ಗೂಗಲ್ ಪಿಕ್ಸಲ್ ಫೋನಿನಲ್ಲಿ ಫೋಟೋ ತೆಗೆದು ಐಫೋನ್‌ನಲ್ಲಿ ಟ್ವಿಟ್..!
ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸೆಲೆಬ್ರಿಟಿಗಳ ಕಾಲು ಎಳೆಯುವುದನ್ನು ಕಾಣಬಹುದಾಗಿದೆ. ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸುವ ಕಾರ್ಯ ನಡೆಯುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಸೆಲೆಬ್ರಿಟಿಗಳು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳನ್ನು ಎತ್ತಿ ತೋರಿಸಿ ಅವರನ್ನು ಟ್ರೋಲ್ ಮಾಡುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಟ್ರೋಲಿಗರಿಗೆ ಆಹಾರವಾಗಿರುವುದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್‌ನ ಬಹು ಬೇಡಿಕೆಯ ನಟಿ ಅನುಷ್ಕಾ ಶರ್ಮಾ, ಗೂಗಲ್ ನೂತನವಾಗಿ ಲಾಂಚ್ ಮಾಡಿರುವ ಫೋನಿನ ಕ್ಯಾಮೆರಾ ಬಗ್ಗೆ ಜಾಹಿರಾತು ಮಾಡಲು ಹೋಗಿ ತಾವೇ ತೊಂದರೆಗೆ ಸಿಲುಕಿದ್ದಾರೆ. ಅವರು ಮಾಡಿದ ಒಂದು ತಪ್ಪನ್ನು ಟ್ಟಿಟಿಗರು ಟ್ಯಾಗ್ ಮಾಡಿ ಟೀಕಿಸುತ್ತಿದ್ದಾರೆ.
ಗೂಗಲ್ ಟ್ಯಾಗ್ :
ಅನುಷ್ಕಾ ಶರ್ಮಾ ತಮ್ಮ ಟ್ಟಿಟರ್‌ನಲ್ಲಿ ನಾಯಿಯೊಂದಿಗೆ ತೆಗೆದ ಚಿತ್ರವನ್ನು ಕ್ಲಿಕ್ ಮಾಡಿ, ಅದರೊಂದಿಗೆ #TeamPixel #Pixel2XL ಎಂಬ ಹ್ಯಾಷ್ ಟ್ಯಾಗ್ ಅನ್ನು ಹಾಕಿದ್ದಾರೆ ಮತ್ತು ಗೂಗಲ್ ಇಂಡಿಯಾ @GoogleIndia ಎಂದು ಗೂಗಲ್ ಅನ್ನು ಟ್ಯಾಗ್ ಮಾಡಿದ್ದಾರೆ.
ಐಫೋನ್‌ನಲ್ಲಿ ಟ್ಯಾಗ್:
ಅನುಷ್ಕಾ ಶರ್ಮಾ ಗೂಗಲ್ ಇಂಡಿಯಾ ಮತ್ತು ಗೂಗಲ್ ಪಿಕ್ಸಲ್ ಎಂದು ಟ್ಯಾಗ್ ಗಳನ್ನು ಹಾಕಿದ ಫೋಟೋದೊಂದಿಗೆ ಐಫೋನ್ ನಿಂದ ಟ್ವಿಟ್ ಮಾಡಿದ್ದಾರೆ. ಇದನ್ನು ನೋಡಿದ ಟ್ವಿಟಿಗರು ಇದನ್ನು ಸ್ಕ್ರಿನ್ ಶಾಟ್ ತೆಗೆದು ಟ್ವಿಟ್ ಮಾಡಿ ಕಾಲು ಎಳೆಯುತ್ತಿದ್ದಾರೆ.
ಮತ್ತೆ ಟ್ವಿಟ್:
ಇದಾದ ನಂತರದಲ್ಲಿ ಅನುಷ್ಕಾ ಶರ್ಮಾ ತಾವು ಮಾಡಿದ ತಪ್ಪನ್ನು ತಿಳಿದುಕೊಂಡು ಹಳೇಯ ಟ್ವಿಟ್ ಅನ್ನು ಡಿಲೀಟ್ ಮಾಡಿ, ಮತ್ತೆ ಹೊಸದಾಗಿ ಅದೇ ಫೋಟೋವನ್ನು ಹಾಕಿ ಹೊಸದಾಗಿ ಟ್ವಿಟ್ ಮಾಡಿದ್ದಾರೆ ಎನ್ನಲಾಗಿದೆ. ಆದರು ಹೊಸ ಹಲವು ಮಂದಿ ಇದನ್ನು ಇನ್ನು ಟ್ರೋಲ್ ಮಾಡುತ್ತಿದ್ದಾರೆ.
ಬೇಡಿಕೆಯ ನಟಿ:
ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಬೇಡಿಯ ನಟಿಯಾಗಿದ್ದು, ಬಾಲಿವುಡ್ ಮೂವರು ಖಾನ್‌ಗಳಾದ ಅಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ದಿಗ್ಗಜರೊಂದಿಗೆ ನಟಿಸಿರುವ ಅನುಷ್ಕಾ ಸದ್ಯ ವರುಣ್ ಧವನ್ ಜೊತೆ ಸುಯಿ ಧಾಗ್ ಚಿತ್ರದಲ್ಲಿ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications








