Home
Social media

ಫೇಸ್ ಬುಕ್ ಗೆ ಮತ್ತೊಂದು ಸಂಕಷ್ಟ- ನೌಕರರಿಂದ ಅಮೇಜಾನ್ ನಲ್ಲಿ ಸುಳ್ಳು ರಿವ್ಯೂಗಳು

ಫೇಸ್ ಬುಕ್ ಬಿಡುಗಡೆಗೊಳಿಸಿರುವ ಫೇಸ್ ಬುಕ್ ಪೋರ್ಟಲ್ ನ ಸ್ಮಾರ್ಟ್ ಕ್ಯಾಮರಾವು ಜನರು ಒಬ್ಬರಿಂದೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಸಾಧಿಸಲು ನೆರವು ನೀಡುತ್ತದೆ. ಕಳೆದ ವರ್ಷ ಹಲವು ಕಾಂಟ್ರವರ್ಸಿ ಮತ್ತು ಡಾಟಾ ಸ್ಕ್ಯಾಂಡಲ್, ಡಾಟಾ ಬ್ರೀಚ್ ಗಳಿಂದಲೇ ಸುದ್ದಿಯಾಗಿತ್ತು.

ಅಮೇಜಾನ್ ಪೋರ್ಟಲ್ ಗೆ 5 ಸ್ಟಾರ್ – ಸಿಕ್ಕಿಬಿದ್ದ ಫೇಸ್ ಬುಕ್ ನೌಕರರು

ಸ್ಮಾರ್ಟ್ ಕ್ಯಾಮರಾ ಬಿಡುಗಡೆಗೊಳಿಸಿ ಇನ್ನು ನಾಲ್ಕು ತಿಂಗಳು ಕಳೆದಿದೆ ಅಷ್ಟೇ.. ಆದರೆ ಅದಕ್ಕೂ ಮುನ್ನವೇ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂಬುದರ ಸೂಚನೆ ಸಿಕ್ಕಿದೆ. ಹೌದು ಫೇಸ್ ಬುಕ್ ನ ಕೆಲವು ನೌಕರರು ಅಮೇಜಾನ್ ಇ-ರೀಟೇಲ್ ಫ್ಲಾಟ್ ಫಾರ್ಮ್ ಗೆ ಐದು ಸ್ಟಾರ್ ಗಳನ್ನು ನೀಡಿ ಉತ್ತಮ ರಿವ್ಯೂ ನೀಡುತ್ತಿರುವುದು ಗೊತ್ತಾಗಿದೆ.

ಕೆವಿನ್ ರೂಸ್ ಬಹಿರಂಗಪಡಿಸಿದ ಸುದ್ದಿ:

ಕೆವಿನ್ ರೂಸ್ ಬಹಿರಂಗಪಡಿಸಿದ ಸುದ್ದಿ:

ಟೆಕ್ ಅಂಕಣಕಾರರಾಗಿರುವ ಕೆವಿನ್ ರೂಸ್ ಅವರು ಈ ವಿಚಿತ್ರ ರಿವ್ಯೂ ನೀಡುವಿಕೆಯನ್ನು ಗುರುತಿಸಿದ್ದು ಅಮೇಜಾನ್ ನಲ್ಲಿ ಕೆಲವು ಪೋರ್ಟಲ್ ಬಳಕೆದಾರರು ವಿಚಿತ್ರವಾಗಿ ವಿಮರ್ಷೆಯನ್ನು ನೀಡಿದ್ದಾರೆ. ರೂಸ್ ಅವರು ಗುರುತಿಸಿರುವಂತೆ ಕೆಲವು ಫೇಸ್ ಬುಕ್ ಪೋರ್ಟಲ್ ಬಗ್ಗೆ ಕೆಲವರು ಅಮೇಜಾನ್ ನಲ್ಲಿ ರಿವ್ಯೂ ಮಾಡಿದ್ದು ಈ ಹೆಸರುಗಳು ಫೇಸ್ ಬುಕ್ ಕಾರ್ಮಿಕರ ಹೆಸರಿನ ಪಟ್ಟಿಯಲ್ಲಿ ಲಭ್ಯವಿರುವ ಸದಸ್ಯರಾಗಿದ್ದಾರೆ.

ಯಾರು ಮಾಡಿದ್ದು?

ಯಾರು ಮಾಡಿದ್ದು?

ಉದಾಹರಣೆಗೆ ಜೇಯಿರ್ ಕ್ಯೂಬ್ರಿಯಾ ಕಂಪೆನಿಯ ಇವೆಂಟ್ ವ್ಯಾಪಾರೋದ್ಯಮಿಯಾಗಿರುತ್ತಾರೆ.ಟಿಮ್ ಚಾಪೆಲ್ ಕಂಪೆನಿಯ ಪೂರೈಕೆ ಸರಪಳಿ ಮತ್ತು ಕಾರ್ಯತಂತ್ರದ ಎಆರ್ ಮತ್ತು ವಿಆರ್ ಆಗಿರುತ್ತಾರೆ. ಅದೇ ರೀತಿ ಓರೆನ್ ಹ್ಯಾಫಿಫ್ ಅವರ ರಿವ್ಯೂವನ್ನು ರೋಸ್ ಅವರು ಹೈಲೆಟ್ ಮಾಡಿದ್ದು ಇವರು ಫೇಸ್ ಬುಕ್ ನಲ್ಲಿ ಸೆಕ್ಯುರಿಟಿ ಇಂಜಿನಿಯರಿಂಗ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಟ್ವೀಟರ್ ನಲ್ಲಿ ಹಂಚಿಕೆ:

ಟ್ವೀಟರ್ ನಲ್ಲಿ ಹಂಚಿಕೆ:

ಈ ರೀತಿಯ ವರ್ತನೆಯ ಬಗ್ಗೆ ಅಂದರೆ ಅಮೇಜಾನ್ ಪೋರ್ಟಲ್ ನಲ್ಲಿ 5 ಸ್ಟಾರ್ ಫೇಸ್ಬುಕ್ ಪೋರ್ಟಲ್ ರಿವ್ಯೂ ಬಗ್ಗೆ ಕೆವಿನ್ ರೋಸ್ ಅವರು ಈ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಏನೇನು ನೋಡಬೇಕು? ಈ ಮೂರು ಖರೀದಿಯನ್ನು ವೆರಿಫೈ ಮಾಡಲಾಗಿರುವ ಅಮೇಜಾನ್ ಖರೀದಿ ಎಂದು ಲಿಸ್ಟ್ ಮಾಡಲಾಗಿದೆ. ಇದರರ್ಥ ಈ ಮೂರು ಮಂದಿ ಅಮೇಜಾನ್ ಮೂಲಕ ಫೇಸ್ ಬುಕ್ ಪೋರ್ಟಲ್ ನ್ನು ಖರೀದಿಸಿದ್ದಾರೆ ಅನ್ನಿಸುತ್ತದೆ.

ಫೇಸ್ ಬುಕ್ ಕಾರ್ಮಿಕರು ಎಂಬುದು ನಿಜ:

ಫೇಸ್ ಬುಕ್ ಕಾರ್ಮಿಕರು ಎಂಬುದು ನಿಜ:

ರೋಸ್ ಅವರ ಟ್ವೀಟ್ ಗಳು ಕಾಕತಾಳೀಯವಾಗಿರಬಹುದು ಆದರೆ ಅದು ಸಾಕಷ್ಟು ಪ್ರಚಾರವನ್ನು ಪಡೆದ ಹಿನ್ನೆಲೆಯಲ್ಲಿ ಫೇಸ್ ಬುಕ್ ನ ವಿಪಿಯ ಎಆರ್/ವಿಆರ್ ಆಂಡ್ರ್ಯೂ ಬೋಝ್ ಟ್ವೀಟರ್ ಗೆ ತೆರಳಿ ಫೇಸ್ ಬುಕ್ ಕಾರ್ಮಿಕರಿಂದ ಬರೆದ ರಿವ್ಯೂಗಳು ಎಂಬ ಬಗ್ಗೆ ಖಾತ್ರಿಯನ್ನು ನೀಡಿದ್ದಾರೆ.

ಆದರೆ ಫೇಸ್ ಬುಕ್ ಯಾವುದೇ ಕಾರಣಕ್ಕೂ ಅವರಿಗೆ ಹೀಗೆ ಮಾಡುವುದಕ್ಕೆ ಸೂಚನೆ ನೀಡಿರಲಿಲ್ಲ ಎಂಬ ಬಗ್ಗೆಯೂ ತಿಳಿಸಿದ್ದಾರೆ.

ಫೇಸ್ ಬುಕ್ ತಿಳಿಸಿಲ್ಲ:

ಅಮೇಜಾನ್ ನಲ್ಲಿ ಮಾರಾಟ ಮಾಡಲಾಗುವ ಯಾವುದೇ ವಸ್ತುವಿಗೆ ರಿವ್ಯೂ ಹಾಕುವುದರಲ್ಲಿ ಫೇಸ್ ಬುಕ್ ನೌಕರರು ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಫೇಸ್ ಬುಕ್ ತಿಳಿಸಿಲ್ಲ ಮತ್ತು ಅದನ್ನು ಫೇಸ್ ಬುಕ್ ಬಯಸುವುದೂ ಇಲ್ಲ ಎಂಬ ಸಮರ್ಥನೆಯು ಫೇಸ್ ಬುಕ್ ನಿಂದ ಬಂದಿದೆ. ನಾವು ಇವರ ವಿರುದ್ಧ ತನಿಖೆ ಕೈಗೊಳ್ಳುತ್ತೇವೆ ಎಂಬುದಾಗಿ ತಿಳಿಸಲಾಗಿದೆ.

ಅಮೇಜಾನ್ ಗೆ ವಿರುದ್ಧ:

ಅಮೇಜಾನ್ ನಲ್ಲಿ ಯಾವುದೇ ವ್ಯಕ್ತಿಯು ಕಾರ್ಯನಿರ್ವಹಿಸುವ ಸಂಸ್ಥೆಯ ವಸ್ತುವನ್ನು ವಿಮರ್ಷೆ ಮಾಡುವುದು ಅಮೇಜಾನ್ ಪಾಲಿಸಿಯ ವಿರುದ್ಧವಾಗಿರುವುದಾಗಿದೆ. ಈ ರೀತಿ ನಡೆದಲ್ಲಿ ಅದು ಉತ್ಪನ್ನದ ಮೇಲಿನ ನಂಬಿಕೆಯನ್ನು ಹುಟ್ಟುಹಾಕುವುದಿಲ್ಲ. ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಫೇಸ್ ಬುಕ್ ಇದೀಗ ಮತ್ತೊಂದು ಸಂದಿಗ್ಧ ಸನ್ನಿವೇಶವನ್ನು ಎದುರಿಸುವಂತಾಗಿದೆ.

Best Mobiles in India

English summary
Facebook employees have been caught leaving five-star reviews for Portal on Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+