತೆಗಳಿಗೆ ಬೆರಗಾಗುವುದು ಖಂಡಿತ.

ಚಿತ್ರಕೃಪೆ:www.emlii.com

ಓದಿರಿ: ಮಗುವಿನ ಮೇಲೆ ಎರಗಿದ ಸಿಂಹ ಮುಂದೇನಾಯಿತು? ವೀಡಿಯೊ ವೈರಲ್

1

1

ನ್ಯೂ ಮೆಕ್ಸಿಕೊದಲ್ಲಿರುವ ತಾವೊಸ್ ನಗರ, ವಿಚಿತ್ರವಾದ ಶಬ್ಧವೊಂದು ಬರುತ್ತಿದ್ದು ಅದು ಜನರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ. ಇದರಿಂದ ತಲೆನೋವು, ವಾಕರಿಕೆ, ನಿದ್ರಾಭಂಗ ಹೀಗೆ ದೈಹಿಕ ಕಾಯಿಲೆಗಳು ಉಂಟಾಗುತ್ತಿವೆ. ಈ ಶಬ್ಧ ಹೇಗೆ ಉಂಟಾಗುತ್ತಿದೆ ಎಂಬುದು ಇಲ್ಲಿನ ಜನರಿಗೆ ಗೊತ್ತಿಲ್ಲ.

2

2

ಈ ಹಸ್ತಪ್ರತಿಯನ್ನು ಬರೆದಿರುವ ಭಾಷೆಯನ್ನು ಪತ್ತೆಹಚ್ಚಲು ಕಷ್ಟಕರವಾಗಿದ್ದು 15 ನೇ ಶತಮಾನದ ಬರವಣಿಗೆ ಇದಾಗಿರಬಹುದೇ ಎಂಬ ಅನುಮಾನ ಉಂಟಾಗುತ್ತಿದೆ. ಈ ಪುಸ್ತಕದ ಕೆಲವೊಂದು ಪುಟಗಳು ಕಣ್ಮರೆಯಾಗಿದ್ದು 240 ಹಾಗೆಯೇ ಇದೆ.

3

3

ಜಾಕ್ ದ ರಿಪ್ಪರ್ ಎಂಬ ಹೆಸರಿನ ವ್ಯಕ್ತಿ ಹೆಚ್ಚಿನ ಸಿನಿಮಾ, ಚಿತ್ರಕಲೆಗಳಲ್ಲಿ ಬರುವ ಪಾತ್ರವಾಗಿದ್ದು ಸೀರಿಯಲ್ ಕಿಲ್ಲರ್ ಈತನಾಗಿದ್ದು ಲಂಡನ್‌ನ ಪಶ್ಚಿಮದಲ್ಲಿ 11 ಮಹಿಳೆಯರನ್ನು ಈತ ಕೊಂದಿದ್ದಾನೆ. ಆದರೆ ಇದಾವುದೂ ಪತ್ತೆಯಾಗಿಲ್ಲ. ಕೊಂದ ನಂತರ ಈತ ತನ್ನ ಹೆಸರನ್ನು ಸಮೀಪದಲ್ಲಿ ಬರೆದಿಡುತ್ತಿದ್ದ. ಮೂರು ವರ್ಷಗಳ ತನಿಖೆಯನ್ನು ಮಾಡಿ ಕೂಡ ಪೊಲೀಸರು ಈತನಿಗೆ ವ್ಯಕ್ತಿಯನ್ನು ಪತ್ತೆಹಚ್ಚಲಾಗಿಲ್ಲ.

7

7

ಡಿಸೆಂಬರ್ 1948 ರಲ್ಲಿ ಗುರುತಿಸಲಾಗದೇ ಇರುವ ವ್ಯಕ್ತಿಯೊಬ್ಬ ಸೋಮರ್ಟನ್ ಬೀಚ್‌ನಲ್ಲಿ ಪತ್ತೆಯಾಗಿದ್ದು, ಈತನ ಪಾಕೆಟ್‌ನಲ್ಲಿ ತಮಾಮ್ ಶುದ್ ಎಂಬ ಬರವಣಿಗೆಯು ಕಂಡುಬಂದಿದೆ. ಇದರ ಅರ್ಥ ಕೊನೆ ಮುಕ್ತಾಯ ಎಂದಾಗಿದೆ.

5

5

ಇಂಗ್ಲೇಂಡ್‌ನ ಸ್ಟಾಫರ್ಡ್‌ಶೈರ್‌ನಲ್ಲಿ ಈ ಶಿಲೆಯಿದ್ದು, 18 ನೇ ಶತಮಾನದ ರಚನೆ ಎಂಬುದಾಗಿ ಇದನ್ನು ಪರಿಗಣಿಸಲಾಗಿದೆ. ಇದರಲಲ್ಇ ಬರೆದಿರುವ ಅಕ್ಷರಗಳನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಇದು ಬರೆದು 250 ವರ್ಷಗಳೇ ಕಳೆದಿದೆ.

7

7

1960 ಮತ್ತು 1970 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಅಪರಾಧಿಗಳಿದ್ದು ಇವರನ್ನು ಜೋಡಿಕ್ ಕಿಲ್ಲರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರನ್ನು ಇದುವರೆಗೂ ಪತ್ತೆಹಚ್ಚಲಾಗಿಲ್ಲ.

7

7

ಅಮೇರಿಕನ್ ಆವೃತ್ತಿಯ ಸ್ಟೋನ್ ಹಂಗೆ ಎಂಬುದಾಗಿ ಇದನ್ನು ಗುರುತಿಸಲಾಗಿದ್ದು, ಎಲ್ಬರ್ಟ್ ಕೌಂಟಿ ಇದು ಸ್ಥಾಪನೆಯಾಗಿದ್ದು, ಇದು ನಿಗೂಢವಾಗಿದೆ.

8

8

ರೊಂಗೊರೊಂಗೊ ಎಂದು ಕರೆಯಲಾದ ನಿಗೂಢ ಬರವಣಿಗೆಯ ಶಿಲೆಯೊಂದು ದೊರಕಿದ್ದು ಇದು ಕೆಲವೊಂದು ರಹಸ್ಯ ಸಂಕೇತಗಳನ್ನು ತನ್ನಲ್ಲಿ ಒಳಗೊಂಡಿದೆ.

9

9

ಡೈನೋಸರ್ ಮಾದರಿಯ ಜೀವಿ ಇದಾಗಿದ್ದು ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ ಇದನ್ನು ದೃಢೀಕರಿಸಲಾಗಿದೆ. ಇನ್ನೂ ಇದು ಕಂಡುಬಂದಿದ್ದು ನೀರಿನೊಳಗೆ ಇದು ಈಜುತ್ತದೆ ಎಂಬುದಾಗಿ ತಿಳಿದವರು ಹೇಳುತ್ತಾರೆ.

10

10

ಸಸ್ಕಾಚ್ ಎಂಬ ಹೆಸರಿನ, ದೈತ್ಯ ಹೆಜ್ಜೆಯ ಜೀವಿಗಳು ಹಿಮಪಾತದಲ್ಲಿ ಇವುಗಳು ವಾಸಿಸುತ್ತಿದ್ದು ಯುಎಸ್ ಮತ್ತು ಕೆನಡಾ ಪ್ರಾಂತ್ಯದಲ್ಲಿ ಕಂಡುಬಂದಿದೆ. ಮೊದಲಿಗೆ ಇವುಗಳು ಗೊರಿಲ್ಲಾಗಳಾಗಿ ಕಂಡುಬಂದಿದ್ದು, ಇದರ ನಡೆಯುವ ವಿಧವನ್ನು ಆ ಕಾಲದ ಮಾನವರಗೆ ಹೋಲಿಸಲಾಗಿದೆ.

11

11

ಎಲಿಜಬೆತ್ ಶಾರ್ಟ್‌ಗೆ ನೀಡಲಾದ ಬ್ಲ್ಯಾಕ್ ದಹ್ಲಿಯಾ ಕೊಲೆ ಎಂಬ ಹೆಸರು ಅಮೇರಿಕಾದಲ್ಲಿ ಭಯಾನಕ ಮರಣ ಎಂಬ ಹೆಸರಿಗೆ ಪಾತ್ರವಾಗಿದೆ. ಈಕೆಯ ದೇಹವನ್ನು ತುಂಡರಿಸಿ ಕೊಲೆಮಾಡಲಾಗಿತ್ತು.

12

12

ಇಂಗ್ಲೇಂಡ್‌ನಲ್ಲಿರುವ ಶಿಲೆ ಇದಾಗಿದ್ದು, ವಿಶ್ವದಲ್ಲೇ ಹೆಚ್ಚು ಜನಪ್ರಿಯ ಸ್ಥಳವೆಂದೇ ಕರೆಯಲ್ಪಟ್ಟಿದೆ. ಸ್ಟೋನ್ ಹೆಂಗೆ ಬ್ರಿಟನ್‌ನ ಅತಿದೊಡ್ಡ ಐಕಾನ್ ಎಂದೆನಿಸಿದ್ದು, ರಹಸ್ಯವನ್ನು ಪ್ರತಿಬಿಂಬಿಸುತ್ತಿದೆ.

13

13

ಟ್ಯುರಿನ್ ಶ್ರಡ್ ಅತಿ ರಹಸ್ಯಮಯವಾದ ಚಿತ್ರವನ್ನು ನೀಡಿದೆ. ಈ ಚಿತ್ರವನ್ನು ಹೇಗೆ ರಚಿಸಲಾಗಿದೆ ಎಂಬುದು ಇನ್ನೂ ಬಗೆಹರಿಯದ ನಿಗೂಢತೆಯಾಗಿದೆ.

14

14

ಅಟ್ಲಾಂಟಾದ ನಗರ ಮರ್ಮನ್ ಜನರು ಜೀವಿಸಿದ್ದರು ಎಂಬುದನ್ನು ಹೇಳಿದೆ. ಈ ನಗರ ಆಳವಾದ ಸಾಗರದಲ್ಲಿ ಮುಳಗಿ ಹೋಗಿದೆ. ಹೆಚ್ಚಿನವರು ಇದು ನೈಜ ಎಂಬುದನ್ನು ನಂಬಲು ಸಂದೇಹಿಸುತ್ತಿದ್ದಾರೆ.

15

15

ಪೂರ್ವ ದ್ವೀಪಗಳಿಂದ ಹಿಡಿದು, ಬರ್ಮುಡಾ ಟ್ರಯಾಂಗಲ್‌ವರೆಗೆ ನಾವು ಮಾತ್ರವೇ ಈ ವಿಶ್ವದಲ್ಲಿ ಇದ್ದವರಾ ಅಥವಾ ಬೇರೆ ಜೀವಿಗಳು ನಮ್ಮ ಮುಂಚೆ ಇದ್ದಿರಬಹುದೇ ಎಂಬ ಅನುಮಾನ ಉಂಟಾಗುತ್ತಿದೆ. ಇದಕ್ಕೆ ತಕ್ಕುದಾದ ಪುರಾವೆ ಕೂಡ ದೊರೆತಿರುವುದರಿಂದ ಈ ಸಂದೇಹ ಉಂಟಾಗುತ್ತಿದೆ.

16

16

ಸಮುದ್ರದಲ್ಲಿ ಮೃತದೇಹ ಬರುವುದು ಸಾಮಾನ್ಯವಾದುದಲ್ಲ. ಆದರೆ ಬ್ರಿಟಿಷ್ ಕೊಲಂಬಿಯಾದ ಬೀಚ್ ಒಂದರಲ್ಲಿ ಕಾಲು ಪಾದ ಮಾತ್ರ ದೊರಲಿದ್ದು ಮೃತದೇಹ ದೊರೆತಿಲ್ಲ.

17

17

ಆಳವಾದ ಸಾಗರದಿಂದ ಬಂದ ರೇಡಿಯೊ ಆವರ್ತನ ಇದಾಗಿದೆ. 72 ಸೆಕೆಂಡ್‌ಗಳ ಕಾಲ ಈ ಆವರ್ತನೆ ಉಂಟಾಗಿದೆ. ಈ ಸಿಗ್ನಲ್‌ನ ಮೂಲವನ್ನು ಪತ್ತೆಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ.

18

18

ಬೋಯಿಂಗ್ 727 ನಲ್ಲಿ ಡಿಬಿ ಕೂಪರ್ ಅನ್ನು ಹೈಜಾಕ್ ಮಾಡಿದಾಗ ಪ್ಯಾರಚೂಟ್‌ನ ಸಹಾಯದಿಂದ ಆತ ವಿಮಾನದಿಂದ ಪಾರಾಗುವ ಪ್ರಯತ್ನವನ್ನು ಮಾಡಿದ. ಆದರೆ ಈತ ಪತ್ತೆಯಾಗಿಲ್ಲ. ಯುಎಸ್‌ನ ಇತಿಹಾಸದಲ್ಲಿ ಇದು ಇನ್ನೂ ಪತ್ತೆಯಾಗದ ಪ್ರಕರಣವಾಗಿದೆ.

Best Mobiles in India

English summary
Find out how these mysteries have managed to dumbfound the world since ages and scare the hell out of those who encounter them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X