Home
Social media

ದಿನಂಪ್ರತಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ ಖಿನ್ನತೆಗೆ ಜಾರುತ್ತಾರಂತೆ!!

ದಿನಂಪ್ರತಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರಿಗೆ ಅಪರಾಧಿ ಪ್ರಜ್ಞೆ, ಅಸಹಾಯಕತೆ, ಆತ್ಮ ದ್ವೇಷ, ತಾವು ಏನಕ್ಕೂ ಉಪಯೋಗವಿಲ್ಲ ಎಂಬಿತ್ಯಾದಿ ಭಾವನೆಗಳು ಉಂಟಾಗಿ ಅದು ಖಿನ್ನತೆಗೆ ಜಾರುವಂತೆ ಮಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದು, ಇದಕ್ಕೆ ಬಹುಮುಖ್ಯ ಕಾರಣ ಸೋಷಿಯಲ್ ಮೀಡಿಯಾಗಳೇ ಆಗಿವೆ ಎಂದು ವಿಶ್ವ ಆರೋಗ್ಯ ಸಂಘಟನೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ.

ಹೌದು, ವ್ಯಕ್ತಿಯ ಚಿಂತನೆ, ಮನಸ್ಥಿತಿ, ಸಂವಹನ, ಚಟುವಟಿಕೆಗಳು, ಮತ್ತು ಸಾಮಾಜಿಕತೆಗೆ ಸಂಬಂಧಪಟ್ಟ ವರ್ತನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಾಷೆ ಮತ್ತು ಭಾವನೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಫೇಸ್‌ಬುಕ್, ಟ್ವಿಟ್ಟರ್ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಲೋಚನೆ, ಅಭಿಪ್ರಾಯ, ಖುಷಿ, ನೋವುಗಳನ್ನು ಹಂಚಿಕೊಳ್ಳುವ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ. ಇದು ಹೆಚ್ಚಿನವರಿಗೆ ಖಿನ್ನತೆ ಮೂಡಲು ಕಾರಣವಾಗಿದೆ ಎಂದು ಹೇಳಲಾಗಿದೆ.

ದಿನಂಪ್ರತಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ ಖಿನ್ನತೆಗೆ ಜಾರುತ್ತಾರಂತೆ!!

ಪ್ರತಿದಿನ ಸೋಷಿಯಲ್ ಮೀಡಿಯಾವನ್ನು ಬಳಸುವ ಯುವಜನತೆಯು, ಹಲವು ಕಾರಣಗಳಿಂದ ಖಿನ್ನತೆಗೆ ಜಾರುತ್ತಿದ್ದಾರೆ. ಈಗಾಗಲೇ ಖಿನ್ನತೆಯಿಂದ ಬಳಲುತ್ತಿರುವವರು ವ್ಯಕ್ತಿಗಳ ಜೊತೆ ಸಂವಹನ ನಡೆಸುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿಯೇ ದಿನದ ಬಹುತೇಕ ಸಮಯ ಮುಳುಗಿರುತ್ತಾರೆ. ಪ್ರತಿ ವಾರ ಸೋಶಿಯಲ್ ಮೀಡಿಯಾ ಬಳಸುವ ಅವಧಿಗೆ ಅನುಗುಣವಾಗಿ ಖಿನ್ನತೆ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ ಎಂದು ವರದಿ ತಿಳಿಸಿದೆ.

ಇನ್ನು ಒಬ್ಬರೇ ಏಕತಾನತೆಯನ್ನು ಅನುಭವಿಸುತ್ತಿರುವಾಗ ಫೇಸ್‌ಬುಕ್, ಟ್ವಿಟ್ಟರ್ ನಂತಹ ಜಾಲತಾಣಗಳಲ್ಲಿ ಇತರರು ಎಂಜಾಯ್ ಮಾಡುತ್ತಿರುವುದು ನೋಡಿದರೆ ಕೆಲವರಲ್ಲಿ ಋಣಾತ್ಮಕ ಭಾವ ಮೂಡಬಹುದು. ಇದು ನಿಧಾನವಾಗಿ ಖಿನ್ನತೆಗೆ ದಾರಿ ಮಾಡಿ ಕೊಡುತ್ತದೆ ಎಂದು ಅಮೆರಿಕಾದ ಮಾನಸಿಕ ಆರೋಗ್ಯ ರಾಷ್ಟ್ರೀಯ ಸಂಸ್ಥೆ ಹೇಳಿದೆ. ಅದು ನಡೆಸಿರುವ ಅಧ್ಯಯನ ಪ್ರಕಾರ ಸೋಷಿಯಲ್ ಮೀಡಿಯಾ ಮತ್ತು ಖಿನ್ನತೆ ಮಧ್ಯೆ ಬಹಳ ಹತ್ತಿರದ ಸಂಬಂಧವಿದೆ ಎಂದು ಹೇಳುತ್ತದೆ.

ದಿನಂಪ್ರತಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ ಖಿನ್ನತೆಗೆ ಜಾರುತ್ತಾರಂತೆ!!

ಇದಕ್ಕೆ ತದ್ವಿರುದ್ದವಾಗಿ, ಕೆಲವರು ಖಿನ್ನತೆ ಮತ್ತು ಸಾಮಾಜಿಕ ಕಾತರತೆಯಿಂದ ಬಳಲುತ್ತಿರುವವರಿಗೆ ಸೋಷಿಯಲ್ ಮೀಡಿಯಾ ಸಹಾಯ ಮಾಡುವ ಉದಾಹರಣೆಗಳು ಕೂಡ ಇವೆ, ಅದು ವ್ಯಕ್ತಿ ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಸುತ್ತಾನೆ ಎಂಬುದನ್ನು ಆಧರಿಸಿಕೊಂಡು ಇರುತ್ತದೆ ಎಂದು ವರದಿ ತಿಳಿಸಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ದ್ವೇಷ, ಅಸೂಯೆ, ಖಿನ್ನತೆ ಮತ್ತು ಸಾಮಾಜಿಕ ಹೋಲಿಕೆಗಳನ್ನು ಸಮಾನವಾಗಿ ಬಳಸುವುದನ್ನು ಕಲಿಯಬೇಕು ಎಂದು ಮನಃಶಾಸ್ತ್ರಜ್ಞರು ಹೇಳಿದ್ದಾರೆ.

Best Mobiles in India

English summary
kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+