Home
Social media

ಗೂಗಲ್‌ಗೆ ಭಾರೀ ದಂಡ ವಿಧಿಸಿದ್ದನ್ನು ವಿರೋಧಿಸಿ ಕುಟುಕಿದ 'ಟ್ರಂಪ್'!!

By Bhaskar N J

ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆಯನ್ನು ಹೊಂದುವ ನಿಟ್ಟಿನಲ್ಲಿ ಗೂಗಲ್ ಕೆಲಸ ಮಾಡುತ್ತಿದೆ ಎಂಬ ಯುರೋಪಿಯನ್ ಒಕ್ಕೂಟದ ನಿರ್ಧಾರ ಮತ್ತು ದಂಡದ ಆದೇಶವನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಗೂಗಲ್‌ಗೆ ಯುರೋಪಿಯನ್ ನಿಯಂತ್ರಕರು ವಿಧಿಸಿರುವ ದಂಡದ ಪ್ರಮಾಣವನ್ನು ಸಹ ಜರಿದಿರುವ ಟ್ರಂಪ್ ಟ್ವಿಟ್ ಮೂಲಕ ಕುಟುಕಿದ್ದಾರೆ.

"ನಾನು ನಿನಗೆ ಮೊದಲೇ ಹೇಳಿದ್ದೆ! ಐರೋಪ್ಯ ಒಕ್ಕೂಟವು ನಮ್ಮ ಬಹುದೊಡ್ಡ ಕಂಪನಿಯಾದ ಗೂಗಲ್‌ಗೆ ಐದು ಬಿಲಿಯನ್ ಡಾಲರ್ ದಂಡವನ್ನು ವಿಧಿಸಿದೆ. ಅವರು ನಿಜವಾಗಿಯೂ ನಮ್ಮನ್ನು (ಅಮೆರಿಕಾ) ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಇದು ತುಂಬಾ ದಿನ ಸಾಧ್ಯವಿಲ್ಲ" ಎಂದು ಡೊನಾಲ್ಡ್ ಟ್ರಂಪ್ ಟ್ವಿಟ್ಟಿಸಿ ಯುರೋಪಿಯನ್ ಒಕ್ಕೂಟವನ್ನು ವಿರೋಧಿಸಿದ್ದಾರೆ.

ಗೂಗಲ್‌ಗೆ ಭಾರೀ ದಂಡ ವಿಧಿಸಿದ್ದನ್ನು ವಿರೋಧಿಸಿ ಕುಟುಕಿದ 'ಟ್ರಂಪ್'!!

ನಾವು ಸಾಕಷ್ಟು ವಿರೋಧಿಗಳು ಹೊಂದಿದ್ದೇವೆಂದು ನಾನು ಭಾವಿಸುತ್ತೇನೆ. ಯುರೋಪಿಯನ್ ಒಕ್ಕೂಟವನ್ನು ನಾನು ವೈರಿ ಎಂದು ಭಾವಿಸುತ್ತೇನೆ ಎಂದು ಕಳೆದ ವಾರವಷ್ಟೆ ಸ್ಕಾಟ್‌ಲೆಂಡ್‌ನಸಿಬಿಎಸ್ ಸಂದರ್ಶನವೊಂದರಲ್ಲಿ ಹೇಳಿದ್ದ ಟ್ರಂಪ್, ಈಗ ಗೂಗಲ್ ಬಗೆಗಿನ ಯುರೋಪಿಯನ್ ಒಕ್ಕೂಟದ ನಿರ್ಧಾರವನ್ನು ಸಹ ಖಂಡಿಸಿ ಟ್ವಿಟ್ ಮಾಡಿರುವುದು ವೈರಲ್ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ತಯಾರಕರಿಗೆ ಉಚಿತವಾಗಿ ತನ್ನ ಆಂಡ್ರಾಯ್ಡ್ OS ಅನ್ನು ಬಳಕೆ ಮಾಡಿಕೊಳ್ಳಲು ಅನುಮತಿಯನ್ನು ನೀಡಿದ್ದ ಸರ್ಚ್ ಇಂಜಿನ್ ದೈತ್ಯ ಗೂಗಲ್, ಈಗ ತಾನು ಮಾಡಿದ ತಪ್ಪಿನಿಂದಾಗಿ 5 ಬಿಲಿಯನ್ ಡಾಲರ್ ಮೊತ್ತದ ದಂಡವನ್ನು ಪಾವತಿ ಮಾಡಬೇಕಾಗಿದೆ. ಭಾರತೀಯ ರೂಪಾಯಿಗಳಲ್ಲಿ ಇದು ರೂ.3,43,87,50,00,000.00 ಆಗಲಿದೆ.

ಅಮೆರಿಕಾ ಮೂಲದ ಆಲ್ಘಾಬಿಟ್ ಎನ್ನುವ ದೈತ್ಯ ಕಂಪನಿಯ ಅಂಗವಾಗಿರುವ ಗೂಗಲ್ ಇಂದು ಪ್ರಪಂಚದಲ್ಲಿಯೇ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿದೆ. ತನ್ನ ಬೇಡಿಕೆಯನ್ನು ಮತ್ತು ಅನಿವಾರ್ಯತೆಯನ್ನು ಸೃಷ್ಠಿಸಿಕೊಳ್ಳಲು ಗೂಗಲ್ ನಡೆಸುತ್ತಿದ್ದ ಹಿಂಬಾಗಿಲಿನ ಕ್ರಮಕ್ಕೆ ದಂಡವನ್ನು ವಿಧಿಸಲಾಗಿದೆ ಎಂದು ಈ ಮೊದಲು ವರದಿಯಾಗಿತ್ತು.

Best Mobiles in India

English summary
‘They have truly taken advantage of the U.S., but not for long!’. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+