VR headset: ವಿಆರ್ ಹೆಡ್‌ಸೆಟ್ ಬಳಕೆ ಮಾಡುವುದರಿಂದ ಈ ಆರೋಗ್ಯ ಪ್ರಯೋಜನ ಇವೆಯಂತೆ! ತಜ್ಞರ ಅಭಿಪ್ರಾಯ
ಯಾವುದೇ ಹೊಸ ಡಿವೈಸ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಅದರ ಸಾಧಕ ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆ ಮಾಡಲಾಗುತ್ತದೆ. ಅದರಂತೆ ಇತ್ತೀಚೆಗೆ ಬಹಳ ಟ್ರೆಂಡಿಗ್‌ನಲ್ಲಿ ಇರುವ ವಿಆರ್ ಹೆಡ್‌ಸೆಟ್‌ಗಳ (VR headset) ಬಗ್ಗೆ ಕೆಲವೊಂದು ಪ್ರಮುಖ ಮಾಹಿತಿಗಳು ಹೊರಬಿದ್ದಿವೆ. ಈ ಮೂಲಕ ಜನರು ವಿವಿಧ ರೀತಿಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ.
ಹೌದು, ವರ್ಚುವಲ್ ರಿಯಾಲಿಟಿ (VR) ಹೆಡ್‌ಸೆಟ್ ಎಂಬ ವಿಷಯ ಹೆಚ್ಚಾಗಿ ಮುನ್ನೆಲೆಗೆ ಬಂದಿದ್ದು, ಆಪಲ್ ವಿಷನ್ ಪ್ರೊ ನಿಂದ ಎಂದರೆ ತಪ್ಪಾಗಲಾರದು. ಈ ಡಿವೈಸ್‌ಗಳು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿವೆ. ಅಲ್ಲದೆ ಯಾವುದೋ ಬೇರೆಯದೇ ಲೋಕಕ್ಕೆ ಕರೆದೊಯ್ಯುವ ಅನುಭವ ನೀಡುತ್ತವೆ. ಹಾಗಿದ್ರೆ, ಬನ್ನಿ ಈ ಡಿವೈಸ್ ಬಳಕೆಯಿಂದ ಬಳಕೆದಾರರಿಗೆ ಏನೆಲ್ಲಾ ಪ್ರಯೋಜನ ಆಗಲಿದೆ ಅನ್ನೋದನ್ನು ಗಮನಿಸೋಣ.

ವಿಆರ್ ಹೆಡ್‌ಸೆಟ್‌ಗಳನ್ನು ಬಳಕೆ ಮಾಡುವುದರಿಂದ ಆಗುವ ಲಾಭಗಳು: ಸಾಮಾನ್ಯವಾಗಿ ಯಾರಾದರೂ ಫೋನ್ ಅನ್ನು ಹೆಚ್ಚಾಗಿ ಬಳಕೆ ಮಾಡಿದ್ರೆ ಸ್ಕ್ರೀನ್‌ಗೆ ಅಂಟಿಕೊಂಡುಬಿಟ್ಟಿದ್ದೀಯಾ ಎಂದು ಕೆಲವರು ಬೈಯುವುದನ್ನು ನೀವು ಕೇಳಿಸಿಕೊಂಡಿರಬಹುದು. ಅಥವಾ ನಿಮಗೆ ಇದ ಅನುಭವ ಆಗಿರಬಹುದು. ಆದರೆ, ನಿಜವಾಗಿ ಸ್ಕ್ರೀನ್‌ಗೆ ಅಂಟಿಕೊಳ್ಳುವುದು ಅನ್ನೋ ಪದಕ್ಕೆ ಈ ವಿಆರ್ ಗಳು ನಿಜವಾದ ಅರ್ಥದಂತೆ ಆಗಿವೆ. ಆದರೆ, ಈ ಡಿವೈಸ್‌ಗಳು ಆರೋಗ್ಯವನ್ನು ಸುಧಾರಿಸುವಲ್ಲಿ ಉತ್ತಮ ಪಾತ್ರ ವಹಿಸುತ್ತವೆ.
ಫೋಬಿಯಾ ಸಮಸ್ಯೆ ನಿವಾರಣೆ: ವೈದ್ಯಕೀಯ ವೃತ್ತಿಪರರು ಫೋಬಿಯಾವನ್ನು ನಿಭಾಯಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುವ ಡಿವೈಸ್‌ಗಳಾಗಿ ಈ ಹೊಸ ವಿಆರ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಈಗಾಗಲೇ ಅಳವಡಿಸಿಕೊಂಡಿದ್ದಾರೆ. ಸುರಕ್ಷಿತ, ನಿಯಂತ್ರಿತ ಪರಿಸರದಲ್ಲಿ ಜೇಡಗಳು, ಕಿಕ್ಕಿರಿದ ಸ್ಥಳಗಳು, ಎತ್ತರಗಳು ಇತ್ಯಾದಿಗಳಂತಹ ಅವರ ಕೆಲವು ಫೋಬಿಯಾಗಳಿಗೆ ಒಡ್ಡಿಕೊಕೊಂಡು. ಈ ಮೂಲಕ ತಮ್ಮ ಭಯವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಕೌಶಲ್ಯಗಳು ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ: ತಜ್ಞರ ಪ್ರಕಾರ, 'ಬೀಟ್ ಸೇಬರ್' ನಂತಹ ವಿಆರ್ ಗೇಮ್‌ಗಳು ಕೇವಲ ದೈಹಿಕ ವ್ಯಾಯಾಮದ ಒಂದು ರೂಪವಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ ಅವು ವಯಸ್ಕರಿಗೆ ಮತ್ತು ಮಕ್ಕಳಿಗೆ ಸಮಾನವಾಗಿ ಅತ್ಯುತ್ತಮ ಮಾನಸಿಕ ಪ್ರಚೋದನೆಯನ್ನು ನೀಡುತ್ತವೆ. ಈ ಮೂಲಕ ವಿಶೇಷ ಕೌಶಲ್ಯಗಳು ಮತ್ತು ಅರಿವಿನ ಸಾಮರ್ಥ್ಯಗಳನ್ನು ವೃದ್ಧಿಸುತ್ತವೆ.
ಈ ರೀತಿಯ ಗೇಮ್‌ಗಳು ಆಟಗಾರರ ಸಮಸ್ಯೆ ಪರಿಹರಿಸಲು, ಮಾದರಿಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಗಮನದಲ್ಲಿರಲು ಪ್ರೋತ್ಸಾಹಿಸುತ್ತವೆ. ಜೊತೆಗೆ ಅವರ ಮನಸ್ಸನ್ನು ಹೆಚ್ಚು ಜಾಗರೂಕತೆ ಮತ್ತು ಕ್ರಿಯಾಶೀಲವಾಗಿರಿಸುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.
ಸಾಮಾಜಿಕ ಪ್ರತ್ಯೇಕತೆಯನ್ನು ಸರಾಗಗೊಳಿಸುತ್ತದೆ, ಆತಂಕವನ್ನು ಸುಧಾರಿಸುತ್ತದೆ: ವಿಆರ್ ಡಿವೈಸ್‌ಗಳಲ್ಲಿನ ವಿಶೇಷ ಫೀಚರ್ಸ್‌ಗಳು ಮಾನವರಲ್ಲಿನ ಖಿನ್ನತೆ ಮತ್ತು ಸಾಮಾಜಿಕ ಪ್ರತ್ಯೇಕತೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಡೆಸಿದ ವೈಜ್ಞಾನಿಕ ವರದಿಯು 'ಲಾಕ್‌ಡೌನ್ ಒಂಟಿತನ'ವನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ಪ್ರತ್ಯೇಕತೆ, ಖಿನ್ನತೆ ಮತ್ತು ಸಾಮಾಜಿಕ ಆತಂಕದಿಂದ ಹೋರಾಡುವ ಜನರನ್ನು ಬೆಂಬಲಿಸುವಲ್ಲಿ ವಿಆರ್ ಪರಿಣಾಮಕಾರಿಯಾಗಿವೆ ಎಂದು ಕಂಡುಕೊಳ್ಳಲಾಗಿದೆ.

ದೀರ್ಘಕಾಲದ ನೋವು ಪರಿಹಾರಕ್ಕೂ ಅನುಕೂಲ: ಇದನ್ನು ಉತ್ತಮ ಗೇಮ್‌ಗಳು ಮತ್ತು ಮನರಂಜನಾ ಅನುಭವ ನೀಡಲು ತಯಾರು ಮಾಡಲಾಗಿದ್ದು, ದೀರ್ಘಕಾಲದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಂದರೆ ನಿಮ್ಮ ಮೆದುಳಿನಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಮತ್ತು ನೀವು ಅನುಭವಿಸುವ ಪ್ರಜ್ಞಾಪೂರ್ವಕ ನೋವಿನ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ವರ್ಚುವಲ್ ರಿಯಾಲಿಟಿ ಮೆಡಿಕಲ್ ಇನ್ಸ್ಟಿಟ್ಯೂಟ್‌ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳ ನೋವನ್ನು ಕಡಿಮೆ ಮಾಡಲು ಅನೇಕ ಆಸ್ಪತ್ರೆಗಳು ವಿಆರ್ ಅನ್ನು ಅಳವಡಿಸಿಕೊಂಡಿವೆ.
ಪ್ರತಿ ನಿಮಿಷಕ್ಕೆ 13 ಕ್ಯಾಲೊರಿಗ ಬರ್ನ್ ಮಾಡಬಹುದು: ಈ ವಿಷಯ ಕೇಳಿ ಕೆಲವರಿಗೆ ಅಚ್ಚರಿ ಎನಿಸಿಬಹುದು. ಆದರೆ ಇದು ಸತ್ಯ. ವಿಆರ್ ಹೆಡ್‌ಸೆಟ್‌ಗಳು ಗೇಮಿಂಗ್ ಸೆಷನ್‌ಗಾಗಿ ಸೋಫಾದಲ್ಲಿ ಕುಳಿತುಕೊಳ್ಳುವ ಬದಲು ವಿವಿಧ ವರ್ಚುವಲ್ ಸ್ಥಳಗಳನ್ನು ಅನ್ವೇಷಿಸಲು ಅವರ ದೇಹ ಮತ್ತು ಚಲನೆಯ ಕಂಟ್ರೋಲ್ ಅನ್ನು ಬಳಸಿಕೊಂಡು ಗೇಮರ್‌ಗಳನ್ನು ಸಕ್ರಿಯವಾಗಿರಲು ಪ್ರೋತ್ಸಾಹಿಸುತ್ತದೆ. ಇದರಿಂದ ದೈಹಿಕವಾಗಿ ನೀವು ಫಿಟ್ ಆಗಬಹುದು. ಅಲ್ಲದೆ ವಿಆರ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಡೇಟಾವು ಆಟಗಾರರು ತಮ್ಮ ತೂಕ ಮತ್ತು ಚಲನೆಯ ವ್ಯಾಪ್ತಿಯನ್ನು ಅವಲಂಬಿಸಿ ವಿಆರ್ ಗೇಮ್‌ಗಳನ್ನು ಆಡುವ ಪ್ರತಿ ನಿಮಿಷಕ್ಕೆ 13 ಕ್ಯಾಲೊರಿಗಳನ್ನು ಬರ್ನ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದೆ.


Click it and Unblock the Notifications








