Home
ಸುದ್ದಿಜಾಲ

1 TB ವರೆಗೂ ಸ್ಟೋರೇಜ್‌ ಆಯ್ಕೆ ಇರುವ ಈ ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ? ! ಭರ್ಜರಿ ಫೀಚರ್ಸ್‌!

ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ಕೆಲವು ಫೋನ್‌ಗಳು ಕಡಿಮೆ ಫೀಚರ್ಸ್‌ ಹೊಂದಿದ್ದರೂ ಹೆಚ್ಚಿನ ಬೆಲೆ ಇರುವುದನ್ನು ಕಾಣಬಹುದು. ಆದರೆ, ಇನ್ನೂ ಕೆಲವು ಬ್ರ್ಯಾಂಡ್‌ಗಳು ಹೆಚ್ಚಿನ ಫೀಚರ್ಸ್ ಆಯ್ಕೆ ನೀಡಿದರೂ ಸಹ ಕಡಿಮೆ ಬೆಲೆಗೆ ಈ ಫೋನ್‌ಗಳನ್ನು ನೀಡುತ್ತಿವೆ. ಅದರಲ್ಲಿ ಪೊಕೊ ಫೋನ್‌ಗಳು ಪ್ರಮುಖ. ಅದರಂತೆ ಇಲ್ಲೊಂದು ಫೋನ್‌ಗೆ ಭರ್ಜರಿ ಆಪರ್ ಘೋಷಣೆ ಮಾಡಲಾಗಿದೆ.

ಹೌದು, ಪೊಕೊ ಫೋನ್‌ಗಳು (Poco Smartphone) ಇಂದು ಹೆಚ್ಚಿನ ಬೇಡಿಕೆ ಪಡೆಯುತ್ತಿದ್ದು, ಅದರಂತೆ ಪೊಕೊ ಹೊಸ ಹೊಸ ಫೋನ್‌ಗಳನ್ನೂ ಸಹ ಅನಾವರಣ ಮಾಡಿಕೊಂಡು ಬರುತ್ತಿದೆ. ಈ ಬೆಳವಣಿಗೆ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಪೊಕೊ M4 ಪ್ರೊ (POCO M4 Pro) ಫೋನ್‌ಗೆ ಬರೋಬ್ಬರಿ 36% ರಿಯಾಯಿತಿ ನೀಡಲಾಗಿದೆ. ಈ ಫೋನ್‌ 1 TB ವರೆಗೂ ವಿಸ್ತರಣೆ ಮಾಡಬಹುದಾದ ಸ್ಟೋರೇಜ್‌ ಆಯ್ಕೆ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ವಿವರ ತಿಳಿಯೋಣ ಬನ್ನಿ.

1 TB ವರೆಗೂ ಸ್ಟೋರೇಜ್‌ ಆಯ್ಕೆ ಇರುವ ಈ ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ? !

ಪೊಕೊ M4 ಪ್ರೊ: ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಬಯಸುವವರಿಗೆ ಇದು ಉತ್ತಮ ಸಮಯ ಎಂದರೆ ತಪ್ಪಾಗಲಾರದು. ಯಾಕೆಂದರೆ ವರ್ಷಾಂತ್ಯದ ಹಿನ್ನೆಲೆ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಫೋನ್‌ಗಳಿಗೆ ವಿಶೇಷ ಆಫರ್ ನೀಡಲಾಗುತ್ತಿದೆ. ಅದರಂತೆ ಫ್ಲಿಪ್‌ಕಾರ್ಟ್ (Flipkart) ಪೊಕೊ M4 ಪ್ರೊ ಸ್ಮಾರ್ಟ್‌ಫೋನ್‌ಗೆ ಆಫರ್ ನೀಡಿದೆ. ಅಂದರೆ 21,999 ರೂ.ಗಳ ಸಾಮಾನ್ಯ ಬೆಲೆ ಹೊಂದಿರುವ ಈ ಫೋನ್‌ ಅನ್ನು ನೀವು ಇದೀಗ 13,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಮೇಲೆ 5% ಕ್ಯಾಶ್‌ಬ್ಯಾಕ್, 867ರೂ.ಗಳ ಆರಂಭಿಕ ಇಎಮ್‌ಐ ಆಯ್ಕೆ, FreebieSpotify ಪ್ರೀಮಿಯಂ ಸೌಲಭ್ಯ ಸೇರಿದಂತೆ ಈ ಫೋನ್ ಖರೀದಿ ವೇಳೆ ನೀವು ಸಾಕಷ್ಟು ಇತರೆ ಪ್ರಯೋಜನಗಳನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಬೆಲೆಗೆ ಈ ಫೋನ್‌ ಯೋಗ್ಯವೇ ಅಥವಾ ಖರೀದಿಸಬಹುದೇ ಎಂದು ತಿಳಿಯಲು ಅದರ ಫೀಚರ್ಸ್‌ ಕಡೆ ಕಣ್ಣಾಯಿಸಿ.

1 TB ವರೆಗೂ ಸ್ಟೋರೇಜ್‌ ಆಯ್ಕೆ ಇರುವ ಈ ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ? !

ಪೊಕೊ M4 ಪ್ರೊ ಡಿಸ್‌ಪ್ಲೇ ಮಾಹಿತಿ : ಈ ಸ್ಮಾರ್ಟ್‌ಫೋನ್ 6.43 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್ಪ್ಲೇ ಹೊಂದಿದ್ದು, 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 90Hz ರಿಫ್ರೆಶ್ ರೇಟ್, 4500000:1 ಕಾಂಟ್ರಾಸ್ಟ್ ರೇಶಿಯೋ, DCI-P3 ಕಲರ್ ಗ್ಯಾಮಟ್ ಸೇರಿದಂತೆ ಪ್ರೀಮಿಯಂ ಡಿಸ್‌ಪ್ಲೇ ಫೀಚರ್ಸ್ ಅನ್ನು ಈ ಫೋನ್‌ ಹೊಂದಿದೆ.

ಪೊಕೊ M4 ಪ್ರೊ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೊ G96 ಪ್ರೊಸೆಸರ್‌ ಬಲ ಪಡೆದಿದ್ದು, ಆಂಡ್ರಾಯ್ಡ್ 11 ಓಎಸ್‌ ಅನ್ನು ಇದು ರನ್‌ ಮಾಡಲಿದೆ. ಇದರೊಂದಿಗೆ 128 GB ಇಂಟರ್‌ ಸ್ಟೋರೇಜ್‌ ಹೊಂದಿದ್ದು, 8 GB RAM ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 1 TB ವರೆಗೆ ಇಂಟರ್‌ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಲು ಅನುವು ಮಾಡಿಕೊಡಲಾಗಿದೆ.

ಪೊಕೊ M4 ಪ್ರೊ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ (f/1.8 ಅಪರ್ಚರ್, ಪಿಕ್ಸೆಲ್ ಗಾತ್ರ: 0.7um, (4-in-1: 16MP, 1.4um) 8 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದಿದೆ. ಈ ಸೆನ್ಸರ್‌ಗಳು ಫೇಸ್ ಡಿಟೆಕ್ಷನ್ ಆಟೋ ಫೋಕಸ್ ಸೇರಿದಂತೆ ಅನೇಕ ಫೀಚರ್ಸ್‌ ಅನ್ನು ಪಡೆದಿವೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

1 TB ವರೆಗೂ ಸ್ಟೋರೇಜ್‌ ಆಯ್ಕೆ ಇರುವ ಈ ಫೋನ್‌ಗೆ ಇಷ್ಟೊಂದು ರಿಯಾಯಿತಿಯೇ? !

ಪೊಕೊ M4 ಪ್ರೊ ಬ್ಯಾಟರಿ ಹಾಗೂ ಇತರೆ: 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 4G, 3G, 2G ನೆಟ್‌ವರ್ಕ್ ಸಾಮರ್ಥ್ಯ, ಬ್ಲೂಟೂತ್ ಆವೃತ್ತಿ v5.0, ವೈ-ಫೈ ಆವೃತ್ತಿ 802.11 a/b/g/n (2.4 GHz | 5 GHz), ಆಡಿಯೋ ಜ್ಯಾಕ್ ಸೇರಿದಂತೆ ಅನೇಕ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. ಇದರೊಂದಿಗೆ ಸೈಡ್ ಮೌಂಟೆಡ್ ಸೆನ್ಸರ್‌, ಫೇಸ್ ಅನ್‌ಲಾಕ್, ಡ್ಯುಯಲ್ ಅಪ್ಲಿಕೇಶನ್ ಬೆಂಬಲ ಸೇರಿದಂತೆ ಫೀಚರ್ಸ್‌ ಈ ಫೋನ್‌ನಲ್ಲಿದೆ.

Best Mobiles in India

English summary
POCO M4 Pro Smartphone has been given a discount of 36%. The phone has an expandable storage option of up to 1 TB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+