ಪ್ರಪಂಚ ಹೇಗೆ ಕೊನೆಗೊಳ್ಳುತ್ತದೆ?
ಜಗತ್ತು ಹೇಗೆ ಕೊನೆಗೊಳ್ಳುತ್ತದೆ, ಸೂರ್ಯ ಹೇಗೆ ನಾಶಹೊಂದುತ್ತಾನೆ, ಸೂರ್ಯನಿಗೂ ಕೊನೆ ಎಂಬುದು ಇದೆಯೇ, ಚಂದ್ರ ಸಹ ನಾಶವಾಗುತ್ತದೆಯೇ? ಎಂಬ ಪ್ರಶ್ನೆ ಯಾರಿಗೆ ಕಾಡುತ್ತೋ, ಬಿಡುತ್ತೋ. ಆದ್ರೆ ವಿಜ್ಞಾನಿಗಳಿಗಂತೂ ಇಂತಹ ಪ್ರಶ್ನೆಗಳು ಖಂಡಿತ ಕಾಡುತ್ತವೆ. ಖಗೋಳ ವಿಜ್ಞಾನಿಗಳು ಈ ಬಗ್ಗೆ ಅರ್ಧಯನವನ್ನು ಕೈಗೊಂಡಿರುತ್ತಾರೆ.
ಹಬಲ್ ಸ್ಪೇಸ್ ಟೆಲಿಸ್ಕೋಪ್ ಸೂರ್ಯ ಕೊನೆಗೊಳ್ಳುವಾಗ (ನಾಶವಾಗುವಾಗ) ಹೇಗೆ ಕಾಣುತ್ತಾನೆ ಎಂಬ ಕೆಲವು ದೃಶ್ಯಗಳನ್ನು ನೀಡಿದ್ದು, ಪ್ರಪಂಚ ಮತ್ತು ಸೂರ್ಯ ಹೇಗೆ ಅಂತ್ಯಗೊಳ್ಳುತ್ತಾನೆ ಎಂಬ ಮಾಹಿತಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಆ ಮಾಹಿತಿಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಜೀವನದ 10 ರೋಚಕ ಅಂಶಗಳು

ನಮ್ಮ ಸೂರ್ಯನ ಅಂತ್ಯ
ಇದೊಂದು ಸುಂದರವಾದ ಚಿತ್ರ. ಆದ್ರೆ ನಮ್ಮ ಪ್ರಪಂಚದ ಮುಂದಿನ ಭವಿಷ್ಯವು ಹೌದು. 5 ಶತಕೋಟಿ ವರ್ಷಗಳ ನಂತರ ಸೂರ್ಯನ ಆಯಸ್ಸು ಮುಗಿಯಲಿದ್ದು, ಸೂರ್ಯ ಅಂತ್ಯ ಗೊಳ್ಳುತ್ತಿದ್ದಾನೆ. ಆ ಸಮಯದಲ್ಲಿ ಭೂಮಿ ಧೀರ್ಘವಾಗಿ ಕೊನೆಗೊಳ್ಳುತ್ತದೆ ಎಂದು ಹಬಲ್ ಸ್ಪೇಸ್ ಟೆಲಿಸ್ಕೋಪ್ ನೀಡಿದ ಚಿತ್ರವನ್ನು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಬಿಡುಗಡೆ ಮಾಡಿ ಹೇಳಿದೆ. ಚಿತ್ರ ಕೃಪೆ : NASA, ESA/Hubble Team/Jet Propulsion Laboratory

ಸೂರ್ಯನ ಅಂತ್ಯ
ಸಂಕೀರ್ಣವಾದ ಸುರುಳಿಯ ಅನಿಲ ಸೂರ್ಯನ ಭವಿಷ್ಯದ ಬಗ್ಗೆ ಚಿತ್ರಣವನ್ನು ನೀಡುತ್ತದೆ ಎಂದು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಹೇಳಿದೆ. ಅಲ್ಲದೇ 5 ಶತಕೋಟಿ ವರ್ಷಗಳಲ್ಲಿ ಸೂರ್ಯ ಸಾಯಲಿದ್ದಾನೆ ಎಂದು ಹೇಳಿದೆ. ಚಿತ್ರ ಕೃಪೆ : AFP/Getty Images

ಹೊರ ಪದರಗಳ ಚೆಲ್ಲುವಿಕೆ
ಸೂರ್ಯನು ತನ್ನ ಹೊರ ಪದರಗಳನ್ನು ಚೆಲ್ಲುತ್ತಿದ್ದು, ಅದರ ಉರಿಯುವಿಕೆಯ ತಿರುಳನ್ನು ನೀರಿಕ್ಷೆ ಮಾಡಿ, ಅದು ಅಂತ್ಯಗೊಳ್ಳುವುದನ್ನು ಅಂದಾಜಿಸಲಾಗಿದೆ. ಚಿತ್ರ ಕೃಪೆ : Reuters

ಸೂರ್ಯನ ಅಂತ್ಯದಿಂದ ಭೂಮಿಯ ದೀರ್ಘಕಾಲದ ಕೊನೆ
ಸೂರ್ಯನ ಅಂತ್ಯದಿಂದ ಭೂಮಿಯು ದೀರ್ಘಕಾಲದ ಅಂತ್ಯವಾಗಲಿದೆ. ಆದರೆ ನಕ್ಷತ್ರ ಸೌಂದರ್ಯ ಜಗತ್ತಿನಾದ್ಯಂತ ಹೊಳೆಯಲಿದೆ. ನಕ್ಷತ್ರದ ಆಯಸ್ಸಿನ ಪ್ರಕಾರ ನ್ಯೂಕ್ಲಿಯರ್ ಪ್ರತಿಕ್ರಿಯೆ ಹೊಳೆಯುತ್ತವಂತೆ ಮಾಡುತ್ತದೆ. ಚಿತ್ರ ಕೃಪೆ: NASA/ESA/G. Bacon (STScl

ನಕ್ಷತ್ರಗಳ ಅಂತ್ಯಕ್ಕೆ ಕಾರಣವೇನು ಗೊತ್ತೇ?
ಈ ಅನಿಶ್ಚಿತ ಪೀಳಿಗೆಯ ಅನಿಯಮಿತ ಚಟುವಟಿಕೆಗಳಿಂದ ಹೊರವಲಯದ ಅನಿಲಗಳು ಬಾಹ್ಯಾಕಾಶಕ್ಕೆ ಹರಡಿ ನಕ್ಷತ್ರಗಳು ಅದಕ್ಕೆ ಸ್ಪಂದಿಸಿ ಅವುಗಳ ನಾಶಕ್ಕೆ ಕಾರಣವಾಗುತ್ತಿದೆ. ಚಿತ್ರ ಕೃಪೆ: ESA

Kohoutek 4-55
Kohoutek 4-55, ಅಂತ್ಯಗೊಳ್ಳುತ್ತಿದ್ದ ನಕ್ಷತ್ರದ ಪುಂಜವಾಗಿದ್ದು, ಇದರ ರೀತಿಯಲ್ಲಿಯೇ ಸೂರ್ಯನ ನಕ್ಷತ್ರ ಸಮೂಹವು ಸಹ ನಾಶ ಹೊಂದಲಿದೆ ಎಂದು ಹೇಳಲಾಗಿದೆ. ಚಿತ್ರ ಕೃಪೆ : NASA, ESA/Hubble Team/Jet Propulsion Laboratory

ಹಬಲ್
'ಹಬಲ್' ಸ್ಪೇಸ್ ಟೆಲಿಸ್ಕೋಪ್ ಆಗಿದ್ದು, ಪ್ರಸ್ತುತದಲ್ಲಿ ತೆಗೆದ ಚಂದದ ಚಿತ್ರಗಳನ್ನು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಬಿಡುಗಡೆಗೊಳಿಸಿದೆ. ಇದು ವಿಶಾಲವಾದ ಪ್ಲಾನೆಟರಿ ಕ್ಯಾಮೆರಾ 2 (WFPc2) ಆಗಿದೆ. ಅಲ್ಲದೇ ಇದನ್ನು 1993ರಲ್ಲಿ ಇನ್‌ಸ್ಟಾಲ್ ಮಾಡಲಾಗಿದೆ.
ಹಬಲ್
ಹಬಲ್ ಟೆಲಿಸ್ಕೋಪ್ ಸೆರೆಹಿಡಿದ ವೀಡಿಯೋ ವೀಡಿಯೋ


Click it and Unblock the Notifications








