ವಾಟ್ಸ್‌ಆಪ್‌ ವೈರಲ್ ವರಮಹಾಲಕ್ಷ್ಮಿ ಹಬ್ಬದ ಆಫರ್ ನಿಜ: ಆಧಾರ್ ಇದ್ರೆ ಅರ್ಧ ಬೆಲೆಗೆ ರೇಷ್ಮೆ ಸೀರೆ...!

  |

  ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಹಬ್ಬಕ್ಕೆ ಚೆಂದ ರೇಷ್ಮೆ ಸೀರೆಯನ್ನು ಉಟ್ಟು ಸಂತೋಪಡಲಿ ಎನ್ನುವ ಕಾರಣಕ್ಕೆ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿಮಿಟೆಡ್ (KSIC) ವತಿಯಿಂದ ಅರ್ಧ ಬೆಲೆಗೆ ರೇಷ್ಮೆ ಸೀರೆಯನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ. ಒಮ್ಮೆಯಾದರು ದುಬಾರಿ ಬೆಲೆಯ ರೇಷ್ಮೆ ಸೀರೆ ಉಡಬೇಕು ಎನ್ನವವರಿಗೆ ಇಂದು ಬೊಂಬಾಟ್ ಆಫರ್ ಆಗಿದೆ.

  ವೈರಲ್ ವರಮಹಾಲಕ್ಷ್ಮಿ ಹಬ್ಬದ ಆಫರ್ ನಿಜ: ಆಧಾರ್ ಇದ್ರೆ ಅರ್ಧ ಬೆಲೆಗೆ ರೇಷ್ಮೆ ಸೀರೆ

  ಆದರೆ ಈ KSIC ಸೇಲ್‌ನಲ್ಲಿ ನೀವು ಅರ್ಧ ಬೆಲೆಗೆ ರೇಷ್ಮೆ ಸೀರೆಯನ್ನು ಕೊರ್ಳಬೇಕಾದರೆ ಆಧಾರ್ ಹೊಂದುವುದು ಕಡ್ಡಾಯವಾಗಿದೆ. ನೀವು ಆಧಾರ್ ಅನ್ನು ನೀಡಿದರೆ ಮಾತ್ರವೇ ನಿಮಗೆ ರೇಷ್ಮೆ ಸೀರೆ ಆಫರ್ ನಲ್ಲಿ ದೊರೆಯಲಿದೆ. ಇಲ್ಲವಾದರೆ ನೀವು ಪೂರ್ಣ ಪ್ರಮಾಣದ ಹಣವನ್ನು ಪಾವತಿ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ನೀವು ಹೇಗೆ ಅರ್ಧ ಬೆಲೆಗೆ ಖರೀದಿಸುವುದು ಎನ್ನುವುದನ್ನು ಮುಂದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೋಶಿಯಲ್ ಮೀಡಿಯಾದಲ್ಲಿ ವೈರಲ್:

  ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಅರ್ಧ ಬೆಲೆಗೆ ರೇಷ್ಮೆ ಸೀರೆಯನ್ನು ಮಾರಾಟ ಮಾಡುತ್ತಿರುವ ವಿಚಾರದ ಬಗ್ಗೆ ಮಾಹಿತಿ ಲೀಕ್ ಆದ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿಯೂ ಮಹಿಳೆಯರ ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಯವು ಹರಿದಾಡುತ್ತಿದೆ.

  ಪ್ರವಾಸೋದ್ಯಮ ಇಲಾಖೆಯಿಂದ:

  ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಈ ಆಫರ್ ಅನ್ನು ನೀಡಲಾಗಿದೆ. ಮಹಿಳೆಯರು ಅರ್ಧ ಬೆಲೆಗೆ ರೇಷ್ಮೆ ಸೀರೆಯನ್ನು ಖರೀದಿಸಹುದಾಗಿದೆ. ಆದರೆ ಇದಕ್ಕಾಗಿ ಆಧಾರ್ ಕಡ್ಡಾಯ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ. ಈಗಾಗಾಗಿ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಆಧಾರ್ ಕಡ್ಡಾಯ ಯಾಕೆ..?

  ದೇಶದಲ್ಲಿ ಎಲ್ಲಾ ಮಾದರಿಯ ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಅರ್ಧ ಬೆಲೆಗೆ ರೇಷ್ಮೆ ಸೀರೆಯನ್ನು ಖರೀದಿ ಮಾಡುವ ಸಲುವಾಗಿ ಆಧಾರ್ ಅನ್ನು ಕಡ್ಡಾಯ ಮಾಡಲಾಗಿದೆ.

  ಎರಡು ಸೇಲ್:

  ಕಾರಣ ಒಟ್ಟು ಎರಡು ಸೇಲ್‌ಗಳು ನಡೆಯಲಿದೆ. ಈ ಸಂದರ್ಭದಲ್ಲಿ ಒಮ್ಮೆ ಖರೀದಿಸಿದವರು ಮತ್ತೊಂಮ್ಮೆ ಖರೀದಿಸಿದರೆ ಬೇರೆಯವರಿಗೆ ಯೋಜನೆಯ ಲಾಭ ದೊರೆಯುವುದಿಲ್ಲ. ಈ ಹಿನ್ನಲೆಯಲ್ಲಿ ಒಮ್ಮೆ ಮಾತ್ರವೇ ಒಬ್ಬರು ಖರೀದಿಸಿ, ಮತ್ತೊಬ್ಬರಿಗೂ ಅವಕಾಶ ದೊರೆಯುವಂತೆ ಆಗಲಿ ಎನ್ನವು ಕಾರಣಕ್ಕೆ.

  ಸ್ಪೇಷಲ್ ಸೇಲ್:

  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ KSIC ಸೇಲ್‌ನಲ್ಲಿ ರೂ.7000 ಬೆಲೆಯ ರೇಷ್ಮೆ ಸೀರೆಯನ್ನು ಕೇವಲ ರೂ.4000ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರೂ.15,000ಬೆಲೆಯ ರೇಷ್ಮೆ ಸೀರೆಯನ್ನು ಕೇವಲ ರೂ.4,000ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೇಲ್‌ನಲ್ಲಿ ಭಾಗಿಯಾಗಲು ಆಧಾರ್ ಕಡ್ಡಾಯವಾಗಿದೆ.

  ಐದು ವರ್ಷಕ್ಕೆ ಒಮ್ಮೆ:

  ಗ್ರಾಹಕರು ತಮ್ಮ ಆಧಾರ್ ಕಾರ್ಡ್ ತೋರಿಸಿ KSIC ಸೇಲ್ ಶೋ ರೂಂ ನಿಂದ ರೇಷ್ಮೆ ಸೀರೆ ಖರೀದಿಸಬಹುದು. ಆದರೆ ಒಂದು ಬಾರಿ ಆಫರ್ ನಲ್ಲಿ ಖರೀದಿಸಿದವರು ಮತ್ತೆ ಮುಂದಿನ ಐದು ವರ್ಷಗಳಲ್ಲಿ ಖರೀದಿಸುವ ಆಗಿಲ್ಲ, ಮತ್ತೆ ಈ ಆಫರ್ ಬಂದರೆ ಬೇರೆಯವರಿಗೆ ಆಯ್ಕೆಯನ್ನು ನೀಡಲು ಈ ಕ್ರಮವನ್ನು ಜಾರಿ ಮಾಡಲಾಗಿದೆ.

  ಸೇಲ್‌ ಎಲ್ಲಿ..?

  ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೊರೆಯುತ್ತಿರುವ ಸೇಲ್‌ ಈ ಕೆಳ ಕಂಡ ಸ್ಥಳಗಳಲ್ಲಿ ಮಾತ್ರವೇ ಜಾರಿಯಲ್ಲಿ ಇರಲಿದೆ. ಬೆಂಗಳೂರಿನ MG ರಸ್ತೆಯ KSIC ಜುಬಲಿ ಶೋ ರೂಂ, KG ರಸ್ತೆಯ FKCCI ಕಟ್ಟಡದಲ್ಲಿರುವ KSIC ಶೋ ರೂಂ, ಮೈಸೂರಿನ ಸಿಲ್ಕ್ ಫ್ಯಾಕ್ಟರಿ KSIC ಶೋ ರೂಂ, ಚನ್ನಪಟ್ಟಣದ KSIC ಶೋ ರೂಂ ಮತ್ತು ದಾವಣಗೆರೆ KSIC ಶೋ ರೂಂನಲ್ಲಿ ಮಾತ್ರವೇ ಮಾರಾಟವಾಗಲಿದೆ.

  ಒಂದು ದಿನದ ಸೇಲ್:

  ಆಧಾರ್ ಇದ್ರೆ ಅರ್ಧ ಬೆಲೆಗೆ ರೇಷ್ಮೆ ಸೀರೆ ದೊರೆಯುವ ಆಫರ್ ಸೇಲ್ ಕೇವಲ ಒಂದು ದಿನ ಮಾತ್ರವೇ ದೊರೆಯಲಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15 ರಂದು ಮತ್ತು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಗಸ್ಟ್ 24 ರಂದು ಮಾತ್ರವೇ ಸೇಲ್ ನಡೆಯಲಿದೆ ಎನ್ನಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Aadhaar must to buy Mysore Silk saris during sale in Karnataka. to know more visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more