ಇನ್ಮುಂದೆ ಫೇಸ್‌ಬುಕ್ ಮತ್ತು ವಾಟ್ಸ್ಆಪ್ ಬಳಸುವಾಗ ಎಚ್ಚರ!..ಏಕೆ ಗೊತ್ತಾ?
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ನಿಂದನೆ, ಕೆಸರಾಟದಂತಹ ಘಟನೆಗಳು ಹೆಚ್ಚಾಗುತ್ತಿರುವ ವೇಳೆಯಲ್ಲಿಯೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದು ಸಾರ್ವಜನಿಕರಿಗೂ ಸಹ ಎಚ್ಚರಿಕೆ ಗಂಟೆಯಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ಆಪ್ ಬಳಕೆದಾರರು ಅವುಗಳನ್ನು ಎಚ್ಚರಿಕೆಯಿಂದ ಬಳಸದೆ ಹೋದರೆ ಕಾನೂನಿನ ಸೆರೆಗೆ ಸಿಲುಕಬೇಕಾಗುವ ಪರಿಸ್ಥಿತಿ ಖಂಡಿತವಾಗಿ ಎದುರಾಗಲಿದೆ.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ನಾವು ಏನೇ ಮಾಡಿದರೂ ಕೂಡ ಅದರ ಮೇಲೆ ಪೊಲೀಸರು ಕಣ್ಣಿಡಬಹುದಾಗಿದ್ದು, ನಾವೆಲ್ಲರೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರವಾಗಿರಬೇಕು. ನಮ್ಮ ಸ್ವಂತ ಅಭಿಪ್ರಾಯ ಏನೇ ಇದ್ದರೂ ಸಹ, ನಾವು ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಉದಾಹರಣೆಗೆ, ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟ ಯಾವುದೇ ಒಂದು ನಿಂದನಾತ್ಮಕ ಬರವಣಿಗೆ ಕೂಡ ನಿಮ್ಮನ್ನು ಜೈಲುಪಾಲಾಗುವಂತೆ ಮಾಡುತ್ತದೆ.
ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿ ವ್ಯಕ್ತಿಯ ಅಭಿಪ್ರಾಯವೂ ಮತ್ತೊಬ್ಬನಿಗಿಂತೂ ಭಿನ್ನವಾಗಿರುತ್ತದೆ ಆದರೆ ಅದನ್ನು ಮತ್ತೊಬ್ಬರ ಮೇಲೆ ಹೇರುವ, ಒಪ್ಪಿಕೊಳ್ಳದಿದ್ದರೆ ದಾಳಿ ಮಾಡುವ ಸಂಪ್ರದಾಯ ಒಳ್ಳೆಯದಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನಾವು ಹೇಗೆ ಎಚ್ಚರದಲ್ಲಿರಬೇಕು?, ನಾವು ಮಾಡಬಾರದ ಕೆಲಸಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸೂಕ್ಷ್ಮ ವಿಷಯದ ಚರ್ಚೆ!
ಸೂಕ್ಷ್ಮ ವಿಷಯದ ಮೇಲೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೆ, ಪ್ರಚೋದನಾಕಾರಿ ಕಾಮೆಂಟ್‌ಗಳನ್ನು ಲೈಕ್ ಮಾಡದಿರಿ. ಯಾಕೆಂದರೆ, ಬೇರೆಯವರು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಒಂದು ಕಾಮೆಂಟ್ ವ್ಯಕ್ತಿಯನ್ನು ಕಂಬಿ ಹಿಂದೆ ತಳ್ಳಬಹುದು ಎಂಬುದನ್ನು ಮರೆಯಬೇಡಿ. ಒಂದು ಲೈಕ್ ನಿಂದಾಗಿ ಪೊಲೀಸರು ನಿಮ್ಮ ಮನೆಗೆ ಸಹ ಬರಬಹುದು.

ಧರ್ಮ, ಜಾತಿಯ ವಿಷಯಗಳು
ಫೇಸ್‌ಬುಕ್ ಅಥವಾ ಬೇರೆ ಯಾವುದೇ ಜಾಲತಾಣಗಳಲ್ಲಿ ಯಾವುದೇ ಧರ್ಮ, ಜಾತಿಯ ವಿಷಯಗಳ ಬಗ್ಗೆ ತೆಗಳಿ, ಅವಮಾನಿಸುವ ಫೋಟೋ ಅಥವಾ ಕಮೆಂಟ್ ಹಾಕದಿರಿ. ಬಾರತದಂತಹ ವೈವಿಧ್ಯಮಯ ದೇಶದಲ್ಲಿ ಇಂತಹ ಸೂಕ್ಷ್ಮ ವಿಚಾರಗಳು ಪ್ರಭಾವ ಬೀರುತ್ತವೆ. ಇದರಿಂದ ನೀವು ಜೈಲು ಪಾಲಾಗುವುದು ಆಶ್ಚರ್ಯವೇನಿಲ್ಲ.

ಮಾನಸಿಕವಾಗಿ ಗಟ್ಟಿಯಾಗಿರಿ.
ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿ ನಿಮ್ಮ ಮನಸ್ಸನ್ನು ಹಾಳುಮಾಡುವಂತಹ ಬರವಣಿಗೆಗಳನ್ನು ಹಾಕಬಹುದು. ಅಂತಹುಗಳನ್ನು ನಿರ್ಲಕ್ಷಿಸಿ ಅವರನ್ನು ಬ್ಲಾಕ್ ಮಾಡಿಬಿಡಿ. ನಿಮ್ಮನ್ನು ಪ್ರಚೋದಿಸುವ ವಿಷಯಗಳಿಂದ ದೂರವಿದ್ದುಬಿಡಿ. ನೀವು ಪೋಸ್ಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಪೋಸ್ಟ್ ಮಾಡಿ.

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ
ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿ ಬದಲಾಗುತ್ತಿರುವ ಈ ಫೇಸ್‌ಬುಕ್‌ನ್ನು ಎಷ್ಟು ಎಚ್ಚರದಿಂದ ಬಳಸುತ್ತೇವೋ ಅಷ್ಟು ಒಳ್ಳೆಯದು.ಫೇಸ್‌ಬುಕ್ ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುವ ಹೊಸ ಮಾಧ್ಯಮವಾಗಿ ರೂಪುಗೊಂಡಿದೆ. ಫೇಸ್‌ಬುಕ್ ಮೂಲಕ ಎಲ್ಲರಿಗೂ ನಿಮ್ಮ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಾಗಿ, ಮಾನ ಕಳೆದುಕೊಳ್ಳುವ ಕೆಲಸ ಮಾಡಬೇಡಿ.

ಅನ್‌ಫ್ರೆಂಡ್ ಆಗಿಬಿಡಿ!
ಒಬ್ಬ ವ್ಯಕ್ತಿಯ ಮನಸ್ಥಿತಿ, ಗುಣ, ವರ್ತನೆ, ಜ್ಞಾನ ಎಂಥದ್ದು ಎಂದು ನೋಡಲು ಅವರ ಫೇಸ್‌ಬುಕ್ ಅಕೌಂಟ್ ನೋಡಿದರೆ ಸಾಕು. ಹಾಗಾಗಿ, ನಿಮ್ಮ ಫೇಸ್‌ಬುಕ್ ಗೆಳೆಯರಲ್ಲಿ ಯಾರಾದರೂ ನಿಮ್ಮನ್ನು ಪ್ರಚೋದಿಸುವಂತವರು ಇದ್ದರೆ ಅವರನ್ನು ಅನ್‌ಫ್ರೆಂಡ್ ಮಾಡಿಬಿಡಿ. ಆಗ ಅವರು ಮಾಡುತ್ತಿರುವ ಫೇಸ್‌ಬುಕ್ ಕಮೆಂಟ್‌ಗಳು ನಿಮಗೆ ಕಾಣಿಸುವುದಿಲ್ಲ.

ಫೇಸ್‌ಬುಕ್ ಅಂದರೆ ನೀವೇ
ಇಂದಿನ ದಿನದಲ್ಲಿ ಹೊಸದಾಗಿ ಕೆಲಸ ಕೊಡುವವರು ಫೇಸ್‌ಬುಕ್ ಅಕೌಂಟ್‌ನ್ನು ನೋಡಿ ಕೆಲಸ ಕೊಡಬಹುದು. ಮದುವೆ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಯ ಮನೆಯವರು ಫೇಸ್‌ಬುಕ್ ನೋಡಿ ನಿರ್ಧಾರ ಕೈಗೊಳ್ಳಬಹುದು. ಇಂತಹ ಕಾಲದಲ್ಲಿ ನೀವು ಫೇಸ್‌ಬುಕ್‌ನ್ನು ಬಳಸುವಾಗ ಎಚ್ಚರದಿಂದ ಬಳಸುವುದು ಕೂಡ ಅತಿಮುಖ್ಯ.


Click it and Unblock the Notifications








