Home
Scitech

ವಿಜ್ಞಾನಿಗಳಿಂದ ದಕ್ಷಿಣ ಚೀನಾ ಸಮುದ್ರದಲ್ಲಿ ಆಳದ 'ನೀಲಿ ಕುಳಿ' ಪತ್ತೆ

By Suneel

ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಬಾಹ್ಯಾಕಾಶ ಪ್ರದೇಶ ಕಪ್ಪು ಕುಳಿ (Black Hole) ಬಗ್ಗೆ ಬಹುಸಂಖ್ಯಾತರು ಕೇಳಿರಬಹುದು. ಬೆಳಕು ಸಹ ಕಪ್ಪು ಕುಳಿಯ ಗುರುತ್ವಾಕರ್ಷಣೆಯಿಂದ ಹೊರಬರಲು ಸಾಧ್ಯವಿಲ್ಲ. ಈ ಮಾಹಿತಿ ಬಾಹ್ಯಾಕಾಶದಲ್ಲಿನ ಕಪ್ಪು ಕುಳಿ ವಿಶೇಷತೆ. ಆದರೆ ಇಂತಹ ಭಯಾನಕ ಕುಳಿ ಭೂಮಿಯ ಮೇಲು ಇವೆ.

ದಕ್ಷಿಣ ಚೀನಾ ಸಮುದ್ರದ ಮಧ್ಯಭಾಗದಲ್ಲಿ ದೈತ್ಯ ನೀಲಿ ಕುಳಿಯೊಂದನ್ನು(Blue Hole) ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಎಲ್ಲರಿಗೂ ಆಶ್ಚರ್ಯ ಉಂಟುಮಾಡುವ ಭೂಮಿಯಲ್ಲಿ ಪತ್ತೆಯಾದ 'ನೀಲಿ ಕುಳಿ' ಬಗ್ಗೆ ವಿಶೇಷ ಮಾಹಿತಿ ತಿಳಿಯಲು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು

ನೀಲಿ ಕುಳಿ

ನೀಲಿ ಕುಳಿ

ಚೀನಾ ಪ್ರಪಂಚದ ಅತ್ಯಂತ ಆಳದ ನೀಲಿ ಕುಳಿಯನ್ನು ಭೂಮಿಯ ಮೇಲೆ ಪತ್ತೆ ಮಾಡಿರುವುದಾಗಿ ಹೇಳಿದೆ.

 987 ಅಡಿ ಆಳದ ನೇರ ಕುಳಿ

987 ಅಡಿ ಆಳದ ನೇರ ಕುಳಿ

ಚೀನಾ ಪತ್ತೆ ಮಾಡಿರುವ ನೀಲಿ ಕುಳಿಯನ್ನು (Blue Hole) "ಡ್ರಾಗನ್‌ ಹೋಲ್‌' ಎಂದು ಕರೆಯಲಾಗಿದ್ದು, ಸಮುದ್ರದ ಮಧ್ಯ ಭಾಗದಲ್ಲಿ ನೀಲಿ ಕುಳಿ ಕಾಣಿಸಿಕೊಂಡಿದೆ.

 ದಾಖಲೆ ಮುರಿದ ನೀಲಿ ಕುಳಿ

ದಾಖಲೆ ಮುರಿದ ನೀಲಿ ಕುಳಿ

ನೀಲಿ ಕುಳಿಯನ್ನು ನೋಡಿದ ಎಲ್ಲರೂ ಸಹ ಗಾಬರಿಯಾಗುವ ವಿಶೇಷವೆಂದರೆ ಈ ಹಿಂದೆ ಭೂಮಿಯ ಮೇಲೆ ಪತ್ತೆಯಾಗಿದ್ದ ನೀಲಿ ಕುಳಿ ಕೇವಲ 300 ಅಡಿ ಆಳವಿತ್ತು. ಆದರೆ ಈಗ ಚೀನಾ ಪತ್ತೆಹಚ್ಚಿರುವ ನೀಲಿ ಕುಳಿ 987 ಅಡಿ ಆಳವಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ.

ಆಳದ ಬಗ್ಗೆ ನಿದರ್ಶನ

ಆಳದ ಬಗ್ಗೆ ನಿದರ್ಶನ

ನೀಲಿ ಕುಳಿ ಎಷ್ಟು ಅಡಿ ಆಳವಿದೆ ಎಂದು ನೋಡಲು 'ಐಫೆಲ್ ಟವರ್' ಅನ್ನು ನೀಲಿ ಕುಳಿ ಒಳಗೆ ಹಾಕಿದರೆ ಅದು ಸಹ ಮುಚ್ಚಿ ಹೋಗಿ ಅದರೆ ಮೇಲೆ ನೀರು ಇರುತ್ತದೆ.

ನೀಲಿ ಕುಳಿ (Blue Hole)

ನೀಲಿ ಕುಳಿ (Blue Hole)

ನೀಲಿ ಕುಳಿಯು ದೈತ್ಯ ಗುಂಡಿಯಾಗಿದ್ದು ಸಮುದ್ರದ ಮಧ್ಯಭಾಗದಲ್ಲಿ ಪತ್ತೆಯಾಗಿದೆ. ಸಮುದ್ರದ ಸುತ್ತಲು ನೀರು ಖಾಲಿಯಾಗಿದ್ದು ಮಧ್ಯದಲ್ಲಿ ಇರುವ ಕುಳಿಯು ನೀಲಿ ಬಣ್ಣದಲ್ಲಿ ಮೇಲಿನಿಂದ ನೋಡಿದರೆ ಕಾಣುತ್ತದೆ. ಆದ್ದರಿಂದ ಇದಕ್ಕೆ ನೀಲಿ ಕುಳಿ ಎಂದು ಹೆಸರು ಇಡಲಾಗಿದೆ.

ಶತಮಾನದ ಹಿಂದೆ ಪತ್ತೆಯಾದ ನೀಲಿ ಕುಳಿ

ಶತಮಾನದ ಹಿಂದೆ ಪತ್ತೆಯಾದ ನೀಲಿ ಕುಳಿ

ಅಂದಹಾಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಪತ್ತೆಯಾದ ಈ ನೀಲಿ ಕುಳಿಯು ಶತಮಾನದ ಹಿಂದಿನಿಂದಲೂ ಪ್ರಖ್ಯಾತವಾಗಿದ್ದು, ವಿಜ್ಞಾನಿಗಳು ಅದರ ಆಳವನ್ನು ಇತ್ತೀಚೆಗೆ ಪತ್ತೆ ಮಾಡಲು ಸಾಧ್ಯವಾಗಿದೆ.

ಪ್ಯಾರಾಸೆಲ್‌ ದ್ವೀಪಗಳು

ಪ್ಯಾರಾಸೆಲ್‌ ದ್ವೀಪಗಳು

ದಕ್ಷಿಣ ಚೀನಾ ಸಮುದ್ರದಲ್ಲಿ ಇರುವ 'ಪ್ಯಾರಾಸೆಲ್‌ ದ್ವೀಪಗಳಲ್ಲಿ ಈ ನೀಲಿ ಕುಳಿ ಪತ್ತೆಯಾಗಿದೆ. ಈ ನೀಲಿ ಕುಳಿಯಲ್ಲಿ 20 ಜಾತಿಯ ಮೀನುಗಳು ಇರುವ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ.

rn

ಆಕ್ಸಿಜನ್‌ ಇಲ್ಲ

ಡ್ರಾಗನ್‌ ಹೋಲ್‌ ಅನ್ನು ವಿಜ್ಞಾನಿಗಳು ಶೋಧನೆ ನಡೆಸಲು ಸ್ಥಳೀಯ ಅಧಿಕಾರಿಗಳಿಂದ ರಕ್ಷಣೆ ನೀಡಲಾಗಿತ್ತು. ವಿಶೇಷ ಅಂದ್ರೆ 300 ಅಡಿ ಆಳದ ನಂತರ ಆಕ್ಸಿಜನ್‌ ಇಲ್ಲದಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
The World’s Deepest Blue Hole Discovered In The South China Sea. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+