ಬೆಂಗಳೂರು ಪೊಲೀಸರಿಂದ ಹೊಸ ಪ್ರಯತ್ನ: ಟ್ರಾಫಿಕ್ ಪಾಠ ಹೇಳಲು ಬಂದರು ಬಾಹುಬಲಿ-ಕಟ್ಟಪ್ಪ
ಪೋಲಿಸರು ಈ ಬಾರಿ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಮೆಮೆಗಳ ಮಾದರಿಯಲ್ಲಿ ಟ್ರಾಫಿಕ್ ಪಾಠವನ್ನು ಹೇಳಲು ಹೊರಟಿದ್ದಾರೆ.
ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಸಹ ಆಪ್‌ಡೇಟ್ ಆಗಿದ್ದಾರೆ. ಇತ್ತಿಚೇಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪೋಲಿಸರು ಈ ಬಾರಿ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಮೆಮೆಗಳ ಮಾದರಿಯಲ್ಲಿ ಟ್ರಾಫಿಕ್ ಪಾಠವನ್ನು ಹೇಳಲು ಹೊರಟಿದ್ದಾರೆ.

ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಬಾಹುಬಲಿ ಭಾಗ 2 ಸಿನಿಮಾ ಬಗ್ಗೆ ಜನರು ಕುತೂಹಲವನ್ನು ಹೊಂದಲು ಪ್ರಮುಖ ಕಾರಣವೇ ಕಟ್ಟಪ್ಪ ಬಾಹುಬಲಿಯನ್ನು ಯಾವ ಕಾರಣಕ್ಕಾಗಿ ಕೊಂದ ಎನ್ನುವುದು. ಅದೇ ಅಂಶವನ್ನು ಇಟ್ಟುಕೊಂಡು ಬೆಂಗಳೂರು ಟ್ರಾಫಿಕ್ ಪೊಲೀಸರು ಮೆಮೆ ಮಾಡಿದ್ದಾರೆ.
ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬಾಹುಬಲಿ ಕಟ್ಟಪ್ಪ ಮೆಮೆ ಹಾಕಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು, ಬಾಹುಬಲಿಯನ್ನು ಆಟೋ ಡ್ರೈವರ್ ಮಾಡಿದ್ದಾರೆ, ಇದೇ ಮಾದರಿಯಲ್ಲಿ ಕಟ್ಟಪ್ಪನ್ನು ಪ್ರಯಾಣಿಕನಾಗಿ ಮಾಡಿದ್ದಾರೆ. ಇಲ್ಲಿ ಕಟ್ಟಪ್ಪನಿಗೆ ಕೋಪ ಯಾಕೆ ಬಂತು ಎಂದು ಕೇಳಿದ್ದು ನಂತರ ಬಾಹುಬಲಿ ಒನ್ ಅಂಡ್ ಆಫ್ ಕೇಳಿದ ಅದಕ್ಕೆ ಎನ್ನುವ ಮೂಲಕ ಆಟೋ ಚಾಲಕರ ವರ್ತನೆಯನ್ನು ತೋರಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿರುವುದರಿಂದ ಆಟೋ ಚಾಲಕರು ಮನ ಬಂದತೆ ಪ್ರುಯಾಣಿಕರ ಸುಲಿಗೆ ನಿಂತಿದ್ದು, ಕರೆದ ಕಡೆಗೆ ಬರುವುದಿಲ್ಲ. ಬಂದರೆ ಹೆಚ್ಚಿನ ಹಣವನ್ನು ನೀಡುವಂತೆ ಬಲವಂತ ಮಾಡುತ್ತಾರೆ ಇದನ್ನೇ ಎಫೆಕ್ಟಿವ್ ಆಗಿ ತೋರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮೆಮೆಯನ್ನು ಮಾಡಿದ್ದಾರೆ.


Click it and Unblock the Notifications








