Home
ಸುದ್ದಿಜಾಲ

Smartphones: ಈ ತಿಂಗಳು ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಲಿವೆ? ಅವುಗಳ ಫೀಚರ್ಸ್‌ ಏನು?

ಪ್ರತಿ ತಿಂಗಳು ಅಥವಾ ಪ್ರತಿವಾರವೂ ವಿವಿಧ ಫೀಚರ್ಸ್‌ ಆಯ್ಕೆಯ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುತ್ತಲೇ ಇರುತ್ತವೆ. ಅದರಂತೆ ಈಗ ಈ ತಿಂಗಳಲ್ಲಿ ಆರಕ್ಕೂ ಹೆಚ್ಚು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು (Smartphones) ಲಾಂಚ್ ಆಗಲು ಕ್ಷಣ ಗಣನೆ ಎಣಿಕೆ ಮಾಡುತ್ತಿವೆ.

ಹೌದು, ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಫೋನ್‌ಗಳು ಲಾಂಚ್‌ ಆಗಲಿದ್ದು, ಈ ತಿಂಗಳು ಬೊಂಬಾಟ್‌ ಫೀಚರ್ಸ್‌ ಇರುವ ಫೋನ್‌ಗಳು ಅನಾವರಣ ಆಗಲಿವೆ. ಡಿಜಿಟಲ್ ಚಾಟ್ ಸ್ಟೇಷನ್ ಪ್ರಕಾರ, ಚೀನಾದಲ್ಲಿ ನಡೆಯುತ್ತಿರುವ ಮೇ ದಿನದ ರಜಾದಿನಗಳ ನಂತರ ಹೊಸ ಸ್ಮಾರ್ಟ್‌ಫೋನ್‌ಗಳ ಅಲೆಯು ಮಾರುಕಟ್ಟೆಗೆ ಅಬ್ಬರಿಸಲಿದೆ ಎನ್ನಲಾಗಿದೆ. ಹಾಗಿದ್ರೆ ಬನ್ನಿ ಲೀಕ್‌ ಮಾಹಿತಿ ಪ್ರಕಾರ ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಲಿವೆ?, ಅವುಗಳ ಫೀಚರ್ಸ್‌ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಈ ತಿಂಗಳು ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಲಿವೆ? ಅವುಗಳ ಫೀಚರ್ಸ್‌ ಏನು?

ರಿಯಲ್‌ಮಿ GT ನಿಯೋ 6: ಈ ಸ್ಮಾರ್ಟ್‌ಫೋನ್‌ (Realme GT Neo 6) ಬಗ್ಗೆ ಈಗಾಗಲೇ ಕೆಲವು ಲೀಕ್‌ ಮಾಹಿತಿ ಎಲ್ಲಾ ಕಡೆ ಸದ್ದು ಮಾಡುತ್ತಿವೆ. ಅವುಗಳ ಪ್ರಕಾರ, ಈ ಫೋನ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಲೀಕ್‌ ದಾರರು ಇತ್ತೀಚೆಗೆ ಇದು SD8sG3 ಚಿಪ್ ಆನ್‌ಬೋರ್ಡ್‌ನೊಂದಿಗೆ ವೇಗವಾದ ಚಾರ್ಜಿಂಗ್ ಫೋನ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ವಿವೋ X100s ಸರಣಿ: ಈ ನಡುವೆ ವಿವೋ X100s (Vivo X100s series) ಸರಣಿ ಫೋನ್‌ಗಳ ಬಗ್ಗೆಯೂ ಮಾಹಿತಿ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ಲಸ್ ಚಿಪ್ ಅನ್ನು ಮೇ 7 ರಂದು ಚೀನಾದಲ್ಲಿ ಅನಾವರಣಗೊಳಿಸಲಿದ್ದು, ಈ D9300+ ಚಿಪ್ ಅನ್ನು ಒಳಗೊಂಡಿರುವ ಎರಡು ಫೋನ್‌ಗಳ ಆಗಮನದ ಬಗ್ಗೆ ಸುಳಿವು ಲೀಕ್‌ ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಎರಡೂ ಫೋನ್‌ಗಳು 1.5K ರೆಸಲ್ಯೂಶನ್, ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಮತ್ತು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಫ್ಲಾಟ್ ಡಿಸ್‌ಪ್ಲೇಯೊಂದಿಗೆ ಸಜ್ಜುಗೊಂಡಿವೆ.

ಈ ತಿಂಗಳು ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಲಿವೆ? ಅವುಗಳ ಫೀಚರ್ಸ್‌ ಏನು?

ಈ ಸರಣಿಯಲ್ಲಿ ನಾವು ವಿವೋ X100s ಮತ್ತು ವಿವೋ X100s ಪ್ರೊ ಅನ್ನು ನೋಡಬಹುದಾಗಿದ್ದು, 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನೊಂದಿಗೆ ಇನ್ನೂ ಒಂದು ಫೋನ್ ಇದೆ ಎಂದು ಡಿಸಿಎಸ್ ಉಲ್ಲೇಖ ಮಾಡಿದೆ. ಅದುವೇ ವಿವೋ X100 ಅಲ್ಟ್ರಾ. ಇದು X100s ಮತ್ತು X100s ಪ್ರೊ ಜೊತೆಗೆ ಚೊಚ್ಚಲ ಪ್ರವೇಶ ಮಾಡಲಿದೆ ಎಂದು ತಿಳಿದುಬಂದಿದೆ.

ಒಪ್ಪೋ ರೆನೋ 12 ಸರಣಿ: ಈ ಫೋನ್ (Oppo Reno 12 series) ಮೈಕ್ರೋ-ಕರ್ವ್ಡ್ ವಿನ್ಯಾಸದೊಂದಿಗೆ OLED ಪ್ಯಾನೆಲ್ ಅನ್ನು ಹೊಂದಿದ್ದು, 1.5K ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ ಎನ್ನಲಾಗಿದೆ. ಡೈಮೆನ್ಸಿಟಿ 9200 ನಿಂದ ಕಾರ್ಯನಿರ್ವಹಿಸಲಿದ್ದು, ಡೈಮೆನ್ಸಿಟಿ 8200 ಚಿಪ್ ಅನ್ನು ಹೊಂದಿರುವ ಸ್ಟ್ಯಾಂಡರ್ಡ್ ರೆನೋ 12 ಸಹ ಪ್ರೊ ಮಾದರಿಯೊಂದಿಗೆ ಲಾಂಚ್‌ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಈ ತಿಂಗಳು ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಲಿವೆ? ಅವುಗಳ ಫೀಚರ್ಸ್‌ ಏನು?

ಮೈಜು 21 ನೋಟ್: ಈ ನಡುವೆ ಸ್ನಾಪ್‌ಡ್ರಾಗನ್ 8 ಜನ್ 2 ಫೋನ್ ಅನ್ನು ಹೊಂದಿರುವ ಮೈಜು 21 ನೋಟ್ (Meizu 21 Note) ಸಹ ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿದೆ ಎನ್ನಲಾಗಿದೆ. ಈ ನಡುವೆ ಹಾನರ್‌ 200 ಮತ್ತು ಹಾನರ್‌ 200 ಪ್ರೊ ಸ್ಮಾರ್ಟ್‌ಫೋನ್‌ಗಳು ಈ ತಿಂಗಳು ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಡಿವೈಸ್‌ಗಳು ಕ್ರಮವಾಗಿ ಸ್ನಾಪ್‌ಡ್ರಾಗನ್ 8s ಜನ್ 3 ಮತ್ತು 8 ಜನ್ 3 ಚಿಪ್‌ಸೆಟ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ. ಇತರ ವರದಿಗಳ ಪ್ರಕಾರ, ಮೊಟೊ X50 ಅಲ್ಟ್ರಾ ಫೋನ್‌ ಸಹ ಈ ತಿಂಗಳು ಚೀನಾದಲ್ಲಿ ಲಾಂಚ್ ಆಗಲಿದೆ.

Best Mobiles in India

English summary
Realme GT Neo 6, Moto X50 Ultra, Honor 200, Honor 200 Pro, Vivo X100s and Vivo X100s Pro, Oppo Reno 12 Series, Meizu 21 Note and many Smartphones launched this month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+