Home
ಸುದ್ದಿಜಾಲ

ವಿ ಟೆಲಿಕಾಂ ಗ್ರಾಹಕರಿಗೆ ಭಾರೀ ಉಳಿತಾಯ; ರೀಚಾರ್ಜ್‌ ಮೇಲೆ 2,400ರೂ.ವರೆಗೂ ರಿಯಾಯಿತಿ!

ಟೆಲಿಕಾಂ ಸೇವೆ ನೀಡುವಲ್ಲಿ ಏರ್‌ಟೆಲ್‌, ಜಿಯೋ ಪ್ರಮುಖ ಸ್ಥಾನ ಪಡೆದರೆ ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್‌ ಸಹ ತಮ್ಮದೇ ಆದ ಪ್ರಭಾವ ಬೀರಿವೆ. ಆದರೆ, ಏರ್‌ಟೆಲ್‌, ಜಿಯೋ ನಡುವೆ ಮಧ್ಯೆ ಸಿಲುಕಿಕೊಂಡಿರುವ ವಿ ಟೆಲಿಕಾಂ ಹೊಸದಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಗಾಗ್ಗೆ ಭಾರೀ ಸದ್ದು ಮಾಡುತ್ತಿದ್ದು, ಈ ನಡುವೆ ಪ್ರಮುಖ ಟೆಲಿಕಾಂ ಸಂಸ್ಥೆಗಳೇ ಶಾಕ್‌ಗ ಒಳಗಾಗುವಂತೆ ಮಾಡಿದೆ.

ಹೌದು, ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ವಿ ಟೆಲಿಕಾಂ(VI), ತನ್ನ ಬಳಕೆದಾರರಿಗೆ ಭಾರಿ ರೀಚಾರ್ಜ್ ರಿಯಾಯಿತಿ ಕೊಡುಗೆ ಘೋಷಣೆ ಮಾಡಿದೆ. ವಿ ಸ್ಮಾರ್ಟ್‌ಫೋನ್ ಕಾರ್ಯಕ್ರಮದ ಭಾಗವಾಗಿ ಬಳಕೆದಾರರು ರೀಚಾರ್ಜ್‌ನಲ್ಲಿ 2400ರೂ.ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದು. ಇದು ಹೊಸ ಚಂದಾದಾರರನ್ನು ಸೆಳೆಯುವ ಕಾರ್ಯತಂತ್ರದ ಭಾಗವಾಗಿದೆ. ಹಾಗಿದ್ರೆ, ವಿ ಟೆಲಿಕಾಂನ ಹೊಸ ಪ್ಲ್ಯಾನ್‌ ಏನು?, ಇದು ಹೇಗೆ ಕೆಲಸ ಅನ್ವಯ ಆಗುತ್ತದೆ? ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ವಿ ಟೆಲಿಕಾಂ ಗ್ರಾಹಕರಿಗೆ ಭಾರೀ ಉಳಿತಾಯ;ರೀಚಾರ್ಜ್‌ ಮೇಲೆ 2400ರೂ.ವರೆಗೂ ರಿಯಾಯಿತಿ

ವಿ ಸ್ಮಾರ್ಟ್‌ಫೋನ್ ಕಾರ್ಯಕ್ರಮ: ವಿ ಟೆಲಿಕಾಂ ಈ ವಿ ಸ್ಮಾರ್ಟ್‌ಫೋನ್ ಕಾರ್ಯಕ್ರಮದ ಮೂಲಕ ತನ್ನ ವಿ ಹೀರೋ ರೀಚಾರ್ಜ್ ಪ್ಲ್ಯಾನ್‌ 299 ರೂ.ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಪ್ರತಿ ತಿಂಗಳು 100 ರೂಪಾಯಿಗಳ ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಅಷ್ಟು ಮಾತ್ರವಲ್ಲದೆ ಈ ಸೌಲಭ್ಯ ಮುಂದಿನ 24 ತಿಂಗಳುಗಳ ವರೆಗೂ ಲಭ್ಯ ಇರಲಿದ್ದು, ವಿ ಟೆಲಿಕಾಂನ ಈ ಹೊಸ ನಿರ್ಧಾರ ಏರ್‌ಟೆಲ್‌ ಹಾಗೂ ಜಿಯೋಗೆ ಅಚ್ಚರಿ ಮೂಡಿಸಿದೆ ಎಂದರೆ ತಪ್ಪಾಗಲಾರದು.

ಆಪ್‌ ಮೂಲಕವೇ ರೀಚಾರ್ಜ್‌ ಮಾಡಬೇಕು: ಇನ್ನು ಈ ಕಾರ್ಯಕ್ರಮದಲ್ಲಿ ಕೆಲವು ಸುಲಭ ಷರತ್ತುಗಳನ್ನು ವಿಧಿಸಲಾಗಿದೆ. ಅಂದರೆ, ರೀಚಾರ್ಜ್ ಮೊತ್ತದಲ್ಲಿ 100 ರೂಪಾಯಿಗಳನ್ನು ಉಳಿಸಲು ಗ್ರಾಹಕರು ವಿ ಆಪ್‌ ಅನ್ನೇ ಬಳಕೆ ಮಾಡಬೇಕಿದೆ. ಅಷ್ಟು ಮಾತ್ರವಲ್ಲದೆ ಇದು ಹೊಸ ಬಳಕೆದಾರರನ್ನು ಆಹ್ವಾನಿಸುವ ಪ್ಲ್ಯಾನ್‌ ಆಗಿದ್ದು, ಅಸ್ತಿತ್ವದಲ್ಲಿರುವ ವಿ ಚಂದಾದಾರರು ಮತ್ತು ಹೊಸ ವಿ ಚಂದಾದಾರರು ಇದಕ್ಕೆ ಅರ್ಹರಾಗಿದ್ದಾರೆ.

ಇನ್ನು ಈ ಕೊಡುಗೆಯನ್ನು ಪಡೆಯಲು ಅಸ್ತಿತ್ವದಲ್ಲಿರುವ ವಿ ಚಂದಾದಾರರು ತಮ್ಮ ವಿ ಸಿಮ್ ಅನ್ನು 4G/5G ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಜೊತೆಗೆ ಇತರರು ಈ ಕೊಡುಗೆಯನ್ನು ಪಡೆಯಲು ವಿ ನ ಹೊಸ ಸಿಮ್ ಖರೀದಿ ಮಾಡಬೇಕಿದೆ. ಹಾಗೆಯೇ ಈ ಸಿಮ್‌ ಅನ್ನು 4G/5G ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಬಳಕೆ ಮಾಡಬೇಕಿದೆ. ಅಷ್ಟು ಮಾತ್ರವಲ್ಲದೆ ಈ ಆಫರ್ ಸೌಲಭ್ಯವು ಕಳೆದ 6 ತಿಂಗಳಿಂದ ತಮ್ಮ ಫೋನ್‌ಗಳಲ್ಲಿ ವಿ ಸಿಮ್ ಬಳಸದವರಿಗೆ ಮಾತ್ರ ಲಭ್ಯ ಇದೆ.

ಅದರಂತೆ ಹೊಸ ಸಿಮ್ ಅಥವಾ ಅಸ್ತಿತ್ವದಲ್ಲಿರುವ ಸಿಮ್ ಅನ್ನು 4G/5G ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್‌ ಮಾಡಿಕೊಂಡ 24 ಗಂಟೆಗಳ ಒಳಗೆ ಬಳಕೆದಾರರು ಒಂದು ಸ್ವಾಗತ ಸಂದೇಶವನ್ನು ಸ್ವೀಕಾರ ಮಾಡುತ್ತಾರೆ. ಅದರಲ್ಲಿ 2,400ರೂ.ಗಳ ರೀಚಾರ್ಜ್ ರಿಯಾಯಿತಿಯ ವಿವರಗಳನ್ನು ನೀಡಲಾಗುತ್ತದೆ. ಅದರಂತೆ ಈ ರೀಚಾರ್ಜ್ ಮೇಲಿನ ರಿಯಾಯಿತಿಯನ್ನು ಪಡೆಯುವ ವಿಧಾನ ಸಹ ತುಂಬಾ ಸರಳವಾಗಿದೆ.

ರಿಯಾಯಿತಿ ಪಡೆಯಲು ಏನು ಮಾಡಬೇಕು?: ಅಸ್ತಿತ್ವದಲ್ಲಿರುವ ಮತ್ತು ಹೊಸ ವಿ ಗ್ರಾಹಕರು ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಿದ ನಂತರ 30 ದಿನಗಳ ಒಳಗೆ 299 ರೂ.ಗಳು ಅಥವಾ ಅದಕ್ಕಿಂತ ಹೆಚ್ಚಿನ ಯಾವುದೇ ವಿ ಹೀರೋ ಅನ್‌ಲಿಮಿಟೆಡ್ ಪ್ಯಾಕ್‌ನೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಈ ಮೂಲಕ ತಮ್ಮ ರೀಚಾರ್ಜ್‌ ಮೇಲೆ ಬಳಕೆದಾರರು 100ರೂ.ಗಳ ರಿಯಾಯಿತಿ ಪಡೆದುಕೊಳ್ಳಬಹುದು.

ಇನ್ನು ಒಮ್ಮೆ ರೀಚಾರ್ಜ್ ಮಾಡಿದ ನಂತರ ಬಳಕೆದಾರರು ವಿ ಆಪ್‌ ನಲ್ಲಿನ ಮೈ ಕೂಪನ್ಸ್ ವಿಭಾಗದಲ್ಲಿ 100 ರೂ.ಗಳ ರೀಚಾರ್ಜ್ ಡಿಸ್ಕೌಂಟ್ ಕೂಪನ್ ಅನ್ನು ನೋಡಬಹುದು. ಈ ಕೂಪನ್ ಅನ್ನು ಮುಂದಿನ ಬಾರಿ ವಿ ಹೀರೋ ರೀಚಾರ್ಜ್‌ಗೆ ಬಳಕೆ ಮಾಡಿಕೊಳ್ಳಬಹುದು. ಜೊತೆಗೆ ಅರ್ಹ ಹೀರೋ ಅನ್‌ಲಿಮಿಟೆಡ್ ಪ್ಯಾಕ್‌ಗಳಲ್ಲಿ ಆಟೋಮ್ಯಾಟಿಕ್‌ ಆಗಿ ಈ ಕೂಪನ್ ರಿಡೀಮ್‌ ಆಗುತ್ತದೆ.

ವಿ ಟೆಲಿಕಾಂ ಗ್ರಾಹಕರಿಗೆ ಭಾರೀ ಉಳಿತಾಯ;ರೀಚಾರ್ಜ್‌ ಮೇಲೆ 2400ರೂ.ವರೆಗೂ ರಿಯಾಯಿತಿ

ಈ ಕೊಡುಗೆಯು ಜುಲೈ 4 ರಿಂದ ಸೆಪ್ಟೆಂಬರ್ 30 ರವರೆಗೆ ಚೆನ್ನೈ, ಪಂಜಾಬ್ ಮತ್ತು ಹರಿಯಾಣದಲ್ಲಿ ಮಾನ್ಯವಾಗಿರುತ್ತದೆ. ಆದರೆ, ಕರ್ನಾಟಕವೂ ಸೇರಿದಂತೆ ಇತರೆ ಯಾವೆಲ್ಲಾ ರಾಜ್ಯಗಳಿಗೆ ಈ ಪ್ರಯೋಜನವನ್ನು ಯಾವಾಗ ಘೋಷಣೆ ಮಾಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Best Mobiles in India

English summary
VI Telecom one of the leading telecom companies in the country, has announced a huge recharge discount offer for its users. As part of the VI Smartphone program, users can avail a discount of up to Rs 2,400 on recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+