'ಎಕ್ಸ್'ನಲ್ಲಿ ಮಹತ್ವದ ಬದಲಾವಣೆ ಮಾಡಿದ ಎಲಾನ್ ಮಸ್ಕ್: ಏನದು?
ಇತ್ತೀಚಿನ Apple WWDC 2024 ವಿಚಾರದಿಂದಾಗಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ಮತ್ತು ಟೆಸ್ಲಾ ಮಾಲೀಕರಾದ ಎಲಾನ್ ಮಸ್ಕ್ (Elon Musk) ಸಖತ್ ಸುದ್ದಿಯಲ್ಲಿದ್ದಾರೆ. ಕಾರಣ, ಆಪಲ್ ಮತ್ತು ಓಪನ್ ಎಐ ನಡುವಿನ ಪಾಲುದಾರಿಕೆ ಬಗ್ಗೆ ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈಗ ಎಲಾನ್ ಮಸ್ಕ್ ಬೇರೊಂದು ವಿಚಾರದಿಂದ ಸುದ್ದಿ ಮಾಡಲು ಹೊರಟಿದ್ದಾರೆ. ಪ್ರಸ್ತುತ, ಮತ್ತೊಮ್ಮೆ ಎಲಾನ್ ಮಸ್ಕ್ ತನ್ನ 'ಎಕ್ಸ್ ' ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಿದ್ದಾರೆ. ಹಾಗಿದ್ರೆ, ಎಲಾನ್ ಮಸ್ಕ್ ಏನು ಹೊಸ ಸುದ್ದಿ ತಂದಿದ್ದಾರೆ ಅನ್ನೋದನ್ನು ತಿಳಿಯೋಣ ಬನ್ನಿ.
ಎಲಾನ್ ಮಸ್ಕ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಮಾಡಿದ್ದಾರೆ. ಈಗ 'ಪೋಸ್ಟ್ ಲೈಕ್'ಗಳು ನಿಮ್ಮನ್ನು ಹೊರತುಪಡಿಸಿ ಬೇರೆ ಯಾವುದೇ ಬಳಕೆದಾರರಿಗೆ ಕಾಣುವುದಿಲ್ಲ. ಅಂದರೆ, ಎಲ್ಲಾ ಬಳಕೆದಾರರಿಗೆ ತಾವು ಮಾಡಿದ ಲೈಕ್ಸ್ ಮಾತ್ರ ಗೋಚರಿಸುತ್ತವೆ. ಕಂಪನಿಯ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡುವ ಮೂಲಕ ಸ್ವತಃ ಎಲಾನ್ ಮಸ್ಕ್ ಅವರೇ ಈ ಮಾಹಿತಿ ನೀಡಿದ್ದಾರೆ. ಬಳಕೆದಾರರ ಗೌಪ್ಯತೆ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಎಲಾನ್ ಮಸ್ಕ್ ಹೇಳಿದ್ದೇನು?
'X'ನಲ್ಲಿ ಮತ್ತೊಂದು ಬದಲಾವಣೆ ಮಾಡುವುದಾಗಿ ಎಲಾನ್ ಮಸ್ಕ್ ಖಚಿತಪಡಿಸಿದ್ದಾರೆ. ಅದನ್ನು 'ಪೋಸ್ಟ್ ಲೈಕ್' (Private Likes) ಫೀಚರ್ ಎಂದು ಹೆಸರಿಸಲಾಗಿದೆ. 'ಬಳಕೆದಾರರು ತಮ್ಮ ಪೋಸ್ಟ್ ಅನ್ನು ಯಾರೆಲ್ಲ ಲೈಕ್ ಮಾಡಿದ್ದಾರೆ ಅನ್ನೋದನ್ನು ನೋಡಬಹುದಾಗಿದೆ. ಲೈಕ್‌ಗಳ ಸಂಖ್ಯೆ ಮತ್ತು ಇತರೆ ಅಂಕಿಅಂಶಗಳು ನೋಟಿಫಿಕೇಶನ್ ಕೇಳಗೆ ಈಗಲೂ ಗೋಚರಿಸಲಿವೆ. ಲೈಕ್ ಮಾಡಿದ್ದಕ್ಕಾಗಿ ಬೇರೆ ಯಾರಿಂದಲೋ ದಾಳಿಗೆ ಒಳಗಾಗುವುದನ್ನು ತಡೆಯಲು ಬಳಕೆದಾರರಿಗೆ ಈ ಫೀಚರ್ ಕಲ್ಪಿಸುವುದು ಅತ್ಯಂತ ಮುಖ್ಯವಾಗಿತ್ತು' ಎಂದು ಪೋಸ್ಟ್ ಮಾಡಿದ್ದಾರೆ.
'ಪೋಸ್ಟ್ ಲೈಕ್' ಫೀಚರ್‌ನ ಪ್ರಯೋಜನಗಳು
ಈ ಕುರಿತು Elon Musk ಒಡೆತನದ 'ಎಕ್ಸ್' ಮಾಹಿತಿ ನೀಡಿದೆ. ಶೀಘ್ರವೇ ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರರು ಬೇರೆ ಯಾವ ಬಳಕೆದಾರರಿಗೂ ಕಾಣದಂತೆ ಲೈಕ್ ಒತ್ತುವ ಫೀಚರ್ ಪಡೆಯಲಿದ್ದಾರೆ. ಬಳಕೆದಾರರ ಖಾಸಗಿತನದ ರಕ್ಷಣೆಯ ದೃಷ್ಟಿಯಿಂದ ಎಲ್ಲ ಬಳಕೆದಾರರಿಗೆ ಲೈಕ್‌ಗಳನ್ನು 'ಪ್ರೈವೇಟ್' ಆಗಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಯಾವುದೇ ಪೋಸ್ಟ್ ಅನ್ನು ಲೈಕ್ ಮಾಡಿದಾಗ ನೀವು ಅದನ್ನು ನೋಡಬಹುದು. ಆದರೆ, ಇತರೆ ಬಳಕೆದಾರರು ಅದನ್ನು ನೋಡಲು ಸಾಧ್ಯವಿಲ್ಲ ಎಂದು ಎಕ್ಸ್‌ನ ಎಂಜಿನಿಯರಿಂಗ್ ಟೀಂ ತಿಳಿಸಿದೆ.
ಪ್ರೈವೇಟ್ ಲೈಕ್ಸ್ ಫೀಚರ್ ಈಗಾಗಲೇ ಲಭ್ಯ
ಎಕ್ಸ್ ಎಂಜಿನಿಯರಿಂಗ್ ನಿರ್ದೇಶಕ ಹಾವ್‌ಫೆಲ್ ವಾಂಗ್ ಮೇ ತಿಂಗಳಲ್ಲಿ ಸುಳಿವು ನೀಡಿದ್ದರು. ಎಕ್ಸ್‌ನ ಪ್ರೀಮಿಯಂ ಬಳಕೆದಾರರಿಗೆ ಪ್ರೈವೇಟ್ ಲೈಕ್ಸ್ ಫೀಚರ್ ಈಗಾಗಲೇ ಲಭ್ಯವಿದೆ. ಪಬ್ಲಿಕ್ ಲೈಕ್‌ಗಳು ಕೆಟ್ಟ ನಡವಳಿಕೆಗಳು ದಾರಿ ಮಾಡಿಕೊಡುತ್ತವೆ. ಉದಾಹರಣೆಗೆ ಯಾವುದೇ ಒಂದು ಸೂಕ್ಷ್ಮ ಪೋಸ್ಟ್ ಅನ್ನು ಲೈಕ್ ಮಾಡುವಾಗ ಅದರಿಂದ ನಾವು ಟ್ರೋಲ್‌ಗೆ ಒಳಗಾಗಬಹುದು ಅಥವಾ ತಮ್ಮ ಇಮೇಜ್ ಹಾಳಾಗಬಹುದು ಎಂಬ ಭಯದಲ್ಲಿರುತ್ತಾರೆ. ಶೀಘ್ರದಲ್ಲೇ, ಯಾರಿಗೂ ತಿಳಿಯದಂತೆ ನೀವು ಲೈಕ್ ಮಾಡಬಹುದಾದ ಫೀಚರ್ ಪಡೆಯಬಹುದು ಎಂದಿದ್ದರು.
ಈ ವಾರದಿಂದಲೇ ಈ ಹೊಸ ಫೀಚರ್ ಬಳಕೆ ಪ್ರಾರಂಭ
ಇನ್ನೂ, 'ಪೋಸ್ಟ್ ಲೈಕ್' ಫೀಚರ್ ಸಹಾಯದಿಂದ ಬಳಕೆದಾರರು ಲೈಕ್ ಮಾಡಬಹುದು. ನಿಮ್ಮ ಅಲ್ಲಾರಿದಂ ಸಹ ಉತ್ತಮಗೊಳ್ಳಲಿದೆ. ಎಕ್ಸ್‌ನಲ್ಲಿನ ಈ ಬದಲಾವಣೆಯು ಬಳಕೆದಾರರಿಗೆ ಸುರಕ್ಷತೆ ಮತ್ತು ಹೆಚ್ಚು ಖಾಸಗಿ ಅನುಭವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಪ್ರೈವೇಟ್ ಲೈಕ್ಸ್ ಫೀಚರ್ ಅನೇಕ ಪ್ರಯೋಜನಗಳೊಂದಿಗೆ ನಿಮ್ಮನ್ನು ತಲುಪಲಿದೆ. ಎಕ್ಸ್ ಬಳಕೆದಾರರು ಈ ವಾರದಿಂದ ಈ ಹೊಸ ಫೀಚರ್ ಅನ್ನು ಲೈವ್ ಆಗಿ ಬಳಕೆ ಮಾಡಲು ಪ್ರಾರಂಭಿಸಬಹುದು ಎಂದು ತಿಳಿದುಬಂದಿದೆ.


Click it and Unblock the Notifications








