Just In
- 12 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 26 min ago
ಬ್ಯಾಂಕ್ ಹೆಸರಲ್ಲಿ ಬಂದ ಎಸ್ಎಮ್ಎಸ್ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 2 hrs ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
Don't Miss
- News
Shocking Video: ಸೆಲೂನ್ಗೆ ನುಗ್ಗಿದ ಕಾರು: ವಿಡಿಯೋ ಕಂಡು ಜನ ಶಾಕ್..
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Movies
ಅದಿತಿಯನ್ನು ಭೇಟಿಯಾಗ್ತಾನಾ ಧ್ರುವ? ಆದ್ಯ ಪ್ಲಾನ್ ಸುಹಾಸಿನಿ ಮುಂದೆ ವರ್ಕ್ ಆಗುತ್ತಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಿಕ್‌ಟಾಕ್‌ನಂತೆ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲೂ ಬಂತು ಹೊಸ ಫೀಚರ್!
ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ 'ಫೇಸ್‌ಬುಕ್' ತನ್ನ ಬಳಕೆದಾರರಿಗೆ ಮತ್ತೊಂದು ಭರ್ಜರಿ ಸುದ್ದಿ ನೀಡಿದೆ. 'ಫೇಸ್‌ಬುಕ್' ಸಂಸ್ಥೆಯ ಒಡೆತನದಲ್ಲಿರುವ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್ ಮಾಡುವ ಯಾವುದೇ ಸ್ಟೋರಿಗಳಿಗೆ ಇನ್ಮುಂದೆ ಮ್ಯೂಸಿಕ್ ಸಹ ಸೇರಿಸಬಹುದು ಎಂದು ಕಂಪೆನಿ ತಿಳಿಸಿದ್ದು, ಈ ಮೂಲಕ ಮ್ಯೂಸಿಕ್ ಪ್ರಿಯ ಭಾರತೀಯರ ಆಕಾಂಕ್ಷೆಗಳನ್ನು ಪೂರೈಸುವದರ ಜೊತೆಗೆ ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯಲು ಕಂಪೆನಿ ಮುಂದಾಗಿದೆ.

ಹೌದು, ಜನಪ್ರಿಯತೆಯ ಉತ್ತುಂಗದಲ್ಲಿರುವ ಫೇಸ್‌ಬುಕ್ ಸಂಸ್ಥೆ ಪ್ರತಿ ದಿನವೂ ಹೊಸ ಹೊಸ ವೈಶಿಷ್ಟ್ಯ ಸೇರಿಸುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಸುತ್ತಲೇ ಇರುತ್ತದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಹಂಚಿಕೊಳ್ಳುವ ಸ್ಟೋರಿಗಳಿಗೆ ಮ್ಯೂಸಿಕ್ ಜೋಡಿಸುವ ಆಯ್ಕೆಯನ್ನು ನೀಡಲಾಗಿದೆ. ಈ ಕುರಿತು ಫೇಸ್‌ಬುಕ್ ಮಂಗಳವಾರ(ಸೆಪ್ಟೆಂಬರ್ 17ರಂದು ) ಅಧಿಕೃತ ಪ್ರಕಟಣೆ ಹೊರಡಿದ್ದು, ಎಲ್ಲರಿಗೂ ಈ ಅಪ್‌ಡೇಟ್ ಶೀಘ್ರವೇ ದೊರೆಯಲಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ವಾಟ್ಸ್‌ಆಪ್ ರೀತಿಯಲ್ಲಿಯೇ ಇಲ್ಲಿಯೂ ಸ್ಟೋರಿಗಳಲ್ಲಿ ಹಂಚಿಕೊಳ್ಳುವ ಫೋಟೊ, ವಿಡಿಯೊ ಮತ್ತು ಪೋಸ್ಟ್‌ಗಳು 24 ಗಂಟೆಯವರೆಗೆ ಮಾತ್ರವೇ ಇರಲಿವೆ. ಇದೀಗ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸ್ಟೋರಿಗಳಿಗೆ ಹೊಚ್ಚ ಹೊಸ ಅಥವಾ ಹಳೆಯ ಯಾವುದೇ ಹಾಡುಗಳನ್ನು ಜೋಡಿಸಬಹುದಾಗಿದೆ. ‘ಈ ಸೌಲಭ್ಯ ಕಲ್ಪಿಸಲು ಇಂಡಿಯನ್ ಮ್ಯೂಸಿಕ್ ಕಮ್ಯುನಿಟಿ ಜತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ' ಟಿ-ಸಿರೀಸ್ ಮ್ಯೂಸಿಕ್, ಝೀ ಮ್ಯೂಸಿಕ್ ಕಂಪನಿ ಮತ್ತು ಯಶ್ ರಾಜ್ ಫಿಲ್ಮ್ಸ್ ಜತೆ) ಎಂದು ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂ ಮೂಲಕ ಕ್ಯಾಮೆರಾ ಓಪನ್ ಮಾಡಿ ಅಥವಾ ಫೋನ್ ಗ್ಯಾಲರಿಯಿಂದ ಫೋಟೊ/ವಿಡಿಯೊ ಆಯ್ಕೆ ಮಾಡಿ ಅದಕ್ಕೆ ಹೊಂದುವಂತಹ ಮ್ಯೂಸಿಕ್ ಜೋಡಿಸಬಹುದು. ಇಷ್ಟೇ ಅಲ್ಲ ಇದಕ್ಕೆ ಮ್ಯೂಸಿಕ್ ಸ್ಟಿಕ್ಕರ್ ಸಹ ಆಡ್ ಮಾಡಬಹುದು. ಫೇಸ್‌ಬುಕ್‌ನ ಲಿಪ್ ಸಿಂಕ್ ಲೈವ್‌ನಲ್ಲಿ ಬಳಕೆದಾರರು ತಮ್ಮಿಷ್ಟದ ಹಾಡಿಗೆ ಪರ್ಫಾರ್ಮ್ ಮಾಡಬಹುದು ಮತ್ತು ಸಾಂಗ್ ಡಬ್ ಮಾಡಬಹುದು. ಜೊತೆಗೆ ಆ ಮ್ಯೂಸಿಕ್‌ನಲ್ಲಿ ಯಾವ ಭಾಗ ಹೆಚ್ಚು ಹೈಲೈಟ್ ಆಗಬೇಕು ಎಂಬುದನ್ನು ಸಹ ಈ ಫೀಚರ್‌ನಲ್ಲಿ ಸೆಟ್ ಮಾಡಬಹುದಾಗಿದೆ.
ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಮ್ಯೂಸಿಕ್ ಸ್ಟಿಕರ್ಸ್, ಲಿರಿಕ್ಸ್, ಲಿಪ್ ಸಿಂಕ್ ಲೈವ್ ಆಯ್ಕೆಗಳನ್ನೂ ಸಹ ಇದರಲ್ಲಿ ಬಳಸಬಹುದಾಗಿದೆ. ಒಟ್ಟಿನಲ್ಲಿ ಈ ಫೀಚರ್ ಜನಪ್ರಿಯ ವಿಡಿಯೋ ಜಾಲತಾಣ ಟಿಕ್‌ಟಾಕ್ ಆಪ್‌ಗೆ ಸೆಡ್ಡುಹೊಡೆಯುವಂತಿದ್ದು, ಟಿಕ್‌ಟಾಕ್‌ಗೆ ಭಾರತೀಯರು ಹೇಗೆ ಅಡಿಕ್ಟ್ ಆಗಿದ್ದಾರೆ ಎಂಬುದನ್ನು ಅರ್ಥೈಸಿಕೊಂಡಿರುವ ಸಂಸ್ಥೆ ಇಂತಹದೊಂದು ಫೀಚರ್ ಪರಿಚಯಿಸಿದೆ. ಸದ್ಯ 55ಕ್ಕೂ ಅಧಿಕ ದೇಶಗಳಲ್ಲಿ ಮ್ಯೂಸಿಕ್ ಆಡ್ ಮಾಡುವ ಆಯ್ಕೆ ನೀಡಲಾಗಿದ್ದು, ನಿಮ್ಮ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಂಡು ಹೊಸ ಫೀಚರ್ ಪಡೆಯಿರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470