ಅಮೆರಿಕನ್ನರಿಗೆ ವಾಟ್ಸ್‌ಆಪ್, ಯೂಟ್ಯೂಬ್ ಮಾಲೀಕರೆ ಗೊತ್ತಿಲ್ಲ..!
ಅಮೇರಿಕಾದಿಂದಲೇ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ, ಈ ಬಗ್ಗೆ ಅಮೆರಿಕಾದವರಿಗೆ ಸರಿಯಾದ ಜ್ಞಾನವಲ್ಲದಿರುವುದು ಸಮೀಕ್ಷೆಯಿಂದ ಬಯಲಾಗಿದೆ. ವಿಶ್ವದ ಜನತೆ ಅಮೆರಿಕಾ ನಾಗರಿಕರನ್ನು ಅತಿ ಜಾಣರೆಂದು ನೋಡುತ್ತದೆ. ಆದರೆ, DuckDuckGo ನಡೆಸಿದ ಸಮೀಕ್ಷೆಯಲ್ಲಿ ಅಮೇರಿಕನ್ನರ ದಡ್ಡತನ ಬಯಲಾಗಿದೆ.

ಹೌದು, ಅವರದ್ದೇ ದೇಶದ ಕಂಪನಿಗಳ ಬಗ್ಗೆ ಅವರಿಗೆ ಸರಿಯಾದ ತಿಳುವಳಿಕೆಯಿಲ್ಲ ಎಂದು DuckDuckGo ಹೇಳಿದೆ. ಕಳೆದ 6 ತಿಂಗಳಿಂದ ವಾಟ್ಸ್‌ಆಪ್ ಬಳಸುವ ಬಳಕೆದಾರರಿಗೆ ಈ ಬಗ್ಗೆ ಪ್ರಶ್ನೆಯನ್ನು ಕೇಳಿದ್ದು, ಅದರಲ್ಲಿ ಶೇ.50ಕ್ಕಿಂತ ಹೆಚ್ಚು ಜನಕ್ಕೆ ಜನಪ್ರಿಯ ಮೆಸೆಂಜರ್ ವಾಟ್ಸ್‌ಆಪ್‌ನ ಮಾಲೀಕರು ಯಾರು ಎಂಬುದೇ ಗೊತ್ತಿಲ್ಲ. ಆದರೂ ವಾಟ್ಸ್‌ಆಪ್‌ನ್ನು ಬಳಸುತ್ತಿದ್ದಾರೆ ಎಂದು DuckDuckGo ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಹೇಗೆ ನಡಿತು ಸಮೀಕ್ಷೆ..?
ಆಗಸ್ಟ್ 16, 2018ರಂದು DuckDuckGo ಯಾದೃಚ್ಛಿಕ ಮಾದರಿಯಲ್ಲಿ 1,297 ವಯಸ್ಕರನ್ನು ಈ ಸಮೀಕ್ಷೆಗೆ ಆಯ್ದುಕೊಂಡಿತ್ತು. ಇಲ್ಲಿ ಕೇವಲ DuckDuckGo ಬಳಕೆದಾರರು ಮಾತ್ರ ಇರದೆ ಸಾಮಾನ್ಯ ಜನರನ್ನು ಕೂಡ ಈ ಸಮೀಕ್ಷೆಗೆ ಒಳಪಡಿಸಿತ್ತು. ಇವರು ಒಟ್ಟಾರೆಯಾಗಿ ಯುಎಸ್‌ನ ವಯಸ್ಕ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದರು.

6 ತಿಂಗಳು ಬಳಸಿದರು ಅದರ ಬಗ್ಗೆ ಗೊತ್ತಿಲ್ಲ
ವಾಟ್ಸ್‌ಆಪ್‌ನ್ನು ಕಳೆದ 6 ತಿಂಗಳಿಂದ ಬಳಸುತ್ತಿದ್ದರೂ, ಅರ್ಧದಷ್ಟೂ ಜನತೆಗೆ ವಾಟ್ಸ್‌ಆಪ್‌ನ ಮಾಲೀಕತ್ವವನ್ನು ಫೇಸ್‌ಬುಕ್ ಹೊಂದಿದೆ ಎಂದು ಗೊತ್ತಿಲ್ಲ. ಅದಲ್ಲದೇ ಕಳೆದ 6 ತಿಂಗಳಿಂದ ವೇಜ್ ಬಳಸುತ್ತಿರುವ ಶೇ.60ರಷ್ಟು ಜನಕ್ಕೆ ವೇಜ್ ಗೂಗಲ್‌ನದ್ದು ಎಂಬ ಸಾಮಾನ್ಯ ಮಾಹಿತಿ ಗೊತ್ತಿಲ್ಲ ಎಂದು DuckDuckGo ಸಮೀಕ್ಷೆ ಹೇಳಿದೆ.

Waze ಎಂದರೆ ಏನು..?
Waze ಒಂದು ಜನಪ್ರಿಯ GPS ನ್ಯಾವಿಗೇಷನ್ ಸಾಫ್ಟ್‌ವೇರ್ ಆಗಿದ್ದು, GPS ಬೆಂಬಲ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್ ಹಾಗೂ ಕಂಪ್ಯೂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅಮೆರಿಕಾದಲ್ಲಿ Waze ಸಾಫ್ಟ್‌ವೇರ್‌ನ್ನು ಹೆಚ್ಚು ಜನ ಬಳಸುತ್ತಿದ್ದರು, ಅದರ ಬಗ್ಗೆ ಗೊತ್ತಿಲ್ಲದಿರುವುದು ಸಾಮಾನ್ಯ ಮಾಹಿತಿ ತಿಳಿದುಕೊಳ್ಳಲು ಜನ ಆಸಕ್ತಿ ಹೊಂದಿಲ್ಲ ಎಂದು ತಿಳಿಸುತ್ತದೆ.

ಎಲ್ಲಾ ಮಾಹಿತಿ ಯಾರಿಗೆ ಹೋಗುತ್ತದೆ ಎನ್ನುವುದು ಗೊತ್ತೆ ಇಲ್ಲ..!
ವಾಟ್ಸ್‌ಆಪ್ ಮತ್ತು Waze ಬಳಸುವ ಬಹುಪಾಲು ಅಮೆರಿಕನ್ನರಿಗೆ ತಮ್ಮ ಎಲ್ಲಾ ಮಾಹಿತಿ, ತಾವು ಸಂಚರಿಸುವ ಮಾರ್ಗ, ಪ್ರಯಾಣದ ಸಮಯ, ಸಂದೇಶಗಳು, ಫೋಟೋಗಳು ಮತ್ತು ಡೇಟಾವನ್ನು ಫೇಸ್‌ಬುಕ್ ಹಾಗೂ ಗೂಗಲ್ ಸಂಗ್ರಹಿಸುತ್ತೇ ಎನ್ನುವುದು ಗೊತ್ತಿಲ್ಲ ಎನ್ನುವುದು ಸಮೀಕ್ಷೆ ಹೇಳಿದೆ.

ಅರಿವಿನ ಕೊರತೆ ಹೆಚ್ಚು ಅಪಾಯಕಾರಿ
DuckDuckGo ನಡೆಸಿದ ಸಮೀಕ್ಷೆಯ ಪ್ರಕಾರ ಫೇಸ್‌ಬುಕ್ ಹಾಗೂ ಗೂಗಲ್ ಬಗೆಗಿನ ಅರಿವಿನ ಕೊರತೆ ಅತಿ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದು, ಹೆಚ್ಚು ಅಮೆರಿಕನ್ನರು ಆನ್‌ಲೈನ್‌ನಲ್ಲಿ ತಮ್ಮ ಗೌಪ್ಯತೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

ಹಿಂದಿನ ಸಮೀಕ್ಷೆಯಲ್ಲೂ ಹೀಗೆ ಆಗಿತ್ತು..!
DuckDuckGo ನಡೆಸಿದ ಹಿಂದಿನ ಸಮೀಕ್ಷೆಯಲ್ಲಿ ಕೂಡ ಹೀಗೆ ಆಗಿತ್ತು. ಇನ್‌ಸ್ಟಾಗ್ರಾಂ ಆಪ್‌ನ್ನು ಫೇಸ್‌ಬುಕ್ ಹೊಂದಿದೆ ಎಂದು 56.9ರಷ್ಟು ಯುವಕರಿಗೆ ಗೊತ್ತೆ ಇದ್ದಿಲ್ಲ. ಅದರಂತೆ ಯೂಟ್ಯೂಬ್‌ನ ಮಾಲೀಕ ಗೂಗಲ್ ಎಂಬುದು ಶೇ. 44.6ರಷ್ಟು ಜನ ವಯಸ್ಕರಿಗೆ ಗೊತ್ತೆ ಇದ್ದಿಲ್ಲವೆನ್ನುವುದು ಅಮೆರಿಕನ್ನರ ದಡ್ಡತನವನ್ನು ತೋರಿಸುತ್ತದೆ.

2014ರಲ್ಲಿ ವಾಟ್ಸ್‌ಆಪ್‌ನ್ನು ಫೇಸ್‌ಬುಕ್ ಖರೀದಿಸಿತ್ತು
ಫೇಸ್‌ಬುಕ್ ವಾಟ್ಸ್‌ಆಪ್‌ನ್ನು 2014ರಲ್ಲಿ 19 ಶತಕೋಟಿ ಡಾಲರ್‌ಗೆ ಖರೀದಿಸಿತ್ತು. WhatsAppನ ಇಬ್ಬರು ಸಹ ಸಂಸ್ಥಾಪಕರಾದ ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೋಮ್ ಫೇಸ್‌ಬುಕ್‌ನ್ನು ಇತ್ತೀಚೆಗೆ ತೊರೆದಿದ್ದಾರೆ. ಡೇಟಾ ಗೌಪ್ಯತೆ ಮತ್ತು WhatsAppನಲ್ಲಿ ಹಣಗಳಿಸಲು ಫೇಸ್‌ಬುಕ್ ಯೋಜನೆಗಳನ್ನು ಜಾರಿಗೆ ತರುತ್ತಿದೆ.


Click it and Unblock the Notifications








