ಸಮುದ್ರದ ನೀರಿನಿಂದ ವಿದ್ಯುತ್ ಉತ್ಪಾದನೆಗೆ ಹೊಸ ವಿಧಾನ!!
ಭೂಮಿಯ ಮೇಲೆ ಅತ್ಯಧಿಕವಾಗಿ ಇರುವ ಸಂಪನ್ಮೂಲ ಎಂದರೆ "ಸಮುದ್ರ ನೀರು". ಇಷ್ಟು ದಿನ ಗಾಳಿ ಮೂಲಕ, ಕಲ್ಲಿದ್ದಲಿನ ಮೂಲಕ, ಸಮುದ್ರದ ಅಲೆಗಳ ಏರಿಳಿತದ ಮೂಲಕ, ನೀರಿನಿಂದ, ಸೂರ್ಯನ ಕಿರಣಗಳಿಂದ ಮಾತ್ರ ವಿದ್ಯುತ್ ಅನ್ನು ಉತ್ಪಾದಿಸಬಹುದು ಎಂಬುದು ಮಾತ್ರ ತಿಳಿದಿತ್ತು. ಆದ್ರೆ ಈಗ ಭೂಮಿಯ ಮೇಲಿನ ಅತ್ಯಧಿಕ ಸಂಪನ್ಮೂಲ ಸಮುದ್ರದ ನೀರಿನಿಂದಲೂ ಸಹ ವಿದ್ಯುತ್ ಅನ್ನು ಉತ್ಪಾದಿಸಬಹುದು ಎಂಬುದನ್ನು ಸಂಶೋಧಕರ ತಂಡವೊಂದು ಕಂಡುಹಿಡಿದಿದೆ. ಸಮುದ್ರದ ನೀರಿನಿಂದ ಇಲೆಕ್ಟ್ರಿಸಿಟಿ ಉತ್ಪಾದಿಸುವ ಹೊಸ ವಿಧಾನ ಯಾವುದು? ಅದರ ಕಾರ್ಯಾಚರಣೆ ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ಲೇಖನದ ಸ್ಲೈಡರ್ ಓದಿ ತಿಳಿಯಿರಿ.
ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

1
ಈ ಹಿಂದೆ ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸುವ ಬಗ್ಗೆ ಮಾಹಿತಿಯನ್ನು ಬಹುಸಂಖ್ಯಾತರು ಪ್ರೌಢಶಾಲೆಯ ಪಠ್ಯ ಪುಸ್ತಕಗಳಲ್ಲೇ ಕೇಳಿರುತ್ತೀರಿ. ಆದ್ರೆ ಈಗ ವಿಜ್ಞಾನಿಗಳ ತಂಡವೊಂದು ಸಮುದ್ರದ ನೀರಿನಿಂದಲೇ ಇಲೆಕ್ಟ್ರಿಸಿಟಿ ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ.

2
ವಿಜ್ಞಾನಿಗಳು ಸೂರ್ಯನ ಬೆಳಕನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಸಮುದ್ರದ ನೀರನ್ನು 'ಹೈಡ್ರೋಜನ್ ಪೆರಾಕ್ಸೈಡ್'ಗೆ ಬದಲಿಸುತ್ತಾರಂತೆ. ನಂತರ "ಹೈಡ್ರೋಜನ್ ಪೆರಾಕ್ಸೈಡ್" ವಿದ್ಯುತ್ ಉತ್ಪಾದಿಸಲು ಇಂಧನ ಕೋಶಗಳಲ್ಲಿ ಬಳಕೆಯಾಗುತ್ತದಂತೆ.

3
"ವಿಜ್ಞಾನಿಗಳು ಕಂಡುಹಿಡಿದಿರುವ ಮೊದಲ ಹೈಡ್ರೋಜನ್ ಪೆರಾಕ್ಸೈಡ್‌ನ (H2O2) ಫೋಟೋ ಕೆಟಾಲಿಟಿಕ್ ಮಾದರಿಯಾಗಿದ್ದು, ಇಂಧನ ಕೋಶಗಳಲ್ಲಿ ಅಧಿಕ ದಕ್ಷತೆ ಕಾಪಾಡುತ್ತದೆ" ಎಂದು ಸಂಶೋಧಕರು ಹೇಳಿದ್ದಾರೆ.

4
"ಭೂಮಿಯ ಮೇಲೆ ಇರುವ ಅತ್ಯಂತ ಹೇರಳವಾದ ಸಂಪನ್ಮೂಲ "ಸಮುದ್ರದ ನೀರು" (H2O2) ಸೋಲಾರ್ ಇಂಧನ ಉತ್ಪಾದಿಸಲು ಬಳಕೆಯಾಗುತ್ತದೆ" ಎಂದು ಸಂಶೋಧನೆಯ ಪ್ರಮುಖರಾದ ಜಪಾನ್‌ನ ಒಸಾಕ ವಿಶ್ವವಿದ್ಯಾನಿಲಯದ 'ಶುನಿಛಿ ಫುಕುಜುಮಿ' ಹೇಳಿದ್ದಾರೆ.

5
ಸಂಶೋಧಕರು ಅತ್ಯಾಧುನಿಕ ಫೋಟೋ-ಇಲೆಕ್ಟ್ರೋಕೆಮಿಕಲ್ ಕೋಶವನ್ನು ಅಭಿವೃದ್ದಿಪಡಿಸಿದ್ದು, ಈ ಸೋಲಾರ್ ಕೋಶಗಳು (H2O2) ಅನ್ನು ಉತ್ಪಾದಿಸುತ್ತವೆ. ಸೂರ್ಯನ ಬೆಳಕು ಯಾವಾಗ ಪೋಟೋ ಕೆಟಾಲಿಟಿಕ್ ಅನ್ನು ಪ್ರಕಾಶಿಸುತ್ತದೋ ಆಗ ಪೋಟಾನ್ಸ್ ಹೀರಿಕೊಂಡು ರಾಸಾಯನಿಕ ಪ್ರತಿಕ್ರಿಯೆ ನೀಡಲು ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಸಮುದ್ರ ನೀರಿನ ಆಕ್ಸಿಡೀಕರಣ ಮತ್ತು O2 ಸಂಕೋಚನ ಪ್ರಕ್ರಿಯೆ ಅಂತಿಮವಾಗಿ (H2O2) ಅನ್ನು ಉತ್ಪಾದಿಸುತ್ತವೆ.

6
ಫೋಟೋ ಕೆಟಾಲಿಟಿಕ್ ಮಾದರಿಯಲ್ಲಿ ಸಮುದ್ರದ ನೀರುವ ಸೂರ್ಯನ ಬೆಳಕಿನಿಂದ 24 ಗಂಟೆಗಳ ಕಾಲ ಪ್ರಕಾಶಿಸುವಿಕೆಯಿಂದ ಸಮುದ್ರದ ನೀರು 48ಮಿಲಿಮೊಲಾರ್ (mM) ತಲುಪಲಿದೆ.

7
ಸಂಶೋಧಕರು ಋಣಾತ್ಮಕವಾಗಿ ಕ್ಲೋರಿನ್ ಅನ್ನು ಸಮುದ್ರದ ನೀರಿನಿಂದ ಚಾರ್ಜ್ ಮಾಡುವುದನ್ನು ಕಂಡುಹಿಡಿದಿದ್ದು, ಇದು ಮುಖ್ಯವಾಗಿ ಫೋಟೋ ಕೆಟಾಲಿಟಿಕ್ ಚಟುವಟಿಕೆಗೆ ಕಾರಣವಾಗಿದೆ. ಒಟ್ಟಾರೆ ಇದು ಸೋಲಾರ್ ಅನ್ನು ಇಲೆಕ್ಟ್ರಿಸಿಟಿ ಸಾಮರ್ಥ್ಯವಾಗಿಸುವ ವ್ಯವಸ್ಥೆಯಾಗಿದ್ದು, ಶೇಕಡ 0.28 ಪವರ್ ಉತ್ಪಾದಿಸಲಿದೆ. ಇದು ಸಾಂಪ್ರದಾಯಿಕ ಸೋಲಾರ್ ಕೋಶಗಳಿಂದ ಉತ್ಪಾದಿಸುವ ಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯದ ಇಲೆಕ್ಟ್ರಿಸಿಟಿ ಉತ್ಪಾದನೆ ಇದಾಗಿದೆ.

8
ಸಮುದ್ರದ ನೀರಿನಿಂದ ಪವರ್ ಉತ್ಪಾದಿಸುವ ಈ ವಿಧಾನವು ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ 'ಫೋಟೋ- ಕೆಟಾಲಿಟಿಕ್" ಕೋಶಗಳಲ್ಲಿ ಉತ್ತಮ ವಸ್ತುಗಳನ್ನ ಬಳಸುವ ಮೂಲಕ ನಿರೀಕ್ಷಿತ ಸಾಮರ್ಥ್ಯವನ್ನು ಪಡೆಯಬಹುದು ಎಂದಿದ್ದಾರೆ. ಅಲ್ಲದೇ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದ್ದಾರೆ. ಈ ಸಂಶೋಧನೆಯು 'ನೇಚರ್ ಕಂಮ್ಯೂನಿಕೇಷನ್" ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.

ಗಿಜ್‌ಬಾಟ್



Click it and Unblock the Notifications








