ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು

By Shwetha
|

ಸಾಮಾಜಿಕ ಜಾಲತಾಣಗಳು ಸಮಯವನ್ನು ಹಾಳುಮಾಡುತ್ತವೆ ಅಂತೆಯೇ ಇದು ನಮ್ಮನ್ನು ಆಲಿಸಿಗಳನ್ನಾಗಿ ಮಾಡಿಬಿಡುತ್ತದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ ಅಲ್ಲವೇ? ಆದರೆ ಕೆಲವೊಮ್ಮೆ ಇದೇ ತಾಣಗಳು ಆಪತ್ಬಾಂಧವನಂತೆ ನೆರವಾಗಿರುವ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದೆ ಸುಳಿಯುತ್ತದೆ.

ಫೇಸ್‌ಬುಕ್ ಕಳೆದು ಹೋಗಿದ್ದ ಮಗನನ್ನು ತಾಯಿಗೆ ದೊಕಿಸಿಕೊಟ್ಟ ಕಥೆ ನಿಮಗೆ ನೆನಪಿರಬಹುದು ಅಲ್ಲವೇ ಹಾಗೆಯೇ ಈಗ ವಾಟ್ಸಾಪ್ ಕಾಣೆಯಾಗಿದ್ದ ಮಗುವನ್ನು ಬರೇ ಎರಡು ಘಂಟೆಗಳಲ್ಲಿ ಪತ್ತೆಹಚ್ಚಲು ನೆರವಾಗಿರುವ ಘಟನೆ ಮುಂಬೈಯಲ್ಲಿ ವರದಿಯಾಗಿದೆ. ಮೂರರ ಹರೆಯದ ಮಗುವು ಮನೆಯ ಸಮೀಪದ ಮಸ್ಜೀದ್ ಬಂದರ್ ಸ್ಟೇಶನ್‌ನಿಂದ ಬೆಳಗ್ಗೆ 10:30 ಗೆ ಕಾಣೆಯಾಗಿದ್ದಳು. ತ್ವರಿತವಾಗಿ ಮಗು ಕಾಣೆಯಾಗಿದ್ದರ ಬಗ್ಗೆ ಪೋಲೀಸರಿಗೆ ತಿಳಿಸಿದ್ದು ಅವರು ಕೂಡಲೇ ಮಗುವಿನ ಫೋಟೋವನ್ನು ಹಲವಾರು ವಾಟ್ಸಾಪ್ ಗುಂಪುಗಳಿಗೆ ರವಾನಿಸಿದ್ದಾರೆ. ಈ ಸಲುವಾಗಿ ಹುಡುಗಿಯು ಗ್ರಾಂಟ್ ರೋಡ್ ಸ್ಟೇಶನ್‌ನಲ್ಲಿ ಎರಡು ಗಂಟೆಗಳಲ್ಲಿ ಸುರಕ್ಷಿತವಾಗಿ ದೊರಕಿದ್ದಾಳೆ.

ಮಗುವು ಆಟವಾಡುತ್ತಾ ಸ್ಟೇಶನ್ ಅನ್ನು ಪ್ರವೇಶಿಸಿದ್ದು ಕುತೂಹಲಕ್ಕಾಗಿ ಆಕೆ ಟ್ರೈನ್ ಅನ್ನು ಹತ್ತಿದ್ದಾಳೆ. ಅದಾಗ್ಯೂ ಇದು ಮಗುವನ್ನು ಅಪಹರಣ ಮಾಡುವ ಇರಾದೆಯಾಗಿರಬಹುದೇ ಎಂಬುದಾಗಿ ಪೋಲೀಸರು ತನಿಖೆ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಸಿಸಿಟಿವಿಯನ್ನು ಇದೀಗ ಅಳವಡಿಸಿದ್ದು ಹುಡುಗಿಗೆ ಯಾವುದೇ ಹಲ್ಲೆಗಳು ಇಲ್ಲವೇ ಗಾಯಗಳು ಉಂಟಾಗಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿದೆ.

#1

#1

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡಾಕ್ಯುಮೆಂಟ್ ಶೇರಿಂಗ್ ಫೀಚರ್ ಅನ್ನು ವಾಟ್ಸಾಪ್ ಹೊರತಂದಿದೆ. ಪಿಡಿಎಫ್ ಫೈಲ್‌ಗಳನ್ನು ಮಾತ್ರವೇ ಹಂಚಿಕೊಳ್ಳಲು ಬಳಕೆದಾರರನ್ನು ಅನುಮತಿಸುತ್ತದೆ. ಅಂದರೆ ಡಾಕ್, ಎಕ್ಸ್‌ಎಲ್‌ಎಸ್ ಹಾಗೂ ಇತರೆ ಡಾಕ್ಯುಮೆಂಟ್‌ಗಳಿಗೆ ಇದು ಬೆಂಬಲವನ್ನು ನೀಡುತ್ತಿಲ್ಲ. ಫೈಲ್‌ಗಳನ್ನು ಶೇರ್ ಮಾಡಲು ಬಳಕೆದಾರರು ಪರದೆಯ ಬಲಮೇಲ್ಭಾಗದಲ್ಲಿರುವ ಅಟ್ಯಾಚ್‌ಮೆಂಟ್ ಐಕಾನ್ ಅನ್ನು ಸ್ಪರ್ಶಿಸಿ ಇಲ್ಲಿ ಡಾಕ್ಯುಮೆಂಟ್ ಆಪ್ಶನ್ ಚೂಸ್ ಮಾಡಿಕೊಳ್ಳಬೇಕು.

#2

#2

ಐಫೋನ್‌ಗಳಿಗಾಗಿ ವಾಟ್ಸಾಪ್ ಹೊಸ ಅಪ್‌ಡೇಟ್ ಅನ್ನು ಹೊರತಂದಿದ್ದು ಗೂಗಲ್ ಡ್ರೈವ್‌ನಿಂದ ನೇರವಾಗಿ ಫೈಲ್‌ಗಳನ್ನು ಕಳುಹಿಸುವುದು ಅಂತೆಯೇ ವೀಡಿಯೊ ಪ್ಲೇಯಾಗುತ್ತಿರುವಾಗ ಜೂಮ್ ಮಾಡುವ ಫೀಚರ್ ಕೂಡ ಇದರಲ್ಲಿದೆ. ಐಕ್ಲೌಡ್ ಡ್ರೈವ್ ಕೂಡ ಅಪ್‌ಡೇಟ್ ಹೊಸ ಬದಲಾವಣೆ ಎಂದೆನಿಸಿದ್ದು, ಐಕ್ಲೌಡ್ ಸ್ಟೋರೇಜ್‌ನಲ್ಲಿ ಸ್ಟೋರ್ ಆಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್‌ನಿಂದ ನೇರವಾಗಿ ಕಳುಹಿಸಬಹುದು.

#3

#3

ವಾಟ್ಸಾಪ್ ಇತ್ತೀಚೆಗೆ ತಾನೇ ಬಳಕೆದಾರರ ಸಂಖ್ಯೆಯನ್ನು 256 ಕ್ಕೆ ಏರಿಸಿದೆ. ಇದು ಈ ಹಿಂದೆ 100 ಕ್ಕೆ ಸೀಮಿತವಾಗಿತ್ತು. ಈ ಅಪ್‌ಡೇಟ್ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಿದೆ.

#4

#4

ಎಲ್ಲವನ್ನೂ ಒಟ್ಟುಗೂಡಿಸುವ ಮೀಡಿಯಾ ಪರದೆಯನ್ನು ಪ್ರತೀ ವಾಟ್ಸಾಪ್ ಸಂವಾದ ಒಳಗೊಂಡಿದೆ. ಈ ಹೊಸ ಅಪ್‌ಡೇಟ್ ಈ ಎಲ್ಲಾ ಮಾಧ್ಯಮ ಮತ್ತು ಪಠ್ಯಗಳ ಮೇಲೆ ತ್ವರಿತ ದೃಷ್ಟಿ ಬೀರಲು ಸಹಕಾರಿಯಾಗಿದೆ.

#5

#5

ಐಓಎಸ್ ಬಳಕೆದಾರರಿಗೆ ಈ ಅನುಕೂಲತೆ ಇದ್ದು ವೀಡಿಯೊಗಳನ್ನು ಜೂಮ್ ಮಾಡಲು ಪಿಂಚ್ ಮಾಡಬಹುದಾಗಿದೆ. ವಾಟ್ಸಾಪ್‌ನಲ್ಲಿ ವೀಡಿಯೊ ಪ್ಲೇಯಗುತ್ತಿರುವಾಗ ಅದನ್ನು ಜೂಮ್ ಮಾಡಿ ನೋಡಬಹುದಾಗಿದೆ.

#6

#6

ವಾಟ್ಸಾಪ್ ಇತ್ತೀಚೆಗೆ ತಾನೇ ಬೀಟಾ ಟೆಸ್ಟರ್ ಪ್ರೊಗ್ರಾಮ್ ಅನ್ನು ಲಾಂಚ್ ಮಾಡಿದೆ. ಒಮ್ಮೆ ಸೈನ್ ಇನ್ ಆದರೆ ವಾಟ್ಸಾಪ್ ಮೆಸೆಂಜರ್ ಅಪ್ಲಿಕೇಶನ್ ಟೆಸ್ಟಿಂಗ್ ಆವೃತ್ತಿ ಇರುವ ಅಪ್‌ಡೇಟ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಈ ಪ್ರೊಗ್ರಾಮ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ.

#7

#7

ನಿಮ್ಮ ಚಾಟ್‌ಗಳನ್ನು ಅಳಿಸುವಾಗ ನಿಮಗೆ ಇನ್ನಷ್ಟು ಫ್ಲೆಕ್ಸಿಬಿಲಿಟಿಯನ್ನು ಈ ಫೀಚರ್ ನೀಡುತ್ತದೆ. 30 ದಿನ ಅಥವಾ 6 ತಿಂಗಳಿಗಿಂತಲೂ ಹೆಚ್ಚು ಹಳತಾಗಿರುವ ಸಂದೇಶಗಳನ್ನು ಅಳಿಸುವ ಆಪ್ಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಇದೆ. ಆದರೆ ಇದರಲ್ಲೂ ಕೆಲವೊಂದನ್ನು ನಿಮಗೆ ಉಳಿಸಬೇಕು ಎಂದಾದಲ್ಲಿ ಇದೀಗ ನಿಮಗೆ ಆಯ್ಕೆ ಲಭ್ಯವಿದೆ. ಚಾಟ್ ಕ್ಲಿಯರ್ ಮಾಡುವಾಗ ಸ್ಟಾರ್ ಮಾಡಿದ ಸಂದೇಶಗಳನ್ನು ಬಳಕೆದಾರರು ಇರಿಸಿಕೊಳ್ಳಬಹುದಾಗಿದೆ. ಈ ಆವೃತ್ತಿ ಬೀಟಾ ಮೋಡ್‌ನಲ್ಲಿದೆ.

Best Mobiles in India

English summary
Police officials often take to social media platforms while cracking crucial cases. And here is how Mumbai Police tracked down a lost toddler in two hours using WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X