ಈ ನಾವೀನ್ಯ ತಂತ್ರಜ್ಞಾನದ ಗ್ಯಾಡ್ಜೆಟ್‌ಗಳ ಕುರಿತು ನಿಮಗೆ ಗೊತ್ತಿರಲಿಕ್ಕಿಲ್ಲ..!

By GizBot Bureau

  ಈ ಲೇಖನವನ್ನು ಓದಿದರೆ , ನಿಮಗೆ ಈ ತಂತ್ರಜ್ಞಾನ ಇಷ್ಟು ಮುಂದುವರಿದೆಯಾ ಎಂದು ನಿಮಗೆ ಅನ್ನಿಸಬಹುದು. ಆಶ್ಚರ್ಯ ಆಗಬಹುದು. ಅಬ್ಬಬ್ಬಾ ಇಷ್ಟೊಂದು ಡಿವೈಸ್ ಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ ನೆರವು ನೀಡಲು ತಯಾರಾಗಿವೆಯಾ ಎಂದು ನೀವು ಮೂಗಿನ ಮೇಲೆ ಬೆರಳಿಡಬಹುದು. ನಾಯಿ ಮನಸ್ಸನ್ನು ಓದುವುದರಿಂದ ಹಿಡಿದು , ನೀವು ಬೆಳೆಸಿದ ಗಿಡಕ್ಕೆ ನೀರು ಹಾಕುವುದಕ್ಕೂ ತಂತ್ರಜ್ಞಾನ ಕೊಡುಗೆಗಳನ್ನು ನೀಡಿದೆ.

  ಈ ನಾವೀನ್ಯ ತಂತ್ರಜ್ಞಾನದ ಗ್ಯಾಡ್ಜೆಟ್‌ಗಳ ಕುರಿತು ನಿಮಗೆ ಗೊತ್ತಿರಲಿಕ್ಕಿಲ್ಲ..!

  ನಿಜಕ್ಕೂ ನಮ್ಮ ವಿಜ್ಞಾನ ನಮಗೆ ಇಷ್ಟೆಲ್ಲಾ ನೀಡಿದೆಯಾ ಎಂದು ನೀವು ಅಂದುಕೊಳ್ಳಬಹುದು. ಇಲ್ಲಿ ನಾವು 10 ನವೀನ ತಂತ್ರಜ್ಞಾನವನ್ನು ನಮೂದಿಸಿದ್ದೇವೆ ಮತ್ತು ಅದು ಖಂಡಿತ ನಿಮಗೆ ಇದುವರೆಗೂ ತಿಳಿದಿರಲಿಕ್ಕಿಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪಾರೋಟ್ ಪಾಟ್ (Parrot pot)

  ನೀವು ಸಸ್ಯ ಪ್ರಿಯರಾಗಿದ್ದರೆ ಖಂಡಿತ ನಿಮಗೆ ಇದು ಸಹಾಯಕ್ಕೆ ಬರುತ್ತದೆ. ಒಂದು ವೇಳೆ ನೀವು ಬೆಳೆಸುತ್ತಿರುವ ಸಸ್ಯವು ಅಕಾಲಿಕ ಮರಣವನ್ನು ಹೊಂದುತ್ತಿದ್ದರೆ ಯಾಕೆ ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ. ಈ ಟೂಲ್ ನಲ್ಲಿ ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ ಇದ್ದು ಇದು ಪಾಟ್ ನಲ್ಲಿ ಸಸ್ಯವನ್ನು 30 ದಿನಗಳ ವರೆಗೆ ನೀರಿನಿಂದ ಇರುವಂತೆ ನೋಡಿಕೊಳ್ಳುತ್ತದೆಯಂತೆ.

  ಕಾರ್ಟೆಕ್ಸ್ ಕಾಸ್ಟ್ (Cortex Cast)

  ನಿಮ್ಮ ಮೂಳೆ ಹಿಂದೆ ಎಂದಾದರೂ ತುಂಡಾಗಿತ್ತಾ? ಹಾಗಾದರೆ ನಿಮಗೆ ಅದರ ನೋವಿನ ಅನುಭವವಿರುತ್ತೆ. ಒಂದು ವೇಳೆ ಗೊತ್ತಿಲ್ಲದೇ ಇದ್ದರೆ ಖಂಡಿತ ನೀವು ಅದನ್ನು ಅನುಭವಿಸುವುದು ಬೇಡ ಬಿಡಿ. ಈ ನೋವಿನ ವಿಚಾರವನ್ನೇ ಪ್ರಸ್ತಾಪಿಸುವುದಾದರೆ, ನಿಮ್ಮ ತೋಳುಗಳನ್ನು ಒಂದೇ ರೀತಿ ಹಿಡಿದುಕೊಂಡಿರುವುದು ಬಹಳ ಪ್ರಯಾಸದ ಕೆಲಸ .ಈ Cortex cast ಎಂಬ 3D ಪ್ರಿಟೆಂಡ್ ಕಾಸ್ಟ್ ಡಿಸೈನ್ ನಿಮ್ಮ ಕೈಗಳಿಗಲ್ಲಿ ಹೋಲುಗಳನ್ನು ಇಟ್ಟಿರುತ್ತದೆ ಮತ್ತು ಈ ಡಿವೈಸ್ ನಿಮ್ಮ ಕೈಗಳಲ್ಲಿ ಗಾಳಿಯಾಡುವಂತೆ ಮಾಡಿ, ಕೆಟ್ಟ ವಾಸನೆ ಬರುವುದನ್ನು ತಪ್ಪಿಸಬಹುದು.

  ಬುಹೆಲ್ ಗ್ಲಾಸಸ್ (Buhel glasses)

  ಇದು ಸ್ಮಾರ್ಟ್ ಕನ್ನಡಕಗಳಾಗಿದೆ. ಇದು ಕೇವಲ ಸೂರ್ಯನ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ಮಾತ್ರವಲ್ಲ ಬದಲಾಗಿ ಹಾಡುಗಳನ್ನು ಕೇಳಲು ಮತ್ತು ನಿಮ್ಮ ಸ್ನೇಹಿತರ ಜೊತೆ ಚಾಟ್ ಮಾಡಲು ಕೂಡ ನೆರವು ನೀಡುತ್ತದೆ.

  ನಾಯಿಯ ಮನಸ್ಸನ್ನು ಓದುವಿಕೆ (Dog mind reader )

  ಈಈಜಿ ರೀಡರ್ ನಿಮ್ಮ ನಾಯಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆಯಂತೆ. ಅದು ಏಕಾಂಗಿಯಾಗಿರಲು ಬಯಸುತ್ತಿದೆಯಾ, ನಾಯಿಗೆ ನಿದ್ದೆ ಬರುತ್ತಿದೆಯಾ ಎಂಬುದು ಇತ್ಯಾದಿಗಳನ್ನು ಇದರಿಂದ ತಿಳಿಯಬಹುದಾಗಿದೆಯಂತೆ.

  ಹೊಂದಿಕೊಳ್ಳುವಂತ ಪ್ರದರ್ಶನ ಪರದೆಗಳು

  ಈ ಸ್ಮಾರ್ಟ್ ಫೋನನ್ನು ಗ್ರೇಫೀನ್ ನಿಂದಾ ಚೀನಾ ಸಂಸ್ಥೆಯು ಡೆವಲಪ್ ಮಾಡಿದ್ದು, ಇದನ್ನು ಹೇಗೆ ಬೇಕಾದರೂ ಟ್ವಿಸ್ಟ್ ಮಾಡಬಹುದಾಗಿರುತ್ತದೆ. ಈ ವರ್ಷದಲ್ಲಿ ಕಪ್ಪು ಮತ್ತು ಬಿಳುಪಿನ ಸ್ಕ್ರೀನ್ ನಲ್ಲಿ ಲಭ್ಯವಾಗುತ್ತಿರುವ ಮೊದಲ ಡಿವೈಸ್ ಇದು.

  ಎಲ್ ಜಿ ಸಿಗ್ನೇಚರ್ ಫ್ರಿಡ್ಜ್

  ನೀವೇನು ಮಾಡಬೇಕು ಎಂದರೆ ಬಾಗಿನಲ್ಲಿ ಟ್ಯಾಪ್ ಮಾಡಬೇಕು ಮತ್ತು ನಿಮ್ಮ ಫ್ರಿಡ್ಜ್ ಒಳಗೆ ಇಡಲಾಗಿರುವ ಎಲ್ಲಾ ಪದಾರ್ಥಗಳ ವಿವರವೂ ಕೂಡ ಪ್ರಿಡ್ಜ್ ನ ಬಾಗಿಲಿನ ಸ್ಕ್ರೀನ್ ನಲ್ಲೇ ಲಭ್ಯವಾಗುತ್ತದೆ. ನೀವು ಪದಾರ್ಥಗಳನ್ನು ನೋಡುವುದಕ್ಕಾಗಿ ಫ್ರಿಡ್ಜ್ ನ ಬಾಗಿಲು ತೆರೆಯುವ ಅಗತ್ಯವೇ ಇರುವುದಿಲ್ಲ.

  ರೋಬೋಟ್ ಸಹಾಯಕ

  ಈ ರೋಬೋಟ್ ನಿಮ್ಮ ಎಲ್ಲಾ ಶಾಂಪಿಂಗ್ ಬ್ಯಾಗ್ ಗಳನ್ನು ಹಿಡಿದುಕೊಳ್ಳಲು ಸಹಾಯ ಮಾಡಬೇಕು. ನಿಮ್ಮೊಳಗೆ ಅಳವಡಿಸಲಾಗುವ ಟ್ರಾನ್ಸ್ ಮಿಟರ್ ನ ಸಹಾಯದಿಂದ ಇದು ನಿಮ್ಮನ್ನ ಟ್ರ್ಯಾಕ್ ಮಾಡುತ್ತದೆ. ಇದು ಒಮ್ಮೆಗೆ 50 ಪೌಂಡ್ ನಷ್ಟನ್ನು ಹಿಡಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಒಂದು ಗಂಟೆಗೆ 4 ಮೈಲಿ ಕ್ರಮಿಸುವಷ್ಟು ತಾಕತ್ತನ್ನು ಹೊಂದಿದೆ.

  ಮಡಚಬಹುದಾದ ಫೋನ್ ಗಳು

  ಹೊಸ ಫೋನುಗಳಿಗೆ ಉತ್ತಮ ಸ್ಕ್ರೀನ್ ಸೈಜ್ ಇದೆ ಮತ್ತು ಹೊಳೆಯದು ಸುಲಭದಲ್ಲಿ ಕೊಂಡಯ್ಯಲು ಸಾಧ್ಯವಾಗುತ್ತಿತ್ತು. ಅದೆರಡ ಗುರಿಯನ್ನೂ ಹೊಂದಿದ ಸ್ಯಾಮ್ ಸಂಗ್ ಎರಡೂ ವಿಚಾರವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಡಚಬಹುದಾದ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

  Aero-X

  Aero-X ಒಂದು ಹೋವರ್ ಕ್ರಾಫ್ಟ್ ಆಗಿದೆ. ಹೌದು ಹೋವರ್ ಕ್ರಾಫ್ಟ್.. ಇದನ್ನು ಚಕ್ರಗಳಿದ ಡಿಸೈನ್ ಮಾಡಲಾಗಿದೆ ಮತ್ತು ಇದು ನೆಲದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದಕ್ಕೆ 10 ಫೀಟ್ ಎತ್ತರದಲ್ಲಿ ಒಂದು ಗಂಟೆಗೆ 45 ಮೈಲ್ಸ್ ನಷ್ಟು ದೂರಕ್ಕೆ ಹಾರುವ ಸಾಮರ್ಥ್ಯವಿದೆ.

  ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್

  ಬ್ರ್ಯಾಂಡ್ ಗಳಾದ ಸ್ಯಾಮ್ ಸಂಗ್ , ಸೋನಿ, ಮತ್ತು ಗೂಗಲ್ ಗಳು ಪ್ರೊಡಕ್ಟ್ ನ ಚಿತ್ರಗಳನ್ನು ನೇರವಾಗಿ ನಿಮ್ಮ ಕಣ್ಣುಗಳಲ್ಲಿ ಸೆರೆಹಿಡಿಯುವ ತಂತ್ರಜ್ಞಾನವನ್ನು ಹೊರತರಲು ಪ್ರಯತ್ನಿಸುತ್ತಿವೆ. ಅಂದರೆ ಕಣ್ಣಿನಲ್ಲಿ ಹಾಕಿಕೊಳ್ಳುವ ಲೆನ್ಸ್ ಒಂದು ನಿಮ್ಮ ಕಣ್ಣನ್ನು ಮಿಟುಕಿಸಿದಾಗ ಫೋಟೋ ತೆಗೆಯಬೇಕು ಅಂತಹದ್ದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 innovative tech gadgets you probably didn't know. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more