ಇಂಟರ್ನೆಟ್‌ನಲ್ಲಿ ವೈರಲ್ ಡ್ಯಾನ್ಸ್ ಚಾಲೆಂಜ್: ನೀವು ಮಾಡಿ ಮಜಾವಾಗಿದೆ..!
ಸೋಶಿಯಲ್ ಮಿಡಿಯಾದಲ್ಲಿ ದಿನಕ್ಕೊಂದು ಹೊಸ ಚಾಲೆಂಜ್‌ಗಳು ಟ್ರೆಂಟ್ ಆಗುತ್ತಿದೆ ಇದೇ ಮಾದರಿಯಲ್ಲಿ Dame Tu Cosita ಎನ್ನುವ ಡಾನ್ಸ್ ಚಾಲೆಂಜ್ ವೊಂದು ವೈರಲ್ ಆಗಿದ್ದು, ಮಕ್ಕಳು ಮರಿಗಳು ಎನ್ನದೇ ಬಾಲಿವುಡ್ ಸ್ಟಾರ್ ಗಳು ಈ ಚಾಲೆಂಜ್ ನಲ್ಲಿ ಭಾಗಿಯಾಗಿದ್ದಾರೆ. ಕಾರ್ಟುನ್ ಮಾದರಿಯ ಸ್ಟೆಪ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.

ಹಸಿರು ಬಣ್ಣದ ಕಾರ್ಟೂನ್ ಚಿತ್ರವೊಂದು Dame Tu Cosita ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಹಲವು ಮಂದಿ ಕಾರ್ಟೂನ್ ಮಾದರಿಯಲ್ಲೇ ಡ್ಯಾನ್ಸ್ ಮಾಡಿ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಕ್ರಿಕೆಟಿಗರು, ಸಿನಿಮಾತಾರೆಯರು ಇದೆರಲ್ಲಿ ಪ್ರಮುಖರಾಗಿದ್ದಾರೆ.
Cuentos de la Cripta
ಸ್ಪಾನಿಷ್ ಭಾಷೆಯ Cuentos de la Cripta Vol. 2 ಆಲ್ಬಂನ ಹಾಡು ಇದಾಗಿದ್ದು, ಈ ಡ್ಯಾನ್ಸ್ Dame Tu Cosita ಚಾಲೆಂಜ್ ಎಂದೇ ಖ್ಯಾತಿ ಪಡೆದಿದ್ದು, ಪ್ರತಿಯೊಬ್ಬರು ಡಾನ್ಸ್ ಮಾಡಿ ವಿಡಿಯೋ ಆಪ್‌ಲೋಡ್ ಮಾಡುತ್ತಿದ್ದಾರೆ. ಫನಿಯಾಗಿರುವ ಸ್ಪೆಪ್‌ಗಳು ಡ್ಯಾನ್ಸ್ ಮಾಡಲು ಕಷ್ಟವಾಗಿದೆ.
ಜಾಗತಿಕವಾಗಿ ಹಿಟ್
ಜಾಗತಿಕವಾಗಿ ಹಿಟ್ ಆಗಿರುವ ಈ ಸ್ಟೆಪ್ ಎಲ್ಲರನ್ನು ಸೆಳೆದಿದೆ. ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಇದೇ ಡ್ಯಾನ್ಸ್ ಹೆಚ್ಚಾಗಿದೆ.
ರೋಹಿತ್ ಶರ್ಮ
ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮ ಸಹ Dame Tu Cosita ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ಮಂದಿ
ಬಾಲಿವುಡ್ ಮಂದಿಯೂ ತಾವೇನು ಕಮ್ಮಿ ಇಲ್ಲ ಎನ್ನುವ ಮಾದರಿಯಲ್ಲಿ Dame Tu Cosita ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋ ಸ್ಟೆಪ್ ಹಾಕಿದ್ದಾರೆ
ಮಿಸ್ಟರ್ ಬಿನ್
ಮಿಸ್ಟರ್ ಬಿನ್ ಹಳೇ ವಿಡಿಯೋಗಳನ್ನು ಸೇರಿಸಿ Dame Tu Cosita ಹಾಡಿಗೆ ಡ್ಯಾನ್ಸ್ ಮಾಡಿರುವ ಹಾಗೇ ಮಾಡಿ ವೀಡಿಯೋವನ್ನು ಹರಿ ಬಿಟ್ಟಿದ್ದಾರೆ ನೋಡಲು ಮಜವಾಗಿದೆ.


Click it and Unblock the Notifications