5000 ವರ್ಷಗಳ ಹಿಂದಿನ ದೇವಸ್ಥಾನ ಪತ್ತೆ ಏನಿದರ ರಹಸ್ಯ
ಓರ್ಕ್ನಿಯಲ್ಲಿ 5000 ವರ್ಷಗಳ ಹಿಂದಿನ ದೇವಸ್ಥಾನವೊಂದು ದೊರಕಿದ್ದು ಶಿಲಾಯುಗಕ್ಕಿಂತಲೂ ಇದು ಅತಿಮುಖ್ಯವಾದುದು ಎಂಬುದಾಗಿ ಪುರಾತತ್ತ್ವಜ್ಞರು ತಿಳಿಸಿದ್ದಾರೆ. ಈ ಪ್ರದೇಶವು ನೆಸ್ ಆಫ್ ಬ್ರಾಡ್‌ಗರ್ ಎಂಬುದಾಗಿ ಹೆಸರುವಾಸಿಯಾಗಿದ್ದು, ಬಿಬಿಸಿ2 ಡಾಕ್ಯುಮೆಂಟರಿ ಅವಧಿಯಲ್ಲಿ ಪತ್ತೆಯಾಗಿದ್ದು ಪುರಾತನ ಬ್ರಿಟನ್‌ನ ಇತಿಹಾಸವನ್ನು ಪ್ರಸ್ತುತಪಡಿಸಿದೆ. ಡಿಸ್ಕವರಿ ಆಫ್ ಲೈಫ್ ಟೈಮ್ ಎಂಬುದಾಗಿ ಇದನ್ನು ಕರೆಯಲಾಗಿದೆ.
ಓದಿರಿ: ಪ್ರಪಂಚದ ಟಾಪ್ 10 ಅಪಾಯಕಾರಿ ಹ್ಯಾಕರ್‌ಗಳು ಯಾರು ಗೊತ್ತೇ?
ಇಲ್ಲಿಯವರೆಗೆ 14 ಶಿಲಾಯುಗದ ಕಟ್ಟಡಗಳನ್ನು ಉತ್ಖನನ ಮಾಡಲಾಗಿದ್ದು, ಉಷ್ಣ ಜಿಯೋಫಿಸಿಕ್ಸ್ ತಂತ್ರಜ್ಞಾನ ಪ್ರಕಾರ 100 ಜೊತೆಯಾಗಿ ದೇವಾಲಯ ಪ್ರಕಾರವೊಂದನ್ನು ರಚಿಸಿದೆ ಎಂಬುದಾಗಿದೆ. ಇದುವರೆಗೆ ಸ್ಟೋನ್ ಹೆಂಗೇಯನ್ನು ನವಶಿಲಾಯುಗದ ಸಂಸ್ಕೃತಿಯ ಕೇಂದ್ರವಾಗಿ ಪರಿಗಣಿಸಲಾಗಿದ್ದು ಈ ಶೀರ್ಷಿಕೆಯು ಇದೀಗ ಓರ್ಕ್ನಿ ಪ್ರದೇಶಕ್ಕೆ ಹೋಗಬಹುದು, ಇದು ಬ್ರಿಟನ್‌ನ ಅತಿಪುರಾತನ ಗೋಡೆ ಚಿತ್ರಗಳನ್ನು ಒಳಗೊಂಡಿದೆ.

#1
ಆರ್ಕ್ನಿ ಕಟ್ಟಡಗಳ ಒಂದು ವ್ಯಾಪಕ ಜಾಲದ ಉತ್ಖನನವು ಸಂಪೂರ್ಣ ಶಿಲಾಯುಗವನ್ನು ಪುನರ್ ನಿರ್ಮಿಸುವ ಅವಕಾಶವನ್ನು ನಮಗೆ ನೀಡಿದೆ ಎಂಬುದಾಗಿದೆ.

#2
ನವಶಿಲಾಯುಗದ ಧರ್ಮ ರಹಸ್ಯಗಳನ್ನು ಬಾಗಿಲನ್ನು ಇದು ನಮಗೆ ತೆರೆದಿದೆ ಎಂಬುದಾಗಿ ಪುರಾತತ್ತ್ವಜ್ಞರು ತಿಳಿಸಿದ್ದಾರೆ. ತಜ್ಞರು ಹೇಳುವಂತೆ ಈ ಪ್ರದೇಶವು ನವಶಿಲಾಯುಗದ ಜನರು ನಂಬುತ್ತಿದ್ದ ವಿಶ್ವ ಮತ್ತು ಬ್ರಹ್ಮಾಂಡದ ಬಗೆಗಿನ ಒಳನೋಟಗಳನ್ನು ಎದುರಿಗೆ ತೆರೆದಿಟ್ಟಿದೆ.

#3
ಪುರಾತತ್ತ್ವಜ್ಞರಾದ ನಿಕ್ ಕಾರ್ಡ್ ಹೇಳುವಂತೆ, ಹೈಲ್ಯಾಂಡ್ ಮತ್ತು ಐಲ್ಯಾಂಡ್ ಯೂನಿವರ್ಸಿಟಿಯ ಪ್ರಕಾರ ಇದು ಪುರಾತತ್ತ್ವಜ್ಞರ ಕನಸಾಗಿದೆ. ಸ್ಥಳದ ಕುರಿತಾದ ಉತ್ಸಾಹ ಮಂಕಾಗುವುದಿಲ್ಲ.

#4
ಹೆಚ್ಚಿನ ಪುರಾತತ್ತ್ವಜ್ಞರು ಈ ಸ್ಥಳವು ಅಂತರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂಬುದಾಗಿ ಬಣ್ಣಿಸಿದ್ದು ಇಲ್ಲಿ ನಮಗೆ ಸಾಕಷ್ಟು ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ ಎಂಬುದಾಗಿ ಶ್ಲಾಘಿಸಿದ್ದಾರೆ.

#5
ದೇವಸ್ಥಾನದ ಕೆಲವೊಂದು ಭಾಗಗಳು ಶಿಲಾಯುಗಕ್ಕಿಂತಲೂ 800 ವರ್ಷಗಳಷ್ಟು ಹಳೆಯದಾಗಿದ್ದು, ದಕ್ಷಿಣ ವಿಲ್ಟ್‌ಶೈರ್‌ನಿಂದ 500 ಮೈಲಿಗಳ ಅಂತರದಲ್ಲಿದೆ.

#6
ರಿಂಗ್ ಆಫ್ ಬ್ರಾಡ್‌ಗರ್ ಸ್ಟೋನ್ ಸರ್ಕಲ್‌ಗೆ ಈ ಸ್ಥಳವು ಹೆಚ್ಚು ನಿಕಟವಾಗಿದ್ದು 10 ಫೀಟ್ ಎತ್ತರದ ಗೋಡೆಗಳಿಂದ ಆವೃತವಾಗಿದೆ. ಕೆಲವೊಂದು ಕಟ್ಟಡಗಳ ಮೇಲೆ ಪುರಾತತ್ತ್ವಜ್ಞರು ಕೆಂಪು ಜಿಗ್‌ಜಾಗ್ ಗೆರೆಗಳನ್ನು ಕಂಡುಕೊಂಡಿದ್ದಾರೆ.

#7
ಗೋಡೆಯ ಒಳಭಾಗದಲ್ಲಿ ಈ ಕಲೆ ಇರುವುದರಿಂದ ಇದು ಶಿಲಾಯುಗದ ಕಲೆಯಾಗಿ ಪ್ರತಿಬಿಂಬಿತವಾಗಿದೆ. ಇದುವರೆಗೆ ಕಂಡುಬಂದಿರುವುದರಲ್ಲಿ ಇದು ಹೆಚ್ಚು ಹಳತಾಗಿದೆ.

#8
ಇದುವರೆಗೆ ಸ್ಥಳದ 10 ಶೇಕಡಾ ಭಾಗವನ್ನು ಮಾತ್ರವೇ ಪರೀಕ್ಷಿಸಲಾಗಿದೆ ಇನ್ನಷ್ಟು ಪರಿಶೀಲನೆಯನ್ನು ನಡೆಸಲು ಇದು ಹಲವಾರು ದಶಕಗಳನ್ನು ತೆಗೆದುಕೊಳ್ಳಬಹುದು ಎಂಬುದಾಗಿ ಪುರಾತತ್ತ್ವಜ್ಞರು ತಿಳಿಸಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








