ಭಾರತದ ಚುನಾವಣೆಗಾಗಿ 'ಫೇಸ್‌ಬುಕ್' ಮಾಡಿದ ಸೂಪರ್ ಐಡಿಯಾ!
ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಸಕ್ರೀಯರಾಗಿರುವ ಜನರನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಫೇಸ್‌ಬುಕ್ ಸಂಸ್ಥೆ ಮುಂದಾಗಿದ್ದು, ಕ್ಯಾಂಡಿಡೇಟ್ ಕನೆಕ್ಟ್ ಮತ್ತು ಶೇರ್ ಯು ವೋಟೆಡ್ ಎಂಬ ಎರಡು ಹೊಸ ಟೂಲ್‌ಗಳನ್ನು ಪರಿಚಯಿಸಿದೆ. ಈ ಎರಡು ಹೊಸ ಟೂಲ್‌ಗಳಿಂದ ಫೇಸ್‌ಬುಕ್ ಬಳಕೆದಾರರು ಮತದಾನದ ಅರಿವನ್ನು ಹೊಂದಲಿದ್ದಾರೆ ಎಂದು ಫೇಸ್‌ಬುಕ್ ಹೇಳಿದೆ.
ಹೌದು, ಇದೇ ಏಪ್ರಿಲ್‌ನಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವುದರಿಂದ, ತನ್ನ ಬಳಕೆದಾರರನ್ನು ಪ್ರೋತ್ರಾಹಿಸಲು ಫೇಸ್‌ಬುಕ್ ಮುಂದಾಗಿದೆ. ಹಾಗಾಗಿ, 'ಕ್ಯಾಂಡಿಡೇಟ್ ಕನೆಕ್ಟ್' ಆಯ್ಕೆಯ ಮೂಲಕ ಆಯಾ ಕ್ಷೇತ್ರದ ಅಭ್ಯರ್ಥಿಗಳ ಪರಿಚಯ ಮಾಡಿಕೊಡಲಿದೆ. ಇದರಿಂದ ಮತದಾರರಿಗೆ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಕುರಿತು ಎಲ್ಲಾ ಮಾಹಿತಿ ಸಿಗಲಿದೆ.

'ಕ್ಯಾಂಡಿಡೇಟ್ ಕನೆಕ್ಟ್' ಅಭ್ಯರ್ಥಿಗಳ ಪರಿಚಯ ಮಾಡಿಕೊಡಲಿದ್ದರೆ, 'ಶೇರ್ ಯು ವೋಟೆಡ್ ಎಂಬ ಟೂಲ್ ಮೂಲಕ ಜನರು ತಾವು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ, ಮತದಾನ ಮಾಡಿದ್ದೇವೆ ಎಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಬಹುದಾಗಿದೆ. ಈ ಮೂಲಕ ಫೇಸ್‌ಬುಕ್ ಬಳಕೆದಾರರಿಗೆ ಮತದಾನ ಜಾಗೃತಿಯನ್ನು ಮೂಡಿಸಲು ಫೇಸ್‌ಬುಕ್ ಮುಂದಾಗಿದೆ.
ನಾವು ರಾಜಕೀಯ ಜಾಹೀರಾತುಗಳಿಗಾಗಿ ಪಾರದರ್ಶಕತೆಯ್ನು ಪರಿಚಯಿಸಿದ್ದೇವೆ. ಸುಳ್ಳು ಖಾತೆಗಳನ್ನು ಪತ್ತೆಹಚ್ಚವ ನಮ್ಮ ಸಾಮರ್ಥ್ಯ ಸುಧಾರಿಸಿದೆ ಹಾಗೂ ಸುಳ್ಳು ಸುದ್ದಿ ಮತ್ತು ತಪ್ಪಾದ ಮಾಹಿತಿ ತಪ್ಪಿಸಲು ನಮ್ಮ ಪ್ರಯತ್ನಗಳನ್ನು ಹೆಚ್ಚಿವೆ. ಜೊತೆಗೆ ಮತದಾನದ ಜಾಗೃತಿಯನ್ನು ಸಹ ತರಲು ಪ್ರಯತ್ನಿಸುತ್ತಿದ್ದೆವೆ ಎಂದು ಫೇಸ್‌ಬುಕ್ ಭಾರತದ ಅಧಿಕಾರಿಯೋರ್ವರು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸುಳ್ಳುಸುದ್ದಿ, ನಕಲಿ ಪೋಸ್ಟ್ ಮತ್ತು ನಕಲಿ ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿರುವ ಭರವಸೆ ನೀಡಿರುವ ಫೇಸ್‌ಬುಕ್, ಭಾರತದಲ್ಲಿ ಮತದಾರರು ತಮ್ಮ ಬುಕ್‌ಮಾರ್ಕ್ ಮೂಲಕ ಅಥವಾ ಅವರ ನ್ಯೂಸ್ ಫೀಡ್‌ನಲ್ಲಿರುವ ಸಂದೇಶದ ಮೂಲಕ ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳ 20-ಸೆಕೆಂಡ್ ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದೆ.


Click it and Unblock the Notifications








