ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಗೊತ್ತೇ?

Written By:

ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಹೊಂದುತ್ತದೆ. ಸೂರ್ಯ ಹೇಗೆ ನಾಶ ಹೊಂದುತ್ತಾನೆ. ಅದಕ್ಕೂ ಸಹ ಆಯಸ್ಸು ಎಂಬುದು ಇದೆಯೇ. ಸೂರ್ಯ, ಚಂದ್ರರು ಸಹ ನಾಶಹೊಂದುತ್ತಾರೆಯೇ ಎಂಬ ಹಲವು ಪ್ರಶ್ನೆಗಳು ಯಾರನ್ನು ಕಾಡುತ್ತೋ ಬಿಡುತ್ತೋ ವಿಜ್ಞಾನಿಗಳಿಗೆಗಂತು ಅದರ ಬಗ್ಗೆಯೂ ಸಂಶೋಧನೆ, ಅಧ್ಯಯನಗಳನ್ನು ನೆಡೆಸುತ್ತಿರುತ್ತಾರೆ. ಈ ರೀತಿಯ ಮಾಹಿತಿಯನ್ನು ಇಲ್ಲಿ ಪ್ರಸ್ತಾಪ ಮಾಡುವುದಕ್ಕೆ ಕಾರಣ ಅಂದ್ರೆ ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ ಸೂರ್ಯ ಕೊನೆಗೊಳ್ಳುವಾಗ ಅಂದ್ರೆ ಸಾಯುವಾಗ ಹೇಗೆ ಕಾಣುತ್ತಾನೆ ಎಂಬ ಕೆಲವು ದೃಶ್ಯಗಳನ್ನು ನೀಡಿದೆ. ಆದ್ರೆ ಹಾಗಂತ ಸೂರ್ಯನ ಅಂತ್ಯ ಹತ್ತಿರದಲ್ಲಿಲ್ಲ. ಇನ್ನು ಸಹ 5 ಶತಕೋಟಿ ವರ್ಷಗಳು ಕಳೆಯಬೇಕು ಎಂದು ಅಂದಾಜಿಸಲಾಗಿದೆ. ಆದರೆ ಇಂದು ಪ್ರಪಂಚ ಹೇಗೆ ಕೊನೆಗೊಳ್ಳಲಿದೆ ಎಂಬ ಮಾಹಿತಿಯನ್ನು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನಮ್ಮ ಸೂರ್ಯನ ಅಂತ್ಯ

ನಮ್ಮ ಸೂರ್ಯನ ಅಂತ್ಯ

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

ಇದೊಂದು ಸುಂದರವಾದ ಚಿತ್ರ. ಆದ್ರೆ ನಮ್ಮ ಪ್ರಪಂಚದ ಮುಂದಿನ ಭವಿಷ್ಯವು ಹೌದು. 5 ಶತಕೋಟಿ ವರ್ಷಗಳ ನಂತರ ಸೂರ್ಯನ ಆಯಸ್ಸು ಮುಗಿಯಲಿದ್ದು, ಸೂರ್ಯ ಅಂತ್ಯ ಗೊಳ್ಳುತ್ತಿದ್ದಾನೆ. ಆ ಸಮಯದಲ್ಲಿ ಭೂಮಿ ಧೀರ್ಘವಾಗಿ ಕೊನೆಗೊಳ್ಳುತ್ತದೆ ಎಂದು ಹಬಲ್‌ ಸ್ಪೇಸ್‌ ಟೆಲಿಸ್ಕೋಪ್ ನೀಡಿದ ಚಿತ್ರವನ್ನು ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿ ಹೇಳಿದೆ.
ಚಿತ್ರ ಕೃಪೆ : NASA, ESA/Hubble Team/Jet Propulsion Laboratory

 ಸೂರ್ಯನ ಅಂತ್ಯ

ಸೂರ್ಯನ ಅಂತ್ಯ

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

ಸಂಕೀರ್ಣವಾದ ಸುರುಳಿಯ ಅನಿಲ ಸೂರ್ಯನ ಭವಿಷ್ಯದ ಬಗ್ಗೆ ಚಿತ್ರಣವನ್ನು ನೀಡುತ್ತದೆ ಎಂದು ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಹೇಳಿದೆ. ಅಲ್ಲದೇ 5 ಶತಕೋಟಿ ವರ್ಷಗಳಲ್ಲಿ ಸೂರ್ಯ ಸಾಯಲಿದ್ದಾನೆ ಎಂದು ಹೇಳಿದೆ.
ಚಿತ್ರ ಕೃಪೆ : AFP/Getty Images

ಹೊರ ಪದರಗಳ ಚೆಲ್ಲುವಿಕೆ

ಹೊರ ಪದರಗಳ ಚೆಲ್ಲುವಿಕೆ

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

ಸೂರ್ಯನು ತನ್ನ ಹೊರ ಪದರಗಳನ್ನು ಚೆಲ್ಲುತ್ತಿದ್ದು, ಅದರ ಉರಿಯುವಿಕೆಯ ತಿರುಳನ್ನು ನೀರಿಕ್ಷೆ ಮಾಡಿ, ಅದು ಅಂತ್ಯಗೊಳ್ಳುವುದನ್ನು ಅಂದಾಜಿಸಲಾಗಿದೆ.
ಚಿತ್ರ ಕೃಪೆ : Reuters

ಸೂರ್ಯನ ಅಂತ್ಯದಿಂದ ಭೂಮಿಯ ಧೀರ್ಘಕಾಲದ ಕೊನೆ

ಸೂರ್ಯನ ಅಂತ್ಯದಿಂದ ಭೂಮಿಯ ಧೀರ್ಘಕಾಲದ ಕೊನೆ

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

ಸೂರ್ಯನ ಅಂತ್ಯದಿಂದ ಭೂಮಿಯು ಧೀರ್ಘಕಾಲದ ಅಂತ್ಯವಾಗಲಿದೆ. ಆದರೆ ನಕ್ಷತ್ರ ಸೌಂದರ್ಯ ಜಗತ್ತಿನಾದ್ಯಂತ ಹೊಳೆಯಲಿದೆ. ನಕ್ಷತ್ರದ ಆಯಸ್ಸಿನ ಪ್ರಕಾರ ನ್ಯೂಕ್ಲಿಯರ್‌ ಪ್ರತಿಕ್ರಿಯೆ ಹೊಳೆಯುತ್ತವಂತೆ ಮಾಡುತ್ತದೆ.
ಚಿತ್ರ ಕೃಪೆ: NASA/ESA/G. Bacon (STScl)

ನಕ್ಷತ್ರಗಳ ಅಂತ್ಯಕ್ಕೆ ಕಾರಣವೇನು ಗೊತ್ತೇ?

ನಕ್ಷತ್ರಗಳ ಅಂತ್ಯಕ್ಕೆ ಕಾರಣವೇನು ಗೊತ್ತೇ?

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

ಈ ಅನಿಶ್ಚಿತ ಪೀಳಿಗೆಯ ಅನಿಯಮಿತ ಚಟುವಟಿಕೆಗಳಿಂದ ಹೊರವಲಯದ ಅನಿಲಗಳು ಬಾಹ್ಯಾಕಾಶಕ್ಕೆ ಹರಡಿ ನಕ್ಷತ್ರಗಳು ಅದಕ್ಕೆ ಸ್ಪಂದಿಸಿ ಅವುಗಳ ನಾಶಕ್ಕೆ ಕಾರಣವಾಗುತ್ತಿದೆ.
ಚಿತ್ರ ಕೃಪೆ: ESA

 Kohoutek 4-55

Kohoutek 4-55

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

Kohoutek 4-55, ಅಂತ್ಯಗೊಳ್ಳುತ್ತಿದ್ದ ನಕ್ಷತ್ರದ ಪುಂಜವಾಗಿದ್ದು, ಇದರ ರೀತಿಯಲ್ಲಿಯೇ ಸೂರ್ಯನ ನಕ್ಷತ್ರ ಸಮೂಹವು ಸಹ ನಾಶ ಹೊಂದಲಿದೆ ಎಂದು ಹೇಳಲಾಗಿದೆ.
ಚಿತ್ರ ಕೃಪೆ : NASA, ESA/Hubble Team/Jet Propulsion Laboratory

 ಹಬಲ್‌

ಹಬಲ್‌

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

'ಹಬಲ್' ಸ್ಪೇಸ್‌ ಟೆಲಿಸ್ಕೋಪ್‌ ಆಗಿದ್ದು, ಪ್ರಸ್ತುತದಲ್ಲಿ ತೆಗೆದ ಚಂದದ ಚಿತ್ರಗಳನ್ನು ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆಗೊಳಿಸಿದೆ. ಇದು ವಿಶಾಲವಾದ ಪ್ಲಾನೆಟರಿ ಕ್ಯಾಮೆರಾ 2 (WFPc2) ಆಗಿದೆ. ಅಲ್ಲದೇ ಇದನ್ನು 1993ರಲ್ಲಿ ಇನ್‌ಸ್ಟಾಲ್‌ ಮಾಡಲಾಗಿದೆ.

ಹಬಲ್‌ ಟೆಲಿಸ್ಕೋಪ್‌ ಸೆರೆಹಿಡಿದ ವೀಡಿಯೋ

ಜಗತ್ತು ಹೇಗೆ ಕೊನೆಗೊಳ್ಳುತ್ತದೆ

ವೀಡಿಯೋ

Source-Megiston

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How our world will end: Hubble image gives a glimpse of what the sun will look like when it dies. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot