Subscribe to Gizbot

ಪ್ರಪಂಚದ ಟಾಪ್‌ 10 ಅಪಾಯಕಾರಿ ಹ್ಯಾಕರ್‌ಗಳು ಯಾರು ಗೊತ್ತೇ?

Written By:

ಹ್ಯಾಕರ್‌ಗಳು(Hackers) ಒಂದು ಮಿಲಿಟರಿ ವ್ಯವಸ್ಥೆಯ ಸೀಕ್ರೇಟ್‌ ಡೇಟಾವನ್ನು ಇನ್ನೊಂದು ದೇಶಕ್ಕೆ ಕಂಪ್ಯೂಟರ್‌ ಹ್ಯಾಕ್ ಮಾಡುವ ಮೂಲಕ ವರ್ಗಾಯಿಸಬಲ್ಲರು. ಲಕ್ಷಾಂತರ ಬ್ಯಾಕ್‌ ಖಾತೆಗಳನ್ನು ಕುಳಿತಲ್ಲೇ ಹ್ಯಾಕ್‌ ಮಾಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಲ್ಲರು. ಕಂಪ್ಯೂಟರ್‌(Computer) ಹ್ಯಾಕ್ ಮಾಡಿ ವಯಕ್ತಿಕ ಮಾಹಿತಿಗಳನ್ನು ಪಡೆಯಬಲ್ಲರು. ಸೂಕ್ಷ್ಮ ವಿಚಾರಗಳು ಯಾವುವು ಸಹ ಹ್ಯಾಕರ್‌ಗಳ ಮುಂದೆ ಸಿಕ್ರೇಟ್ ಆಗಿ ಉಳಿಯಲಾರವು. ಅಂದಹಾಗೆ ಈ ಮಾಹಿತಿಯನ್ನ ಏಕೆ ಹೇಳ್ತಿದ್ದೀವಿ ಅಂದ್ರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಪ್ರಪಂಚದ ಪ್ರಖ್ಯಾತ ಅಪಾಯಕಾರಿ ಕಂಪ್ಯೂಟರ್‌ ಹ್ಯಾಕರ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅವರು ಯಾರು, ಅವರಿಂದ ಹಲವು ದೇಶಗಳಿಗೆ ಆದ ನಷ್ಟ ಏನು? ಅವರೆಂತಹ ಅಪಾಯಕಾರಿ ಹ್ಯಾಕರ್‌ಗಳು ಎಂದು ಸ್ಲೈಡರ್‌ನಲ್ಲಿ ನೀವೇ ಓದಿರಿ.

ಹ್ಯಾಕರ್‌ನಿಂದ ಬ್ಯಾಂಕ್‌ಖಾತೆ, ವೈಯಕ್ತಿಕ ಮಾಹಿತಿಗಳ ಸುರಕ್ಷತೆ ಹೇಗೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾರಿ ಮಿಕ್ಕಿನಾನ್ (Gary McKinnon)

1

ಗ್ಯಾರಿ ಮಿಕ್ಕಿನಾನ್‌ ಕಂಪ್ಯೂಟರ್‌ ಸಿಸ್ಟಮ್‌ ಆಡಳಿತಗಾರನಾಗಿದ್ದು, ಆದರೂ ಸಹ ನಿರುದ್ಯೋಗಿ. 2001 ರಲ್ಲಿ ಅಮೇರಿಕದ ಮಿಲಿಟರಿ ಕಂಪ್ಯೂಟರ್‌ ಅನ್ನು ಹ್ಯಾಕ್‌ ಮಾಡಿ ಪ್ರಮುಖ ಫೈಲ್‌ಗಳನ್ನು ಡಿಲೀಟ್‌ ಮಾಡಿದ್ದ. ಈತನಿಂದಾಗಿ ಅಮೇರಿಕ ಸಾವಿರಾರು ಡಾಲರ್‌ಗಳ ನಷ್ಟವನ್ನು ಅನುಭವಿಸಿತ್ತು. ಅಲ್ಲದೇ ಅಮೇರಿಕದ ಬಹುದೊಡ್ಡ ಸೈಬರ್‌ ಹ್ಯಾಕ್‌ ಈತನದಾಗಿತ್ತು.

ಮೈಕೆಲ್ ಬೆವನ್ ಮತ್ತು ರಿಚರ್ಡ್ ಪ್ರೈಸ್ (Michael Bevan and Richard Pryce)

2

"ಮೈಕೆಲ್ ಬೆವನ್ ಮತ್ತು ರಿಚರ್ಡ್ ಪ್ರೈಸ್" ಇಬ್ಬರು ಸಹ ಬ್ರಿಟಿಷ್‌ ಮೂಲದವರಾಗಿದ್ದು 1996 ರಲ್ಲಿ ಕಾನೂನು ಬಾಹಿರವಾಗಿ ಅಮೇರಿಕಾದ ಏರ್ ಫೋರ್ಸ್, ನಾಸಾ ಮತ್ತು ನ್ಯಾಟೋ ಸಂಬಂಧಿಸಿದ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡಿದ್ದರು. ಇಬ್ಬರು ಸಹ ಕಂಪ್ಯೂಟರ್‌ ಆಕ್ಸೆಸ್ ಮಾಡಿ ಫೈಲ್‌ಗಳನ್ನು ಡಿಲೀಟ್‌ ಮಾಡಿದ್ದರು. ಕೋರಿಯಾದ ನ್ಯೂಕ್ಲಿಯರ್‌ ಪ್ರೋಗ್ರಾಮ್‌ ಫೈಲ್‌ ಅನ್ನು ಅಮೇರಿಕದ ಏರ್‌ ಫೋರ್ಸ್‌ಗೆ ಕಳುಹಿಸುವುದರ ಮುಖಾಂತರ ಅಮೇರಿಕ ವಿರುದ್ಧ ದಕ್ಷಿಣ ಕೊರಿಯಾ ದಾಳಿ ಮಾಡುವುದಕ್ಕೆ ಕಾರಣರಾಗಿದ್ದರು.

ಕೆವಿನ್ ಮಿಟ್ನಿಕ್ (Kevin Mitnick)

3

"ಕೆವಿನ್ ಮಿಟ್ನಿಕ್" ಎಲ್ಲಾ ಸಮಯಕ್ಕೂ ಪ್ರಖ್ಯಾತವಾದ ಹ್ಯಾಕರ್‌ ಎಂದೇ ಹೇಳಬಹುದು. ಕಾರಣ ಹಲವು ವರ್ಷ ಟೆಲಿಫೋನ್ ಮತ್ತು ಕಂಪ್ಯೂಟರ್‌ ಕಂಪನಿಗಳ ಸಿಸ್ಟಮ್‌ಗಳನ್ನು ಹ್ಯಾಕ್‌ ಮಾಡಿ ಸೂಕ್ಷ್ಮ ಡೇಟಾಗಳನ್ನು ಕಂಪ್ಯೂಟರ್‌ ಸರ್ವರ್‌ನಲ್ಲೇ ಮಾರ್ಪಾಡು ಮಾಡುತ್ತಿದ್ದ. 1995 ಕ್ಕಿಂತ ಮುಂಚೆ ಅಮೇರಿಕಾದಲ್ಲಿ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಆಗಿದ್ದ. ವಿಪರ್ಯಾಸ ಎಂದರೆ ಪ್ರಸ್ತುತದಲ್ಲಿ ಕಂಪನಿಯೊಂದರಲ್ಲಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ನಿಂದ ಸುರಕ್ಷಿಸುವ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ವ್ಲಾಡಿಮಿರ್ ಲೆವಿನ್ (Vladimir Levin)

4

ಇತರರಂತೆ ಮಿಲಿಟರಿ ಸಿಸ್ಟಮ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ 'ವ್ಲಾಡಿಮಿರ್‌ ಲೆವಿನ್' 1994 ರಲ್ಲಿ ಸಿಟಿಬ್ಯಾಂಕ್‌ ಒಂದನ್ನು ಹ್ಯಾಕ್‌ ಮಾಡಿ $10 ಮಿಲಿಯನ್‌ ಅನ್ನು ಬ್ಯಾಂಕ್‌ ಖಾತೆಯಿಂದ ಕದ್ದಿದ್ದ. ರಷ್ಯಾದಿಂದ ಬಂದಿದ್ದ ಈತ ಬ್ರಿಟನ್‌ನಲ್ಲಿ ಸೆರೆಯಾದ.

ಮೈಕೆಲ್‌ ಕಾಲ್ಸಿ (Michael Calce)

5

ಕಾಲ್ಸಿ " ಮಾಫಿಯಾಬಾಯ್" ಎಂತಲೇ ಪ್ರಖ್ಯಾತನಾಗಿದ್ದವನು. 2000 ದಲ್ಲಿ ಈತ ಪ್ರಖ್ಯಾತ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ನಿಲ್ಲಿಸುವ ಸಾಮರ್ಥ್ಯ ಹೊಂದಿದ್ದನು. ಈತ ಒಮ್ಮೆಯೇ ಪ್ರಖ್ಯಾತ ಯಾಹೂ, ಫಿಫಾ, ಡೆಲ್‌, ಅಮೆಜಾನ್‌, ಇಬೇ ಮತ್ತು ಸಿಎನ್ಎನ್ ವೆಬ್‌ಸೈಟ್‌ಗಳನ್ನು ಹಲವು ಗಂಟೆಗಳ ಕಾಲ ಹ್ಯಾಕ್‌ ಮಾಡಿ ಸಿಸ್ಟಮ್‌ಗಳಿಗೆ ಸಮಸ್ಯೆ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದನು. ಈತನ ಕಂಪ್ಯೂಟರ್‌ ಹ್ಯಾಕ್‌ನಿಂದ ಜಾಗತಿಕವಾಗಿ $1 ಬಿಲಿಯನ್‌ ಆರ್ಥಿಕ ಲಾಭ ಕುಸಿಯುತ್ತಿತ್ತು ಎಂದು ಫಿರ್ಯಾದುದಾರರು ಹೇಳಿದ್ದರು.

ಜೀನ್ಸನ್‌ ಜೇಮ್ಸ್‌ ಅಂಛೆತ (Jeanson James Ancheta)

6

ಸಾಮಾನ್ಯ ಕಂಪ್ಯೂಟರ್ ದಾಳಿ ಮಾಡಿ ಇತರರನ್ನು ಕಾನೂನು ಬಾಹಿರ ಸಮಸ್ಯೆಗಳಿಗೆ ಸಿಲುಕಿಸುವ ಉದ್ದೇಶ ಹೊಂದುವ ಕಾರ್ಯವನ್ನು ಜೀನ್ಸನ್‌ ಮಾಡುತ್ತಿದ್ದ. ಇದು ಬಾಟ್‌ನೆಟ್‌ ಎಂತಲೇ ಪ್ರಖ್ಯಾತವಾಗಿದೆ. ಈ ರೀತಿಯಲ್ಲಿ ಜೀನ್ಸನ್‌ 500,000 ಕಂಪ್ಯೂಟರ್‌ಗಳನ್ನು ಉಪಯೋಗಿಸುತ್ತಿದ್ದನಂತೆ. ನಂತರದಲ್ಲಿ FBI ವಿಶೇಷ ತನಿಖೆಯಿಂದ ಸಿಕ್ಕಿಬಿದ್ದು 5 ವರ್ಷಗಳ ಕಾಲ ಜೈಲಿಗೆ ಹೋದನು.

ಅಡ್ರಿಯನ್‌ ಲ್ಯಾಮೊ (Adrian Lamo)

7

ಅಮೇರಿಕದ ಅಡ್ರಿಯನ್ ತನ್ನ ಮನರಂಜನೆಗಾಗಿ ಇಂಟರ್ನೆಟ್‌ ಕೆಫೆ, ಲೈಬ್ರರಿ, ಕಾಫಿ ಶಾಪ್‌ಗಳು ಮತ್ತು ಮೊಬೈಲ್‌ ಅನ್ನು ಹ್ಯಾಕ್‌ ಮಾಡುತ್ತಿದ್ದ. ಅಮೇರಿಕ ಸರ್ಕಾರದ ಮಾಹಿತಿಯನ್ನು ಮಿಕಿಲೀಕ್ಸ್‌ಗೆ ಸೋರಿಕೆ ಮಾಡಿ 2003 ರಲ್ಲಿ ಜೈಲು ಸೇರಿದ. "ನ್ಯೂಯಾರ್ಕ್‌ ಟೈಮ್ಸ್‌" ಡೇಟಾವನ್ನು ಹ್ಯಾಕ್‌ ಮಾಡಿದ್ದಾಗ ಈತನ ಹೆಸರು ಪ್ರಖ್ಯಾತಗೊಂಡಿತ್ತು.

ಓವನ್ ವಾಕರ್ (Owen Walker)

8

ವಯಸ್ಸು ಚಿಕ್ಕದಾದರೂ ಕಂಪ್ಯೂಟರ್‌ ಹ್ಯಾಕಿಂಗ್‌ ಟ್ಯಾಲೆಂಟ್‌ ವಯಸ್ಸಿಗೂ ಮೀರಿದ್ದು. ನ್ಯೂಜಿಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಈತ ಹಲವು ವರ್ಷಗಳ ಕಾಲ ವೆಬ್‌ಸೈಟ್‌ಗಳನ್ನು ಮತ್ತು ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡುವ ಚಟುವಟಿಕೆ ನಿರ್ವಹಿಸುತ್ತಿದ್ದ. " ಆಕ್‌ಬಾಟ್‌ ವೈರಸ್‌" ಅನ್ನು ಅಭಿವೃದ್ದಿ ಪಡಿಸಿದ ಹೆಗ್ಗಳಿಕೆಯೂ ಈತನಿಗೆ ಸಲ್ಲುತ್ತದೆ. ಈತತ 'ಆಕ್‌ಬಾಟ್ ವೈರಸ್‌" $26 ಮಿಲಿಯನ್‌ ನಷ್ಟಗೊಳಿಸಿರುವ ಬಗ್ಗೆ ಹೇಳಲಾಗಿದೆ.

ಆಲ್ಬರ್ಟ್ ಗೊನ್ಜಾಲೆಜ್ (Albert Gonzalez)

9

"ಆಲ್ಬರ್ಟ್ ಗೊನ್ಜಾಲೆಜ್", ಮೂಲತಃ ಅಮೇರಿಕದ ಕಂಪ್ಯೂಟರ್ ಹ್ಯಾಕರ್. 2005-2007 ವರೆಗೆ ಬಹುಸಂಖ್ಯಾತ ಕ್ರೆಡಿಟ್ ಕಾರ್ಡ್‌ ಮತ್ತು ಎಟಿಎಂ ನಂಬರ್‌ ಕಳ್ಳತನ ಮಾಡಿದ ಆರೋಪವನ್ನು ಹೊತ್ತಿದ್ದಾನೆ. ಉನ್ನತ ಮೂಲಗಳ ಪ್ರಕಾರ ಈತ 170 ದಶಲಕ್ಷ ವ್ಯಕ್ತಿಗಳ ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ಹ್ಯಾಕ್‌ ಮಾಡಿದ್ದ ಎಂದು ಹೇಳಲಾಗಿದೆ. ಈತನು $200 ಮಿಲಿಯನ್‌ ನಷ್ಟವನ್ನು ಇತರರ ಖಾತೆಯಿಂದ ಹಣ ವರ್ಗಾಯಿಸುವ ಮೂಲಕ ಮಾಡಿದ್ದಾನೆ.

ಆಸ್ಟ್ರಾ ( Astra)

10

ಆಸ್ಟ್ರಾ ಎಂಬುದು ಹ್ಯಾಕರ್‌ನ ವಾಸ್ತವ ಹೆಸರಲ್ಲ. ಇದುವರೆಗೂ ಸಹ ಈತನ ಹೆಸರು ಬಹಿರಂಗಗೊಂಡಿಲ್ಲ. 58 ವರ್ಷಗಳ ಗಣಿತಶಾಸ್ತ್ರಜ್ಞನಾದ ಈತ ಗ್ರೀಕ್‌ನ ಅಥೆನ್ಸ್‌ನಲ್ಲಿ ವಾಸಿಸುತ್ತಿದ್ದಾನೆ. ಫ್ರೆಂಚ್‌ ಮಿಲಿಟರಿ ಸಂಸ್ಥೆಯ ಕಂಪ್ಯೂಟರ್‌ ಅನ್ನು ಹ್ಯಾಕ್‌ ಮಾಡಿದ ನಂತರ ಈತ ಕಂಪ್ಯೂಟರ್‌ ಹ್ಯಾಕರ್‌ ಎಂದು ಬೆಳಕಿಗೆ ಬಂದ. ಈತ $360 ಮಿಲಿಯನ್‌ ಡಾಲರ್‌ ನಷ್ಟಕ್ಕೆ ಹೊಣೆಯಾಗಿದ್ದಾನೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಅಶ್ಲೀಲ ವಿಷಯ ಕಳುಹಿಸಲು ವಿದ್ಯಾರ್ಥಿಯಿಂದ ಟೀಚರ್‌ ಇಮೇಲ್‌ ಹ್ಯಾಕ್ಸರ್ಕಾರಿ

ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Top 10 Dangerous Hackers of The World. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot