ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್‌ಗೂ ಮುಂಚೆ ಈ ಸ್ಟೋರಿ ನೋಡಿ!!!
ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾಗಿದೆ. ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಅತೀ ಹೆಚ್ಚಿನ ಬಳಕೆದಾರರನ್ನು ಸೆಳೆಯೂವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ವಾಟ್ಸ್ ಆಪ್ ಒಂದು ಬಿಲಿಯನ್ ಗೂ ಅಧಿಕ ಮಂದಿ ಬಳಕೆದಾರರನ್ನು ಹೊಂದಿದೆ. ಇವುಗಳಲ್ಲದೆ ಇನ್ನೂ ಹಲವು ಸೋಶಿಯಲ್ ಮೀಡಿಯಾ ಗಳು ಬಳಕೆಯಲ್ಲಿವೆ.

ಇದರೊಂದಿಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಅತೀ ಹೆಚ್ಚಿನ ಪ್ರಮಾಣದಲ್ಲಿ ಪೋಟೋಗಳನ್ನು ಆಪ್ ಲೋಡ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ಪ್ರಮಾಣದ ಪೋಟೋ ಶೇರ್ ಮಾಡುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಪೋಟೋ ಅಪ್‌ಲೋಡ್ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಸಂದರ್ಭದಲ್ಲಿ ಈ ಅಂಶಗಳ ಬಗ್ಗೆ ಗಮನ ನೀಡಿದರೆ ಉತ್ತಮ.

ಪೋಟೋ ದಲ್ಲಿ ಯಾರಿದ್ದಾರೆ..?
ನೀವು ಅಪ್‌ಲೋಡ್ ಮಾಡುವ ಪೋಟೊದಲ್ಲಿ ಯಾರಿದ್ದಾರೆ, ಅವರು ಹಾಕಿರುವ ಉಡುಪು ಎಂತಹದ್ದು ಎನ್ನುವ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಇದರಿಂದ ಕೆಲವರಿಗೆ ತೊಂದರೆಯಾಗುವ ರೀತಿಯಲ್ಲಿ ಇದ್ದರೆ ಅಂತಹ ಪೋಟೋ ವನ್ನು ಅಪ್‌ಲೋಡ್ ಮಾಡದೆ ಇರುವುದೇ ಉತ್ತಮ ಎನ್ನಲಾಗಿದೆ.

ಪೋಟೋ ದಲ್ಲಿ ಏನೀದೆ..?
ನೀವು ಆಪ್ ಲೋಡ್ ಮಾಡುವ ಪೋಟೋ ದಲ್ಲಿ ಏನೀದೆ ಎನ್ನುವುದನ್ನು ಗಮನ ಹರಿಸುವುದು ಮುಖ್ಯ. ಇತರ ರ ಭಾವನೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹೊಂದಿರುವ ಪೋಟೋವನ್ನು ಆಪ್ ಲೋಡ್ ಮಾಡಬೇಡಿ. ನಿಮ್ಮ ಸೆಲ್ಫಿಗಳನ್ನು ಆಪ್ ಲೋಡ್ ಮಾಡುವ ಸಂದರ್ಭದಲ್ಲಿ ಎಚ್ಚರವಹಿಸುವುದು ಅಗತ್ಯ. ನಿಮ್ಮ ಫೋಟೋ ಗಳು ದುರುಪಯೋಗ ವಾಗುವ ಸಾಧ್ಯತೆ ಹೆಚ್ಚಾಗಿ ಇರಲಿದೆ.

ಫೋಟೋ ತೆಗೆದಿದು ಎಲ್ಲಿ..?
ನೀವು ಪೋಟೊಗಳನ್ನು ಆಪ್ ಲೋಡ್ ಮಾಡುವ ಸಂದರ್ಭದಲ್ಲಿ ಅದನ್ನು ತೆಗೆದಿದ್ದು ಎಲ್ಲಿ ಎಂಬುದನ್ನು ಗಮನ ಹರಿಸುವುದು ಸಹ ಮುಖ್ಯವಾಗಲಿದೆ. ಸ್ಥಳವು ಹೆಚ್ಚಿನ ಪ್ರಮಾಣದಲ್ಲಿ ಪೋಟೋ ಮೇಲೆ ಪರಿಣಾಮ ವನ್ನು ಬೀರಲಿದೆ.

ಪೋಟೋ ಬಗ್ಗೆ ಮಾಹಿತಿ ..?
ಇನ್ನು ಕೆಲವು ಸಂದರ್ಭಗಳಲ್ಲಿ ಫೋಟೋ ಬಗ್ಗೆ ಮಾಹಿತಿಯನ್ನು ನೀಡಿದರೆ ಉತ್ತಮ ಎನ್ನಲಾಗಿದೆ. ಇದರಿಂದಾಗಿ ಪೋಟೊ ವ್ಯಾಲ್ಯೂ ಸಹ ಉತ್ತಮವಾಗಲಿದೆ. ಫೋಟೋಗಳನ್ನು ಶೇರ್ ಮಾಡಲು ಇದು ಸಹಾಯ ಮಾಡಲಿದೆ.


Click it and Unblock the Notifications